Kannada TV Serials TRP : ಅದಲು ಬದಲಾದ ಧಾರಾವಾಹಿಗಳ ಸ್ಥಾನ: ಕಳೆದ ವಾರ ಹೆಚ್ಚು TRP ಗಳಿಸಿದ ಧಾರಾವಾಹಿ ಯಾವುದು?

By ಶೃತಿ ಹರೀಶ್ ಗೌಡ

ಜೀ ಕನ್ನಡದಲ್ಲಿ ಪ್ರಸಾರವಾಗುವ 'ಗಟ್ಟಿಮೇಳ‌' ಧಾರಾವಾಹಿ ಟಾಪ್ ಒನ್‌ ಸ್ಥಾನವನ್ನು ಕಳೆದ ಬಾರಿ ಅಲಂಕರಿಸಿತ್ತು. ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮತ್ತೆ ಟಾಪ್ ಒನ್ ಸ್ಥಾನಕ್ಕೇರಿದೆ. ಧಾರಾವಾಹಿಯಲ್ಲಿ ಸಹನಾ ಮದುವೆ ಮುಗಿದಿದೆ. ಈಗ ಪುಟ್ಟಕ್ಕ ಮೆಸ್‌ ಮತ್ತು ಮನೆಯನ್ನು ಬಿಟ್ಟು ಕೊಡುವ ಕಾಲ ಹತ್ತಿರ ಬಂದಿದೆ. ಸಹನಾ ಮುರುಳಿ ಮೇಷ್ಟ್ರು ಮನೆಗೆ ಹೊರಟಿದ್ದಾಳೆ ಮೆಸ್‌ನ್ನು ಸ್ನೇಹಾ ಮತ್ತು ಸುಮ ನೋಡಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿ 7.7 ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ' ‌ಧಾರಾವಾಹಿ ಕಳೆದ ಬಾರಿ 6ನೇ ಸ್ಥಾನವನ್ನು ಪಡೆದಿತ್ತು. ಈ ಬಾರಿ ಎರಡನೇ ಸ್ಥಾನವನ್ನು ಅಲಂಕರಿಸುವ ಮೂಲಕ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳನ್ನೇ ಹಿಂದಿಕ್ಕಿದೆ. ಲಕ್ಷ್ಮೀ ಮತ್ತು ವೈಷ್ಣವ್ ಮದುವೆಯು ಫೈನಲ್ ಹಂತಕ್ಕೆ ಬಂದಿದೆ. ಆದರೆ ವೈಷ್ಣವ್, ಕೀರ್ತಿಯನ್ನು ಮದುವೆ ಮಾಡಿಕೊಳ್ಳಬೇಕು ಎಂದು ಪಣವನ್ನು ತೊಟ್ಟಿದ್ದಾನೆ. ಈಗ ಕೀರ್ತಿ ಜೊತೆ ವೈಷ್ಣವ್ ಮದುವೆಯಾಗುತ್ತಾನಾ ಅಥವಾ ಲಕ್ಷ್ಮೀಯನ್ನು ಮದುವೆಯಾಗುತ್ತಾ‌ನಾ ಎಂಬುದೇ ಕುತೂಹಲವಾಗಿದೆ. ಇದು 7 ಟಿಆರ್‌ಪಿ ಪಡೆದುಕೊಂಡಿದೆ.

Puttakka makkalu tops the TRP chart; heres a look at the new list of top 10 TV Kannada serials

