twitter
    For Quick Alerts
    ALLOW NOTIFICATIONS  
    For Daily Alerts

    ಪುಟ್ಟಕ್ಕನ ಮಕ್ಕಳು: ಖೋಖೋ ಕೋಚ್ ಆಗಿ ಬರಲಿದ್ದಾರಾ ಪುಟ್ಟಕ್ಕ!

    By ಎಸ್ ಸುಮಂತ್
    |

    'ಪುಟ್ಟಕ್ಕನ ಮಗಳು' ಸುಮಾ & ಟೀಂ ಖೋ ಆಟದಲ್ಲಿ ತುಂಬಾ ಕನಸು ಕಂಡಿದ್ದಾರೆ. ಆದರೆ ಕೋಚ್‌ಗೆ ಆ ಬಗ್ಗೆ ಕಿಂಚಿತ್ತು ಗಮನವಿಲ್ಲ, ಕಾಳಜಿಯಿಲ್ಲ. ನಾವೂ ಗೆಲ್ಲುತ್ತೇವೆ, ನಿಮ್ಮ ಸಪೋರ್ಟ್ ನೀಡಿ ಎಂದಾಗಲೂ ಕೋಚ್ ಡೋಂಟ್ ಕೇರ್ ಮನಸ್ಥಿತಿಯಲ್ಲಿದ್ದಾರೆ. ಏನು ಬೇಕಾದರೂ ಮಾಡಿಕೊಳ್ಳಿ ನಾನು ಹೇಳಿಕೊಡಲ್ಲ ಎಂದೇ ಉದಾಸೀನದ ಮಾತುಗಳನ್ನು ಆಡಿದ್ದಾರೆ.

    ಕಳೆದ ಬಾರಿ ಇದೇ ಉದಾಸೀನತೆಯಿಂದ ಮ್ಯಾಚ್ ಸೋತಿದ್ದರು. ಸ್ಪರ್ಧೆಗೆ ಹೋಗುವುದಕ್ಕೆ ವಾಹನದ ವ್ಯವಸ್ಥೆಯೂ ಇಲ್ಲದೆ ಪರದಾಡಿದ್ದರು. ಕಿಲೋ ಮೀಟರ್ ಗಟ್ಟಲೇ ಓಡಿ ಹೋಗಿ ಮ್ಯಾಚ್ ಆಡಿದ್ದರು. ಮೊದಲೇ ದಣಿದ ದೇಹದಿಂದ ಗೆಲುವು ಸುಲಭವಾಗಿರಲಿಲ್ಲ. ಸುಲಭದಲ್ಲಿಯೇ ಸೋಲು ಅನುಭವಿಸಿದ್ದರು. ಆದರೆ ಇದೀಗ ಮಕ್ಕಳಿಗೆ ಗೆಲ್ಲುವ ಆಶಾ ಭಾವನೆ ಸಿಕ್ಕಿದೆ. ಪುಟ್ಟಕ್ಕನೇ ಕೋಚ್ ಆಗಿ ಬರಲಿದ್ದಾರೆ.

    ಮಹಿಳೆಯರೆಲ್ಲರೂ ಅರಿಶಿನ-ಕುಂಕುಮ ಹಿಡಿದು ಆಂಕರ್ ಶಾಲಿನಿಗೆ ಪೂಜೆ ಮಾಡಿದ್ಯಾಕೆ?ಮಹಿಳೆಯರೆಲ್ಲರೂ ಅರಿಶಿನ-ಕುಂಕುಮ ಹಿಡಿದು ಆಂಕರ್ ಶಾಲಿನಿಗೆ ಪೂಜೆ ಮಾಡಿದ್ಯಾಕೆ?

