Sanjana Burli: ಅಭಿಮಾನಿ ಕೇಳಿದ ಆ ಒಂದು ಪ್ರಶ್ನೆಗೆ ಹೆದರಿದ್ರಾ ಸಂಜನಾ ಬುರ್ಲಿ..?

By ಎಸ್ ಸುಮಂತ್

ಸಂಜನಾ ಬುರ್ಲಿ ಅನ್ನೋದಕ್ಕಿಂತ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ ಅಂದ್ರೆ ಎಲ್ಲರಿಗೂ ಬೇಗ ಗೊತ್ತಾಗುತ್ತೆ. ಸದ್ಯ ಪುಟ್ಟಕ್ಕನ ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಸಹನಾ ಮದುವೆಯಲ್ಲಿ ಇಡೀ ಮನೆಯವರೆಲ್ಲಾ ಮಿಂದೇಳುತ್ತಿದ್ದಾರೆ. ರಾಜೇಶ್ವರಿ ಮದುವೆಯಾದ ಮೇಲೆ ಪುಟ್ಟಕ್ಕನಿಂದ ದೂರವಾಗಿದ್ದ ಗೋಪಾಲ ಕೂಡ ಮಗಳ ಮದುವೆಯಲ್ಲಿ ಸಂಭ್ರಮಿಸುತ್ತಿದ್ದಾನೆ. ಮನೆಯಲ್ಲೆಲ್ಲಾ ನಗು- ಸಂತೋಷವೇ ತುಂಬಿ ತುಳುಕುತ್ತಿದೆ.

ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ ಮನೆಯಲ್ಲಿ ನಡೆಯುತ್ತಿರುವ ಸಂತಸ ಸಂಭ್ರಮದ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಜೊತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಅದಕ್ಕೆ ನೆಟ್ಟಿಗರೊಬ್ಬರು ಮಾಡಿರುವ ಕಮೆಂಟ್ ಗಮನ ಸೆಳೆದಿದೆ.

ನೃತ್ಯವೇ ನನ್ನ ಪ್ರೇಮಿ ಎಂದ ಸಂಜನಾ..!

ನೃತ್ಯವೇ ನನ್ನ ಪ್ರೇಮಿ ಎಂದ ಸಂಜನಾ..!


ಇದು ಪ್ರೇಮಿಗಳ ದಿನದ ತಿಂಗಳು. ಇಂದಿನಿಂದ ವ್ಯಾಲೆಂಟೈನ್ಸ್ ಡೇ ವೀಕ್ ಶುರುವಾಗಿದೆ. ಅದರಲ್ಲೂ ತೆರೆ ಮೇಲೆ ಕಂಠಿ ಹಾಗೂ ಸ್ನೇಹಾ ಲವ್ ಸ್ಟೋರಿ ನೋಡಿರುವವರಿಗೆ ಸ್ನೇಹಾಳ ರಿಯಲ್ ಲವರ್ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಅದರಂತೆ ಸಂಜನಾ ಬುರ್ಲಿ ಕೂಡ ತಮ್ಮ ಪ್ರೇಮಿಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಹಿಂದಿ ಹಾಡಿಗೆ ನೃತ್ಯ ಮಾಡಿದ್ದು, ಆ ವಿಡಿಯೋಗೆ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಆ ಕ್ಯಾಪ್ಶನ್ ನಲ್ಲಿ "ನೃತ್ಯವೇ ನನ್ನ ಪ್ರೇಮಿ" ಎಂದು ಬರೆದುಕೊಂಡಿದ್ದಾರೆ.

