Puttakkana Makkalu:ಬಡ್ಡಿ ಬಂಗಾರಮ್ಮ ಹಾಕೋ ವೆರೈಟಿ ವೆರೈಟಿ ಜ್ಯುವೆಲ್ಲರಿ ಎಲ್ಲಿಂದ ಬರುತ್ತೆ?

By ಎಸ್ ಸುಮಂತ್

ನಿಮಗೆಲ್ಲಾ ಈ ಪ್ರಶ್ನೆ ಕಾಡಿಯೇ ಕಾಡಿರುತ್ತೆ ಅಲ್ವಾ. ಧಾರಾವಾಹಿ ನೋಡುವಾಗೆಲ್ಲಾ, ಅದರಲ್ಲೂ ಬಡ್ಡಿ ಬಂಗಾರಮ್ಮನನ್ನು ನೋಡುವಾಗೆಲ್ಲಾ ಅಬ್ಬ ಅದೆಂಥಾ ಜ್ಯುವೆಲ್ಲರಿ ಹಾಕ್ತಾರೆ. ಇಷ್ಟೊಂದು ಜ್ಯುವೆಲರಿ ಇಟ್ಟಿದ್ದಾರಾ ಎಂಬ ಪ್ರಶ್ನೆ ನಿಮ್ಮನ್ನು ಖಂಡಿತಾ ಕಾಡಿರುತ್ತೆ. ಅದಕ್ಕೆಲ್ಲಾ ಉತ್ತರವನ್ನು ಇವತ್ತು ನಾವೂ ನಿಮಗೆ ಕೊಡ್ತೀವಿ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಬಡ್ಡಿ ಬಂಗಾರಮ್ಮ ಲುಕ್ ಎಲ್ಲರನ್ನು ಅಟ್ರಾಕ್ಟ್ ಮಾಡಿರೋದಂತು ಸತ್ಯ. ಅವರ ಸೀರೆ ಸೆಲೆಕ್ಷನ್, ಅವರ ಜ್ಯುವೆಲ್ಲರಿ ಸೆಲೆಕ್ಷನ್ ಎಲ್ಲವೂ ಹೆಸರಿಗೆ ತಕ್ಕನಾಗಿ ಮ್ಯಾಚ್ ಆಗುತ್ತಿದೆ. ಕೊಂಚವೂ ಆ ಕಡೆ ಈ ಕಡೆ ಆಗಿಲ್ಲ. ಬಡ್ಡಿ ಬಂಗಾರಮ್ಮ ಅನ್ನೋ ಹೆಸರಿಗೆ ತಕ್ಕನಾಗಿಯೇ ಅವರ ಔಟ್ ಲುಕ್ ಇದೆ. ಆದರೆ ಇದರ ಹಿಂದೆ ಸಾಕಷ್ಟು ಜನರಿದ್ದಾರೆ. ಅವರು ಯಾರು ಅನ್ನೋದನ್ನು ಮುಂದೆ ಹೇಳ್ತೀವಿ ನೋಡಿ.

ಬಡ್ಡಿ ಬಂಗಾರಮ್ಮ ಗತ್ತಿನ ಪಾತ್ರ

ಬಡ್ಡಿ ಬಂಗಾರಮ್ಮ ಗತ್ತಿನ ಪಾತ್ರ

ಬಡ್ಡಿ ಬಂಗಾರಮ್ಮ ಅಲಿಯಾಸ್ ಮಂಜು ಭಾಷಿಣಿ. ಮಂಜು ಭಾಷಿಣಿ ಹೆಸರನ್ನು ಎಲ್ಲರೂ ಕೇಳಿಯೇ ಇರ್ತೀರ. ಆ ಹೆಸರು ನೆನಪಿಲ್ಲ ಅಂದರೆ, "ನಾನೇ ನಾನೇ ಸಮಾಜಸೇವಕಿ ಲಲಿತಾಂಭಾ" ಅನ್ನೋ ಈ ಡೈಲಾಗ್ ನೆನಪಿದ್ದೇ ಇರುತ್ತೆ. 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಇದೇ ಮಂಜು ಭಾಷಿಣಿ ಸಿಕ್ಕಾಪಟ್ಟೆ ನಗಿಸಿದ್ದರು. ಕಾಮಿಡಿ ಪಾತ್ರ ಮಾಡಿ, ಸಮಾಜ ಸೇವೆ ಮಾಡೋದಕ್ಕೆ ಹಾತೊರೆಯುತ್ತಿದ್ದರು. ಆದರೆ, ಈ ಧಾರಾವಾಹಿಯಲ್ಲಿ ಇದೆಲ್ಲವೂ ಉಲ್ಟಾ ಆಗಿದೆ. ಪಕ್ಕಾ ಗತ್ತು ಗಾಂಭಿರ್ಯವಿರೋ ಬಡ್ಡಿ ಬಂಗಾರಮ್ಮ ಪಾತ್ರ ನಿಭಾಯಿಸುತ್ತಿದ್ದಾರೆ.

ಲಲಿತಾಂಭಾ-ಬಡ್ಡಿ ಬಂಗಾರಮ್ಮ ಯಾರಿಷ್ಟ?

ಲಲಿತಾಂಭಾ-ಬಡ್ಡಿ ಬಂಗಾರಮ್ಮ ಯಾರಿಷ್ಟ?

