Puttakkana Makkalu:ಬಂಗಾರಮ್ಮ ಮನೆಗೆ ಹೊಸ ಅತಿಥಿ; ನಿಜವಾಗಲಿದೆಯೇ ಬುಡುಬುಡಿಕೆ ಮಾತು?
ಬಂಗಾರಮ್ಮ ಹಾಗೂ ಸ್ನೇಹಾ ಸಂಬಂಧ ಗಟ್ಟಿ ಆಗಿದೆ. ರಾಧಾ, ಶಶಿಕಲಾ ಪಿತೂರಿ ಎಲ್ಲರಿಗೂ ಗೊತ್ತಾಗಿದೆ. ಆದರೆ, ರಾಧಾನದ್ದು ಇದರಲ್ಲಿ ಏನು ತಪ್ಪಿಲ್ಲ. ಆಕೆ ನಮ್ಮ ಮನೆಯಲ್ಲಿ ಇರಬಹುದು. ಆದರೆ ಆಕೆಯ ತಾಯಿ ಇನ್ನೂ ಮೇಲೆ ನನ್ನ ಮನೆಯಲ್ಲಿ ಇರಂಗಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ರಾಧಾ ಗೆ ಬಹಳ ಕೋಪ ಬರುತ್ತದೆ. ತನ್ನ ತಾಯಿಗೆ ಬಹಳ ಅವಮಾನ ಆಗಿದೆ. ಆದರೆ, ಇನ್ನೂ ಕೂಡ ಬಂಗಾರಮ್ಮ ತನ್ನ ತಾಯಿಯ ವಿರುದ್ದವಾಗಿ ಮಾತನಾಡುತ್ತಿದ್ದಾರೆ .
ನಾವು ಅದೆಷ್ಟೇ ಪಿತೂರಿ ಮಾಡಿದರು ಬಂಗಾರಮ್ಮ ಹಾಗೂ ಸ್ನೇಹಾ ಇಬ್ಬರೂ ಇನ್ನಷ್ಟು ಹತ್ತಿರ ಆಗುತ್ತಿದ್ದಾರೆ. ಅವರನ್ನು ಹೇಗಾದರೂ ಮಾಡಿ ದೂರ ಮಾಡಲೇಬೇಕು. ಇಲ್ಲವಾದರೆ, ಖಂಡಿತವಾಗಿಯೂ ನನಗೆ ಉಳಿಗಾಲ ಇಲ್ಲ ಎಂದುಕೊಂಡಿರುತ್ತಾಳೆ. ಬಂಗಾರಮ್ಮನ ಮನೆಯಲ್ಲಿ ಇರಲು ಜಾಗ ಸಿಕ್ಕಿತಲ್ಲ ಎಂದು ನಿಟ್ಟುಸಿರು ಬಿಡುತ್ತಾಳೆ. ಆಕೆಗೆ ಈಗಲಾದರೂ ನಾನು ಬಂಗಾರಮ್ಮ ಮನೆಯಲ್ಲಿ ಇದ್ದುಕೊಂಡೇ ಪಿತೂರಿ ಮಾಡಬಹುದು ಎಂದು ಸ್ಕೆಚ್ ಹಾಕಿದ್ದಾರೆ.

ಸ್ನೇಹಾ ಹಾಗೂ ಬಂಗಾರಮ್ಮನ ದೂರ ಮಾಡಿ ನಾನು ಈ ಮನೆಯ ಸೊಸೆ ಆಗಲೇ ಬೇಕು ಎಂದು ಹೊಂಚು ಹಾಕುತ್ತಿರುತ್ತಾರೆ. ರಾಧಾ ಮಾತ್ರ ಕೊಂಚ ಅಳುತ್ತಾಳೆ. ರಾಧಾ ಮಾತು ಕೇಳಿದ ಬಂಗಾರಮ್ಮನಿಗೆ ಏನು ಹೇಳಬೇಕು? ಏನು ಮಾತನಾಡಬೇಕು? ಎಂದು ತಿಳಿಯದಾಗುತ್ತದೆ. ಅತ್ತೆಯ ನಿರ್ಧಾರಕ್ಕೆ ಸ್ನೇಹಾ ಮಾತ್ರ ಸ್ವಲ್ಪವೂ ಇಷ್ಟ ಆಗದೆ ಗರ ಬಡಿದವರ ಹಾಗೆ ಇರುತ್ತಾಳೆ. ಆಕೆಗೆ ಸ್ವಲ್ಪವೂ ಅತ್ತೆಯ ನಿರ್ಧಾರ ಇಷ್ಟ ಆಗುವುದೇ ಇಲ್ಲ. ಇತ್ತ ಬಂಗಾರಮ್ಮನವರ ಮನೆಯ ಮುಂದೆ ಬುಡುಬುಡಿಕೆಯವರು ಬರುತ್ತಾರೆ. ಈ ಮನೆಯಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ.