    ನ್ಯಾಯ ಕೇಳಲು ಬಂದ ಪುಟ್ಟಕ್ಕ

    ನ್ಯಾಯ ಕೇಳಲು ಬಂದ ಪುಟ್ಟಕ್ಕ

    ಕಳೆದ ಬಾರಿಯಂತು ಅರಿಯಾಗಿ ಆಟವಾಡಲು ಆಗದೆ ಸ್ಪರ್ಧೆಯಲ್ಲಿ ಸೋತು ಬಂದಿದ್ದಾರೆ. ಈ ಬಾರಿಯಾದರೂ ಸರಿಯಾದ ತರಬೇತಿ ಸಿಗದೆ ಹೋದರೆ, ಸರಿಯಾದ ಸಮಯಕ್ಕೆ ಹೋಗದೆ ಹೋದರೆ ಕಂಡ ಕನಸು ನುಚ್ಚು ನೂರಾಗುತ್ತದೆ. ಆದರೆ ಕನಸನ್ನು ಕಮರಿ ಹೋಗುವುದಕ್ಕೆ ಸುಮಾ ಒಪ್ಪುವುದಿಲ್ಲ. ಅದಕ್ಕಾಗಿ ಅಮ್ಮನ ಜೊತೆ ಕಾಲೇಜಿಗೆ ಬಂದಿದ್ದಾರೆ. ಪುಟ್ಟಕ್ಕ ಶಾಲೆಯ ಶಿಕ್ಷಕರ ಬಳಿ ನ್ಯಾಯ ಕೇಳುತ್ತಿದ್ದಾರೆ. ಮಕ್ಕಳಿಗೆ ಕೋಚ್ ನೀಡಿ ಎಂದು ಹೇಳುತ್ತಿದ್ದಾರೆ. ಆದರೆ ಕಾಲೇಜಿನಲ್ಲಿ ಅದಕ್ಕೆ ಉತ್ತರ ಸಿಗದೆ, ಬೇರೆ ರೀತಿಯಲ್ಲಿಯೇ ಮಾತಾಡುತ್ತಿದ್ದಾರೆ.

    ಕಷ್ಟ ಬಂದಾಗ ನಿನ್ನ ಬೆನ್ನ ಹಿಂದೆ ಇರ್ತೀನಿ: ದರ್ಶನ್ ಮಾತು ನೆನೆದು ಭಾವುಕರಾದ ರಕ್ಷಿತಾ!ಕಷ್ಟ ಬಂದಾಗ ನಿನ್ನ ಬೆನ್ನ ಹಿಂದೆ ಇರ್ತೀನಿ: ದರ್ಶನ್ ಮಾತು ನೆನೆದು ಭಾವುಕರಾದ ರಕ್ಷಿತಾ!

    ಪುಟ್ಟಕ್ಕನ ಬುದ್ಧಿ ಮಾತಿಗೆ ಸಿಕ್ತು ಚಪ್ಪಾಳೆ

    ಪುಟ್ಟಕ್ಕನ ಬುದ್ಧಿ ಮಾತಿಗೆ ಸಿಕ್ತು ಚಪ್ಪಾಳೆ

    ಪುಟ್ಟಕ್ಕ ಒಂದಷ್ಟು ಜೀವನದ ಪಾಠವನ್ನು ಚೆನ್ನಾಗಿಯೇ ಅರಿತಿದ್ದಾರೆ. ಆಗಾಗ ಜೊತೆಗಾರರಿಗೂ ಜೀವನದ ಪಾಠವನ್ನು ಹೇಳುತ್ತಿರುತ್ತಾರೆ. ಇದೀಗ ಮಕ್ಕಳಿಗೆ ಸಹಾಯ ಮಾಡದ ಶಿಕ್ಷಕರಿಗೂ ಬುದ್ದಿ ಹೇಳುತ್ತಿದ್ದಾರೆ. ದೇಹ, ಬುದ್ದಿ ಸಮಾನವಾಗಿ ಬೆಳೆಯಬೇಕು. ಬರೀ ಪಾಠ ಅಂತ ಸಂದವಾಗಿ ಓದಿ, ಒಳ್ಳೆ ಅಂಕ ತೆಗೆದರೆ ಬರೀ ಅಂಕಪಟ್ಟಿಯಲ್ಲಿ ಮಾತ್ರ ಅಂಕ ಪಟ್ಟಿಲಿ ಮಾತ್ರ ಇರುತ್ತೆ. ಜೀವನದಲ್ಲಿ ಸೋಲಾಗುತ್ತೆ ಎಂದಾಕ್ಷಣಾ ಅಲ್ಲಿದ್ದವರೆಲ್ಲಾ ಚಪ್ಪಾಳೆ ಹೊಡೆದಿದ್ದಾರೆ. ವಾರದಲ್ಲಿ ಐದು ದಿನ ಓದೋದು, ಜನರ ಜೊತೆ ಬೆರೆಯೋದು ಇದೆಲ್ಲಾ ಮಾಡಬೇಕು ಅಲ್ಲವೇ ಎಂದ ಪುಟ್ಟಕ್ಕನಿಗೆ ಜೈಕಾರ ಸಿಕ್ಕಿದೆ.

    ಪುಟ್ಟಕ್ಕನ ಮಾತು ಅರ್ಥ ಮಾಡಿಕೊಳ್ಳುತ್ತಾರಾ?