ಕಳೆದ ವಾರ ಮೊದಲ ಸ್ಥಾನದಲ್ಲಿದ್ದ 'ಗಟ್ಟಿಮೇಳ' ಧಾರಾವಾಹಿ ಈ ಬಾರಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ‌. ವೇದಾಂತ್ ಮನೆಯಲ್ಲಿ ಸೀಮಂತದ ಸಂಭ್ರಮ ಮನೆ ಮಾಡಿದೆ. ಈ ಕಡೆ ಅಮೂಲ್ಯ ಅತ್ತೆಯ ಬಗ್ಗೆ ಸತ್ಯ ಕಂಡು ಹಿಡಿಯಲು ಹೊಸ ಹೊಸ ಪ್ಲ್ಯಾನ್ ಮಾಡುತ್ತಿದ್ದಾಳೆ. ಕೊನೆಯ ತಮ್ಮ ಧ್ರುವನ ಪ್ರೀತಿಗೆ ಕಾಂತನ ಜೊತೆಗೆ ಸೇರಿ ಉಪಾಯವನ್ನು ಆದ್ಯಾ ಮಾಡುತ್ತಿದ್ದಾಳೆ. ಧ್ರುವನ ಕೊಲೆ ಮಾಡಿದವರನ್ನು ಕಂಡು ಹಿಡಿಯಲು ವೇದಾಂತ್ ಪ್ರಯತ್ನ ಮಾಡುತ್ತಿದ್ದಾನೆ. ಈ ಧಾರಾವಾಹಿಗೆ 6.9 ರೇಟಿಂಗ್ ಸಿಕ್ಕಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ತುಳಸಿ ಮಾಡುತ್ತಿರುವ ಹೊಸ ಅಡುಗೆ ಮಾಡಿ ಡಬ್ಬಿ ಕೊಡುವ ಕಾರ್ಯಕ್ಕೆ ಮನೆಯವರೆಲ್ಲರೂ ಸಹ ತುಳಸಿಗೆ ಸಾಥ್ ನೀಡಿದ್ದಾರೆ. ದತ್ತ ಸಹ ಟಿಫನ್ ಬಾಕ್ಸ್ ತಂದು ಕೊಡುವ ಮೂಲಕ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದಾರೆ. ಈ ಧಾರಾವಾಹಿಗೆ 6.1 ಟಿಆರ್‌ಪಿ ಸಿಕ್ಕಿದೆ.

'ಹಿಟ್ಲರ್ ಕಲ್ಯಾಣ' ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿ ಐದನೇ ಸ್ಥಾನವನ್ನು ಪಡೆದುಕೊಂಡಿವೆ. ಎಜೆ, ಲೀಲಾಳ‌ ಮೇಲೆ ಅಪಾರವಾದ ಪ್ರೀತಿಯನ್ನು ತೋರುತ್ತಿದ್ದಾನೆ. ದುರ್ಗಾ ಮಾತ್ರ ಕುತಂತ್ರವನ್ನು ಮಾಡಿದರು ಸಹ ಎನು ಪ್ರಯೋಜನವಾಗಿಲ್ಲ.‌ 'ಗೀತಾ' ಧಾರಾವಾಹಿಯಲ್ಲಿ ಗೀತಾ ಭಾನುಮತಿಯನ್ನು ತಪ್ಪಿಗೆ ಸಿಕ್ಕಿಸಲು ತುಂಬಾ ಪ್ರಯತ್ನ ಮಾಡುತ್ತಿದ್ದಾಳೆ. ಈ ಕಡೆ ಸುಧಾರಾಣಿಗೆ ಎಲ್ಲ ಸತ್ಯ ಗೊತ್ತಾಗಿದೆ. ಭಾನುಮತಿ ನಾನೇ ಎಲ್ಲವನ್ನು ಮಾಡಿದ್ದು ಎಂದು ಹೇಳಿ ಭಾನುಮತಿಗೆ ಶಾಕ್ ಕೊಟ್ಟಿದ್ದಾಳೆ.‌ ಈ ಎರಡು ಧಾರಾವಾಹಿಗಳು ಸಮನಾಗಿ 5.6 ರೇಟಿಂಗ್ ದಕ್ಕಿಸಿಕೊಂಡಿವೆ.