ಸಾಕಷ್ಟು ಜನಕ್ಕೆ 'ಸಿಲ್ಲಿ ಲಲ್ಲಿ' ಧಾರಾವಾಹಿ ತುಂಬಾ ಇಷ್ಟ. ಏನನ್ನೇ ಮಿಸ್ ಮಾಡಿಕೊಂಡಿದ್ದರು ಈ 'ಸಿಲ್ಲಿಲಲ್ಲಿ' ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಇದೇನು ಸೀರಿಯಸ್ ಆಗಿ ಕುಳಿತುಕೊಂಡು ನೋಡಿಸುವ ಧಾರಾವಾಹಿ ಆಗಿರಲಿಲ್ಲ. ಆದರೂ ಅದರಲ್ಲಿ ಬರುವ ಕಾಮಿಡಿ ಎಲ್ಲರ ಮನಸ್ಸನ್ನು ಹಗುರ ಆಗಿಸುತ್ತಿತ್ತು. ಅಷ್ಟೇ ಅಲ್ಲ ಕಾಮಿಡಿಯಲ್ಲೇ ಸಂಬಂಧಗಳ ಬೆಲೆಯನ್ನು ತಿಳಿಸಿ ಕೊಡುತ್ತಿದ್ದ ಧಾರಾವಾಹಿಯಾಗಿತ್ತು. ಆ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಧಾರಿಗಳು ಎಲ್ಲರ ನೆನಪಲ್ಲೂ ಈಗಲೂ ಅಚ್ಚಳಿಯದೆ ಉಳಿದಿದೆ. ಈಗ ಯಾಕಪ್ಪ ಆ ವಿಚಾರ ಅಂದರೆ ಅದೇ ಸಮಾಜ ಸೇವೆ ಲಲಿತಾಂಭಾ ಈಗ ಬಡ್ಡಿ ಬಂಗಾರಮ್ಮ ಆಗಿರೋದು. ಆದರೆ ಆಗಿನ ಲಲಿತಾಂಭಾಗೂ ಈಗಿನ ಬಡ್ಡಿ ಬಂಗಾರಮ್ಮನಿಗೂ ಇರೋ ವ್ಯತ್ಯಾಸ ಇದೆ. ಪ್ರೇಕ್ಷಕರು ಆಗಾಗ ಇದನ್ನು ತಾಳೆ ಹಾಕಿ ನೋಡುತ್ತಲೇ ಇರುತ್ತಾರೆ. ಆದರೂ ಮಂಜು ಭಾಷಿಣಿ ಮಾತ್ರ ಯಾವುದೇ ಪಾತ್ರವಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತಾರೆ. ಅಭಿಮಾನಿಗಳ ಮನದಲ್ಲಿ ಉಳಿದುಕೊಳ್ಳುತ್ತಾರೆ.

ಬಂಗಾರಮ್ಮನಿಗೆ ಬಂಗಾರವೇ ಭೂಷಣ

ಬಂಗಾರಮ್ಮನಿಗೆ ಬಂಗಾರವೇ ಭೂಷಣ

ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಅತಿ ಹೆಚ್ಚು ಇಷ್ಟವಾಗೋ ವಸ್ತು ಅಂದರೆ ಅದು ಬಟ್ಟೆ ಮತ್ತು ಜ್ಯುವೆಲ್ಲರಿ. ಧಾರಾವಾಹಿಯಾಗಲಿ, ಸಿನಿಮಾವಾಗಲಿ ನೋಡುವಾಗ ಹೊಸದೊಂದು ಸೀರೆ, ಹೊಸದೊಂದು ಜುವೆಲ್ಲರಿ ಕಂಡರೆ ಅದರ ಮೇಲೆ ಕಣ್ಣು ಬಿದ್ದಿರುತ್ತೆ. ಅಂಥದ್ರಲ್ಲಿ ಸದ್ಯ ಬಡ್ಡಿ ಬಂಗಾರಮ್ಮ ಗಮನ ಸೆಳೆಯುತ್ತಿರುವುದು ಇದೆ ವಿಚಾರಕ್ಕೆ. ಪ್ರತಿ ದಿನ ಒಂದೊಂದು ವೆರೈಟಿ ವೆರೈಟಿ ಸೀರೆ, ಡಿಫ್ರೆಂಟ್ ಅನ್ನಿಸೋ ಜ್ಯುವೆಲ್ಲರಿಯನ್ನು ಹಾಕುತ್ತಾರೆ.

ಬಂಗಾರಮ್ಮನಿಗೆ ಒಡವೆ ಎಲ್ಲಿಂದ ಬರುತ್ತೆ?

ಬಂಗಾರಮ್ಮನಿಗೆ ಒಡವೆ ಎಲ್ಲಿಂದ ಬರುತ್ತೆ?

ಬಡ್ಡಿ ಬಂಗಾರಮ್ಮ ಪಾತ್ರಕ್ಕೋಸ್ಕರ ಅದೆಷ್ಟೊಂದು ಜ್ಯುವೆಲ್ಲರಿ ತೆಗೆದುಕೊಂಡಿದ್ದಾರೆ ಅಂತ. ಆದರೆ ಬಡ್ಡಿ ಬಂಗಾರಮ್ಮ ಅಲಿಯಾಸ್ ಮಂಜುಭಾಷಿಣಿಯ ಒಡವೆ ಜವಾಬ್ದಾರಿಯನ್ನು SV ಜ್ಯುವೆಲ್ಲರಿ ಅವರು ವಹಿಸಿಕೊಂಡಿದ್ದಾರೆ. ಮಂಜು ಭಾಷಿಣಿ ಅವರ ಸೀರೆಗೆ ತಕ್ಕನಾಗಿ ಜ್ಯುವೆಲ್ಲರಿಯನ್ನು ಇವರೇ ಒದಗಿಸಿ ಕೊಡುತ್ತಾರೆ. ಈ ಬಗ್ಗೆ ಬಡ್ಡಿ ಬಂಗಾರಮ್ಮ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Puttakkana Makkalu serial Baddi Bangaramma Jewellery Collection. Here is the details about jewellery collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X