ಕಂಠಿ ಕೈ ಹಿಡಿದ ಸ್ನೇಹಾ: ಪೂರ್ವಿ ಮುಂದೇನೂ ಮಾಡುತ್ತಾಳೆ?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಖೋ ಖೋ ಕೋಚ್ ಆಗಿ ಪುಟ್ಟಕ್ಕ ಮಕ್ಕಳ ಮುಂದೆ ಬಂದಿದ್ದಾಳೆ. ಆದರೆ ತನ್ನ ಅವ್ವನನ್ನು ಕೋಚ್ ಆಗಿ ನೋಡಿದ ಸುಮಾ. ಅಮ್ಮನಿಗೆ ಏನಾದರು ಬುದ್ದಿ ಸ್ಥಿಮಿತದಲ್ಲಿ ಇಲ್ಲವೇ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಅಮ್ಮ ನೀನು ಕೋಚ್ ಆಗಿ ಏನು ಹೇಳಿ ಕೊಡುತ್ತಿಯಾ.. ನೀನು ಇಂಥದ್ದೇ ಒಂದು ಕೆಲಸ ಮಾಡುತ್ತಿಯಾ ಎಂದು ಅಂದು ಕೊಂಡಿದ್ದೆ ಹಾಗೆ ಆಯ್ತು ಎಂದು ಗೆಳೆಯರನ್ನು ಕರೆದುಕೊಂಡು ಹೊರ ನಡೆಯುತ್ತಾಳೆ.
ಪುಟ್ಟಕ್ಕ ಸಣ್ಣ ವಯಸ್ಸಿನಿಂದಲೂ ಆಟದಲ್ಲಿ ಬಹಳ ನಿಪುಣೆ. ಅಡುಗೆಯಲ್ಲಿ ಹೇಗೆ ಕಲಿತು ಕೊಳ್ಳುತ್ತಿದ್ದಾಳೋ ಹಾಗೆಯೇ ಚಿಕ್ಕ ವಯಸ್ಸಿನಲ್ಲಿ ಖೋ ಖೋ ಆಟವಾಡುವುದು ಎಂದರೆ ಎಲ್ಲಿಲ್ಲದ ಆಸೆ. ಇಡೀ ಊರ ಮಂದಿಗೆ ಖೋ ಖೋ ಆಟ ಹೇಳಿಕೊಟ್ಟಿದ್ದಾರೆ ಪುಟ್ಟಕ್ಕ. ಇನ್ನೂ ಆಕೆಯ ಮಗಳಿಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಇನ್ನೂ ಈ ಬಗ್ಗೆ ಶಾಂತ, ಪುಟ್ಟಕ್ಕನ ಬಳಿ ಬೇಸರ ವ್ಯಕ್ತಪಡಿಸುತ್ತಾರೆ.

ಬೇಸರ ವ್ಯಕ್ತ ಪಡಿಸಿದ ಶಾಂತಕ್ಕ
ನಿನ್ನ ಬಗ್ಗೆ ಚೂರು ಗೊತ್ತಿಲ್ಲದೆ ಸುಮಾ ಈ ರೀತಿಯಾಗಿ ಮಾತಾಡಬಾರದಿತ್ತು. ಯಾಕೆ ಹೀಗೆ ಮಾಡಿದಳು ಎಂದೆಲ್ಲಾ ಹೇಳಿದಾಗ, ಪುಟ್ಟಕ್ಕ ಮಾತ್ರ ಮೌನ ಬಿಟ್ಟು ಕೊಡಲಿಲ್ಲ. ನಾನು ಅಡುಗೆಯಲ್ಲಿ ನಿಪುಣೆ ನನಗೆ ಅಡಿಗೆ ಹೇಳಿಕೊಡಲು ಯಾರಾದರೂ ಬಂದರೆ ನಾನು ಇವರಿಗೆ ತಲೆಕೆಟ್ಟಿದಿಯಾ ಎಂದು ಯೋಚನೆ ಮಾಡುತ್ತೇನೆ ಹಾಗೆಯೇ ಆಕೆ ಖೋ ಖೋ ತಂಡದ ನಾಯಕಿ ಎಲ್ಲಾ ತಿಳಿದಿರುವಾಕೆ ನಾನು ಖೋ ಖೋ ಹೇಳಿ ಕೊಡುತ್ತೇನೆ ಎಂದರೆ ಅಮ್ಮನಿಗೆ ಏನಾದರು ತಲೆ ಕೆಟ್ಟಿದಿಯಾ ಎಂದು ಯೋಚನೆ ಮಾಡುತ್ತಾಳೆ.

ಕಂಠಿ-ಸುಮ ನೋಡಿದ ಪೂರ್ವಿ
ಶಾಂತನಿಗೆ ಪುಟ್ಟಕ್ಕ ತಿಳಿಸಿ ಹೇಳುತ್ತಾಳೆ. ಇನ್ನೂ ಪುಟ್ಟಕ್ಕ ಹೇಳುತ್ತಾಳೆ ನಿಧಾನವಾಗಿ ಆಕೆಯ ಮನಸ್ಸನ್ನು ಪರಿವರ್ತನೆ ಮಾಡಿ ಆಕೆಯನ್ನು ಆಟದತ್ತ ಕರೆದುಕೊಂಡು ಬರೋಣ ಎಂದು ಹೇಳುತ್ತಾಳೆ. ಇತ್ತ ಕಂಠಿ-ಸ್ನೇಹಾ ಹಾಗೂ ಪೂರ್ವಿ ಮದ್ಯೆ ಸಿಕ್ಕಿ ಹಾಕಿಕೊಂಡಿದ್ದಾನೆ. ಸ್ನೇಹಾ ಹಾಗೂ ಕಂಠಿ ಮಾತನಾಡುತ್ತಿರುತ್ತಾರೆ. ಹಿಂದೆ ನಡೆದ ಘಟನೆಯ ಬಗ್ಗೆ ಹಾಗೂ ಪೂರ್ವಿ ಬಗ್ಗೆ ಮಾತನಾಡುತ್ತಾ ನಿಂತಿರಬೇಕಾದರೆ ಕಂಠಿಯನ್ನು ಹಿಂಬಾಲಿಸಿಕೊಂಡು ಪೂರ್ವಿ ಬರುತ್ತಾಳೆ.

