ನಂಬರ್ 01 ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ 600 ಎಪಿಸೋಡ್‌ಗಳ ಸಂಭ್ರಮ

By ಅನಿತಾ ಬನಾರಿ

ಹೌದು! ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಪುಟ್ಟಕ್ಕನ ಮಕ್ಕಳು' ಕೂಡಾ ಒಂದು‌‌. ಈ ಧಾರಾವಾಹಿ ಶುರುವಾಗಿ ಈಗಾಗಲೇ ಎರಡು ವರ್ಷ ದಾಟಿದ್ದು, ಇದೀಗ 600 ಎಪಿಸೋಡ್‌ಗಳನ್ನು ಮುಗಿಸಿರುವ ಸಂಭ್ರಮದಲ್ಲಿ ಧಾರಾವಾಹಿ ತಂಡ ಇದೆ. ಅಂದ ಹಾಗೆ 'ಪುಟ್ಟಕ್ಕನ ಮಕ್ಕಳು' ಒಂದು ವಿಶೇಷ ಕಥೆಯನ್ನೊಳಗೊಂಡ ಧಾರಾವಾಹಿ ಎಂದರೆ ತಪ್ಪಾಗಲಾರದು. ಸ್ತ್ರೀ ಪ್ರಧಾನತೆಯ ಜೊತೆಗೆ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ತೋರಿಸಿದ್ದಾರೆ.

ಈಗಾಗಲೇ ಧಾರಾವಾಹಿ 600 ಎಪಿಸೋಡ್‌ಗಳನ್ನು ಮುಗಿಸಿದ್ದು ಸಂಭ್ರಮಾಚರಣೆಯಲ್ಲಿ ಇಡೀ ಧಾರಾವಾಹಿ ತಂಡ ಮುಳುಗಿದೆ. ಅಂದ ಹಾಗೆ 'ಪುಟ್ಟಕ್ಕನ ಮಕ್ಕಳು' ಎಂಬ ಟೈಟಲ್ ಹೇಳುವಂತೆ ಪುಟ್ಟಕ್ಕ ಎಂಬ ತಾಯಿ ತನ್ನ ಮೂರು ಮಕ್ಕಳೊಂದಿಗೆ ಹೇಗೆ ಜೀವನವೆಂಬ ಉಗಿಬಂಡಿಯಲ್ಲಿ ಕಷ್ಟಗಳನ್ನೆಲ್ಲಾ ದಾಟುತ್ತ ಮುಂದೆ ಸಾಗುತ್ತಾಳೆ ಎಂಬುದೇ ಕಥೆ.

Puttakkana Makkalu Kannada Serial 600 episodes

ಹಳ್ಳಿಯ ಸೊಗಡಿನಲ್ಲಿರುವ ಈ ಕಥೆಯನ್ನು ಈಗಾಗಲೇ ಬಹಳಷ್ಟು ಪ್ರೇಕ್ಷಕರು ಮೆಚ್ಚಿದ್ದಾರೆ. ಇದರ ಜೊತೆಗೆ ಟಿಆರ್‌ಪಿಯಲ್ಲೂ ಅಷ್ಟೇ. ಈ ಧಾರಾವಾಹಿ ಬೇರೆ ಧಾರಾವಾಹಿಗಳಿಗೆ ಒಳ್ಳೆಯ ಕಾಂಪಿಟೇಶನ್ ನೀಡಿದೆ ಮತ್ತು ನೀಡುತ್ತಲೂ ಇದೆ. ಇನ್ನು ಈ ಧಾರಾವಾಹಿಯ ಮುಖ್ಯ ಆಕರ್ಷಣೆಯೇ ಹಿರಿಯ ನಟಿ ಉಮಾಶ್ರೀ ಅವರ ಪಾತ್ರ.

ಹಿರಿಯ ಕಲಾವಿದೆ ಉಮಾಶ್ರೀ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಅಂದ ಹಾಗೇ ಉಮಾಶ್ರೀ ಅವರಿಗೆ ಇದು ಮೊದಲ ಧಾರಾವಾಹಿಯೇನಲ್ಲ. ಟಿ. ಎಸ್. ನಾಗಾಭರಣ ನಿರ್ದೇಶನದ 'ಮುಸ್ಸಂಜೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಉಮಾಶ್ರೀ, ಪ್ರಕಾಶ್ ಬೆಳವಾಡಿಯವರ 'ಮುಸ್ಸಂಜೆ ಕಥಾಪ್ರಸಂಗ' ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದರು.

Puttakkana Makkalu Kannada Serial 600 episodes

ಮುಂದೆ ಚೈತನ್ಯ ನಿರ್ದೇಶನದ 'ಕಿಚ್ಚು' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಈ ನಟಿ ನಂತರ 'ಅಮ್ಮ ನಿನಗಾಗಿ', 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ 'ಚಿಣ್ಣರ ಚಿಲಿಪಿಲಿ'ಯ ನಿರೂಪಕಿಯಾಗಿ ಉಮಾಶ್ರೀ ಮೋಡಿ ಮಾಡಿದರು.

ಧಾರಾವಾಹಿಯ ತಾರಾಗಣದಲ್ಲಿ ಮಂಜು ಭಾಷಿಣಿ, ಸಂಜನಾ ಬುರ್ಲಿ, ಧನುಷ್, ಪವನ್, ಅಕ್ಷರ ಇದ್ದಾರೆ. ಇನ್ನು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ನಿರ್ದೇಶಕರು ಈ ಸುಸಂದರ್ಭದಲ್ಲಿ ತಮ್ಮ ಎಲ್ಲಾ ಪ್ರೇಕ್ಷಕರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

More from Filmibeat

English summary
Puttakkana Makkalu serial celebrating 600 episodes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X