Puttakkana Makkalu:ಸಹನಾಳನ್ನು ಹುಡುಕಿ ಹೊರಟ ಪುಟ್ಟಕ್ಕ; ಮಗಳು ಸಿಕ್ಮೇಲೆ ಊರಿಗೆ ಬರಲು ಶಪಥ
ಸಹನಾ ಯಾವಾಗ ತನ್ನ ತಾಯಿಯ ಜೊತೆ ಮಾತನಾಡಿದ್ದಳೋ ಆ ಸಮಯದಿಂದ ಪುಟ್ಟಕ್ಕಾಗೆ ಮರು ಜೀವ ಬಂದಂಗಾಗಿದೆ. ಪುಟ್ಟಕ್ಕ ತನ್ನ ಮಗಳು ಬದುಕಿದ್ದಾಳೆಂದು ನಂಬಿದ್ದರು. ಆದರೆ, ಇದೀಗ ಸಹನಾ ಧ್ವನಿ ಕೇಳಿದ ಬಳಿಕ ನನ್ನ ಮಗಳು ಸತ್ತಿಲ್ಲ ಆಕೆ ಬದುಕಿದ್ದಾಳೆ ಅನ್ನೋ ಕನ್ಫರ್ಮ್ ಆಗಿದೆ.
ಇದೇ ಆತಂಕದಲ್ಲಿ ಕಂಠಿ ತಂಗಿ ಮಗಳ ನಾಮಕರಣದ ಸಂದರ್ಭದಲ್ಲಿ ಬಿದ್ದು ಬಿಡುತ್ತಾಳೆ. ಅಮ್ಮನಿಗೆ ಹೀಗಾಗಿ ಬಿಟ್ಟಿತಲ್ಲ ಎಂದು ಸ್ನೇಹ ಬಹಳ ಆತಂಕಕ್ಕೆ ಒಳಗಾಗುತ್ತಾಳೆ. ಪುಟ್ಟಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ರೆಸ್ಟ್ ಮಾಡಲು ಹೇಳುತ್ತಾಳೆ.

ಇತ್ತ ಸುಮಾ ತನ್ನ ತಾಯಿಗೆ ಬುದ್ಧಿವಾದ ಹೇಳುತ್ತಿರುತ್ತಾಳೆ. "ಈ ರೀತಿ ನೀನು ತಲೆ ತಿರುಗಿ ಬೀಳುವುದು ಇದು ಮೊದಲಲ್ಲ. ಯಾವುದಕ್ಕೂ ಕೂಡ ಎಕ್ಸೈಟ್ ಮಾಡಿಕೊಳ್ಳಬೇಡ ಎಂದು ಅದೆಷ್ಟು ಬಾರಿ ಹೇಳಿದರು ನೀನು ಕೇಳುವುದೇ ಇಲ್ಲ. ಆದರೆ, ಇದೀಗ ನೋಡು ಏನಾಯಿತು. ನೀನು ಈ ರೀತಿ ಮಾಡಿದರೆ ನಮಗೆಲ್ಲ ಎಷ್ಟು ಆತಂಕವಾಗುತ್ತದೆ" ಎಂದು ಪುಟ್ಟಕ್ಕನ ಬಳಿ ಹೇಳಿದಾಗ "ಸುಮಾ ನನಗೆ ಮೂರನೆಯ ಮಗಳು ಅತ್ತೆ ಕಾಟವನ್ನು ಕೊಡುತ್ತಾಳೆ ಎಂದು ಯಾವುದೋ ಜ್ಯೋತಿಷಿ ಹೇಳಿದ್ದ ಅದೇ ಪ್ರಕಾರ ನನಗೆ ಈಗ ಆಗುತ್ತಿದೆ" ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಸುಮಗೆ ಅವ್ವ ನಾನು ನಿನಗೆ ಅತ್ತೆಯ ಎಂದು ಕೇಳುತ್ತಾಳೆ. ಈ ವೇಳೆ ಗೋಪಾಲನಾ ಹತ್ತಿರ ಸುಮಾ ಮಾತನಾಡುತ್ತಾಳೆ. ಇನ್ನು ಸುಮಾ ಹತ್ತಿರ ಮ್ಯಾಕ್ಸ್ ವೆಲ್ ಬಳಿ ನಾನು ಸ್ವಲ್ಪ ಮಾತನಾಡಬೇಕು ಎಂದು ಪುಟ್ಟಕ್ಕ ಹೇಳುತ್ತಾಳೆ. ಆದರೆ, ಪುಟ್ಟಕ್ಕನ ಮಾತಿಗೆ ಸುಮಾ ಅಷ್ಟಾಗಿ ಬೆಲೆ ಕೊಡುವುದಿಲ್ಲ. ಅವನೇನು ಸ್ವಲ್ಪ ಸುಮ್ಮನೆ ಇರು ಎಂದು ಹೇಳುತ್ತಾರೆ. ಇನ್ನು ಕೊನೆಗೆ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಪುಟ್ಟಕ್ಕ ಮನೆ ಬಿಟ್ಟು ಹೊರಡಲು ತಯಾರಾಗುತ್ತಾಳೆ. ನನ್ನ ಮಗಳು ಸಹನಾ ಬದುಕಿ ಇದ್ದಾಳೆ. ಆಕೆಯನ್ನು ನಾನು ಕರೆದುಕೊಂಡು ಬಂದೇ ಬರುತ್ತೇನೆ. ಆಕೆ ಇಲ್ಲದೆ ನನಗೆ ಒಂದು ಕ್ಷಣ ಇರಲು ಸಾಧ್ಯವಿಲ್ಲ. ನಾನು ಹುಡುಕುತ್ತೇನೆ ಎಂದು ಮನೆ ಬಿಟ್ಟು ಹೋಗಲು ತಯಾರಾಗುತ್ತಾಳೆ.

ಮಗಳನ್ನು ಅರಸಿ ಹೋದ ಪುಟ್ಟಕ್ಕ
ಇನ್ನು ದೇವಾಲಯದ ಬಳಿ ಬಂದ ಪುಟ್ಟಕ್ಕ ದೇವರಿಗೆ ಕೈ ಮುಗಿಯುತ್ತಾ ನನ್ನ ಮಗಳು ಸಹನಾ ಬರುವ ತನಕ ನಾನು ಈ ಮನೆಗೆ ಬರುವುದಿಲ್ಲ. ಹಾಗೆಯೇ ಆಕೆ ಎಲ್ಲಿದ್ದಾಳೆ ಎನ್ನುವುದು ನನಗೆ ತಿಳಿದಿಲ್ಲ. ಆಕೆ ನನಗೆ ಸಿಕ್ಕ ಮೇಲೆ ನಾನು ಈ ಮನೆಗೆ ಮತ್ತೆ ಕಾಲಿಡುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಪುಟ್ಟಕ್ಕ ಸಿಟಿ ಕಡೆಗೆ ಮುಖ ಮಾಡುತ್ತಾರೆ.
ಸ್ನೇಹಾ ಖುಷಿಗೆ ಪಾರವೇ ಇಲ್ಲ
ಆಕೆಗೆ ತಾನು ಅಂದುಕೊಂಡ ಗುರಿಯನ್ನು ತಲುಪಿದ್ದೇನೆ ಎನ್ನುವ ಖುಷಿ. ಡೆಲ್ಲಿಯಲ್ಲಿ ನಡೆಯಲಿರುವ ಇಂಟರ್ವ್ಯೂಗೆ ಸ್ನೇಹಾ ಹೋಗಬೇಕಾಗಿದೆ. ಸ್ನೇಹಾ ಜೊತೆ ಕಂಠಿ ಕೂಡ ಬಹಳ ಖುಷಿಯಲ್ಲಿದ್ದಾನೆ. ಸ್ನೇಹಾ ಕನಸನ್ನು ತಾನು ನನಸು ಮಾಡಿಬಿಟ್ಟೆ ಎನ್ನುವ ಖುಷಿ. ಆತನಿಗೆ ತನ್ನ ಕೈಯಿಂದ ಆಗದ್ದನ್ನು ಸ್ನೇಹಾ ಮಾಡಿ ತೋರಿಸಿದಳು ಎಂದು ಆಕೆಯ ಜೊತೆ ಬಹಳ ಖುಷಿಯಿಂದ ಆ ಸಂಭ್ರಮವನ್ನು ವ್ಯಕ್ತಪಡಿಸುತ್ತಾನೆ. ಹಾಗೆಯೇ ಸ್ನೇಹಾ ಕೂಡ ತನ್ನ ಗಂಡನ ಸಪೋರ್ಟ್‌ನಿಂದಲೇ ಇಷ್ಟೆಲ್ಲ ಮಾಡಲು ಸಾಧ್ಯವಾಯಿತು ಎಂದು ತನ್ನ ಗಂಡನನ್ನು ಹಾಡಿ ಹೊಗಳುತ್ತಿರುತ್ತಾಳೆ.
ಅಮ್ಮನ ನೆನಪೆಲ್ಲಿರುವ ಸಹನಾ
ಸಹನಾ ಮನದಲ್ಲಿ ನೂರಾರು ಆಲೋಚನೆ ಮೂಡುತ್ತಿರುತ್ತದೆ. ಅವ್ವಗೆ ನನ್ನ ಧ್ವನಿ ಕೇಳಿಸಿ ಇರಬಹುದಾ? ಆಕೆಗೆ ಏನಾಯಿತೋ ಏನೋ ಎನ್ನುವ ಆತಂಕ ಸಹನಾಗೆ ಇರುತ್ತದೆ. ಆಕೆ ಊರು ಬಿಟ್ಟು ಬಂದಿರುವುದು ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿ. ಬಹಳ ಕಷ್ಟ ಪಟ್ಟು ಕೆಲಸ ಮಾಡುತ್ತಿರುತ್ತಾಳೆ. ಅವ್ವನಿಗೆ ಇಂತಹ ತ್ಯಾಗಕ್ಕೆ ಸಿದ್ಧವಾಗಿರುವ ಸಹನಾ. ಅತ್ತ ಪುಟ್ಟಕ್ಕ ಮಗಳನ್ನು ಕಾಣಲು ಬೆಂಗಳೂರಿಗೆ ಬರುತ್ತಿದ್ದಾರೆ.


Click it and Unblock the Notifications











