Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಬಹಳ ಮಹತ್ವಪೂರ್ಣವಾಗಿ ಕಾಣಿಸುತ್ತಿದೆ. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡುವ ರೀತಿಯೇ ಬದಲಾಗಿ ಹೋಗಿದೆ. ಅದಕ್ಕೆ ಕಾರಣ ಸಹನಾ ತೆಗೆದುಕೊಂಡ ನಿರ್ಧಾರ. ಈ ನಿರ್ಧಾರಕ್ಕೆ ಎಲ್ಲರೂ ತಲೆ ಭಾಗಿದ್ದಾರೆ. ಚುಚ್ಚಿ ಚುಚ್ಚಿ ಮಾತನಾಡುವ ಅತ್ತೆ, ತಾಯಿಯ ಮಾತನ್ನು ಮಾತ್ರ ಕೇಳುವ ಗಂಡ, ಇಬ್ಬರ ನಡುವೆ ಸಿಲುಕಿದ ಸಹನಾಗೆ ನೆಮ್ಮದಿ ಎಂಬುವುದು ಇರಲಿಲ್ಲ.
ಆದರೆ, ಪಂಚಾಯತಿ ಕಟ್ಟೆಯ ಮುಂದೆ ಎಲ್ಲರ ಎದುರು ಸಹನಾಗೆ ಅಕ್ರಮ ಸಂಬಂಧ ಇದೆ ಎಂದು ಹೇಳಿದಾಗ ಕೂಡ ತನ್ನ ಹೆಂಡತಿಯ ಬಗ್ಗೆ ಮುರಳಿ ಒಂದು ಮಾತನ್ನು ಆಡದೆ ಇರುವುದು ಪುಟ್ಟಕ್ಕಗೆ ಬಹಳ ಬೇಸರ ತರುತ್ತದೆ. ತನ್ನ ಗಂಡನ ಎದುರೇ ಎಷ್ಟೆಲ್ಲ ಮಾತುಕತೆ ನಡೆಯುತ್ತಿದೆ. ಆದರೆ ಒಂದು ದಿನ ನನ್ನ ಪರವಾಗಿ ಮಾತನಾಡಲಿಲ್ಲ. ನನ್ನ ಗಂಡನನ್ನು ನನಗಿಂತ ಹೆಚ್ಚಾಗಿ ಪ್ರೀತಿ ಮಾಡಿದೆ ಅನ್ನೋದೇ ಬೇಸರ.

ಹಾಗೆಯೇ "ನನ್ನ ಗಂಡನನ್ನು ದೇವರ ರೂಪದಲ್ಲಿ ಕಂಡೆ. ಆದರೆ ಆತ ನೀಡಿದ್ದ ಉಡುಗೊರೆ ನನಗೆ ಹುಚ್ಚಿ ಎನ್ನುವ ಪಟ್ಟ" ಎಂದು ಸಹನಾ ಬಹಳ ನೊಂದುಕೊಂಡು ಇರುತ್ತಾಳೆ. ಆದರೆ, ಇದೀಗ ಧಾರಾವಾಹಿ ನೋಡುತ್ತಿರುವ ಪ್ರೇಮಿಗಳು ಸಹನಾ ಪರವಾಗಿಯೇ ನಿಂತಿದ್ದಾರೆ. ಪುಟ್ಟಕ್ಕ ಒಬ್ಬ ತಾಯಿ ಆಗಿ ನಡೆದುಕೊಳ್ಳುವುದು ಸರಿ. ಆದರೆ, ಆತನ ಜೊತೆ ಬಾಳು. ಹಾಗೆಯೇ ಆತ ಕಟ್ಟಿದ ತಾಳಿಯನ್ನು ತೆಗೆಯಬಾರದು ಎಂದು ಹೇಳುವುದು ಮಾತ್ರ ಸರಿಯಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಸಹನಾಗೆ ತವರು ಮನೆಯಲ್ಲೂ ನೋವು
ಸಹನಾಗೆ ಆದ ನೋವು ಬಹಳ ದೊಡ್ಡದು. ಇನ್ನೂ ಅನೇಕ ಜನರು ಹೀಗೆ ತಮ್ಮ ಅತ್ತೆ ಮನೆಯಲ್ಲಿ ನೋವು ತಿಂದುಕೊಂಡು ಬೆಳೆಯುತ್ತಿದ್ದಾರೆ. ಅಂಥವರಿಗೆ ಸಹನಾನೆ ಬಹಳ ದೊಡ್ಡ ಮಾದರಿ ಆಗಿದ್ದಾಳೆ. ಇನ್ನೂ ಪುಟ್ಟಕ್ಕಗೆ ಸಹನಾ ಮೇಲೆ ಅತಿಯಾದ ಕೋಪ ಬಂದಿದೆ. ಇದರ ಮಧ್ಯೆ ಗೋಪಾಲ ಕುಡಿದು ಮನೆಗೆ ಬಂದಿದ್ದಾನೆ. ಪುಟ್ಟಕ್ಕಗೆ ಗೋಪಾಲ ಕುಡಿದು ಬಂದಿರುವುದನ್ನು ನೋಡಿ ಮತ್ತಷ್ಟು ಕೋಪ ಬರುತ್ತಾನೆ.

