Puttakkanna Makkalu: ಸಾರಿಕಾ ರಾಜ್ ಅರಸ್ 32 ವರ್ಷಗಳ ಕಿರುತೆರೆ ಜರ್ನಿ ಬಲು ರೋಚಕ!
ಸಾರಿಕಾ ರಾಜ್ ಅರಸ್ ಬಹಳ ವರ್ಷಗಳಿಂದ ಕಿರುತೆರೆಯಲ್ಲಿರುವ ನಟಿ. ಬಾಲನಟಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸಾರಿಕಾ ಇದುವರೆಗೂ 400ಕ್ಕೂ ಹೆಚ್ಚು ಸೀರಿಯಲ್‌ಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಂಗಾರಮ್ಮನ ಬೀಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Recommended Video

ಪೊಲೀಸ್ ಅಧಿಕಾರಿ ಲಿಂಗರಾಜೇ ಅರಸ್ ಹಾಗೂ ರೇವತಿ ಅರಸ್ ದಂಪತಿಯ ಪುತ್ರಿಯೇ ಸಾರಿಕಾ ರಾಜ್ ಅರಸ್. ಡಿಡಿ ಚಂದನದಲ್ಲಿ ಮೂಡಿ ಬರುತ್ತಿದ್ದ 'ಗಂಗ' ಎಂಬ ಹಿಂದಿ ಧಾರಾವಾಹಿ ಮೂಲಕ ಸಾರಿಕಾ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಕಳೆದ ಮೂವತ್ತೂಕ್ಕೂ ಅಧಿಕ ವರ್ಷಗಳಿಂದ ಸಾರಿಕಾ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಛಾಯಾಗ್ರಾಹಕಿ ಆಗುವ ಆಸೆ ಹೊತ್ತಿದ್ದ ಸಾರಿಕಾ ಮದುವೆಯಾಗಿದ್ದು ಮಾತ್ರ ಛಾಯಾಗ್ರಾಹಕ ಮ್ಯಾಥ್ಯು ರಾಜನ್ ಎಂಬುವರನ್ನು. ಇವರಿಗೆ ಗ್ರೀಷ್ಮ ಎಂಬ ಮಗಳಿದ್ದಾಳೆ. ಕಾಮಿಡಿ, ಸಹನೆ, ಬಜ್ಜಾರಿ, ಒಳ್ಳೆಯ ಪಾತ್ರ, ಹುಚ್ಚಿ, ಸೈಕೋ, ಗಯ್ಯಾಳಿ, ಇನ್ ಸ್ಪೆಕ್ಟರ್, ತಾಯಿ, ಅತ್ತೆ ಹಾಗೂ ವಿಲನ್ ಪಾತ್ರಗಳಲ್ಲಿ ನಟಿಸಿರುವ ಸಾರಿಕಾ ಖಳನಾಯಕಿ ಪಾತ್ರವನ್ನು ತಮ್ಮ ಮಗಳು ಮೆಚ್ಚಿಕೊಂಡಿದ್ದಾಳಂತೆ.

