"ಹಿರಿಯ ನಟಿ ಉಮಾಶ್ರೀ ಜೊತೆ ನಟಿಸುತ್ತಿರೋದು ಪುಣ್ಯ": 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ನಟ ಪವನ್ ಕುಮಾರ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ವೀಕ್ಷಕರ ಫೇವರಿಟ್ ಧಾರಾವಾಹಿಯಲ್ಲೊಂದು. ಈ ಸೀರಿಯಲ್‌ನಲ್ಲಿ ಪುಟ್ಟಕ್ಕನ ಹಿರಿ ಮಗಳು ಸಹನಾಳ ಪತಿ ಮುರಳಿಯ ಪಾತ್ರದಲ್ಲಿ ನಟ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇವರ ಪಾತ್ರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
ಹಿರಿಯ ನಟಿ ಉಮಾಶ್ರೀ ಅಳಿಯನ ಪಾತ್ರದಲ್ಲಿ ಅಭಿನಯಿಸುತ್ತಿರುವ ಪವನ್ ಕುಮಾರ್‌ಗೆ ಅವರೊಂದಿಗೆ ನಟಿಸೋದೇ ಖುಷಿ. ಅದಕ್ಕೆ ಉಮಾಶ್ರೀ ಜೊತೆ ಇರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

"ಉಮಾಶ್ರೀ ಪ್ರೀತಿಯ ಅತ್ತೆ"
ಹೌದು, ಇತ್ತೀಚೆಗಷ್ಟೇ ಉಮಾಶ್ರೀ ಜೊತೆಗಿರುವ ಫೋಟೋವನ್ನು ಶೇರ್ ಮಾಡಿರುವ ಪವನ್ "ನನ್ನ ಪ್ರೀತಿಯ ಅತ್ತೆ" ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದರು. ಇದಕ್ಕೆ ಬಹಳಷ್ಟು ನೆಟ್ಟಿದರು ಖುಷಿ ವ್ಯಕ್ತಪಡಿಸಿದ್ದರು. ಕನ್ನಡದ ಮೇರು ನಟಿ ಉಮಾಶ್ರೀ ಅವರ ಜೊತೆಗೆ ನಟಿಸುವ ಅವಕಾಶ ನನಗೆ ದೊರಕಿದೆ. ಇದು ನನ್ನ ಪಾಲಿಗೆ ಒಲಿದ ಅದೃಷ್ಟವೇ ಸರಿ ಎಂದು ಪವನ್ ಕುಮಾರ್ ಸಂತಸ ವ್ಯಕ್ತಪಡಿಸುತ್ತಾರೆ.
ಉಮಾಶ್ರೀ ಜೊತೆ ನಟಿಸುತ್ತಿರೋದು ಖುಷಿ
ಇನ್ನು ಹಿರಿಯ ನಟಿ ಉಮಾಶ್ರೀ ಅವರು ಅದ್ಭುತವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಚೆನ್ನಾಗಿ ಕ್ಯಾಮೆರಾ ಮುಂದೆ ನಟಿಸುತ್ತಾರೆ. ಅವರ ನಟನೆಯನ್ನು ನೋಡುವುದೇ ಒಂದು ಹಬ್ಬ. ಅವರಿಂದ ಕಲಿಯಲು ಬಹಳಷ್ಟು ಇದೆ. ಶೂಟಿಂಗ್ ಸಮಯದಲ್ಲಿ ಶೂಟಿಂಗ್ ನಡೆಯದಿದ್ದಾಗಲೂ ನಮ್ಮೊಂದಿಗೆ ಬಹಳಷ್ಟು ಖುಷಿ ಖುಷಿಯಿಂದ ಇರುತ್ತಾರೆ. ನನ್ನೊಂದಿಗೆ ಬಹಳಷ್ಟು ರೀಲ್ಸ್‌ಗಳಲ್ಲಿಯೂ ಭಾಗವಹಿಸುತ್ತಾರೆ. ಅವರಂತಹ ಹಿರಿಯ ಹಾಗೂ ಅನುಭವಿ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡುವುದೇ ಬಹಳಷ್ಟು ಖುಷಿ ಎಂದು ಹಲವೆಡೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೂಟಿಂಗ್ ಸೆಟ್‌ಗೆ ಬರುವುದೇ ಒಂದು ಖುಷಿ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ತಂಡ ಬಹಳಷ್ಟು ಸಂಭ್ರಮದಿಂದ ಕೂಡಿದೆಯಂತೆ. ಇಲ್ಲಿ ಪ್ರತಿಯೊಬ್ಬ ನಟರಿಂದಲೂ ಕಲಿಯಲು ಬಹಳಷ್ಟು ಇದೆಯಂತೆ. ಅದರಲ್ಲೂ ಹಿರಿಯ ನಟರು ಚೆನ್ನಾಗಿ ಸುಲಭದಲ್ಲಿ ಸ್ಪಷ್ಟವಾಗಿ ನಟನೆಯನ್ನು ಆಗಾಗ ಹೇಳಿಕೊಡುವುದು ನಮಗೊಂದು ರೀತಿ ಆಶೀರ್ವಾದದಂತೆ ಎಂಬುದು ಪವನ್ ಕುಮಾರ್ ಅವರ ಅಭಿಪ್ರಾಯ. ಇಡೀ ತಂಡದಲ್ಲಿ ಸಹನಟರೊಂದಿಗೆ ಒಬ್ಬರನ್ನೊಬ್ಬರು ರೇಗಿಸಿಕೊಂಡು ಖುಷಿ ಖುಷಿಯಿಂದ ಇರುವುದಕ್ಕೆ ಪವನ್ ನಿಜವಾಗಿಯೂ ಪುಣ್ಯ ಮಾಡಿದ್ದರು. ಇಲ್ಲಿ ಎಲ್ಲರೂ ಬಹಳಷ್ಟು ಫ್ರೆಂಡ್ಲಿಯಾಗಿರುವ ಕಾರಣ ಪವನ್‌ಗೆ ಸೆಟ್‌ಗೆ ಬರುವುದೇ ಒಂದು ಖುಷಿಯಂತೆ.

