ಬೆಣ್ಣೆನಗರಿ ದಾವಣಗೆರೆಯ ಹುಡುಗಿಯರು ಕಂಠಿಗೆ ಇಟ್ಟ ಡಿಮ್ಯಾಂಡ್ ಏನು? ಈಡೇರಿಸಿದ್ರಾ ಪುಟ್ಟಕ್ಕನ ಅಳಿಯ?

By ಎಸ್ ಸುಮಂತ್

ಜೀ ಕನ್ನಡದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಟಾಪ್‌ನಲ್ಲಿದೆ. ಆಗಾಗ ಏರಿಳಿತವಾದರೂ ಮೊದಲ ಸ್ಥಾನವನ್ನಂತು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಈ ವಾರವೂ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯೇ ಮೊದಲ ಸ್ಥಾನದಲ್ಲಿದೆ. ಅದಕ್ಕೆಲ್ಲಾ ಕಾರಣ ಪುಟ್ಟಕ್ಕನ ಎರಡನೇ ಮಗಳು ಮತ್ತು ಬಂಗಾರಮ್ಮನ ಮಗ.

ಧಾರಾವಾಹಿ ಶುರುವಾದಾಗಿನಿಂದ ಸ್ನೇಹಾ ಮೇಲೆ ಅದೆಷ್ಟು ಹುಡುಗರಿಗೆ ಕ್ರಶ್ ಆಗಿದೆಯೋ ಏನೋ. ಸಿಕ್ಕರೆ ಇಂಥ ಗಟ್ಟಿ, ಧೈರ್ಯ ಇರುವ ಹುಡುಗಿಯೇ ಸಿಗಬೇಕು ಎಂದೇ ಬಯಸುತ್ತಾರೆ. ಕಂಠಿ ಪರಿಚಯವಾದ ಮೇಲಂತು ಮುಗೀತು. ಇಬ್ಬರ ಸ್ನೇಹಾ, ಪ್ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಆ ರೊಮ್ಯಾಂಟಿಕ್ ಜೋಡಿ ನೋಡುವುದಕ್ಕೇನೆ ಸೀರಿಯಲ್ ನೋಡುತ್ತಾರೆ. ಈಗಂತು ದಾವಣಗೆರೆಯ ಹುಡುಗಿಯರು ಕಂಠಿಯನ್ನು ಕಂಡು ಬೆಣ್ಣೆಯಂತೆ ಕರಗಿ ಹೋಗುತ್ತಿದ್ದಾರೆ.

Puttakkana Makkalu In Davanagere

ಜಾತ್ರೆ ಕಲ್ಯಾಣೋತ್ಸವದಲ್ಲಿ 'ಪುಟ್ಟಕ್ಕನ ಮಕ್ಕಳು'

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೊದಲಿನಿಂದ ಕೌಟುಂಬಿಕ ಧಾರಾವಾಹಿ. ಮನೆಯ ಮಂದಿಯೆಲ್ಲಾ ಕೂತು ನೋಡುವ ಧಾರಾವಾಹಿ. ಪುಟ್ಟಕ್ಕನ ಗಂಡ ಬಿಟ್ಟರು, ಧೈರ್ಯವಾಗಿ ಮಕ್ಕಳನ್ನು ಹೇಗೆಲ್ಲಾ ಸಂಭಾಳಿಸುತ್ತಾಳೆ ಎಂಬ ಸ್ಪೂರ್ತಿ ಈ ಧಾರಾವಾಹಿಯಲ್ಲಿ ಸಿಗುತ್ತದೆ. ಜೀ ಕನ್ನಡ ತನ್ನ ಪ್ರೇಕ್ಷಕರಿಗಾಗಿ ಆಗಾಗ ಧಾರಾವಾಹಿ ಹಾಗೂ ಪ್ರೇಕ್ಷಕರ ಸಂಗಮ ಮಾಡಿಸುತ್ತಲೇ ಇರುತ್ತದೆ. ಈಗ ದಾವಣಗೆರೆಯಲ್ಲಿ ಜಾತ್ರೆ ಕಲ್ಯಾಣೋತ್ಸವ ನಡೆದಿದೆ. ಅದರಲ್ಲಿ ಪುಟ್ಟಕ್ಕನ ಮಕ್ಕಳು ಟೀಂ ಕೂಡ ಭಾಗಿಯಾಗಿದೆ.

ವೇದಿಕೆಯಲ್ಲಿ ಕುಣಿದ ಸ್ನೇಹಾ -ಕಂಠಿ

ಜಾತ್ರೆ ಕಲ್ಯಾಣೋತ್ಸವದಲ್ಲಿ 'ಪುಟ್ಟಕ್ಕನ ಮಕ್ಕಳು' ಫುಲ್ ಮಸ್ತಿ ಮಾಡಿದ್ದಾರೆ. ಡ್ಯಾನ್ಸ್ ಮಾಡಿ, ದಾವಣಗೆರೆಯ ಮಂದಿಯನ್ನು ಮನರಂಜಿಸಿದ್ದಾರೆ. ಅದರಲ್ಲೂ ಕಂಠಿ - ಸ್ನೇಹಾ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ. ಕನಸಲೂ ನೂರು ಬಾರಿ ಹಾಡಿಗೆ ಇಬ್ಬರು ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಇಬ್ಬರ ಹಾಡಿಗೆ ದಾವಣಗೆರೆ ಮಂದಿ, ಶಿಳ್ಳೆ, ಚಪ್ಪಾಳೆ ಹೊಡೆದು ಎಂಜಾಯ್ ಮಾಡಿದ್ದಾರೆ.

