Sanjana Burli:ಪುಟ್ಟಕ್ಕನ ಮಗಳ ಸಖತ್ ಸ್ಟೆಪ್ಸ್ ಫ್ಯಾನ್ಸ್ ಫಿದಾ; ಸಂಜನಾ ಬುರ್ಲಿ ಡ್ಯಾನ್ಸ್ ವೈರಲ್
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಮಿಂಚಿದ ನಟಿ ಸಂಜನಾ ಬುರ್ಲಿ ಕಿರುತೆರೆಯಲ್ಲಿ ಸದ್ದು ಮಾಡುತ್ತಲೇ ಇದ್ದಾರೆ. ಇವರು ಸಾಮಾಜಿಕ ಜಾಲತಾಣದಲ್ಲಿ ಕೂಡ ಬಹುತೇಕವಾಗಿ ಸಕ್ರಿಯರಾಗಿರುವ ನಟಿ. ಪುಟ್ಟಕ್ಕನ ಮಕ್ಕಳು ಸಿನಿಮಾದಲ್ಲಿ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಮಿಂಚುತ್ತಿದ್ದಾರೆ. ಸ್ನೇಹಾ ಪಾತ್ರ ನೇರ ನುಡಿ ಇರುವ ವ್ಯಕ್ತಿತ್ವದವರು. ಆಕೆಗೆ ಸುಳ್ಳು ಹೇಳುವವರನ್ನು, ಮೋಸ ಮಾಡುವವರನ್ನು ಕಂಡರೆ ಆಗುವುದೇ ಇಲ್ಲ.
ಸಂಜನಾ ಬುರ್ಲಿ ಎಂದರೆ ಅನೇಕ ಜನರಿಗೆ ತಿಳಿಯುವುದೇ ಇಲ್ಲ. ಸ್ನೇಹಾ ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಇದೀಗ ಸಂಜನಾ ಬುರ್ಲಿ ಹಾಡೊಂದಕ್ಕೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ "ಹುಸನ್ ತೆರಾ ತೌಬಾ ತೌಬಾ" ಹಾಡಿಗೆ ಭರ್ಜರಿ ರೀಲ್ಸ್ ಮಾಡಿದ್ದಾರೆ. ಇವರ ಡಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಹನಾ ಬದಲಿಗೆ ನೀವು ಯಾಕೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಬಹುದಾಗಿತ್ತು. ನೀವು ಯಾಕೆ ಹೋಗಿಲ್ಲ ಎಂದು ಸಂಜನಾ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಲೇ ಇದ್ದಾರೆ. 'ಡಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಅಕ್ಷರಾ ಕಾಣಿಸಿಕೊಂಡಿದ್ದಾರೆ. ಅಕ್ಷರಾ ಅವರು ಡಾನ್ಸ್ ಮೂಲಕ ಎಲ್ಲರ ಮೋಡಿ ಮಾಡಿದ್ದಾರೆ. ಹಾಗೆಯೇ ಸಂಜನಾ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ. ಹಾಗೆಯೇ ಸಂಜನಾ ಡ್ಯಾನ್ಸ್‌ಗೆ ಸಾಕಷ್ಟು ಕಾಮೆಂಟ್‌ಗಳು ಹರಿದು ಬರುತ್ತಿದೆ
ಸಂಜನಾ ಡ್ಯಾನ್ಸ್‌ಗೆ ಅಭಿಮಾನಿಗಳ ಮೆಚ್ಚುಗೆ
ಅಭಿಮಾನಿಗಳು ಲೈಕ್ ಮಾಡುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಸ್ನೇಹಾ ಹೀಗೆಯೇ ಹಲವಾರು ಹಿಟ್ ಸಾಂಗ್ ಗಳಿಗೆ ಹೆಜ್ಜೆ ಹಾಕಿ ಎಲ್ಲರ ಮನಸ್ಸಿಗೆ ಹತ್ತಿರ ಆಗಿರುವುದಂತು ಸತ್ಯ. ಇನ್ನೂ ಸಂಜನಾ ಆಕ್ಟಿಂಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಸೆಲೆಕ್ಟ್ ಆದ ಬಳಿಕ ಸಂಜನಾ ಆಕ್ಟಿಂಗ್ ಕ್ಲಾಸ್‌ಗೆ ಹೋಗಿ ಅಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಹಾಗೆಯೇ ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಉಮಾಶ್ರೀ ಅವರು ಬಹಳ ಖುಷಿಯಿಂದ ಸ್ನೇಹಾ ಬೆನ್ನು ತಟ್ಟಿದ್ದರು. ಇದನ್ನೆಲ್ಲ ನೆನಪು ಮಾಡಿಕೊಂಡ ಸಂಜನಾಗೆ ಬಹಳ ಖುಷಿ ಆಗುತ್ತದಂತೆ.
ಬಂಗಾರಮ್ಮನ ಸೊಸೆ ಸ್ನೇಹಾ
ಇದೀಗ ಬಂಗಾರಮ್ಮ ಅವರ ಮುದ್ದಿನ ಸೊಸೆಯಾಗಿ, ಕಂಠಿಯ ಹೆಂಡತಿಯಾಗಿ ಸ್ನೇಹಾ ಅಭಿನಯ ಮಾಡುತ್ತಿದ್ದಾರೆ. ಪುಟ್ಟಕ್ಕನ ಮಗಳಾಗಿ ಮಾಡುತ್ತಿರುವ ಅಭಿನಯಕ್ಕೆ ಮಾತ್ರ ಜನರು ಮಾರು ಹೋಗಿರುವುದಂತು ಸತ್ಯ. ಪುಟ್ಟಕ್ಕನ ಮಕ್ಕಳ ಧಾರಾವಾಹಿ ಕುರಿತು ಈ ಹಿಂದೆ ಮಾತನಾಡಿದ್ದ ಸಂಜನಾ ಅವರು, ಹಳ್ಳಿ ಹುಡುಗಿ ರೀತಿ ಕಾಣಿಸಬೇಕು ಎಂದು ಲುಕ್ ಬದಲಾಯಿಸಿಕೊಂಡಿದ್ದರು.


Click it and Unblock the Notifications