ಎಲ್ಲರಿಗೂ ರಿಪ್ಲೇ ಮಾಡುವುದು ಕಷ್ಟವೇ

ಎಲ್ಲರಿಗೂ ರಿಪ್ಲೇ ಮಾಡುವುದು ಕಷ್ಟವೇ

ಸೋಷಿಯಲ್ ಮೀಡಿಯಾದಲ್ಲಿ ಗೊತ್ತಿರುವವರು, ಗೊತ್ತಿಲ್ಲದೆ ಇರುವವರೆಲ್ಲರೂ ಫಾಲೋವರ್ಸ್ ಆಗ್ತಾರೆ, ಫ್ರೆಂಡ್ಸ್ ಆಗಿರುತ್ತಾರೆ. ಅದರಲ್ಲೂ ಕಲಾವಿದರಿಗೆ ಅದು ಹೆಚ್ಚಿನ ಸಂಖ್ಯೆಯಲ್ಲಿಯೇ ಇರುತ್ತಾರೆ. ಅವರ ಅಭಿಮಾನಿಗಳು, ಆಸಕ್ತಿ ಇರೋರು ಕೂಡ ಅವರ ಸೋಶಿಯಲ್ ಮೀಡಿಯಾದಲ್ಲಿ ಒಂದು ಫಾಲೋ ಮಾಡುತ್ತಿರುತ್ತಾರೆ. ಅವರು ಹಾಕುವ ಫೋಟೋಗಳನ್ನು ನೋಡಿ ಖುಷಿ ಪಡುತ್ತಾರೆ. ಇನ್ನು ಅಭಿಮಾನಿಗಳಂತು ಕಮೆಂಟ್ ಹಾಕುವುದನ್ನು ಮರೆಯುವುದಿಲ್ಲ. ಫೋಟೋ, ವಿಡಿಯೋಗೆ ಮನಸ್ಸು ತುಂಬಿದ ಪ್ರೀತಿಯ ಕಮೆಂಟ್ ಗಳನ್ನು ಹಾಕುತ್ತಾರೆ. ಆದರೆ, ಬರುವ ನೂರಾರು ಕಮೆಂಟ್ ಗಳಿಗೆ ರಿಪ್ಲೇ ಮಾಡುವುದು ಸಾಧ್ಯವಾಗಿರುವುದಿಲ್ಲ. ಕೆಲವೊಂದು ಸಲ ಇದೆ ಕಲಾವಿದರು ಕಮೆಂಟ್ ಮೂಲಕ ಧನ್ಯವಾದ ತಿಳಿಸುವುದಕ್ಕೆ ಆಗದೆ ಹೋದಾಗ ವಿಡಿಯೋ ಮೂಲಕವೋ, ಪೋಸ್ಟರ್ ಮೂಲಕವೋ ಧನ್ಯವಾದ ತಿಳಿಸುತ್ತಾರೆ. ಆದರೆ, ಅದು ಯಾವುದಾದರೂ ವಿಶೇಷಕ್ಕೆ ಎಲ್ಲಾ ಫೋಟೋ, ವಿಡಿಯೋಗಳಿಗಲ್ಲ.

ಬೇಸರ ವ್ಯಕ್ತಪಡಿಸಿದ ಫಾಲೋವರ್

ಸಂಜನಾ ಬುರ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಅವರಿಗೆ 118 ಸಾವಿರ ಫಾಲೋವರ್ಸ್ ಕೂಡ ಇದ್ದಾರೆ. 'ಪುಟ್ಟಕ್ಕನ ಮಕ್ಕಳು' ಸೆಟ್‌ನಲ್ಲಿ ನಡೆಯುವ ವಿಚಾರ, ತಮ್ಮ ಪರ್ಸನಲ್ ಫೋಟೋಶೂಟ್ ಸೇರಿದಂತೆ ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅದರ ಜೊತೆಗೆ ಕಂಠಿ ಹಾಗೂ ಸ್ನೇಹಾ ಫ್ಯಾನ್ಸ್ ಪೇಜ್ ಕೂಡ ಸಿಕ್ಕಾಪಟ್ಟೆ ಹುಟ್ಟಿಕೊಂಡಿವೆ. ಈಗ ಅವರ ಅಧಿಕೃತ ಅಕೌಂಟ್ ಗೆ ಅಭಿಮಾನಿಯೊಬ್ಬರು " ಆಕ್ಟರ್ ಅಂತ ಪ್ರೀತಿ ತೋರಿಸಿದ್ರೆ ನೀವೂ ರಿಪ್ಲೇ ಮಾಡುವುದಿಲ್ಲ ಯಾಕೆ" ಎಂದು ಪ್ರಶ್ನಿಸಿದ್ದಾರೆ.

ಕ್ಲಾರಿಟಿ ಕೊಟ್ಟ ಸಂಜನಾ ಬುರ್ಲಿ

ಕ್ಲಾರಿಟಿ ಕೊಟ್ಟ ಸಂಜನಾ ಬುರ್ಲಿ

ಸಂಜನಾ ಬುರ್ಲಿ ತನ್ನ ಅಭಿಮಾನಿ ಹಾಕಿರುವ ಮೆಸೇಜ್‌ಗೆ ಅಷ್ಟೇ ಪ್ರೀತಿಯಿಂದ ಉತ್ತರ ಕೊಟ್ಟಿದ್ದಾರೆ. "ನಾನು ಗಮನಿಸಿದರೆ ಖಂಡಿತಾ ಎಲ್ಲದಕ್ಕೂ ಉತ್ತರ ಕೊಡುತ್ತೀನಿ" ಎಂದಿದ್ದಾರೆ. ಸಹಜವಾಗಿ ಗೊತ್ತಿರುವವರಿಗೆ ರಿಪ್ಲೇ ಮಾಡುತ್ತಿದ್ದ ಸಂಜನಾ ಬುರ್ಲಿ, ಆ ರಿಪ್ಲೇ ಬಂದ ಮೇಲೆ ಎಲ್ಲರ ಕಮೆಂಟ್‌ಗೂ ಉತ್ತರ ನೀಡಿದ್ದಾರೆ.

More from Filmibeat

English summary
Puttakkana Makkalu Actress Sanjana Burli Afraid Of Fans Question. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X