Puttakkana Makkalu In Davanagere

ಸ್ನೇಹಾಗೆ ಪ್ರಪೋಸ್ ಮಾಡಿದ ಮಂಡ್ಯದ ಗಂಡು

ಕಂಠಿ ,ಸ್ನೇಹಾಳಿಗೆ ಪ್ರಪೋಸ್ ಮಾಡುವ ರೀತಿಯೇ ಬೇರೆ. ಅದನ್ನೇ ವಿಶೇಷವಾಗಿ ಫೀಲ್ ಮಾಡುತ್ತಾನೆ. ಫಸ್ಟ್ ಟೈಮ್ ಪ್ರಪೋಸ್ ಮಾಡಿದಾಗಲೇ ಎಲ್ಲಾ ಕಡೆ ಅಲಂಕಾರ ಮಾಡಿ, ಅವಳ ಬ್ಯಾನರ್ ಹಾಕಿ, ಪ್ರಪೋಸ್ ಮಾಡಿದ್ದ. ಈಗ ದಾವಣಗೆರೆ ಮಂದಿ ಮುಂದೆಯೂ ಸೀರೆ ಕೊಟ್ಟು, ಮಂಡಿಯೂರಿ, ನನ್ನ ಮನಸ್ಸೊಳಗೆ ಬಲಗಾಲಿಟ್ಟು, ನಮ್ಮವ್ವನ ಸೊಸೆಯಾಗಿ ಬರ್ತೀರಾ ಮೆಸ್ಸು ಎಂದಿದ್ದಾರೆ. ಆಗ ಸ್ನೇಹಾ, ಈಗ ಪ್ರೀತಿ ಪಡೆಯೋದಕ್ಕೆ ಸಾಕಷ್ಟು ಕಷ್ಟ ಪಡಬೇಕು ಎಂದು ಹೇಳಿದ್ದಾರೆ. ಮತ್ತೆ ಆ ಪ್ರೀತಿ ಪಡೆಯೋದು ಅಷ್ಟು ಸುಲಭವಲ್ಲ ಅನ್ನೋದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ದಾವಣಗೆರೆ ಹುಡುಗಿಯರಿಂದ ಕಂಠಿಗೆ ಡಿಮ್ಯಾಂಡ್

ಕಂಠಿಗೆ ಅಭಿಮಾನಿಗಳ ಬಳಗ ಕಡಿಮೆ ಏನು ಇಲ್ಲ. ಅವರ ಸೋಷಿಯಲ್ ಮೀಡಿಯಾದಲ್ಲೂ ಆ ಕ್ರೇಜ್ ಕಾಣಿಸುತ್ತದೆ. ಇವತ್ತು ದಾವಣಗೆರೆಯ ಮಂದಿ ಕೈಗೆ ಸಿಕ್ಕಿದ್ದಾರೆ. ಧನುಷ್‌ನ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಧಾರಾವಾಹಿಯಲ್ಲಿ ನೋಡಿದ ಕಂಠಿಗಿಂತ ಬೇರೆ ಕಂಠಿಯನ್ನೇ ನಿರೀಕ್ಷೆ ಮಾಡುತ್ತಿದ್ದಾರೆ. ಅದರಲ್ಲೂ ಕಂಠಿ, ಫಾರ್ಮಲ್ ಡ್ರೆಸ್, ಜೀನ್ಸ್, ಸೂಟ್ ಹಾಕಬೇಕು ಎಂಬ ಡಿಮ್ಯಾಂಡ್ ಇಟ್ಟಿದ್ದಾರೆ. ಇದಕ್ಕೆ ಕಂಠಿ ಕೂಡ ಓಕೆ ಎಂದಿದ್ದಾರೆ. ಮೂರು ಡ್ರೆಸ್ ಗಳಿಗೆ ಒಕೆ ಮಾಡಿದ್ದಾರೆ. ಯಾರ್ಯಾರ ಡ್ರೆಸ್ ಕಂಠಿಗೆ ಇಷ್ಟವಾಯ್ತೋ, ಆ ಮೂವರು ಹುಡುಗಿಯರ ಜೊತೆಗೆ ಡ್ಯಾನ್ಸ್ ಮಾಡಿ, ಖುಷಿ ಪಡಿಸಿದ್ದಾರೆ.

More from Filmibeat

English summary
Top Kannada Serial Puttakkana Makkalu Team Davanagere visit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X