ಊಟಕ್ಕೆ ವಿಷ ಬೆರೆಸಿದ ಕಿರಾತಕಿ; ಮುರಳಿಗೆ ತನ್ನ ತಾಯಿಯ ಕುತಂತ್ರ ಬುದ್ದಿ ಅರ್ಥ ಆಗುತ್ತಾ?
ಅತ್ತೆ ಸಹನಾ ಬಹಳ ದೊಡ್ಡ ಗಂಡಾಂತರದಲ್ಲಿ ಸಿಕ್ಕಿದ್ದಾಳೆ. ಆಕೆಯನ್ನು ರಕ್ಷಣೆ ಮಾಡಲು ಮುರಳಿಯೇ ಬರಬೇಕಾಗಿದೆ. ಸಹನಾಗೆ ಅತ್ತೆ ಮನೆಯಲ್ಲಿ ಬಹಳ ಚಿತ್ರಹಿಂಸೆ. ಅತ್ತೆ ಸೊಸೆಯನ್ನು ತನ್ನ ಮಗಳ ಹಾಗೆ ನೋಡಿಕೊಳ್ಳಬೇಕಾಗಿತ್ತು. ಆದರೆ, ಅತ್ತೆಯೇ ಸೊಸೆಯನ್ನು ಮನೆಯ ಹೊರಗಿನವಳನ್ನಾಗಿ ಟ್ರೀಟ್ ಮಾಡುತ್ತಿರುವುದು ಬಹಳ ಬೇಸರ ತರುತ್ತಿದೆ. ಸಹನಾ ತವರು ಮನೆಯಲ್ಲಿ ಕೂಡ ಬಹಳ ಕಷ್ಟಪಟ್ಟು ತಾಯಿಗೆ ಸಹಾಯ ಮಾಡಿಕೊಂಡು ಜೀವನ ನಡೆಸಿದವಳು.
ಆಕೆಗೆ ತವರು ಮನೆಯಲ್ಲಿ ಕೈತುಂಬ ಕೆಲಸ ಇದ್ದರೂ ನೆಮ್ಮದಿ ಇತ್ತು. ಆದರೆ, ಗಂಡನ ಮನೆಯಲ್ಲಿ ಸಹನಾಗೆ ನೆಮ್ಮದಿಯೇ ಇಲ್ಲದಾಗಿ ಹೋಗಿದೆ. ಹಾಗೆಯೇ ಆಕೆಯ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಹೇಗಾದರೂ ಮಾಡಿ ಸಹನಾಳನ್ನೂ ಸಾಯಿಸಬೇಕು ಎಂದು ಕೌಸಲ್ಯ ಹಂಚು ಹಾಕುತ್ತಿರುತ್ತಾಳೆ. ಹಾಗೆಯೇ ಆಕೆಯ ಜೊತೆ ಕೌಸಲ್ಯ ಮಗಳ ಗಂಡ ಕೂಡ ಸೇರಿಕೊಂಡಿರುತ್ತಾನೆ. ತನ್ನ ಮಗನನ್ನು ಸೊಸೆ ನನ್ನಿಂದ ಎಲ್ಲಿ ಕಿತ್ತುಕೊಂಡು ಬಿಡುತ್ತಾಳೋ ಎನ್ನುವ ಭಯ ಕೌಸಲ್ಯಗೆ ಇದೆ.

ಈ ಕಾರಣ ಕೌಸಲ್ಯ ಹೇಗಾದರೂ ಮಾಡಿ ಸಹನಾಳನ್ನು ಮುಗಿಸಿಬಿಟ್ಟರೆ ಮತ್ತೆ ಯಾವ ತೊಂದರೆಯೂ ಇಲ್ಲ ಎಂದು ಅಂದುಕೊಂಡಿರುತ್ತಾಳೆ. ಅದೇ ಸಮಯವನ್ನು ಕಾಯುತ್ತಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೌಸಲ್ಯ ಊಟದಲ್ಲಿ ವಿಷ ಬೆರೆಸುತ್ತಾಳೆ. ಇದನ್ನು ಸಹನಾ ನೋಡುತ್ತಾಳೆ. ಆ ಸಮಯಕ್ಕೆ ಮುರಳಿ ಕೂಡ ಬರುತ್ತಾನೆ. ಮುರಳಿಗೆ ಸಿಕ್ಕಾಪಟ್ಟೆ ಹಸಿವಾಗಿರುತ್ತೆ.
ಮುರಳಿಯನ್ನು ಊಟ ಮಾಡದಂತೆ ತಡೆದ ಸಹನಾ
ಮುರಳಿ ಊಟ ಬಡಿಸಿಕೊಂಡು ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಓಡೋಡಿ ಬಂದ ಸಹನಾ ಮುರಳಿ ಊಟ ಮಾಡುತ್ತಿದ್ದ ಕೈಯನ್ನು ಜೋರಾಗಿ ದೂಡಿಬಿಡುತ್ತಾಳೆ. ಇದನ್ನು ನೋಡಿದ ಮುರಳಿ, ಸಹನಾ ಬಳಿ ಪ್ರಶ್ನೆ ಮಾಡಿದಾಗ ಊಟದಲ್ಲಿ ವಿಷ ಬರೆದಿದ್ದಾರೆ ನೀವು ತಿನ್ನಬೇಡಿ ಎಂದು ಹೇಳಿದಾಗ ಮುರಳಿಗೆ ಶಾಕ್. ಆದರೆ ಕೌಸಲ್ಯಗೆ ಏನು ಹೇಳಬೇಕು ಎಂದು ತಿಳಿಯದಾಗಿ ಹೋಗುತ್ತೆ.

