»   » TRPಯಲ್ಲಿ ಈ ಧಾರಾವಾಹಿಯನ್ನ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.!

TRPಯಲ್ಲಿ ಈ ಧಾರಾವಾಹಿಯನ್ನ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.!

Posted By:
Subscribe to Filmibeat Kannada
ಬಾರ್ಕ್ ರೇಟಿಂಗ್ ನಲ್ಲಿ ಮೊದಲ ಸ್ಥಾನ ಪಡೆದ ಪುಟ್ಟ ಗೌರಿ ಮದುವೆ ಧಾರಾವಾಹಿ | Oneindia Kannada

ಪ್ರತಿ ಗುರುವಾರ ಬಂತಂದ್ರೆ ಟಿವಿ ವೀಕ್ಷಕರಿಗೆ ಒಂದು ಕುತೂಹಲ. ಯಾಕಂದ್ರೆ, ಈ ದಿನ ಬಾರ್ಕ್ ರೇಟಿಂಗ್ ಸಂಸ್ಥೆ ಟಿವಿ ಕಾರ್ಯಕ್ರಮಗಳ ರೇಟಿಂಗ್ ಪ್ರಸಾರ ಮಾಡುತ್ತೆ. ಪ್ರತಿವಾರದಂತೆ ಈ ವಾರವೂ ರೇಟಿಂಗ್ ಪ್ರಕಟ ಮಾಡಿದೆ.

ಕನ್ನಡ ಟಿವಿ ಕಾರ್ಯಕ್ರಮಗಳ ಪೈಕಿ ನಿರೀಕ್ಷೆಯಂತೆ ಧಾರಾವಾಹಿಯೊಂದು ನಂಬರ್ ವನ್ ಸ್ಥಾನದಲ್ಲಿದೆ. ಎಷ್ಟೇ ರಿಯಾಲಿಟಿ ಶೋ ಬರಲಿ, ಎಷ್ಟೇ ಹೊಸ ಬಗೆಯ ಕಾರ್ಯಕ್ರಮ ಬರಲಿ ಈ ಧಾರಾವಾಹಿಯನ್ನ ಮಾತ್ರ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.

'ಬಿಗ್ ಬಾಸ್' ಅಂತಹ ಕಾರ್ಯಕ್ರಮ ಕೂಡ ಈ ಧಾರಾವಾಹಿಯನ್ನ ಹಿಂದಿಕ್ಕಲಿಲ್ವಾ ಎಂಬ ಪ್ರಶ್ನೆ ಹಲವರದ್ದು. ಹಾಗಿದ್ರೆ, ಆ ಧಾರಾವಾಹಿ ಯಾವುದು? ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ ಎಂದು ತಿಳಿಯಲು ಮುಂದೆ ಓದಿ......

ಪುಟ್ಟಗೌರಿ ಮದುವೆ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಪುಟ್ಟಗೌರಿ ಮದುವೆ' ಧಾರಾವಾಹಿ ಬಾರ್ಕ್ ಸಂಸ್ಥೆ ಪ್ರಕಟ ಮಾಡಿರುವ ರೇಟಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ.

ನಂತರದ ಸ್ಥಾನದಲ್ಲಿ ಯಾವುದು?

'ಪುಟ್ಟಗೌರಿ ಮದುವೆ' ಮೊದಲ ಸ್ಥಾನದಲ್ಲಿದ್ರೆ, ನಂತರದ ಸ್ಥಾನದಲ್ಲಿ ಕ್ರಮವಾಗಿ, 'ಲಕ್ಷ್ಮಿ ಬಾರಮ್ಮ', 'ಕುಲವಧು', 'ರಾಧ ರಮಣ', ಮತ್ತು 'ಕಿನ್ನರಿ' ಧಾರಾವಾಹಿ ಇದೆ.

ಟಾಪ್ 5 ನಲ್ಲಿಲ್ಲ ಬಿಗ್ ಬಾಸ್

ಇನ್ನು ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್', ಮೊದಲ 5 ಸ್ಥಾನದಲ್ಲಿ ಇಲ್ಲ. ಇದು ಒಂದು ರೀತಿಯ ಅಚ್ಚರಿಯಾದರೂ ಸತ್ಯ.

'ಪುಟ್ಟಗೌರಿ'ಯನ್ನ ಹಿಂದಿಕ್ಕಲು ಕಷ್ಟ

'ಪುಟ್ಟಗೌರಿ' ಧಾರಾವಾಹಿ ಬಗ್ಗೆ ಎಷ್ಟೇ ಟ್ರೋಲ್ ಆದರೂ, ಎಷ್ಟೇ ಕಾಮೆಂಟ್ ಗಳು ಬಂದರೂ ನೋಡುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮೂಲಕ ಈ ಧಾರಾವಾಹಿಯನ್ನ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ವಿರ್ಮಶಕರ ಅಭಿಪ್ರಾಯ.

English summary
Colors Kannada's Popular serial Puttagowri maduve is top in Barc Rating.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada