Akshara: ಮಾಡೆಲಿಂಗ್ ಲೋಕದಿಂದ ಪುಟ್ಟಕ್ಕನ ಮಗಳಾಗಿ ಬಂದ ಅಕ್ಷರ!

By ಪ್ರಿಯಾ ದೊರೆ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಈಗ ಕಂಠಿ ಸ್ನೇಹಕ್ಕೆ ತನ್ನ ಪ್ರೀತಿ ಹೇಳಬೇಕು ಅಂತ ಒದ್ದಾಡುತ್ತಿದ್ದರೆ, ಮುರಳಿ ಹಾಗೂ ಸಹನಾ ಇಬ್ಬರೂ ಒಬ್ಬರಿಗೊಬ್ಬರು ಇಷ್ಟ ಪಟ್ಟಿದ್ದರೂ, ಮಾತನಾಡೋದಕ್ಕೂ ಆಗದೇ, ಇರೋ ವಿಚಾರ ಹೇಳೋಕು ಆಗದೇ ಒದ್ದಾಡುತ್ತಿದ್ದಾರೆ. ಪುಟ್ಟಕ್ಕನ ದೊಡ್ಡ ಮಗಳು ಸಹನಾ ಸೌಮ್ಯ ಸ್ವಭಾವದವಳು.

ಹೆಸರಿಗೆ ತಕ್ಕಂತೆ ಸಹನಾ ಮೂರ್ತಿಯಾಗಿರುವ ಸಹನಾ, ಸದಾ ಅಮ್ಮನ ಪರ, ಅಮ್ಮನ ಜೊತೆಗೆ ಇರುತ್ತಾಳೆ. ಧಾರಾವಾಹಿಯಲ್ಲಿ ಸೀರೆಯುಟ್ಟು ಮುದ್ದು ಮುಖದ ಮುಗ್ಧೆಯಾಗಿದ್ದಾರೆ. ಇವರ ನಿಜವಾದ ಹೆಸರು ಅಕ್ಷರ. ಮಾಡೆಲಿಂಗ್ ಲೋಕದಿಂದ ಕಿರುತೆರೆಗೆ ಬಂದಿದ್ದಾರೆ.

ತಮ್ಮ ಸಹನೆಯಿಂದಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಜನಮನ ಗೆದ್ದಿದ್ದಾರೆ. ಅಕ್ಷರ ಅವರ ಮಾಡೆಲಿಂಗ್ ಹಾಗೂ ನಿಜ ಜೀವನದಲ್ಲಿ ಹೇಗಿದ್ದಾರೆ.? ಅಕ್ಷರ ಅವರ ನಟನೆಯ ಸಿನಿಮಾ ಹಾಗೂ ಧಾರಾವಾಹಿಗಳು ಯಾವುವು ಎಂದು ಮುಂದೆ ಓದಿ...

 Puttakkana Makkalu Actress Akshara Real life Story

ಧಾರಾವಾಹಿಯಲ್ಲಿರುವ ಅಕ್ಷರರನ್ನು ಮಾಡೆಲಿಂಗ್ ಲುಕ್‌ನಲ್ಲಿ ನೋಡಿದರೆ, ಇವರೇನಾ ಸಹನಾ ಎನ್ನುವುದರಲ್ಲಿ ಡೌಟೇ ಇಲ್ಲ. ಧಾರಾವಾಹಿಯಲ್ಲಿ ಸೀರೆಯುಟ್ಟು ಹಳ್ಳಿ ಹುಡುಗಿ ಲುಕ್‌ನಲ್ಲಿ ಕಾಣುವ ಅಕ್ಷರ, ಮಾಡೆಲಿಂಗ್‌ನಲ್ಲಿ ಸುಂದರವಾಗಿ ಕಾಣುತ್ತಾರೆ. ಅಷ್ಟರ ಮಟ್ಟಿಗೆ ಅಕ್ಷರ ಮಾಡೆಲಿಂಗ್ ಲುಕ್ ಮತ್ತು ಧಾರಾವಾಹಿಯಲ್ಲಿನ ಲುಕ್‌ನಲ್ಲಿ ವ್ಯತ್ಯಾಸವಿದೆ. ಮಾಡೆಲಿಂಗ್ ಫೋಟೊಗಳನ್ನು ನೀವೂ ನೋಡಿ, ಆಮೇಲೆ ಇದು ಪುಟ್ಟಕ್ಕನ ಮಗಳೇನಾ ಎಂದು ಗ್ಯಾರೆಂಟಿ ಬಾಯಿ ಮೇಲೆ ಬೆರಳು ಇಡುತ್ತೀರಾ.

