ಸಹನಾ ಮೇಲೆ ಕಾಳಿಗೆ ಲವ್ ಆಗಿದೆ: ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳಾ ಸಹನಾ?

By ಪೂರ್ವ

ಸಹನಾ ಏನಾದರೂ ಒಂದು ಸಾಧನೆ ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದಳು. ಆಕೆಯನ್ನು ಹುಡುಕಿಕೊಂಡು ಪುಟ್ಟಕ್ಕ ಬಂದಿದ್ದರೂ ಸಹ ಪುಟ್ಟಕ್ಕಳನ್ನುಸಹನಾ ಭೇಟಿ ಮಾಡಿರಲಿಲ್ಲ. ಆಕೆಯ ಉದ್ದೇಶ ಒಂದೇ ತಾನು ಈ ಊರಿಗೆ ಬಂದ ಮೇಲೆ ತನ್ನ ತಂದೆ ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ತಾಯಿಯನ್ನು ಪ್ರೀತಿಯಿಂದ ಸಾಕಬೇಕು. ತನಗಾಗಿ ತಾಯಿ ಏನು ಮಾಡಿಕೊಳ್ಳಲಿಲ್ಲ. ಹೀಗಾಗಿ ತನ್ನ ತಾಯಿಗಾಗಿ ದುಡಿಯಬೇಕು. ಏನಾದರೂ ಸಾಧಿಸಿ ತೋರಿಸಬೇಕು ಎಂದು ಕೊಂಡಿದ್ದಳು.

ಆದರೆ ತಂಗಿ ಸ್ನೇಹಾ ತೀರಿ ಹೋದ ಬಳಿಕ ತನ್ನ ತಾಯಿಯ ಜೊತೆಗೆ ಇದ್ದು ಬಿಡುತ್ತಾಳೆ. ಆಕೆಗೆ ತಾಯಿ ಎಂದರೆ ಬಹಳ ಪ್ರೀತಿ. ಅದಕ್ಕಾಗಿ ತಾಯಿಗೆ ನೆರಳಾಗಿ ಇರಬೇಕು ಎನ್ನುವ ಕಾರಣಕ್ಕಾಗಿ ಆಕೆ ನಡೆಸುತ್ತಿರುವ ಫುಡ್ ಟ್ರಕ್ ಅನ್ನು ಕಾಳಿಗೆ ವಹಿಸಿರುತ್ತಾಳೆ. ಅದಕ್ಕೆ ಸ್ವಲ್ಪ ಸಾಲವನ್ನು ಕೂಡ ಮಾಡಿರುತ್ತಾಳೆ. ಅದಕ್ಕಾಗಿ ಏನು ಮಾಡಬೇಕು ಎಂದು ಗೊತ್ತಾಗದೇ ಪರದಾಡುತ್ತಾಳೆ.

Puttakkana Makkalu Kannada serial November 25th episode update

ಆಕೆಯ ಮನಸ್ಸಿನಲ್ಲಿ ನೂರಾರು ಯೋಚನೆ. ಆದರೂ ಸಹನಾ ಅದೆಲ್ಲವನ್ನೂ ಮನದಲ್ಲಿ ಇಟ್ಟುಕೊಂಡೆ ತನ್ನ ತಾಯಿಯ ಜೊತೆ ಬಹಳ ಖುಷಿಯಲ್ಲಿ ಕಾಲ ಕಳೆಯುತ್ತಿದ್ದಾಳೆ. ಆದರೆ, ಬಡ್ಡಿಯ ಹಣ ತೆಗೆದುಕೊಂಡು ಮೇಲೆ ಪ್ರತಿ ತಿಂಗಳು ತೀರಿಸುತ್ತಲೇ ಇರಬೇಕು. ಇದೀಗ ಸಹನಾ ಮನೆಗೆ ಬಡ್ಡಿ ತೆಗೆದುಕೊಳ್ಳಲು ರೌಡಿಗಳು ಬರುತ್ತಾರೆ. ರೌಡಿಗಳು ಬರುವ ವೇಳೆ ಕಾಳಿಯನ್ನು ಕೂಡ ಎಳೆದುಕೊಂಡು ಬರುತ್ತಾರೆ. ಸಹನಾ ರೌಡಿಗಳ ಬಳಿ "ಸ್ವಲ್ಪ ಸಮಯ ಕೊಡಿ. ನಾನು ಖಂಡಿತವಾಗಿಯೂ ನಿಮ್ಮ ಹಣವನ್ನು ತೀರಿಸುತ್ತೇನೆ" ಎಂದು ಹೇಳುತ್ತಾಳೆ. ಆದರೆ ಅವರು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ.

