'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ 'ಗಟ್ಟಿಮೇಳ' ಟಕ್ಕರ್: TRP ಆಟದಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ?
ಕಿರುತೆರೆಯ ಧಾರಾವಾಹಿಗಳ ನಡುವೆ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚುತ್ತಿದೆ. ನಂಬರ್ ಒನ್ ಸ್ಥಾನಕ್ಕೇರಲು ಹೋರಾಟ ಹೆಚ್ಚಾಗುತ್ತಲೇ ಇದೆ. ಜೀ ಕನ್ನಡ ಮತ್ತು ಕಲರ್ಸ್ ಕನ್ನಡ, ಉದಯ ಟಿವಿ, ಕಲರ್ಸ್ ಸೂಪರ್, ಸ್ಟಾರ್ ಸುವರ್ಣ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಪ್ರೇಕ್ಷಕರ ಮನಸನ್ನು ಗೆದ್ದಿವೆ. ಮತ್ತೊಂದು ವಾರ ಕಳೆದಿದ್ದು ಹೊಸ ಟಿಆರ್‌ಪಿ ಲಿಸ್ಟ್ ಬಂದಿದೆ.
ಟಾಪ್ ಒನ್ ಸ್ಥಾನವನ್ನು ಎರಡು ಧಾರಾವಾಹಿಗಳು ಅಲಂಕರಿಸಿವೆ. ಜೀ ಕನ್ನಡದಲ್ಲಿ ಪ್ರಸಾರವಾಗುವ 'ಗಟ್ಟಿಮೇಳ' ಮತ್ತು 'ಪುಟ್ಟಕ್ಕನ ಮಕ್ಕಳು' ಮೊದಲನೆಯ ಸ್ಥಾನವನ್ನು ಅಲಂಕರಿಸಿವೆ. ಕಳೆದ ಹಲವು ವಾರಗಳಿಂದ 'ಪುಟ್ಟಕ್ಕನ ಮಕ್ಕಳು' ಮೊದಲ ಸ್ಥಾನವನ್ನು ಅಲಂಕರಿಸಿತ್ತು. ಆದರೆ ಅದಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿ 'ಗಟ್ಟಿಮೇಳ' ಹೊರ ಹೊಮ್ಮಿದೆ.

ಸದ್ಯ 'ಗಟ್ಟಿಮೇಳ' ಧಾರಾವಾಹಿ ಕಥೆಯಲ್ಲಿ ಅದಿತಿ ಹಾಗೂ ಧ್ರುವನ ಎಂಗೇಜ್ಮೆಂಟ್ ತಯಾರಿ ನಡೆಯುತ್ತಿದೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕ ಕಂಠಿ ಜೊತೆಗೆ ಮುರುಳಿ ಮೇಷ್ಟ್ರು ಮನೆಗೆ ಬಂದಿದ್ದು ದುಡ್ಡಿನ ವಿಚಾರವನ್ನು ಮಾತನಾಡುತ್ತಿದ್ದಾರೆ. ಈ ಎರಡು ಧಾರಾವಾಹಿಗಳು ಟಿಆರ್‌ಪಿಯಲ್ಲಿ 7.9 ರೇಟಿಂಗ್ ಪಡೆದುಕೊಂಡಿವೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ. ಮಾಧವ, ಜನಾರ್ಧನ್ ಹಾಕಿದ ಚಾಲೆಂಜ್‌ನಲ್ಲಿ ಗೆದ್ದಿದ್ದಾನೆ. ಆದರೆ ಇದು ಎರಡನೇ ಮಗನಿಗೆ ನಾನು ಪಬ್ ಮಾಡಲು ಸಾಧ್ಯವಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾನೆ. ತುಳಸಿ ಮಗಳಿಗೆ ಹಣ ಕೊಟ್ಟು ಮೋಸ ಹೋಗಿದ್ದಾಳೆ ದತ್ತ, ತುಳಸಿ ಬಳಿ ಹಣವನ್ನು ಕೇಳುತ್ತಿದ್ದಾನೆ. ಈ ಧಾರಾವಾಹಿ 7.1 ಟಿಆರ್‌ಪಿಯನ್ನು ಗಳಿಸಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಲಕ್ಷ್ಮೀ ಬಾರಮ್ಮ' ಮೂರನೇ ಸ್ಥಾನವನ್ನು ಪಡೆದಿದೆ. ಲಕ್ಷ್ಮೀ ಮೇಲೆ ವೈಷ್ಣವ್‌ಗೆ ವಿಷೇಶವಾದ ಸ್ಥಾನಮಾನವಿದೆ. ಈಗ ವೈಷ್ಣವ್ ತಂಗಿ ಮನೆಬಿಟ್ಟು ಹೋಗಿದ್ದಾಳೆ. ಅದನ್ನು ಲಕ್ಷ್ಮೀ ಮೇಲೆ ಹಾಕಿದ್ದಾರೆ. ಲಕ್ಷ್ಮೀ ಈಗ ವೈಷ್ಣವ್ ತಂಗಿಯನ್ನು ಹುಡುಕಿ ಹೊರಟಿದ್ದಾಳೆ. ಈ ಧಾರಾವಾಹಿ 6.3 ಟಿಆರ್‌ಪಿಯನ್ನು ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಈ ಧಾರವಾಹಿಗೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ.
ನಾಲ್ಕನೇ ಸ್ಥಾನವನ್ನು ಜೀ ಕನ್ನಡದಲ್ಲಿ ಪ್ರಸಾರವಾಗುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಇದೆ. ಲೀಲಾಳನ್ನು ಮನೆಬಿಟ್ಟು ಹೋಗುವಂತೆ ದುರ್ಗಾ ಮಾಡಿದ ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿದೆ. ಅಂತರ ಲೀಲಾ ಪರವಾಗಿ ಮಾತನಾಡಿ ಮನೆಯಲ್ಲಿ ದುರ್ಗಾಗೆ ಶಾಕ್ ನೀಡಿದ್ದಾಳೆ. ಲೀಲಾ ಮೇಲೆ ಎಜೆಗೆ ಮತ್ತಷ್ಟು ಗೌರವ ಹೆಚ್ಚಾಗಿದೆ.ಈ ಧಾರಾವಾಹಿ 6.1 ಸ್ಥಾನವನ್ನು ಪಡೆದುಕೊಂಡಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸತ್ಯ' ಧಾರಾವಾಹಿ ಐದನೇ ಸ್ಥಾನ ಪಡೆದುಕೊಂಡಿದೆ. ಸತ್ಯ, ರಾಕಿ ಕೈ ಯಾಕೆ ಮುರಿಸಿದ್ದು ಎಂದು ಲಕ್ಷ್ಮಣ್ ಬಳಿ ಕೇಳಿದ್ದಾಳೆ. ಈ ವೇಳೆ ರಿತು ನಂಗೆ ರಾಕಿ ಇಷ್ಟ ಎಂದು ಹೇಳುವ ಮೂಲಕ ಎಲ್ಲರ ಕೆಂಗ್ಗಣ್ಣಿಗೆ ಗುರಿಯಾಗಿದ್ದಾಳೆ. ಸೀತಾಗೆ ಸತ್ಯ ಕೆಲವೊಂದು ವಿಚಾರದಲ್ಲಿ ಇಷ್ಟವಾದರೂ ಮರುಕ್ಷಣವೇ ಇಷ್ಟವಾಗುತ್ತಿಲ್ಲ. ಈ ಧಾರಾವಾಹಿ 5.9 ರೇಟಿಂಗ್ ಗಳಿಸಿದೆ.