ಪುಟ್ಟಕ್ಕನ ಅಳಿಯನಾಗಿ ಪವನ್ ಮೋಡಿ
ಪವನ್ ಕುಮಾರ್ ಅವರು ಮುರಳಿ ಎಂಬ ಪಾತ್ರ ಮಾಡುತ್ತಿದ್ದು, ಪುಟ್ಟಕ್ಕ ಹಾಗೂ ಅವರ ಮಕ್ಕಳಿರುವ ಊರಾದ ದೇವಿಪುರಕ್ಕೆ ಇವರು ಕಾಲೇಜ್ ಲೆಕ್ಚರರಾಗಿ ಎಂಟ್ರಿಕೊಟ್ಟು ನಂತರದಲ್ಲಿ ಪುಟ್ಟಕ್ಕನ ಹಿರಿಯ ಮಗಳನ್ನು ಪ್ರೀತಿಸಿ ಹಿರಿಯರ ಒಪ್ಪಿಗೆ ಹಾಗೂ ಆಶೀರ್ವಾದ ಪಡೆದು ಮದುವೆಯಾಗುತ್ತಾರೆ. ಧಾರಾವಾಹಿ ನಾಯಕನ ಪಾತ್ರ ಇದಾಗಿದ್ದು ಇವರು ತಮ್ಮ ಅಭಿನಯದ ಮೂಲಕ ಬಹಳಷ್ಟು ಜನರ ಮನ ಗೆದ್ದು ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಕಿನ್ನರಿ ಮೂಲಕ ನಟನೆಗೆ ಪ್ರವೇಶ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ಶಿವಂ ಅಲಿಯಾಸ್ ನಕುಲ್ ಆಗಿ ನಟಿಸಿದ್ದ ಪವನ್ ಕುಮಾರ್ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕೃತಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡರು. ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಲನ್ ಆಗಿ ಅಬ್ಬರಿಸಿ ವೀಕ್ಷಕರ ಮನ ಸೆಳೆದಿದ್ದ ಪವನ್ ಕುಮಾರ್, ಇದೀಗ ಪುಟ್ಟಕ್ಕನ ಅಳಿಯನಾಗಿ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ.


Click it and Unblock the Notifications











