Puttakkana Makkalu: ತಾಳಿ ಕಿತ್ತು ಕೊಟ್ಟ ಸಹನಾ; ಅಂಥಾ ಗಂಡನ ಜೊತೆ ಬದುಕುವುದು ವೇಸ್ಟ್ ಎಂದ ನೆಟ್ಟಿಗರು

By ಪೂರ್ವ

ಮುರಳಿ ಕೆಲವೊಂದು ಮಾತು ಸಹನಾ ಮನಸ್ಸನ್ನು ಮುರಿದು ಹಾಕಿದೆ. ಮುರಳಿ ಎಂದರೆ, ಒಂದು ಕಾಲದಲ್ಲಿ ಬಹಳ ಪ್ರೀತಿ ಇತ್ತು. ಆದರೆ, ಈಗ ಮುರಳಿ ತಾನು ಏನು ಮಾಡಿದರು ಅದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಹಾಗೆಯೇ ತನಗಾಗಿ ಯಾರನ್ನು ಬಿಟ್ಟು ಬರಲು ಕೂಡ ರೆಡಿ ಇಲ್ಲ. ಅಂಥವನ ಜೊತೆ ನಾನು ಹೇಗೆ ಬಾಳಲಿ ಎನ್ನುವುದು ಸಹನಾ ಚಿಂತೆ. ಅತ್ತೆಯಾದವಳು ಸೊಸೆಯನ್ನು ಮಗಳ ಹಾಗೆ ನೋಡಿಕೊಳ್ಳಬೇಕು. ಸೊಸೆಯನ್ನು ಬಹಳ ಪ್ರೀತಿ ಮಾಡಬೇಕು.

ಆದರೆ, ಅದು ಯಾವುದು ಮಾಡದೇ ಸಹನಾ ಈ ಮನೆಯ ಸೊಸೆ ಅಲ್ಲ. ಆಕೆಯನ್ನು ಹೇಗಾದರೂ ಮಾಡಿ ತನ್ನ ಮನೆಯಿಂದ ದೂರ ಮಾಡಬೇಕು. ಹಾಗೆಯೇ ಮಗನ ಜೀವನದಿಂದ ದೂರ ಮಾಡಿ ಆತನಿಗೆ ಇನ್ನೊಂದು ಮದುವೆ ಮಾಡಬೇಕು ಎಂಬ ಆಲೋಚನೆ. ಅದೇ ರೀತಿ ಸಹನಾಗೆ ಒಂದಲ್ಲ ಒಂದು ರೀತಿಯಲ್ಲಿ ಕಾಟ ಕೊಡುತ್ತಾಳೆ. ಕೊನೆಗೆ ಆಕೆಯನ್ನು ಮನೆಯಿಂದಲೇ ಓಡಿಸಿ ಬಿಡುತ್ತಾಳೆ. ಕೊನೆಗೆ ಆಕೆಯ ಕೊರಳಲ್ಲಿ ಇದ್ದ ಮಾಂಗಲ್ಯವನ್ನೂ ಕುತ್ತಿಗೆಯಿಂದ ತೆಗೆದು ಬಿಡುತ್ತಾಳೆ. ಸಹನಾ, ನನ್ನ ಮಗನ ಜೊತೆ ಬರಲಿಲ್ಲ ಎಂದಾದರೆ ಆತ ಕಟ್ಟಿದ ಮಾಂಗಲ್ಯ ಯಾಕೆ? ಅದನ್ನು ಕೊಡು ಎಂದಾಗ ಸಹನಾ ಮುರಳಿಯ ಹತ್ತಿರ ಬರುತ್ತಾಳೆ.

