ಬದಲಾದ ಗೋಪಾಲ.. ಪುಟ್ಟಕ್ಕ ನಿರಾಳ; ಇತ್ತ ಸಹನಾ ಮೇಲೆ ಮುರಳಿಗೆ ಕೋಪ!

By ಪೂರ್ವ

ಪುಟ್ಟಕ್ಕ ಇದೀಗ ನಿರಾಳ ಆಗಿದ್ದಾರೆ. ತನ್ನ ಗಂಡನ ವರ್ತನೆ ಕಂಡು ಬಹಳ ಖುಷಿ ಪಟ್ಟಿದ್ದಾರೆ. ಸುಮಾಳನ್ನು ಪರೀಕ್ಷೆ ಬರೆಯಲು ಕರೆದುಕೊಂಡು ಹೋದ ಗೋಪಾಲನನ್ನು ಕಂಡು ಪುಟ್ಟಕ್ಕ ಮನದಲ್ಲಿ ಖುಷಿ ಪಟ್ಟಿದ್ದಾರೆ. "ನಾನು ಬಹಳ ವರುಷದ ಹಿಂದೆ ಕಂಡ ಕನಸು ಇದೀಗ ನನಸಾಗಿದೆ. ಬೇರೆ ಮಕ್ಕಳನ್ನು ಅವರವರ ಅಪ್ಪಯ್ಯ ಕಾಲೇಜಿಗೆ, ಸ್ಕೂಲ್‌ಗೆ ಬಿಡುವ ವೇಳೆ ಯೋಚನೆ ಮಾಡುತ್ತಿದ್ದೆ. ನನ್ನ ಗಂಡ ಯಾವಾಗ ನನ್ನ ಮಕ್ಕಳನ್ನು ಹೀಗೆ ಕರೆದುಕೊಂಡು ಹೋಗುತ್ತಾನೆ ಎಂದು. ಇದೀಗ ಗೋಪಾಲ ಮಗಳು ಸುಮಾಳನ್ನು ಕಾಲೇಜಿಗೆ ಬಿಡುವುದನ್ನು ನೋಡಿ ಪುಟ್ಟಕ್ಕ ಮನಸ್ಸಿಗೆ ಬಹಳ ಖುಷಿ ಆಗುತ್ತದೆ.

ಗೋಪಾಲ ತನ್ನ ಮಗಳು ಸುಮಳನ್ನು ಸೇಫ್ ಆಗಿ ಪರೀಕ್ಷೆಗೆ ಬಿಟ್ಟು ಅಲ್ಲಿಯೇ ಇದ್ದ ಪುರುಷೋತ್ತಮ ತಂದೆಯ ಕಣ್ಣಿಗೆ ಬೀಳುತ್ತಾನೆ. ಆತನಿಗೆ ಸುಮಾ ಬಗ್ಗೆ ಒರಟಾಗಿ ನಡೆದುಕೊಳ್ಳುವುದು ನನಗೆ ಇಷ್ಟ ಆಗುತ್ತಿಲ್ಲ ಎಂದೆಲ್ಲ ಹೇಳುತ್ತಾನೆ. ಬಳಿಕ ಅವರೆಲ್ಲ ಪರೀಕ್ಷೆ ಬರೆಯಲು ಹೋದರು ಸುಮನಿಗಾಗಿ ಗೋಪಾಲ ಕಾಯುತ್ತ ಇರುತ್ತಾನೆ. ಪುಟ್ಟಕ್ಕನಿಗೆ ಸ್ನೇಹಾ ಕರೆ ಮಾಡುತ್ತಾಳೆ. ಆ ವೇಳೆ ಸುಮಾ, ಗೋಪಾಲನ ಜೊತೆ ಪರೀಕ್ಷೆ ಬರೆಯಲು ಹೋದ ವಿಚಾರ ಆಕೆಗೆ ತಿಳಿಯುತ್ತದೆ. ಇದನ್ನು ತಿಳಿದ ಸ್ನೇಹಾ ಬಹಳ ಕೋಪ ಮಾಡಿಕೊಳ್ಳುತ್ತಾಳೆ. ಆತನ ಜೊತೆ ಸುಮನನ್ನು ಯಾಕೆ ಕಳುಹಿಸಿದೆ ಎಂದು ಅಮ್ಮನ ಬಳಿ ಆಗಾಗ ಪ್ರಶ್ನೆ ಮಾಡುತ್ತಾಳೆ.