Puttakka makkalu tops the TRP chart; heres a look at the new list of top 10 TV Kannada serials

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ 'ಧಾರಾವಾಹಿ' ಕಳೆದ ಬಾರಿ 10ನೇ ಸ್ಥಾನದಲ್ಲಿತ್ತು. ಈ ಬಾರಿ ಟಾಪ್ 6ರಲ್ಲಿ ಸ್ಥಾನ ಪಡೆದು ತನ್ನ ಸ್ಥಾನವನ್ನು ಮೇಲಕ್ಕೇರಿಸಿಕೊಂಡಿದೆ. ರಾಮಾಚಾರಿ, ಚಾರುಲತಾಳನ್ನು ಮದುವೆಯಾಗಿದ್ದಾನೆ. ಆದರೆ ಈ ವಿಷಯ ಮಾತ್ರ ಯಾರಿಗೂ ಸಹ ಗೊತ್ತಿಲ್ಲ‌, ಈಗ ರಾಮಾಚಾರಿ ಯಾವ ರೀತಿ ಮನೆಯವರಿಗೆ ವಿಷಯ ತಿಳಿಸುತ್ತಾನೆ ನೋಡಬೇಕಿದೆ. ‌ಈ ಧಾರಾವಾಹಿಗೆ ಸಿಕ್ಕಿರೋದು 5.3 ರೇಟಿಂಗ್.

ಕಳೆದ ವಾರ 5ನೇ ಸ್ಥಾನದಲ್ಲಿದ್ದ 'ಸತ್ಯ' ಧಾರಾವಾಹಿ ಈ ಬಾರಿ 7ನೇ ಸ್ಥಾನಕ್ಕಿಳಿದಿದೆ. ಸತ್ಯಳನ್ನು ಮನೆ ಬಿಟ್ಟು ಓಡಿಸಲು ಕಾರ್ತಿಕ್ ಅಕ್ಕ ಕೀರ್ತನಾ ಬಂದು ಸೀತಾಗೆ ಕಿವಿ ಊದುತ್ತಿದ್ದಾಳೆ. ಸತ್ಯ ಮತ್ತು ಕಾರ್ತಿಕ್ ಅವಾರ್ಡ್ ಕಾರ್ಯಕ್ರಮಕ್ಕೆ ಹೋದಾಗ ಸತ್ಯ ಧರಿಸಿರುವ ಬಟ್ಟೆ ತೋರಿಸಿ ಸೀತಾಗೆ ಕೋಪ‌ ಬರುವಂತೆ ಮಾಡಿದ್ದಾಳೆ. ಸತ್ಯ ಧಾರಾವಾಹಿ 5.2 ರೇಟಿಂಗ್ ಪಡೆದಿದ್ದರೆ 4.9 ರೇಟಿಂಗ್ ಜೊತೆ 'ತ್ರಿಪುರ ಸುಂದರಿ' ಹಾಗೂ 'ಲಕ್ಷಣ' ಧಾರಾವಾಹಿಗಳು 8ನೇ ಸ್ಥಾನ ಅಲಂಕರಿಸಿವೆ.

Puttakka makkalu tops the TRP chart; heres a look at the new list of top 10 TV Kannada serials

ಒಂಭತ್ತನೇ ಸ್ಥಾನವನ್ನು‌ 'ಕೆಂಡಸಂಪಿಗೆ' ಧಾರಾವಾಹಿ ಪಡೆದಿದೆ. ಇನ್ನು ಹತ್ತನೇ ಸ್ಥಾನ 'ಜೊತೆ ಜೊತೆಯಲಿ' ಧಾರಾವಾಹಿಗೆ 10ನೇ ಸ್ಥಾನ ಸಿಕ್ಕಿದೆ. ಒಂದ್ಕಾಲದಲ್ಲಿ ನಂಬರ್‌ ಒನ್ ಸ್ಥಾನದಲ್ಲಿದ್ದ ಈ ಧಾರಾವಾಹಿ ಈಗ ಪ್ರೇಕ್ಷಕರ ಮನಗೆಲ್ಲಲು ವಿಫಲವಾಗಿದೆ.

More from Filmibeat

English summary
Puttakka makkalu tops the TRP chart; here's a look at the new list of top 10 TV Kannada serials. The latest TRP report is out. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X