Puttakkana Makkalu Kannada serial March 27th episode update

ಆಕೆಗೆ ಹಿಂದಿನದೆಲ್ಲ ಒಮ್ಮೆಗೇ ನೆನಪಿಗೆ ಬರುತ್ತದೆ. ಮುರಳಿ ತನ್ನ ಮೇಲೆ ಇಟ್ಟಿದ್ದ ಪ್ರೀತಿ ಅದೆಲ್ಲ ಎಲ್ಲಿಗೆ ಹೋಯಿತು? ಎಂದು ಮನಸ್ಸು ಭಾರವಾಗುತ್ತದೆ. ಜೀವನ ಪೂರ್ತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದೆಲ್ಲ ಹೇಳಿ ಇದೀಗ ಈ ರೀತಿ ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಮನದಲ್ಲಿಯೇ ನೋವಿನಿಂದ ಆಲೋಚನೆ ಮಾಡುತ್ತಿರುತ್ತಾಳೆ. ಕೊನೆಗೆ ತನ್ನ ತಾಯಿಯನ್ನು ಯಾವತ್ತೂ ಬಿಟ್ಟು ಬರುವುದಿಲ್ಲ ಎಂದು ಹೇಳಿದ ಮೇಲೆ ಸಹನಾ ಮನಸ್ಸು ಮುರಿದು ಹೋಗಿರುತ್ತೆ.

ಮುರಳಿ ಮುಖ ನೋಡಿದ ಸಹನಾ

ಒಬ್ಬ ಹೆಣ್ಣಿಗೆ ಎಷ್ಟು ನೋವು ಮಾಡಿರಬಹುದೋ ಅದಕ್ಕಿಂತ ದುಪ್ಪಟ್ಟು ನೋವು ಮಾಡಿದ್ದಾನೆ ಮುರಳಿ. ಮನಸ್ಸು ಒಡೆದ ಕನ್ನಡಿಯ ಹಾಗೆ ಬಿಟ್ಟಿದೆ. ಅದನ್ನು ಜೋಡಿಸಲು ಆಗದಷ್ಟು ದೂರವಾಗಿ ಬಿಟ್ಟಿದೆ. ಸಹನಾ ಅತ್ತೆಯ ಮುಖ ನೋಡಿ ಕತ್ತಲ್ಲಿ ಇದ್ದ ತಾಳಿಯನ್ನು ತೆಗೆದು ಅತ್ತೆಗೆ ಕೊಡುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ಮಾತ್ರ ಬಹಳ ಶಾಕ್‌ಗೆ ಒಳಗಾಗುತ್ತಾರೆ. ಅಲ್ಲಿ ನೆರೆದಿದ್ದವರೆಲ್ಲರೂ ಕೂಡ ಸಹನಾ ಮಾಡಿದ ಕೆಲಸಕ್ಕೆ ದಂಗಾಗಿ ಹೋಗುತ್ತಾರೆ.

Puttakkana Makkalu Kannada serial March 27th episode update

ಪುಟ್ಟಕ್ಕನ ಮಗಳ ಸ್ಥಿತಿ ನೋಡಿ ಖುಷಿಪಟ್ಟ ರಾಜೀ

ಆದರೆ ರಾಜೀಗೆ ಇದರಿಂದ ಬಹಳ ಖುಷಿ ಆಗುತ್ತದೆ. ಪುಟ್ಟಕ್ಕನ ಒಬ್ಬ ಮಗಳ ಜೀವನ ಹಾಳು ಮಾಡಿ ಬಿಟ್ಟೆನಲ್ಲ ಎಂದು ಖುಷಿಯಲ್ಲಿ ಇರುತ್ತಾಳೆ. ಆದರೆ, ಪುಟ್ಟಕ್ಕ ಸಹನಾ ಬಳಿ ಓಡಿ ಬಂದು ಆಕೆಯ ಕೆನ್ನೆಗೆ ಹೊಡೆಯುತ್ತಲೇ ಇರುತ್ತಾಳೆ. ಕೊನೆಗೆ ಪುಟ್ಟಕ್ಕನನ್ನು ಬಂಗಾರಮ್ಮ ತಡೆಯುತ್ತಾರೆ. ಪುಟ್ಟಕ್ಕ, ಸಹನಾ ಬಳಿ "ಏನು ಮಾಡಿ ಬಿಟ್ಟೆ. ತಾಳಿ ಬಹಳ ಪವಿತ್ರವಾದುದು. ಅದನ್ನು ಹೀಗೆ ಕಿತ್ತು ಹಾಕಿ ಬಿಟ್ಟೆಯಲ್ಲ" ಎಂದು ಬಹಳ ಬೇಸರದಿಂದ ಹೇಳುತ್ತಾರೆ

ಪಂಚಾಯಿತಿಯಿಂದ ಹೊರ ನಡೆದ ಪುಟ್ಟಕ್ಕ

ಕೊನೆಗೆ ಪಂಚಾಯತಿಯಿಂದಲೇ ಪುಟ್ಟಕ್ಕ ಹೊರಗಡೆ ಹೋಗುತ್ತಾರೆ. ಸ್ನೇಹಾ, ಅಮ್ಮನಿಗೆ ಸಮಾಧಾನ ಮಾಡುತ್ತಾಳೆ. ಅಮ್ಮ ಅಕ್ಕ ಮಾಡಿದ್ದು ಸರಿಯಾಗಿದೆ ಎಂದಾಗ ಕೋಪಗೊಂಡ ಪುಟ್ಟಕ್ಕ "ನಾನು ಇದೂವರೆಗೆ ಏನು ಹೇಳಿದರು ನಿಮಗೆ ತಪ್ಪೇ, ಸಹನಾ ಇತ್ತೀಚಿನ ದಿನಗಳಲ್ಲಿ ನಿನ್ನ ಹಾಗೆ ಆಡುತ್ತಿದ್ದಾಳೆ. ಪಂಚಾಯಿತಿ ಕಟ್ಟೆಯ ಎದುರು ಹಾಗೆಯೇ ಎಲ್ಲರೆದುರು ತಾಳಿ ಕಿತ್ತು ಹಾಕಿಬಿಟ್ಟಳು. ತಾಳಿಯ ಮಹತ್ವ ಆಕೆಗೆ ತಿಳಿದಿದೆಯಾ? ಯಾಕೆ ನನ್ನ ಹೊಟ್ಟೆ ಉರಿಸುತ್ತೀರಾ?" ಎಂದು ಬಹಳ ಸಂಕಟ ಪಟ್ಟುಕೊಳ್ಳುತ್ತಾರೆ. ಆದರೆ, ಗೋಪಾಲ ಈ ಸಂದರ್ಭದಲ್ಲಿ ಪುಟ್ಟಕ್ಕನನ್ನು ಸಮಾಧಾನ ಮಾಡಲು ಬರುತ್ತಾನೆ. ಆಗ ಪುಟ್ಟಕ್ಕ ಹೇಳುತ್ತಾಳೆ. ನಮ್ಮನ್ನು ನೋಡಲು ಪಂಚಾಯಿತಿಗೆ ಕರೆಸಿದ್ದೆ ನೀನು, ಎಷ್ಟು ಮರ್ಯಾದೆಯಿಂದ ಬದುಕುತ್ತಾ ಇದ್ದೆವು. ಆದರೆ, ಇದೀಗ ನಿನ್ನಿಂದಾಗಿಯೆ ನಾವು ಈ ಸ್ಥಿತಿಯಲ್ಲಿ ಇದ್ದೇವೆ" ಎಂದು ಹೇಳುತ್ತಾಳೆ. ಪುಟ್ಟಕ್ಕ ಆಡಿದ ಮಾತು ಕೇಳಿ ಗೋಪಲನಿಗೆ ಬೇಸರ ಆಗುತ್ತೆ.

More from Filmibeat

English summary
Puttakkana Makkalu Kannada serial March 27th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X