Puttakkana Makkalu February 7th episode update about Murali and Sahana Issue

ಯಾಕೆಂದರೆ, ಸ್ನೇಹಾಗೆ ಆಕೆಯ ತಂದೆ ಎಂದರೆ ಇಷ್ಟವೇ ಇಲ್ಲ. ತನ್ನ ತಾಯಿಗೆ ಬಹಳಷ್ಟು ಹಿಂಸೆ ಕೊಟ್ಟಿದ್ದಾನೆ ಎನ್ನುವುದಷ್ಟೇ ಆಕೆಯ ತಲೆಯಲ್ಲಿ ಇರುತ್ತದೆ. ಇನ್ನು ಕಂಠಿ ಮಾತ್ರ ಸ್ನೇಹಾಗೆ ಸಮಾಧಾನ ಮಾಡುತ್ತಾನೆ. "ಏನು ಆಗುವುದಿಲ್ಲ. ಸುಮಾ ಉತ್ತಮವಾಗಿ ಪರೀಕ್ಷೆ ಬರೆಯುತ್ತಾಳೆ. ನೀನು ಏನು ಯೋಚನೆ ಮಾಡಬೇಡ" ಎಂದು ಧೈರ್ಯ ಹೇಳುತ್ತಾನೆ. ಇತ್ತ ಸುಮಾ ಪರೀಕ್ಷೆ ಮುಗಿಸಿ ಬರಬೇಕಾದರೆ ಗೋಪಾಲ ಅಲ್ಲಿಯೇ ಇರುತ್ತಾನೆ . ಗೋಪಾಲನನ್ನು ನೋಡಿದ ಸುಮಾ "ನೀವು ಮನೆಗೆ ಹೋಗಿಲ್ವ?" ಎಂದಾಗ.. "ಇಲ್ಲ ನಿನಗಾಗಿ ನಾನು ಇಲ್ಲಿಯೇ ಕಾದು ಕುಳಿತಿದ್ದೆ" ಎಂದು ಗೋಪಾಲ ಹೇಳುತ್ತಾರೆ.

ನಂಜಮ್ಮನ ಬಣ್ಣದ ಮಾತಿಗೆ ಕರಗಿದ ವಸು

ಇನ್ನು ವಸು ನಂಜಮ್ಮನ ಬಣ್ಣದ ಮಾತುಗಳಿಗೆ ಮರುಳು ಆಗಿರುವುದಂತೂ ಸತ್ಯ. ಚಂದ್ರು, ವಸು ಮಾಡಿರುವ ತಪ್ಪಿಗೆ ಇದೀಗ ಬೆಲೆ ತೆರಬೇಕಾಗಿದೆ. ತನ್ನ ಮಗಳು ಯಾವತ್ತೂ ನನ್ನ ಮರ್ಯಾದೆ ತೆಗೆಯುವವಳು ಅಲ್ಲ ಎಂದು ಬಂಗಾರಮ್ಮ ಅಂದುಕೊಂಡಿದ್ದಾರೆ. ಆದರೆ ವಸು ನೋಡಿದರೆ, ನನ್ನ ಅತ್ತೆ ಮೊದಲಿನ ಹಾಗೇ ಇಲ್ಲ.. ಇವಾಗ ಕೊಂಚ ಬದಲಾಗಿದ್ದಾರೆ ಎಂದು ನಿಜ ಹೇಳಲು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಮುರಳಿ, ಸಹನಾ ಬಳಿ ಸಂಸಾರ ಶುರು ಮಾಡುವ ಬಗ್ಗೆ ಮಾತನಾಡುತ್ತಾ ಇರುತ್ತಾನೆ. ಆದರೆ, ಸಹನಾ ಮಾತ್ರ ಕೌಸಲ್ಯಗೆ ಹೆದರಿಕೊಂಡಿದ್ದಾಳೆ.