ಕಂಠಿ ಮಾತು ನಂಬಿದ ಪುಟ್ಟಕ್ಕ
ಸ್ನೇಹಾ ಇದನ್ನೆಲ್ಲಾ ಗಮನಿಸುತ್ತಿರುತ್ತಾಳೆ. "ಪೂರ್ವಿ ನನ್ನ ಮದುವೆ ಆಗು. ಹಾಗೆ ಹೀಗೆ ಎಂದು ಹೇಳಿ ನನ್ನ ಪ್ರಾಣ ಹಿಂಡುತ್ತಿದ್ದಾಳೆ. ಎಲ್ಲಿಯೇ ಹೋದರು ಆಕೆಯು ನನ್ನೊಂದಿಗೆ ಬರುತ್ತಾಳೆ ಎನು ಮಾಡುವುದು ಎಂದು ತಿಳಿಯುತ್ತಿಲ್ಲ ಕಂಠಿ ಹೇಳುತ್ತಾನೆ. "ನೀವು ಹೇಳುತ್ತಿರುವುದು ನಿಜ ನಿಮ್ಮ ಹಿಂದೆಯೇ ಪೂರ್ವಿ ಇದ್ದಾಳೆ ನೀವು ಆ ಕಡೆ ತಿರುಗಬೇಡಿ ಎಂದೆಲ್ಲ" ಸ್ನೇಹ ಹೇಳುತ್ತಾಳೆ.

ಮನದಲ್ಲಿ ಭಯ ಪಡುತ್ತಿರುವ ಕಂಠಿ
ಅಯ್ಯೋ ಈಕೆ ಇಲ್ಲಿಗೂ ವಕ್ಕರಿಸಿಕೊಂಡಳಾ ಎಂದು ಕಂಠಿ ಮನದಲ್ಲಿ ಯೋಚನೆ ಮಾಡುತ್ತಾನೆ. ಇನ್ನೂ ಅಮ್ಮನಿಗೆ ಏನಾದರು ಹೇಳಿ ತಲೆ ಕೆಡಿಸಿದರೆ ಎಂದೆಲ್ಲ ಯೋಚಿಸುತ್ತಾನೆ. ಬಳಿಕ "ನೀವು ನೋಡಿದಿರಲ್ಲ ಆಕೆ ಹೇಗೆ ಹಿಂದೆ ಹಿಂದೆನೇ ಬರುತ್ತಾಳೆ" ಎಂದು ಸ್ನೇಹಾನಾ ಬಳಿ ಹೇಳುತ್ತಾನೆ. ಸರಿ ನಾನಿನ್ನೂ ಬರುತ್ತೀನಿ ಎಂದಾಗ ಸ್ನೇಹಾ ಕಂಠಿ ಕೈ ಹಿಡಿದು ಸ್ವಲ್ಪ ಹೊತ್ತು ಇರಿ. ಮೆಸ್‌ಗೆ ಬನ್ನಿ ತಿಂಡಿ ತಿಂದು ಹೋಗಿ ಎಂದು ಹೇಳುತ್ತಾಳೆ. ಇದನ್ನು ನೋಡಿದ ಪೂರ್ವಿ ಕಾರಿನಿಂದ ಕೆಳಗಿಳಿದು ಬರುತ್ತಾಳೆ. ಬಳಿಕ ಸ್ನೇಹಾ, ಕಂಠಿ ಹತ್ತಿರ ಬಂದು ನಿಲ್ಲುತ್ತಾಳೆ.

ಸುಮಾ ರಂಪಾಟ
ಇನ್ನೂ ಪುಟ್ಟಕ್ಕ ಖೋ ಖೋ ಕೋಚ್ ಎನ್ನುವುದನ್ನು ಸಹಿಸಿಕೊಳ್ಳದ ಸುಮಾ ಮನೆಯಲ್ಲಿ ರಂಪಾ ಮಾಡುತ್ತಾಳೆ. ಖೋ ಖೋ ಕೋಚ್ ಆಗಿ ಬರುತ್ತಾರೆ ಎಲ್ಲಾ ಹೇಳಿ ಕೊಡುತ್ತಾರೆ ಎಂದೆಲ್ಲ ಹೇಳಿ ಅವ್ವ ನಮ್ಮೆಲ್ಲರ ತಲೆ ಕೆಡಿಸಿದರು. ಇನ್ನೂ ನಮಗೆ ಕೋಚ್ ಯಾರು ಗೊತ್ತಾ? ಅವ್ವನೇ ನಮ್ಮ ಕೋಚ್ ಅಂತೆ ಎಂದಾಗ ಸ್ನೇಹಾ ಹಾಗೂ ಸಹನಾಗೆ ಶಾಕ್ ಆಗುತ್ತೆ. ಇದನ್ನು ಕೇಳಿಸಿಕೊಂಡ ಪುಟ್ಟಕ್ಕಗೆ ಕೊಂಚ ಭಯವಾದರೂ ಸುಮ್ಮನಾಗುತ್ತಾಳೆ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