ಪುಟ್ಟಕ್ಕನ ಕೋಪಕ್ಕೆ ತುತ್ತಾದ ಗೋಪಾಲ
ಯಾಕೆ ಕುಡಿದೆ ಎಂದು ಕೇಳಿದರೆ ನನ್ನ ಮಗಳ ಜೀವನ ಹಾಳಾಗಿ ಹೋಗಿ ಬಿಟ್ಟಿತಲ್ಲ ಎಂದು ತಲೆ ಕೆಟ್ಟು ಹೋಯಿತು. ಅದಕ್ಕಾಗಿ ನಾನು ಕುಡಿದು ಬಿಟ್ಟೆ ಎಂದು ಮನದ ನೋವನ್ನು ಹೇಳಿಕೊಳ್ಳುತ್ತಾನೆ. ಆದರೆ, ಪುಟ್ಟಕ್ಕಗೆ ಕೋಪ ತಡೆಯಲು ಆಗದೆ ಮನೆಯಿಂದ ಹೊರಗಡೆ ಹಾಕಿ ಬಿಡುತ್ತಾಳೆ. ಇತ್ತ ರಾಧಾ ಸ್ನೇಹಾ ಮೇಲೆ ಎಗರಾಡುತ್ತಿರುತ್ತಾಳೆ.
ಸ್ನೇಹಾ ಮುಂದೆ ಎಗರಾಡುತ್ತಿರುವ ರಾಧಾ
ನಾನೇ ಬಂಗಾರಮ್ಮನವರ ಸೊಸೆ, ನಿನಗೆ ಈ ಮನೆಯಲ್ಲಿ ಯಾವುದೇ ರೈಟ್ಸ್ ಇರುವುದು ಇಲ್ಲ. ಇಲ್ಲಿ ಏನೇ ಇದ್ದರೂ ನನ್ನದೇ ಕಾರುಬಾರು ಎನ್ನುವ ಹಾಗೆ ಮಾತನಾಡುತ್ತಾ ಇರುತ್ತಾಳೆ. ಆದರೆ, ಈ ವಿಚಾರವನ್ನು ಸಹನಾ ಯಾರ ಮುಂದೆಯೂ ಹೇಳಿಕೊಂಡಿಲ್ಲ. ಆಕೆಗೆ ರಾಧಾ ಒಳ್ಳೆಯ ಪಾಠ ಕಲಿಸಬೇಕು ಎಂಬುವುದು ಮನದಲ್ಲಿ ಇರುತ್ತದೆ . ರಾಧಾ ಇಷ್ಟೆಲ್ಲ ಸ್ನೇಹಾ ಬಳಿ ಮಾತನಾಡುತ್ತಿರುವಾಗ ಕಂಠಿ ಬರುತ್ತಾನೆ. ಮುಂದೇನು ಅನ್ನೋ ಕಾದು ನೋಡಬೇಕಿದೆ.


Click it and Unblock the Notifications











