»   »  ಟ್ರೋಲ್ ಮಾಡುವವರಿಗೆ ತನ್ನ ಮಾತಿನಲ್ಲೇ ಪೆಟ್ಟು ಕೊಟ್ಟ ಪುಟ್ಟಗೌರಿ!

ಟ್ರೋಲ್ ಮಾಡುವವರಿಗೆ ತನ್ನ ಮಾತಿನಲ್ಲೇ ಪೆಟ್ಟು ಕೊಟ್ಟ ಪುಟ್ಟಗೌರಿ!

Posted By:
Subscribe to Filmibeat Kannada

ಕೆಲ ದಿನಗಳ ಹಿಂದೆಯಷ್ಟೇ ಟ್ರೋಲ್ ಪೇಜ್ ಗಳು 'ಪುಟ್ಟಗೌರಿ'ಯ ಧ್ಯಾನ ಮಾಡುತ್ತಿದ್ದರು. ಧಾರಾವಾಹಿಯಲ್ಲಿ ಪ್ರಸಾರವಾದ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿತ್ತು.

'ಪುಟ್ಟಗೌರಿ' ಬಗ್ಗೆ ಹಿಂದೆಯಿಂದಲೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿತ್ತು. ಬೆಟ್ಟದಿಂದ ಬಿದ್ದ ಸಂಚಿಕೆ ನಂತರವಂತೂ ಟ್ರೋಲ್ ಪೇಜ್ ಗಳಲ್ಲಿ ಪುಟ್ಟಗೌರಿಯೇ ರಾರಾಜಿಸುತ್ತಿದ್ದರು. ಆದರೆ ಇದೀಗ ಈ ಬಗ್ಗೆ ಪುಟ್ಟಗೌರಿ ಅರ್ಥಾತ್ ಧಾರಾವಾಹಿಯ ನಾಯಕಿ ರಂಜನಿ ಮಾತನಾಡಿದ್ದಾರೆ. ''ನಮ್ಮ ಧಾರಾವಾಹಿ ಒಂದು ಕಾಲ್ಪನಿಕ ಕಥೆ. ಅದು ರಿಯಾಲಿಟಿ ಶೋ ಅಲ್ಲ'' ಎನ್ನುವ ಮೂಲಕ ತಮ್ಮ ಮಾತಿನಲ್ಲೇ ಎಲ್ಲ ಟ್ರೋಲ್ ಗಳಿಗೆ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಪುಟ್ಟಗೌರಿ ಮಾತು

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ರಂಜನಿ 'ಪುಟ್ಟ ಗೌರಿ' ಧಾರಾವಾಹಿಯ ಮೇಲೆ ಆದ ಟ್ರೋಲ್ ಗಳ ಬಗ್ಗೆ ಮಾತನಾಡಿದ್ದಾರೆ.

ಪ್ರಯೋಗದಂತೆ ಮಾಡಿದ್ದು

''ಇನ್ನು ಮುಂದೆ ನಾವು ಟ್ರೋಲ್ ಆಗುವುದಿಲ್ಲ ಎಂದುಕೊಂಡಿದ್ದೇನೆ. ಯಾಕಂದ್ರೆ ಈಗ ಧಾರಾವಾಹಿ ಮತ್ತೆ ನೈಜ ಕಥೆಯತ್ತ ಬಂದಿದೆ. ಅದನೆಲ್ಲ ಒಂದು ಪ್ರಯೋಗದಂತೆ ಮಾಡಿದ್ದು ಅಷ್ಟೆ. ಇನ್ನು ಮುಂದೆ ಟ್ರೋಲ್ ಮಾಡಲು ಹೆಚ್ಚು ವಿಷಯ ಸಿಗುವುದಿಲ್ಲ.'' - ರಂಜನಿ, ನಾಯಕಿ

'ಪುಟ್ಟಗೌರಿ' ಹೆಸರಿನಲ್ಲಿ ಇರುವ ದಾಖಲೆಗಳು ಒಂದಾ ಎರಡಾ.?

ಹಿಂದೆಯೂ ಇದೇ ರೀತಿ ಆಗಿತ್ತು

''ಈ ಹಿಂದೆ ಭಾಗ್ಯ ತೀರಿಕೊಂಡಾಗ, ಪುಟ್ಟಗೌರಿ ಗರ್ಭಿಣಿ ಆಗಿದ್ದಾಗ, ಆಕೆಯನ್ನು ಮಣ್ಣಿನಲ್ಲಿ ಹೂತರೂ ಮತ್ತೆ ಎದ್ದು ಬಂದ ಎಪಿಸೋಡ್ ಪ್ರದರ್ಶನಗೊಂಡಾಗಲೂ ಟ್ರೋಲ್ ಮಾಡಲಾಗಿತ್ತು.'' - ರಂಜನಿ, ನಾಯಕಿ

ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!

ಬೆಟ್ಟದಿಂದ ಬಿದ್ದ ದೃಶ್ಯ

''ಬೆಟ್ಟದಿಂದ ಬಿದ್ದ ಮೇಲಿನ ದೃಶ್ಯದಲ್ಲಿ ನಾನು ಕಾಲಿಗೆ ಚಪ್ಪಲಿ ಹಾಕಿರುವ ಬಗ್ಗೆಯೂ ಟ್ರೋಲ್ ಬಂತು. ಮೊದಲು ನಾನು ಚಪ್ಪಲಿ ಹಾಕದೇ ಶೂಟ್ ಮಾಡಿದ್ದೆ. ಆದರೆ ಕಾಲಿಗೆ ಮೊಳೆ ಚುಚ್ಚಿ ಗಾಯವಾದ ಕಾರಣ ನಂತರ ಚಪ್ಪಲಿ ಹಾಕಿದೆ'' - ರಂಜನಿ, ನಾಯಕಿ

'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

ಇದು ರಿಯಾಲಿಟಿ ಶೋ ಅಲ್ಲ

''ನಮ್ಮ ಧಾರಾವಾಹಿ ಒಂದು ಕಾಲ್ಪನಿಕ ಕಥೆ. ಅದು ರಿಯಾಲಿಟಿ ಶೋ ಅಲ್ಲ'' ಎಂದು ಹೇಳಿರುವ ರಂಜನಿ ತಮ್ಮ ಮಾತಿನಲ್ಲಿಯೇ ಎಲ್ಲ ಟ್ರೋಲ್ ಗಳಿಗೆ ಉತ್ತರ ನೀಡಿದ್ದಾರೆ.

English summary
'Puttagowri Maduve' serial actress Ranjani spoke about trolls.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada