Sanjana Burli: ಬಂಗಾರಮ್ಮ, ನಂಜಮ್ಮ, ಸ್ನೇಹಾ ಶತ್ರುಗಳಾ..? ನೋ..ವೇ.. ಈ ಫೋಟೊವನ್ನೊಮ್ಮೆ ನೋಡಿ..!

By ಫಿಲ್ಮಿಬೀಟ್ ಡೆಸ್ಕ್

ಯಾವುದೇ ಸಿನಿಮಾ ಆಗಲಿ, ಧಾರಾವಾಹಿ ಆಗಲಿ. ತೆರೆಮೇಲೆ ಇರುವುದೇ ಬೇರೆ, ತೆರೆ ಹಿಂದಿನ ಆತ್ಮೀಯತೆಯೇ ಬೇರೆ. ಈ ವಿಚಾರ ಹೊಸದೇನು ಅಲ್ಲ. ಈಗಾಗಲೇ ಸಾಕಷ್ಟು ಬಾರಿ ಅದು ಪ್ರೂವ್ ಆಗಿದೆ. ಈಗ ಯಾಕೆ ಮತ್ತೆ ಅದೇ ವಿಚಾರ ಮಾತನಾಡುತ್ತಾ ಇದ್ದೀರಾ ಅನ್ನೋ ಪ್ರಶ್ನೆ ಮಾಡಬಹುದು. ಅದಕ್ಕೊಂದು ಸ್ಟ್ರಾಂಗ್ ಕಾರಣ ಇದೆ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ಆಲ್ಮೋಸ್ಟ್ ಎಲ್ಲರು ನೋಡುತ್ತೀರಿ. ಯಾಕಂದ್ರೆ ಧಾರಾವಾಹಿಯಲ್ಲಿರುವ ಕಥೆ ಅಷ್ಟು ಹತ್ತಿರ ಎನಿಸದೇ ಇರುವುದಿಲ್ಲ. ಒಂದು ಗಟ್ಟಿನ ಹೆಣ್ಣಿನ ಕಥೆ. ಎಲ್ಲರ ಮನೆಯಲ್ಲಿ ಪುಟ್ಟಕ್ಕನಂತ ಹೆಣ್ಣು ಇದ್ದೆ ಇರುತ್ತಾರೆ. ಹೀಗಾಗಿ ಈ ಧಾರಾವಾಹಿ ಎಲ್ಲರಿಗೂ ಕೊಂಚ ಜಾಸ್ತಿಯೇ ಹತ್ತಿರವಾಗಿರುತ್ತದೆ. ಅದರಲ್ಲಿರುವ ಸ್ನೇಹಾ - ನಂಜಮ್ಮ- ಬಂಗಾರಮ್ಮನ ಕ್ಯಾರೆಕ್ಟರ್ ಬಗ್ಗೆ ಮಾತಾಡಲೇ ಬೇಕಿದೆ.

ಸ್ನೇಹಾಳನ್ನು ಕಂಡರೆ ಆಗುವುದಿಲ್ಲ!

ಸ್ನೇಹಾಳನ್ನು ಕಂಡರೆ ಆಗುವುದಿಲ್ಲ!

ಬಂಗಾರಮ್ಮನನ್ನು ಕಂಡರೆ ಊರಿನ ಜನರೆಲ್ಲಾ ಹೆದರುತ್ತಾರೆ. ಬಡ್ಡಿ ಕೊಟ್ಟು ವಸೂಲಿಗೆ ಮಗನನ್ನು ಬಿಡುತ್ತಾಳೆ ಎಂಬುದು ಸ್ನೇಹಾಳ ತಪ್ಪು ಕಲ್ಪನೆ. ಆದ್ರೆ ಬಂಗಾರಮ್ಮನ ಉದ್ದೇಶವೇ ಬೇರೆಯಾಗಿದೆ. ಸ್ನೇಹಾ ಎಂದರೆ ತಗ್ಗಿಬಗ್ಗಿ ನಡೆಯುವುದಿಲ್ಲ, ದೊಡ್ಡವರಿಗೆ ಗೌರವ ಕೊಡುವುದಿಲ್ಲ ಎಂಬುದು ಬಂಗಾರಮ್ಮನ ವಾದ. ಹೀಗಾಗಿ ಇಬ್ಬರು ಎದುರು ಬದುರಾದರೆ ಜಗಳ ತಪ್ಪಿದ್ದಲ್ಲ. ಇದು ತೆರೆಯ ಮೇಲೆ. ಆದರೆ ತೆರೆಯ ಹಿಂದೆ ಮೂರು ಜನ ಹೇಗಿರ್ತಾರೆ ನೋಡಿ..!

ಶತ್ರುಗಳೆಲ್ಲಾ ಮಿತ್ರರಾದಾಗ..!

ಶತ್ರುಗಳೆಲ್ಲಾ ಮಿತ್ರರಾದಾಗ..!

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಿತರು ಇದ್ದಾರೆ. ಅದಕ್ಕಿಂತ ಹೆಚ್ಚಾಗಿ ಶತ್ರುಗಳು ಇದ್ದಾರೆ. ಅದರಲ್ಲೂ ಪುಟ್ಟಕ್ಕನ ಮನೆಗೆ ಶತ್ರುಗಳ ಕಾಟವೇ ಹೆಚ್ಚಾಗಿದೆ. ಬಂಗಾರಮ್ಮನಿಗೂ ನಂಜಮ್ಮನಿಗೂ ಬೀಗರ ನೆಂಟಸ್ತಿಕೆ ಇದ್ದರೂ ಸ್ವಾಭಿಮಾನ, ಅಂತಸ್ತು ಎಂಬುದು ಇಬ್ಬರ ನಡುವೆ ಸಿಕ್ಕಾಗೆಲ್ಲಾ ಜಗಳವನ್ನೇ ಮಾಡಿಸುತ್ತಾ ಇರುತ್ತೆ. ಬಂಗಾರಮ್ಮನ ಸ್ನೇಹಾ ಸಿಕ್ಕಾಗಲೂ ಇದೇ ಜಗಳ ಮುಂದುವರೆಯುತ್ತೆ. ಈಗ ಬೇರೆ ಬಂಗಾರಮ್ಮನ ಮಗನ ಜೊತೆಗೆ ಸ್ನೇಹಾ ಓಡಾಡುತ್ತಿರುವುದಕ್ಕೆ ನಂಜಮ್ಮ ಸ್ನೇಹಾಳ ಮೇಲೂ ಮುನಿಸಿಕೊಂಡಿದ್ದಾಳೆ. ಆದರೆ ಈಗ ಸಹನಾ ಮದುವೆಯಲ್ಲಿ ಮೂರು ಜನ ಸೇರಿದ್ದಾರೆ. ಸ್ನೇಹಾನೆ ಬಂಗಾರಮ್ಮನಿಗೆ ನೀರು ಕೊಟ್ಟು ಉಪಚರಿಸುತ್ತಿದ್ದಾಳೆ. ಆ ಫೋಟೋಗೆ ಕ್ಯಾಪ್ಶನ್ ಕೊಟ್ಟಿರುವ ಸಂಜನಾ ಬುರ್ಲಿ, "ಶತ್ರುಗಳಾ..? ಇಲ್ಲ ಚಾನ್ಸೇ ಇಲ್ಲ. ನಂಗೆ ಸ್ಪೂರ್ತಿ ತುಂಬುವ ಇಬ್ಬರು ಇವರು" ಎಂದು ಬರೆದುಕೊಂಡಿದ್ದಾರೆ.

ಹಳೇ ಚಂದ್ರುಗೆ ಹಳೆ ನೆನಪುಗಳು..!

ಹಳೇ ಚಂದ್ರುಗೆ ಹಳೆ ನೆನಪುಗಳು..!

ಧಾರಾವಾಹಿಯಲ್ಲಿ ಆಗಾಗ ಪಾತ್ರಗಳ ವ್ಯಕ್ತಿಗಳು ಬದಲಾಗುತ್ತಾ ಇರುತ್ತಾರೆ. ಅದರಂತೆ ನಂಜಮ್ಮನ ಮಗನ ಪಾತ್ರದಲ್ಲಿ ಮಾಡುತ್ತಿದ್ದ ಕಾರ್ತಿ ಮಹೇಶ್ ಬದಲಾವಣೆಯಾಗಿದೆ. ಆ ಜಾಗಕ್ಕೆ ಮತ್ತೊಬ್ಬ ನಟಯ ಎಂಟ್ರಿಯಾಗಿದೆ. ಆದ್ರೆ ಸಂಜನಾ ಈ ಫೋಟೋಗಳನ್ನೆಲ್ಲಾ ಹಂಚಿಕೊಂಡಿರುವುದನ್ನು ಕಂಡು ಹಳೆ ಚಂದ್ರು ಅಣ್ಣಯ್ಯ ಹಳೆ ನೆನಪಿಗೆ ಮರಳಿದ್ದಾರೆ. "ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೀನಿ" ಎಂದು ಕಮೆಂಟ್ ಹಾಕಿದ್ದಾರೆ. ಅದಕ್ಕೆ ಸಂಜನಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಗೊತ್ತಲ್ಲ, ಭೂಮಿಕಾ ಸ್ಟುಡಿಯೋದಲ್ಲಿ ಎಲ್ಲರೂ ಸೇರಿದ್ದು" ಎಂದಿದ್ದಾರೆ.

ಸಂಜನಾರ ಭವಿಷ್ಯದ ಸ್ನೇಹಿತರಾ..?

ಸಂಜನಾರ ಭವಿಷ್ಯದ ಸ್ನೇಹಿತರಾ..?

ಸಂಜನಾ ಬುರ್ಲಿ ಈ ಸುಂದರ ಫೋಟೋ ಹಂಚಿಕೊಂಡಿರುವುದು ಅಲ್ಲದೆ, ಅಷ್ಟೇ ಬ್ಯೂಟಿಫುಲ್ ಆದಂತ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಅದಕ್ಕೆ ಕಮೆಂಟಿಗರು ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ಸಾಧ್ಯವಾ ಎಂಬುದು ಅವರ ಅನುಮಾನವಾಗಿದೆ. ಹಾಗೇ ಇನ್ನೊಂದಷ್ಟು ಜನ ಹಾಗಾದ್ರೆ ನಿಮ್ಮ ಮುಂದಿನ ಸ್ನೇಹಿತರ ಲೀಸ್ಟ್ ನಲ್ಲಿ ಇವರು ಇರುತ್ತಾರಾ ಎಂದು ಕೇಳಿದ್ದಾರೆ. ಅದಕ್ಕೆಲ್ಲಾ ಸಂಜನಾ ಬುರ್ಲಿ ಅವರು ಅಲ್ಲಿಯೇ ಸ್ವೀಟ್ ಆಗಿ ಉತ್ತರ ನೀಡಿದ್ದಾರೆ.

More from Filmibeat

English summary
Puttakkana Makkalu Actress Sanjana Burli And Her Co Actors Bonding Goes Viral. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X