ಖುಷಿಯಲ್ಲಿ ತೇಲಾಡುತ್ತಿರುವ ಬಂಗಾರಮ್ಮ
ಈ ಮನೆಗೆ ಪುಟಾಣಿ ಕೂಸು ಹೆಜ್ಜೆ ಇಡಲಿದೆ ಎಂದಾಗ ಮಾತ್ರ ರಾಧಾಗೆ ಬಹಳ ಕೋಪ ಬರುತ್ತದೆ. ಬಂಗಾರಮ್ಮಗೆ ಮಾತ್ರ ಈ ಸುದ್ದಿ ಕೇಳಿ ಬಹಳ ಖುಷಿ ಆಗುತ್ತದೆ. ಬುಡುಬುಡಿಕೆಯವರು ಹೇಳಿದ್ದು, ಸತ್ಯ ಆಗಿದ್ದರೆ ಒಳ್ಳೆಯದಿತ್ತು ಎಂದು ಮನೆ ಮಂದಿ ಅಂದುಕೊಂಡರೆ. ಸ್ನೇಹಾ ಹಾಗೂ ಕಂಠಿ ನಾಚಿಕೊಳ್ಳುತ್ತಾರೆ. ಇತ್ತ ಪುಟ್ಟಕ್ಕ, ಸುಮ ಗೆಳೆಯನಿಗೆ ಹೊಡೆದ ವಿಚಾರಕ್ಕಾಗಿ ಬಹಳ ಬೇಸರ ಮಾಡಿಕೊಂಡಿರುತ್ತಾಳೆ.
ಅಮ್ಮನ ವರ್ತನೆ ಕಂಡು ಸುಮಾಗೆ ಬೇಸರ
"ಪೇಟೆಯಲ್ಲಿ ಬೆಳೆದ ಹುಡುಗನಿಗೆ ಅಲ್ಲಿನ ಆಚಾರ ವಿಚಾರದಂತೆ ಬೆಳೆದಿರುತ್ತಾರೆ. ಆದರೆ, ಈ ಹಳ್ಳಿಯ ಸಂಪ್ರದಾಯ ಅವನಿಗೆ ಗೊತ್ತಿಲ್ಲ. ನೀನು ಯಾಕೆ ಆತನಿಗೆ ಹೊಡೆದೆ. ಆತ ಅಂತಹ ತಪ್ಪು ಏನು ಮಾಡಿದ್ದಾನೆ? ನೀನು ಮಾಡಿದ್ದು ಸರಿ ಇಲ್ಲ ಅಮ್ಮ. ನಾನು ಇದನ್ನು ಒಪ್ಪುವುದೂ ಇಲ್ಲ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ "ನನಗೆ ಬಹಳ ಭಯ ಆಯಿತು" ಎನ್ನುತ್ತಾರೆ.
ಅಮ್ಮನ ಮೇಲೆ ಪ್ರಮಾಣ ಮಾಡಿದ ಸುಮಾ
"ನಿನ್ನ ಅಕ್ಕಂದಿರು ಇದೆ ರೀತಿ ಪ್ರೀತಿ ಮಾಡಿ ಮದುವೆ ಆಗಿರುವುದೇ ನನಗೆ ಭಯ. ನೀನು ಹಾಗೆ ಮಾಡುವುದು ಇಲ್ಲ ಎನ್ನುವುದು ಯಾವ ಗ್ಯಾರಂಟಿ. ಅದಕ್ಕೆ ನಾನು ಹೊಡೆದೆ" ಎಂದಾಗ ಸುಮಾ "ಅಮ್ಮ ನಾನು ಯಾವತ್ತೂ ಆ ರೀತಿ ಮಾಡುವುದು ಇಲ್ಲ. ನೀನು ಚಿಂತೆ ಮಾಡಬೇಡ" ಎಂದು ಅಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಾಳೆ. ಹಾಗೆಯೇ ಕೊಂಚ ಮಟ್ಟಿಗೆ ನಿರಾಳ ಆಗುತ್ತಾರೆ.


Click it and Unblock the Notifications