ಆರನೇ ಸ್ಥಾನವನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಪಡೆದುಕೊಂಡಿದೆ. ಶ್ರೇಷ್ಠ, ಭಾಗ್ಯಳನ್ನು ತಾಂಡವ್‌ನಿಂದ ಕಿತ್ತುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾಳೆ. ಆದರೆ ಅದಕ್ಕೆ ತಾಂಡವ್ ಸಹ ಒಪ್ಪುತ್ತಿಲ್ಲ. ನಾಲ್ಕು ಗೋಡೆ ಮಧ್ಯೆ ಮಾತ್ರ ಪ್ರೀತಿಸಲು ಸಾಧ್ಯ ಎಂದು ಹೇಳಿದ್ದಾನೆ. ಈ ಧಾರಾವಾಹಿ 5.4 ಟಿಆರ್‌ಪಿಯನ್ನು ಪಡೆದುಕೊಂಡಿದೆ.
ನವೀನ್ ಕೃಷ್ಣ ನಟನೆಯ 'ಭೂಮಿಗೆ ಬಂದ ಭಗವಂತ' ನಿಧಾನವಾಗಿ ವೀಕ್ಷಕರನ್ನು ಸೆಳೆಯುತ್ತಿದೆ. ಸದ್ಯ ಧಾರಾವಾಹಿ ಟಿಆರ್‌ಪಿ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಮಧ್ಯಮ ವರ್ಗದ ಕುಟುಂಬ ಪ್ರತಿನಿತ್ಯ ಪಡುವ ಪಾಡಿನ ಬಗ್ಗೆ ಬಹಳ ಸೊಗಸಾಗಿ ಮೂಡಿ ಬರುತ್ತಿದೆ. ಇದರ ಜೊತೆಗೆ ಭಗವಂತ ಜೊತೆಗೆ ಇದ್ದು ಸಲಹೆಗಳನ್ನು ನೀಡುತ್ತಿರುವುದು ಜನರ ಮೆಚ್ಚುಗೆಯನ್ನು ಗಳಿಸಿದೆ. ಈ ಧಾರಾವಾಹಿ 5.0 ಟಿಆರ್‌ಪಿಯನ್ನು ಪಡೆದುಕೊಂಡಿದೆ.
ಎಂಟನೇ ಸ್ಥಾನವನ್ನು ಜೀ ಕನ್ನಡದಲ್ಲಿ ಪ್ರಸಾರವಾಗುವ 'ಪುನರ್ ವಿವಾಹ' ಹಾಗೂ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಪಡೆದುಕೊಂಡಿದೆ. ಒಂಭತ್ತು ಮತ್ತು ಹತ್ತನೆ ಸ್ಥಾನವನ್ನು 'ತ್ರಿನಯನಿ' ಹಾಗೂ 'ಪಾರು' ಧಾರಾವಾಹಿ ಪಡೆದುಕೊಂಡಿದೆ. 'ತ್ರಿನಯನಿ' 4.6 ರೇಟಿಂಗ್ ಹಾಗೂ ಹತ್ತನೇ ಸ್ಥಾನದಲ್ಲಿರುವ 'ಪಾರು', 'ರಾಮಾಚಾರಿ', 'ಗೀತಾ' ಧಾರಾವಾಹಿಗಳು 4.1 ಸ್ಥಾನವನ್ನು ಪಡೆದುಕೊಂಡಿವೆ.


Click it and Unblock the Notifications











