»   » 'ಪುಟ್ಟಗೌರಿ' ಧಾರಾವಾಹಿಯಲ್ಲಿ ದೊಡ್ಡ ತಿರುವು; ಗೌರಿ ಇನ್ಮುಂದೆ ಕರೀಷ್ಮಾ.!

'ಪುಟ್ಟಗೌರಿ' ಧಾರಾವಾಹಿಯಲ್ಲಿ ದೊಡ್ಡ ತಿರುವು; ಗೌರಿ ಇನ್ಮುಂದೆ ಕರೀಷ್ಮಾ.!

Posted By:
Subscribe to Filmibeat Kannada
ಪುಟ್ಟಗೌರಿ' ಧಾರಾವಾಹಿಯಲ್ಲಿ ದೊಡ್ಡ ತಿರುವು; ಗೌರಿ ಇನ್ಮುಂದೆ ಕರೀಷ್ಮಾ |FIlmibeat Kannada

'ಪುಟ್ಟಗೌರಿ ಮದುವೆ' ಧಾರಾವಾಹಿಯ ದಿನಕ್ಕೊಂದು ರೋಚಕತೆ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಗೌರಿಯ ಕಷ್ಟ ನೋಡಿ ಬೇಜಾರು ಮಾಡಿಕೊಳ್ಳುತ್ತಿದ್ದ ವೀಕ್ಷಕರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ.

ಹೌದು, ಪುಟ್ಟಗೌರಿ ಧಾರಾವಾಹಿಗೆ ಹೊಸ ತಿರುವು ಸಿಕ್ಕಿದ್ದು, ಗೌರಿ ಇನ್ಮುಂದೆ ಕರೀಷ್ಮಾ ಆಗಿ ಬದಲಾಗಿದ್ದಾರೆ. ಈ ಮೂಲಕ ಪುಟ್ಟಗೌರಿ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.

ಅಷ್ಟಕ್ಕೂ, ಗೌರಿ ಯಾಕೆ ಕರೀಷ್ಮಾ ಆದರು? ಈ ಕರೀಷ್ಮಾ ಯಾರು? ಪುಟ್ಟಗೌರಿ ಧಾರಾವಾಹಿಗೆ ಸಿಕ್ಕ ತಿರುವು ಏನು ಎಂಬುದು ತಿಳಿಯಲು ಮುಂದೆ ಓದಿ......

ಬದಲಾದ ಪುಟ್ಟಗೌರಿ

ಇನ್ಮುಂದೆ ನಿಮಗೆ ಪುಟ್ಟಗೌರಿ ದರ್ಶನ ಕೊಡುವುದು ಕಮ್ಮಿ ಆಗುತ್ತೆ. ಯಾಕಂದ್ರೆ, ಗೌರಿ ಸಂಪೂರ್ಣವಾಗಿ ಬದಲಾಗಿದ್ದಾಳೆ. ಇಷ್ಟು ದಿನ ನೀವು ನೋಡಿದ ಗೌರಿ ಬರಲ್ಲ. ಮಾಡ್ರನ್ ಲುಕ್ ನಲ್ಲಿರುವ ಗೌರಿ ಬರ್ತಾರೆ.

ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ..

ಹೆಸರು ಕರೀಷ್ಮಾ

ಅಂದ್ಹಾಗೆ, ಗೌರಿ ಡಬಲ್ ಶೇಡ್ ನಲ್ಲಿ ಪಾತ್ರ ನಿರ್ವಹಿಸಲಿದ್ದು, ಹೊಸ ಗೆಟಪ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತನ್ನ ಹೆಸರು ಕೂಡ ಬದಲಾಯಿಸಿಕೊಂಡಿದ್ದು, ಕರೀಷ್ಮಾ ಎಂದು ಬಿಂಬಿಸಿಕೊಂಡಿದ್ದಾರೆ.

'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

ಫುಲ್ ಇಂಗ್ಲೀಷ್

ಗೌರಿ ಕೇವಲ ಗೆಟಪ್, ಲುಕ್ ಮಾತ್ರ ಬದಲಾಯಿಸಿಕೊಂಡಿಲ್ಲ. ಮಾತಿನ ಶೈಲಿ ಕೂಡ ಬದಲಿಸಿಕೊಂಡಿದ್ದಾರೆ. ಕನ್ನಡದ ಅಪ್ಪಟ ಹುಡುಗಿಯಾಗಿದ್ದ ಗೌರಿ ಈಗ ಫುಲ್ ಇಂಗ್ಲೀಷ್ ನಲ್ಲಿ ಫಟಾಫಟ್ ಅಂತ ಮಾತನಾಡುತ್ತಿದ್ದಾರೆ.

ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!

ಸ್ಟೈಲಿಶ್ ಲುಕ್

ದುಬಾರಿ ವೆಚ್ಚದ ಕಾಸ್ಟ್ಯೂಮ್ ನಲ್ಲಿ ಮಿಂಚುತ್ತಿದ್ದು, ದುಬಾರಿ ಕಾರ್ ನಲ್ಲಿ ಬಂದಿಳಿದ ಕರೀಷ್ಮಾಗೆ ಅಕ್ಕ ಪಕ್ಕ ಭದ್ರತೆ ಸಿಬ್ಬಂದಿ ಕೂಡ ಇದ್ದಾರೆ. ಒಟ್ಟಾರೆ, ಕರೀಷ್ಮಾ ಎಂಟ್ರಿ ಗೌರಿ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ. ಯಾವ ಸಿನಿಮಾ ಹೀರೋಗೂ ಕಮ್ಮಿಯಿಲ್ಲ ಎನ್ನುವಂತಾಗಿದೆ.

ಮುಂದಿದೆ ಮಾರಿ ಹಬ್ಬ

ಇಷ್ಟು ದಿನ ಗೌರಿಯನ್ನ ಕೊಂದು ಬಿಟ್ಟಿದ್ದೀವಿ ಎಂದು ಕೊಂಡಿದ್ದ ಸಾಗರಿ, ಕರೀಷ್ಮಾ ಎಂಟ್ರಿಯಿಂದ ಅಚ್ಚರಿಗೊಳಗಾಗಿದ್ದಾರೆ. ಮತ್ತೊಂದೆಡೆ ತಾವು ಮಾಡಿದ ತಪ್ಪನ್ನ ಸಾಬೀತು ಪಡಿಸಲು ಗೌರಿ, ಕರೀಷ್ಮಾ ಗೆಟಪ್ ನಲ್ಲಿ ಬಂದಿದ್ದಾರೆ. ಒಟ್ನಲ್ಲಿ, ಪುಟ್ಟಗೌರಿ ಧಾರಾವಾಹಿಯಂತೂ ಸಿನಿಮಾಗಿಂತ ಹೆಚ್ಚು ಮನರಂಜನೆ ನೀಡುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

'ಪುಟ್ಟಗೌರಿ' ನಂತರ 'ನಂದಿನಿ' ಮೇಲೆ ಹುಲಿದಾಳಿ: ಈ ನಂದಿನಿ ತುಂಬ ಪವರ್ ಫುಲ್.!

English summary
Puttagowri Playing Double Role in Puttagowri maduve serial. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಪುಟ್ಟಗೌರಿ ಡಬಲ್ ಶೇಡ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X