ನಟಿ ಅಕ್ಷರ 'ಅಮ್ನೋರು' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ನಂತರ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನಲ್ಲಿ ಅಕ್ಷರ, ಸಹನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಷರ ನಟಿಸಿದ ಈ ಹಿಂದಿನ ಧಾರಾವಾಹಿಗೂ ಇದಕ್ಕೂ ತುಂಬಾನೇ ವ್ಯತ್ಯಾಸವಿದೆ. 'ಅಮ್ನೋರು' ಧಾರಾವಾಹಿಯಲ್ಲಿ ಬಬ್ಲಿ ಬಬ್ಲಿ ಹುಡುಗಿಯಾಗಿ ನಟಿಸಿದ್ದರು. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸಹನಾ ಅಂದರೆ ತುಂಬಾ ತಾಳ್ಮೆ ಇರುವ, ಫ್ಯಾಮಿಲಿ ಹುಡುಗಿ. ಸೌಮ್ಯತೆ ಇರುವ ಹುಡುಗಿ ತಮ್ಮ ಸಹೋದರಿಯರಿಗೋಸ್ಕರ ಕಷ್ಟ ಪಡುತ್ತಾಳೆ. ತಾಯಿ ಜೊತೆಗೆ ಇರುತ್ತಾಳೆ. ಈ ಪಾತ್ರದ ಆಫರ್ ಬಂದ ತಕ್ಷಣ ನನ್ನ ತಂದೆ-ತಾಯಿ ಕೂಡ ಈ ಪಾತ್ರ ಮಾಡು ಎಂದು ಹೇಳಿದರು ಅಂತ ಸ್ವತಃ ಅಕ್ಷರ ಅವರೇ ಹೇಳಿದ್ದಾರೆ.

 Puttakkana Makkalu Actress Akshara Real life Story

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಅಕ್ಷರ ಇಲ್ಲೇ ವಿದ್ಯಾಭ್ಯಾಸವನ್ನೂ ಮಾಡಿದ್ದಾರೆ. ಅಭಿಷೇಕ್ ಅಂಬರೀಷ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಎಂಬ ಸಿನಿಮಾದಲ್ಲೂ ಅಕ್ಷರ ನಟಿಸಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿಯಲ್ಲಿಯೂ ಅಕ್ಷರ ಸಕ್ರಿಯರಾಗಿದ್ದು, ಒಳ್ಳೆಯ ಸಿನಿಮಾಗಳಲ್ಲಿ ನಟಿಸಲು ಬಯಸುತ್ತಿದ್ದಾರೆ. ಅವಕಾಶಗಳಿಗಾಗಿ ಅಕ್ಷರ ಕಾಯುತ್ತಿದ್ದು, ನಮಗೆ ಟ್ಯಾಲೆಂಟ್ ಮತ್ತು ಲಕ್ ಎರಡೂ ಇದ್ದರೆ ಅವಕಾಶ ಸಿಗುತ್ತದೆ. ಅದಕ್ಕಾಗಿ ನಾವು ಕಷ್ಟ ಪಡಬೇಕು ಎನ್ನುತ್ತಾರೆ ಅಕ್ಷರ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಹಿರಿಯ ನಟ ಉಮಾಶ್ರೀ, ಮಂಜುಭಾಷಿಣಿ, ಹಂಸ, ರಮೇಶ್ ಪಂಡಿತ್ ಸೇರಿದಂತೆ ಹಲವರು ನಟಿಸಿದ್ದಾರೆ. ಕಂಠಿ ಪಾತ್ರದಲ್ಲಿ ಧನುಷ್, ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ, ಸುಮಾ ಪಾತ್ರದಲ್ಲಿ ಶಿಲ್ಪಾ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್, ಗಜೇಂದ್ರ ಈ ಸೀರಿಯಲ್‌ನಲ್ಲಿದ್ದಾರೆ. ಆರೂರು ಜಗದೀಶ್ ಈ ಧಾರಾವಾಹಿಯ ನಿರ್ದೇಶಕ ಹಾಗೂ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಈಗಾಗಲೇ ಈ ಧಾರಾವಾಹಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

More from Filmibeat

English summary
Puttakkana Makkalu Actress akshara Real life Story Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X