Puttakkana Makkalu February 7th episode update about Murali and Sahana Issue

ಅತ್ತೆ ವಿರುದ್ದ ಕೋಪಗೊಂಡ ಸ್ನೇಹಾ

ಸ್ನೇಹಾ ಪ್ರಗ್ನೆಂಟ್ ಆಗಿರುವುದನ್ನು ತಿಳಿದು ನೀವಿಬ್ಬರೂ ಕೂಡ ಅಪ್ಪ ಅಮ್ಮ ಆಗಬೇಕು ಎಂದು ಮುರಳಿ ಯೋಚನೆ ಮಾಡುತ್ತಿರುತ್ತಾನೆ. ಮುರಳಿ ಮಾತು ಕೇಳಿದ ಸಹನಾ ಮಾತ್ರ "ಅತ್ತೆ ಹಾಗೂ ಮಾವನಿಗೆ ನಾವಿಬ್ಬರೂ ದೂರ ಇರುವುದು ತಿಳಿದಿದೆ. ಇನ್ನೂ ನಾವು ಸಂಸಾರ ಶುರು ಮಾಡುವ ಬಗ್ಗೆ ಅವರು ಗಮನ ಕೊಡುತ್ತಿಲ್ಲ" ಎಂದು ಹೇಳಿದಾಗ ಮುರಳಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ತಾಯಿಯ ಬಗೆಗೆ ಸಹನಾ ಮಾತು ಕೇಳಿ ಮುರಳಿ ಕೋಪದ ಕಟ್ಟೆ ಒಡೆಯುತ್ತದೆ. ಹೀಗೆಲ್ಲ ಮಾತನಾಡಬೇಡಿ ಎಂದು ತಾಕೀತು ಮಾಡುತ್ತಾರೆ.

ಸಹನಾ ಮಾತಿಗೆ ಮುರಳಿ ಶಾಕ್

ಮುರಳಿ ಸಹನಾ ಬಳಿ ಹೇಳ್ತಾನೆ. "ನನ್ನ ತಾಯಿ ಯಾವತ್ತೂ ಆ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ. ನನ್ನ ತಾಯಿಗೆ ಮಕ್ಕಳೆಂದರೆ ಪಂಚಪ್ರಾಣ. ನೀನು ಅವತ್ತು ಅಮ್ಮನಿಗೆ ಎದುರುವಾದಿಸಿದಾಗ ಅಮ್ಮ ಒಂದು ಮಾತು ಆಡಿರಲಿಲ್ಲ. ಹಾಗೆಯೇ ನಿನ್ನನ್ನು ಮನೆಗೆ ಕರೆದುಕೊಂಡು ಬರಲು ನಿಜವಾಗಲೂ ಅಮ್ಮ ಕಾರಣ. ಇದೀಗ ಅಂತಹ ಅಮ್ಮನ ಮೇಲೆ ಆಪಾದನೆ ಮಾಡುತ್ತಿರುವುದು ಸರಿಯಲ್ಲ. ದಯವಿಟ್ಟು ಆ ರೀತಿ ಯೋಚನೆ ಕೂಡ ಮಾಡಬೇಡ. ನಿನಗೆ ನನ್ನೊಂದಿಗೆ ಇರಲು ಇಷ್ಟವಿಲ್ಲ ಅನಿಸುತ್ತದೆ. ಅದಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದೀಯಾ" ಎಂದು ಸಹನಾ ಬಳಿ ಕಡ್ಡಿ ತುಂಡು ಮಾಡಿದಂತೆ ಮಾತನಾಡುತ್ತಾನೆ.

More from Filmibeat

English summary
Puttakkana Makkalu February 7th episode update about Murali and Sahana Issue;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X