»   » ವಿಶ್ವದ 'ಎಂಟನೇ ಅದ್ಭುತ' ಗೌರಿ ಸಾಯಲ್ಲ, 'ಪುಟ್ಟಗೌರಿ ಮದುವೆ' ಮುಗಿಯಲ್ಲ.!

ವಿಶ್ವದ 'ಎಂಟನೇ ಅದ್ಭುತ' ಗೌರಿ ಸಾಯಲ್ಲ, 'ಪುಟ್ಟಗೌರಿ ಮದುವೆ' ಮುಗಿಯಲ್ಲ.!

Posted By:
Subscribe to Filmibeat Kannada

ವೀಕ್ಷಕರ ಸಹನೆಯ ಕಟ್ಟೆ ಒಡೆದಿದೆ. 'ಪುಟ್ಟಗೌರಿ ಮದುವೆ' ವಿರುದ್ಧ ವೀಕ್ಷಕರ ಆಕ್ರೋಶ ಮುಗಿಲು ಮುಟ್ಟಿದೆ.

ಕಿರುತೆರೆಯಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಹೊಂದಿರುವ ಧಾರಾವಾಹಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯ 'ಪುಟ್ಟಗೌರಿ ಮದುವೆ' ಕೂಡ ಒಂದು. ಮುಂಚೆ ಮನೆಯಲ್ಲಿ ನಡೆಯುತ್ತಿದ್ದ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಕಥೆ ಇದೀಗ ಕಾಡಿಗೆ ಶಿಫ್ಟ್ ಅಗಿದೆ. ಬೆಟ್ಟದ ಮೇಲಿಂದ ಬಿದ್ದ ಗೌರಿ ಸಾವನ್ನಪ್ಪದೆ, ಕಾಡು ಮನುಷ್ಯರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!

ವಾಸ್ತವಕ್ಕೆ ಕಿಲೋಮೀಟರ್ ಗಟ್ಟಲೆ ದೂರ ಇರುವ 'ಪುಟ್ಟಗೌರಿ ಮದುವೆ'ಯ ಜಂಗಲ್ ಸಂಚಿಕೆಗಳು ವೀಕ್ಷಕರ ತಾಳ್ಮೆ ಪರೀಕ್ಷಿಸುತ್ತಿದೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ 'ಪುಟ್ಟಗೌರಿ ಮದುವೆ' ಬಗ್ಗೆ ವೀಕ್ಷಕರು ಪೋಸ್ಟ್ ಮಾಡುತ್ತಿರುವ ಕಾಮೆಂಟ್ ಗಳು. ಮುಂದೆ ಓದಿರಿ...

ಗೌರಿ ಸಾಯಲ್ಲ, ಧಾರಾವಾಹಿ ಮುಗಿಯಲ್ಲ.!

''ಗೌರಿಯನ್ನ ಕಾಡು ಜನ ತಿಂದು ತೇಗಿದರೂ, ಗೌರಿ ಸಾಯಲ್ಲ. ಅವರ ಹೊಟ್ಟೆ ಬಗಿದು ಹೊರ ಬರುವ ಶಕ್ತಿ ಗೌರಿಗೆ ಇದೆ. ಗೌರಿ ಸಾಯಲ್ಲ, ಧಾರಾವಾಹಿ ಮುಗಿಯಲ್ಲ. ನೋಡುವವರು ಸಾಯಬೇಕು ಅಷ್ಟೆ'' ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

ಟಾರ್ಚರ್ ಆಗುತ್ತಿದೆ

''ಬೆಟ್ಟದಿಂದ ದೂಕಿದರೂ ಪುಟ್ಟಗೌರಿ ಸಾಯಲಿಲ್ಲ, ಹಾವು ಕಚ್ಚಲಿಲ್ಲ, ಹುಲಿಗೆ ಆಹಾರವಾಗಿ ಸಿಕ್ಕರೂ ಹುಲಿ ತಿನ್ನಲಿಲ್ಲ, ಇನ್ನೂ ಕಾಡು ಜನರಿಂದ ಗೌರಿಯನ್ನ ಸಾಯಿಸಲು ಆಗುವುದೇ.? ಈ ತರಹ ಟಾರ್ಚರ್ ತಡೆಯಲು ನನ್ನ ಕೈಯಲ್ಲಿ ಆಗಲ್ಲ'' ಎಂದು ಫೇಸ್ ಬುಕ್ ನಲ್ಲಿ ವೀಕ್ಷಕರೊಬ್ಬರು ಬರೆದುಕೊಂಡಿದ್ದಾರೆ.

ಮೆಂಟಲ್ ಸ್ಟೋರಿ

'ಪುಟ್ಟಗೌರಿ ಮದುವೆ' ಸೀರಿಯಲ್ ನೋಡಿ ರೊಚ್ಚಿಗೆದ್ದ ವೀಕ್ಷಕರೊಬ್ಬರು ನಿರ್ದೇಶಕರ ಬಗ್ಗೆ ಆಡಿರುವ ಅಸಮಾಧಾನದ ಮಾತುಗಳು ಇವು...

ಏನೇನ್ ನೋಡ್ಬೇಕೋ..?

ವೀಕ್ಷಕರಿಂದ 'ಪುಟ್ಟಗೌರಿ ಮದುವೆ' ಟ್ರೋಲ್ ಆಗಿರುವುದು ಹೀಗೆ...

ಮುಖಕ್ಕೆ ಮಂಗಳಾರತಿ ಎತ್ತ.!

''ಕತೆ ಬರೆಯಲು, ನಿರ್ದೇಶನ ಮಾಡಲು ಬಾರದೆ ಇದ್ದರೆ ಸೀರಿಯಲ್ ಮುಗಿಸಿರಿ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ'' ಎಂದು ವೀಕ್ಷಕರೊಬ್ಬರು ಕಲರ್ಸ್ ಕನ್ನಡ ಚಾನೆಲ್ ನವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಎಷ್ಟೇ ಎಳೆದರೂ ಮುಗಿಯೋದಿಲ್ಲ.!

'ಪುಟ್ಟಗೌರಿ ಮದುವೆ' ಸೀರಿಯಲ್ ಬಗ್ಗೆ ವೀಕ್ಷಕರಲ್ಲಿ ಎಷ್ಟು ಅಸಮಾಧಾನ ಮೂಡಿದೆ ಅನ್ನೋದಕ್ಕೆ ವೀಕ್ಷಕರೊಬ್ಬರ ಈ ಸ್ಟೇಟಸ್ ಸಾಕ್ಷಿ.

ಸಾಲು ಸಾಲು ಕಾಮೆಂಟ್ಸ್

ವಿಶ್ವದ ಎಂಟನೇ ಅದ್ಭುತ ಈ 'ಪುಟ್ಟಗೌರಿ ಮದುವೆ' ಧಾರಾವಾಹಿ ವಿರುದ್ಧ ಫೇಸ್ ಬುಕ್ ನಲ್ಲಿ ಸಾಲು ಸಾಲು ಕಾಮೆಂಟ್ಸ್ ವ್ಯಕ್ತವಾಗಿದೆ.

English summary
Colors Kannada Channel Viewers have taken their Facebook page to express their displeasure towards 'Puttagowri Maduve' Jungle episodes. Take a look at Viewers Comments.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X