    ಪುಟ್ಟಕ್ಕನ ಮಾತು ಅರ್ಥ ಮಾಡಿಕೊಳ್ಳುತ್ತಾರಾ?

    ಪುಟ್ಟಕ್ಕನ ವಾದ-ಪ್ರತಿವಾದ ನಡೆಯುವಾಗ ಅಲ್ಲಿಗೆ ಪ್ರಾಂಶುಪಾಲರು ಬಂದಿದ್ದಾರೆ. ಖೋ ಖೋಗೆ ಕೋಚ್ ಬೇಕು ಎಂದು ಕೇಳಿದ್ದಕ್ಕೆ ಮಕ್ಕಳಿಂದ ಕ್ಷಮಾಪ್ಪಣಾ ಪತ್ರ ಬರೆಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಅದಕ್ಕಾಗಿಯೇ ಪುಟ್ಟಕ್ಕ ಕಾಲೇಜಿಗೆ ಬಂದಿದ್ದಾರೆ. ಆದರೆ ಕೋಚ್‌ನ ದುರ್ನಡತೆಯಿಂದಾಗಿ ಪ್ರಾಂಶುಪಾಲರಿಗೂ ಏನು ಮಾಡಲು ಆಗುತ್ತಿಲ್ಲ. ಇವರೆಲ್ಲಾ ಗೆಲ್ಲಲ್ಲ ಸರ್, ಇವರಿಗೆ ನಾನು ಕೋಚ್ ಆಗಲ್ಲ ಎಂದೇ ಪಿಟಿ ಮಾಸ್ಟರ್ ಹೇಳಿದ್ದಾರೆ. ಪ್ರಾಂಶುಪಾಲರು ಇರುವ ಸಮಸ್ಯೆಯನ್ನು ಹೇಳಿದ್ದಾರೆ. ಹೊಸದಾಗಿ ಸೇರಿಸಿಕೊಳ್ಳುವುದಕ್ಕೂ ಆಗಲ್ಲ. ಇವರನ್ನು ತೆಗೆಯುವುದಕ್ಕೂ ಆಗಲ್ಲ ಎಂದಿದ್ದಾರೆ.

    ಪುಟ್ಟಕ್ಕನಿಂದ ಗೆಲ್ಲುತ್ತಾರಾ ಮಕ್ಕಳು?

    ಪುಟ್ಟಕ್ಕನಿಂದ ಗೆಲ್ಲುತ್ತಾರಾ ಮಕ್ಕಳು?

    ಕಾಲೇಜಿನಿಂದ ಯಾವುದೇ ಸಹಾಯ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಯಾರಾದರೂ ಕೋಚ್ ಬಂದು ಕಲಿಸಿಕೊಟ್ಟರೆ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ. ಹೀಗಾಗಿ ಪುಟ್ಟಕ್ಕನೇ ಮಕ್ಕಳಿಗೆ ಕೋಚ್ ಆಗುವ ಸಾಧ್ಯತೆ ಇದೆ. ಈ ಊರಲ್ಲಿ ಬೇರೆ ಯಾರು ಕೋಚ್ ಸಿಗಲ್ಲ ಸುಮ್ಮನೆ ಕ್ಲಾಸ್‌ಗೆ ಹೋಗಿ ಎಂದಾಗ, ಪುಟ್ಟಕ್ಕನ ಸ್ವಾಭಿಮಾನಕ್ಕೆ ಹೊಡೆತ ಬಿದ್ದಂತಿದೆ. ಅದಕ್ಕೆ ಇದ್ದಾರೆ, ಅವರೇ ಹೇಳಿಕೊಡುತ್ತಾರೆ ಎಂದು ಚಾಲೆಂಜ್ ಹಾಕಿದ್ದಾರೆ. ಪುಟ್ಟಕ್ಕ ಈಗಾಗಲೇ ಖೋ ಖೋ ಪಂದ್ಯದಲ್ಲಿ ಚಾಂಪಿಯನ್ ಆಗಿದ್ದವರು. ಅದಕ್ಕೆ ಸಾಕ್ಷಿ ಎಂಬಂತೆ ಮನೆಯಲ್ಲಿಯೇ ಪ್ರಶಸ್ತಿ‌ಪತ್ರ ಕೂಡ ಸಿಕ್ಕಿತ್ತು.

    English summary
    Puttakkana Makkalu August 15th Episode Written Update. Here is the details.
    Monday, August 15, 2022, 22:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X