ಶಿವಾನಿ ಕೊಂಕು ಮಾತಿಗೆ ಬೇಸರಗೊಂಡ ಸುಮಾ
ಇನ್ನೂ ಸುಮಾಗೆ ಕಾಲೇಜಿನಲ್ಲಿ ಬೇಸರ ಆಗುತ್ತದೆ. ಕಾಲೇಜಿನಿಂದ ಹೊರಗೆ ಬರುವಾಗ ತನ್ನ ತಂದೆಯನ್ನು ನೋಡಿ ಶಾಕ್ ಆಗುತ್ತಾಳೆ. "ನೀನು ಇಲ್ಲಿಗೆ ಯಾಕೆ ಬಂದೆ?" ಎಂದು ಕೇಳಿದಾಗ ಎಲ್ಲಾದರೂ ನೀನು ಬರೆದ ಉತ್ತರ ಪತ್ರಿಕೆ ಸಿಕ್ಕಿರಬೇಕು ಎಂದು ಬಂದೆ ಎಂದಾಗ ಶಿವಾನಿ ಕೊಂಕು ಮಾತುಗಳಿಂದ ನಿಂದಿಸಿ ಅಲ್ಲಿಂದ ಹೋಗುತ್ತಾಳೆ. ಆದರೆ, ಪುರುಷೋತ್ತಮನಿಗೆ ಸುಮಾ ನೋವು ನೋಡಲು ಆಗುವುದಿಲ್ಲ . ಯಾಕೆಂದರೆ, ಸುಮಾ ಅಷ್ಟು ನೊಂದುಕೊಳ್ಳುತ್ತಾಳೆ.
ಅಕ್ಕ ಬಾವನನ್ನು ನೋಡಿ ಖುಷಿಪಟ್ಟ ಸುಮಾ
ಆ ವೇಳೆ ಅಲ್ಲಿಗೆ ಸ್ನೇಹ ಹಾಗೂ ಕಂಠಿ ಬರುತ್ತಾರೆ. ಅಕ್ಕ ಬಾವನನ್ನು ನೋಡಿ ಸುಮಾಗೆ ಶಾಕ್ ಆಗುತ್ತದೆ. ಪುರುಷೋತ್ತಮ ಹೇಳುತ್ತಾನೆ. "ಸುಮಾ ನಿನ್ನ ಅಳು ನೋಡಲು ಆಗದೆ ನಾನೇ ಅಕ್ಕನಿಗೆ ವಿಚಾರ ಹೇಳಿದೆ" ಎಂದು ಹೇಳುತ್ತಾನೆ. ಸ್ನೇಹಾ, ಸುಮಾಳನ್ನು ಕರೆದುಕೊಂಡು ಪ್ರಿನ್ಸಿಪಾಲ್ ಚೇಂಬರ್ ಬಳಿ ಹೋಗುತ್ತಾಳೆ. ಪ್ರಿನ್ಸಿಪಾಲ್ ಬಳಿ ಎಷ್ಟೇ ಹೇಳಿದರು ಅವರು ತನ್ನ ಕಾಲೇಜಿನ ಮಾನ ಮರ್ಯಾದೆ ಹೋಗಬಾರದು. ಈ ವಿಚಾರ ಹೊರಗೆ ಹೋದರೆ ನಮಗೆ ಬಹಳ ಕಷ್ಟ. ಹಾಗೆಯೇ ಉತ್ತರ ಪತ್ರಿಕೆ ಚೇಂಜ್ ಆಗಲು ಹೇಗೆ ಕಾರಣ? ಎಂದೆಲ್ಲ ಪ್ರಶ್ನೆ ಮಾಡಿದಾಗ ಸ್ನೇಹಾ ಕೂಡ ವಾದ ಮಾಡುತ್ತಾಳೆ. ಕೊನೆಗೆ ಸಿಸಿಟಿವಿ ಫುಟೇಜ್ ತರಿಸಿ ನೋಡಿದಾಗ, ಯಾರೋ ಉತ್ತರ ಪತ್ರಿಕೆ ಚೇಂಜ್ ಮಾಡುತ್ತಾ ಇರುವುದು ಕಾಣಿಸುತ್ತದೆ . ಇಷ್ಟರವರೆಗೆ ಕೂಲ್ ಆಗಿದ್ದ ಶಿವಾನಿಗೆ ಇದೀಗ ಆತಂಕ ಶುರು ಆಗುತ್ತದೆ. ಪ್ರಿನ್ಸಿಪಾಲ್ ಸ್ನೇಹಾ ಬಳಿ "ಇದಕ್ಕೆಲ್ಲ ಯಾರೆಲ್ಲ ಕಾರಣಕರ್ತರು ಇದ್ದಾರೆ. ಅವರಿಗೆ ಖಂಡಿತ ಶಿಕ್ಷೆ ಕೊಡಿಸುತ್ತೇವೆ" ಎಂದು ಹೇಳುತ್ತಾರೆ. ಸುಮಾಗೆ ಇದೀಗ ಕೊಂಚ ನೆಮ್ಮದಿ ಆಗುತ್ತದೆ.


Click it and Unblock the Notifications