ರೌಡಿಗಳ ಬಳಿ ಏಟು ತಿಂದ ಕಾಳಿ

ರೌಡಿಗಳು ಸಹನಾ ಮಾತನ್ನು ಕೇಳಲು ಇಷ್ಟ ಪಡುವುದಿಲ್ಲ. ಅವರಿಗೆ ಸಹನಾ ಬೇಕಾಗಿರುತ್ತೆ. ಆದರೆ, ಇದಕ್ಕೆ ಕಾಳಿ ಮಾತ್ರ ಅದ್ಯಾವುದಕ್ಕೂ ಬಿಡುವುದಿಲ್ಲ. ಸಹನಾಗೆ ಏನು ಮಾಡಬೇಡಿ. ಆಕೆ ತುಂಬಾ ಒಳ್ಳೆಯವಳು ನನಗೆ ಬೇಕಾದ ಶಿಕ್ಷೆಯನ್ನು ನೀಡಿ ಎಂದು ಹೇಳಿದಾಗ ರೌಡಿಗಳು ಕಾಳಿಗೆ ಸಿಕ್ಕಾಪಟ್ಟೆ ಹೊಡೆಯುತ್ತಾರೆ. ಕಾಳಿಯನ್ನು ನೋಡಿ ಸಹನಾಗೆ ಬಹಳ ಬೇಸರ ಆಗುತ್ತೆ. ತನ್ನಿಂದಾಗಿ ಕಾಳಿ ಯಾಕೆ ಇಕ್ಕಟ್ಟಿಗೆ ಸಿಲುಕಬೇಕು. ಆತ ಚೆನ್ನಾಗಿರಬೇಕು. ಆತ ಇಕ್ಕಟ್ಟಿಗೆ ಸಿಲುಕಿದ್ದು ಸರಿಯಲ್ಲ. ನನ್ನಿಂದಾಗಿ ಆತ ಯಾವುದೇ ತೊಂದರೆಗೆ ಒಳಗಾಗಬಾರದು ಎಂದು ಎಂದು ಹೇಳುತ್ತಾಳೆ. ಇದನ್ನೇ ರೌಡಿಗಳು ಅಡ್ವಾಂಟೆಜ್ ತೆಗೆದುಕೊಂಡು ಸಹನಾ ಹತ್ತಿರಕ್ಕೆ ಬರುತ್ತಾರೆ.

Puttakkana Makkalu Kannada serial November 25th episode update

ಕಂಠಿ ನೋಡಿ ಓಡಿ ಹೋದ ರೌಡಿಗಳು

ಆಗ ಕಾಳಿ ಬಂದು ಅವರೆಲ್ಲರನ್ನೂ ಬೆಂಡೆತ್ತಿ ಬಿಡುತ್ತಾನೆ. ಕಾಳಿಗೆ ಬಹಳ ಬೇಸರ ಆಗುತ್ತೆ. ತನ್ನಿಂದ ಏನು ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ಆತನಲ್ಲಿ ಮೂಡುತ್ತದೆ. ಇನ್ನೂ ಕಾಳಿ ರೌಡಿಗಳ ಬಳಿ ಹೊಡೆತ ತಿಂದು ಬಹಳ ನೋವಿನಲ್ಲಿ ಇರುತ್ತಾನೆ. ಇದನ್ನು ನೋಡಿ ಪುಟ್ಟಕ್ಕ ಮರುಗುತ್ತಾರೆ. ಕಾಳಿಗೆ ಸಹನಾ ಎಂದರೆ ಬಹಳ ಪ್ರೀತಿ. ಚಿಕ್ಕ ವಯಸ್ಸಿನಿಂದಲೂ ಸಹನಾ ಎಂದರೆ ಕಾಳಿ ಜೀವ ನೀಡುತ್ತಾನೆ. ಇನ್ನು ರೌಡಿಗಳಿಂದ ಕಾಳಿ ಏಟು ತಿಂದಿದ್ದನ್ನು ನೋಡಿ ಸಹನಾ ಆತನ ಗಾಯಗಳಿಗೆ ಮದ್ದು ನೀಡುತ್ತಾಳೆ. ಹಾಗೆಯೇ ಗಾಯವಾದಲ್ಲಿಗೆ ಮದ್ದು ಹಚ್ಚುತ್ತಾಳೆ. ಸಹನಾ ಆರೈಕೆಯನ್ನು ನೋಡಿ ಕಾಳಿಗೆ ಇನ್ನಷ್ಟು ಇಷ್ಟ ಆಗುತ್ತಾಳೆ. ಮನದಲ್ಲಿ ಸಹನಾ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಅದ್ಯಾವುದನ್ನೂ ಕಾಳಿ ತೋರಿಸಿಕೊಳ್ಳುವುದಿಲ್ಲ. ಆದರೆ ಆತನಿಗೂ ಸಹನಾ ಎಂದರೆ ಬಹಳ ಪ್ರಾಣ.

More from Filmibeat

English summary
Puttakkana Makkalu Kannada serial November 25th episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X