ಜಾಸ್ತಿ ಖುಷಿ ಪಡಬೇಡಿ.. 'ಪುಟ್ಟಗೌರಿ ಮದುವೆ' ಧಾರಾವಾಹಿ ಸದ್ಯಕ್ಕೆ ಮುಗಿಯಲ್ಲ.!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಪುಟ್ಟಗೌರಿ ಮದುವೆ' ಧಾರಾವಾಹಿ ಬಗ್ಗೆ ಇತ್ತೀಚೆಗಂತೂ ದಿನಕ್ಕೊಂದು ಸುದ್ದಿ ಹೊರಗೆ ಬರುತ್ತಿದೆ.

'ಪುಟ್ಟಗೌರಿ ಮದುವೆ' ಸೀರಿಯಲ್ ಗೆ ನಟಿ ರಂಜನಿ ರಾಘವನ್ ಗುಡ್ ಬೈ ಹೇಳಿದ್ದಾರೆ... ನಟಿ ರಂಜಿನಿ 'ಬಿಗ್ ಬಾಸ್' ಮನೆಗೆ ಕಾಲಿಡುತ್ತಿದ್ದಾರೆ... ಎಂಬೆಲ್ಲ ಮಾತುಗಳು ಕಿರುತೆರೆ ಲೋಕದಲ್ಲಿ ಕೇಳಿ ಬರುತ್ತಿವೆ.

ಇವೆಲ್ಲದರ ಜೊತೆಗೆ 'ಪುಟ್ಟಗೌರಿ ಮದುವೆ' ಧಾರಾವಾಹಿ ಮುಗಿಯಲಿದೆ ಎಂಬ ಗಾಸಿಪ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇಷ್ಟು ವರ್ಷಗಳ ಕಾಲ ಪುಟ್ಟಗೌರಿ ಗೋಳನ್ನ ನೋಡಿ ನೋಡಿ ತಲೆ ಬಿಸಿ ಮಾಡಿಕೊಂಡಿದ್ದ ವೀಕ್ಷಕರಿಗೆ ಧಾರಾವಾಹಿ ಮುಗಿಯುತ್ತಿರುವ ಸುದ್ದಿ ಸಿಕ್ಕಾಪಟ್ಟೆ ಖುಷಿ ನೀಡಿತ್ತು.

''ಸದ್ಯ.. 'ಪುಟ್ಟಗೌರಿ ಮದುವೆ' ಸೀರಿಯಲ್ ಮುಗಿಯಲಿದೆ'' ಅಂತ ನಿಟ್ಟುಸಿರು ಬಿಟ್ಟ ವೀಕ್ಷಕರೇ... ಸ್ವಲ್ಪ ನಿಮ್ಮ ಉಸಿರನ್ನು ಬಿಗಿ ಹಿಡಿದುಕೊಳ್ಳಿ.. ಯಾಕಂದ್ರೆ, 'ಪುಟ್ಟಗೌರಿ ಮದುವೆ' ಸೀರಿಯಲ್ ಸದ್ಯಕ್ಕೆ ಮುಗಿಯಲ್ಲ. ಹಾಗಂತ ಧಾರಾವಾಹಿಯ ನಿರ್ದೇಶಕರೇ ಸ್ಪಷ್ಟ ಪಡಿಸಿದ್ದಾರೆ. ಮುಂದೆ ಓದಿರಿ...

ವದಂತಿ ಮಾತ್ರ.!

ವದಂತಿ ಮಾತ್ರ.!

''ಪುಟ್ಟಗೌರಿ ಮದುವೆ' ಧಾರಾವಾಹಿ ನಿಲ್ಲುತ್ತದೆ ಎನ್ನುವುದು ಕೇವಲ ವದಂತಿ ಅಷ್ಟೇ. 'ಪುಟ್ಟಗೌರಿ ಮದುವೆ' ಸೀರಿಯಲ್ ಸದ್ಯಕ್ಕೆ ಮುಗಿಯಲ್ಲ. ಇನ್ನೂ ಮುಂದುವರೆಯಲಿದೆ'' ಎಂದು ಸ್ಪಷ್ಟ ಪಡಿಸಿದ್ದಾರೆ ನಿರ್ದೇಶಕ ರಾಮ್ ಜಿ.

ರಂಜನಿ ಔಟ್.!

ರಂಜನಿ ಔಟ್.!

''ಪುಟ್ಟಗೌರಿ ಮದುವೆ' ಸೀರಿಯಲ್ ನಿಂದ ರಂಜನಿ ಔಟ್ ಆಗಿರುವುದು ಪಕ್ಕಾ. ಆಕೆ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ರಂಜನಿ ಹೊರಗೆ ಹೋದ ಮಾತ್ರಕ್ಕೆ ಸೀರಿಯಲ್ ಮುಗಿಯುತ್ತಿದೆ ಅಂತಲ್ಲ'' ಅಂತಾರೆ ನಿರ್ದೇಶಕ ರಾಮ್ ಜಿ.

ಮತ್ತೊಂದು ಹೊಸ ಪ್ರಯೋಗ

ಮತ್ತೊಂದು ಹೊಸ ಪ್ರಯೋಗ

'ಪುಟ್ಟಗೌರಿ ಮದುವೆ' ಸೀರಿಯಲ್ ನಲ್ಲಿ ಸದ್ಯದಲ್ಲೇ ಮಂಗಳ ಗೌರಿ ಎಂಬ ಪಾತ್ರದ ಪರಿಚಯ ಆಗಲಿದೆ. ಪುಟ್ಟಗೌರಿಯ ಪಾತ್ರದಷ್ಟೇ ಮಂಗಳ ಗೌರಿ ಪಾತ್ರಕ್ಕೂ ಪ್ರಾಮುಖ್ಯತೆ ಇರಲಿದೆ. ಮಂಗಳ ಗೌರಿ ಪಾತ್ರದಿಂದ ಈ ಧಾರಾವಾಹಿಗೆ ಹೊಸ ತಿರುವು ಸಿಗಲಿದೆ.

ನಿಮ್ಮ ಅಭಿಪ್ರಾಯ ಏನು.?

ನಿಮ್ಮ ಅಭಿಪ್ರಾಯ ಏನು.?

ವರ್ಷಗಳಿಂದ 'ಪುಟ್ಟಗೌರಿ ಮದುವೆ' ಧಾರಾವಾಹಿ ನೋಡುತ್ತಿರುವ ವೀಕ್ಷಕರು ನೀವಾಗಿದ್ದರೆ, ಸೀರಿಯಲ್ ಕಥೆ ಹೋಗುತ್ತಿರುವ ರೀತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಹಾಗೇ, ಸೀರಿಯಲ್ ಮುಂದುವರೆಯಬೇಕೋ, ಬೇಡ್ವೋ ಎಂಬುದನ್ನೂ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ...

More from Filmibeat

English summary
Puttagowri Maduve serial will not end soon says Director Ramji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X