ಸಾರಿಕಾ ಬಾಲ ನಟಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮನೆಯಲ್ಲಿ ವಿರೋಧವಿತ್ತಂತೆ. ಸ್ವಲ್ಪ ಸಮಯ ನಟಿಸಲಿ, ನಂತರ ಬೇಡ ಎಂದು ಹೇಳಿದ್ದರಂತೆ. ಸಾರಿಕಾಗೆ ಪೊಲೀಸ್ ಅಥವಾ ಏರ್ ಹೋಸ್ಟೆಸ್ ಆಗುವ ಆಸೆ ಇತ್ತಂತೆ. ಕೋರ್ಸ್ ಮಾಡಿದರೂ ಬಣ್ಣದ ಲೋಕ ಸಾರಿಕಾರನ್ನು ಬಿಟ್ಟು ಕೊಡದ ಕಾರಣ, ಇಲ್ಲೇ ಉಳಿದಿದ್ದಾರೆ. ಛಾಯಾಗ್ರಾಹಕಿ ಆಗಬೇಕು ಎಂದುಕೊಂಡು ಪೂನಾದಲ್ಲಿ ಸಿನಿಮಾಟೋಗ್ರಫಿ ಕೋರ್ಸ್ ಕೂಡ ಮಾಡಿದ್ದರಂತೆ. ಆದರೆ ಸರಿಯಾದ ಅವಕಾಶ ಹಾಗೂ ಪ್ರೋತ್ಸಾಹ ಸಿಗದೆ ನಟಿಯಾಗೇ ಮುಂದುವರಿದಿದ್ದಾರೆ. ಕಳೆದ 32 ವರ್ಷಗಳಿಂದ ಕಿರುತೆರೆಯಲ್ಲಿದ್ದಾರೆ. ಸಾರಿಕಾಗೆ ತಮ್ಮ ಪತಿ ಹಾಗೂ ಮಗಳ ಪ್ರೋತ್ಸಾಹವಿದೆ.
ಸಾರಿಕಾ ಅವರು ಈಗಾಗಲೇ ಹಲವು ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಆದರೆ ಅತೀ ಹೆಚ್ಚು ನಟಿಸಿರುವ ಪಾತ್ರ ಎಂದರೆ ಅದು ಖಳನಾಯಕಿಯ ಪಾತ್ರ. ನಟನೆಯನ್ನು ನೋಡಿ ಹಿಡಿ ಶಾಪ ಹಾಕುವ ಪ್ರೇಕ್ಷಕರು ಎದುರಿಗೆ ಬಂದಾಗ ನನ್ನ ನಟನೆಯನ್ನು ಹೀಗೆ ಮುಂದುವರಿಸಿ ಎಂದಿದ್ದಾರೆ. ವಿಲನ್ ಪಾತ್ರದಲ್ಲಿ ನೋಡಿದ ಜನ ನಾನು ಎಲ್ಲೇ ಹೋದರೂ ಮತನಾಡಿಸೋದಕ್ಕೆ ಹೆದರುತ್ತಾರೆ. ಆದರೆ ನಾನು ಮನುಷ್ಯರ ಮನಸ್ಸನ್ನು ರೀಚ್ ಆಗಿದ್ದಾನೆ. ನೆಗೆಟಿವ್ ರೋಲ್ ನನಗೆ ಚೆನ್ನಾಗಿ ಸೂಟ್ ಆಗುತ್ತದೆ ಎಂದು ಅಭಿಮಾನಿಗಳು ಹೇಳುತ್ತಾರೆ. ಇನ್ನು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಸಾರಿಕಾ ಸಮಾಜಕ್ಕೆ ಸಂದೇಶ ಸಾರುವಂತಹ ಪಾತ್ರಗಳನ್ನು ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ.
ಸಾರಿಕಾ ಒಟ್ಟೊಟ್ಟಿಗೆ ಮೂರು ನಾಲ್ಕು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಒಂದರಲ್ಲಿ ಬಜ್ಜಾರಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ವಿಲನ್, ಮಗದೊಂದರಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇಂದಿಗೂ ಸಕ್ರಿಯ ನಟಿಯಾಗಿರುವ ಸಾರಿಕಾಗೆ ಒಂದು ಆಸೆ ಇದೆಯಂತೆ. ಇನ್ನು ಸಾರಿಕಾಗೆ ತಮ್ಮ ಕೊನೆಯ ಉಸಿರು ಇರುವವರೆಗೂ ಮೇಕಪ್‌ನಲ್ಲಿ ನಟಿಸುತ್ತಲೇ ಸಾಯಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ. ಸದ್ಯ ನನ್ನರಸಿ ರಾಧೆ ಹಾಗೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಪುಟ್ಟಕ್ಕನ ಧಾರಾವಾಹಿಯಲ್ಲಿ ಬಂಗಾರಮ್ಮ ಅವರ ಬೀಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











