Puttakkana Makkalu: ವಿನುತಳನ್ನು ಮದುವೆ ಆಗುತ್ತೇನೆ ಎಂದ ಮುರಳಿ; ಕಂಠಿ ಕೆಂಡಾಮಂಡಲ

By Poorva

ಸಹನಾ ಡಿವೋರ್ಸ್ ನೋಟಿಸ್ ಕಳುಹಿಸಿರುವ ವಿಚಾರ ಪುಟ್ಟಕ್ಕನಿಗೆ ತಿಳಿದು ಹೋಗಿದೆ. ಆಕೆ ಸಹನಾ ಬಳಿಗೆ ಬಂದು ಯಾಕೆ ಇಂತಹ ಕೆಲಸ ಮಾಡಿದೆ? ಅಳಿಯಂದಿರ ಜೊತೆ ಬಾಳಿ ಬದುಕಬೇಕಾದವಳು ನೀನು, ನೀವಿಬ್ಬರು ಪ್ರೀತಿ ಮಾಡಿ ಮದುವೆಯಾಗಿರುವವರು, ನೀವೇ ಈ ರೀತಿ ದುಡುಕಿ ನಿರ್ಧಾರವನ್ನು ತೆಗೆದುಕೊಂಡರೆ ಸರಿಯೇ? ಎಂದು ಕೇಳುತ್ತಾಳೆ.

ಎಲ್ಲರ ಮನೆಯಲ್ಲೂ ಕೋಪ ಮನಸ್ತಾಪ ಇದ್ದಿದ್ದೆ. ಆದರೆ ಅದೆಲ್ಲವನ್ನ ಪಕ್ಕಕ್ಕಿಟ್ಟು ಸಂಸಾರ ಎಂಬ ಬಂಧನದಲ್ಲಿ ಮುಂದುವರೆಯಬೇಕು. ತನ್ನ ಗಂಡನಿಗಾಗಿ ಅದೆಂತಹ ತ್ಯಾಗ ಮಾಡಲು ಕೂಡ ಮುಂದಾಗಬೇಕು ಎಂದು ಸಹನಾ ಮನವೊಲಿಸಲು ಪುಟ್ಟಕ್ಕ ಕಸರತ್ತು ಮಾಡುತ್ತಾಳೆ.

Puttakkana makkalu kannada serial written 23rd April episode

ಸಹನಾಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ತನ್ನ ಗಂಡನ ಜೊತೆ ಬದುಕಿ ಬಾಳಲು ಆಗದೇ ನಾನು ಒಬ್ಬೊಂಟಿಯಾಗಿಯೇ ಜೀವನ ಮಾಡಬೇಕು ಎನ್ನುವ ಆಸೆಯಲ್ಲಿ ಇರುತ್ತಾಳೆ. ಮನೆಯವರು ಒತ್ತಾಯ ಮಾಡಿದರು ಕೂಡ ಸಹನಾ ಮಾತ್ರ ತಾನು ಮಾತ್ರ ಮುರಳಿಯಂತಹ ಗಂಡನ ಜೊತೆ ಮದುವೆ ಬಾಳುವುದು ಇಲ್ಲ ಎಂದು ಡಿಸೈಡ್ ಮಾಡಿ ಇರುತ್ತಾಳೆ. ಇತ್ತ ಮುರಳಿ ಕೂಡ ತಾನು ಸಹನಾ ಜೊತೆ ಇನ್ನೂ ಮೇಲೆ ಜೀವನ ನಡೆಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ.

ಪತ್ನಿ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಕೊಡಬೇಕು ಎನ್ನುವ ಆಲೋಚನೆಯಲ್ಲಿ ಮುರಳಿ ಇರುತ್ತಾನೆ. ಆತನಿಗೆ ತನ್ನ ತಾಯಿ ತಪ್ಪು ಮಾಡಿದ್ದಾರೆ, ಅದಕ್ಕಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎನ್ನುವ ಆಲೋಚನೆ ಸ್ವಲ್ಪ ಕೂಡ ಇರುವುದಿಲ್ಲ. ಆತನ ಪ್ರಕಾರ ತನ್ನ ತಾಯಿ ಯಾವುದೇ ರೀತಿಯಲ್ಲಿ ಕೂಡ ತಪ್ಪು ಮಾಡಿಲ್ಲ. ಆಕೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ ಎಂದು ಹೇಳುತ್ತಾನೆ. ಮುರಳಿ ಅದಕ್ಕಾಗಿ ಸಹನಾಗೆ ಡಿವೋರ್ಸ್ ನೋಟಿಸ್ ಕಳುಹಿಸುತ್ತಾನೆ. ಸಹನಾ ಜೊತೆ ಇನ್ನೂ ಮೇಲೆ ನಾನು ಬದುಕುವುದು ಇಲ್ಲ. ಆಕೆಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳಲಿ. ನಾನು ಆ ಬಗ್ಗೆ ಏನು ಚಿಂತೆ ಮಾಡುವುದು ಇಲ್ಲ ಎಂದು ಕೊಂಡು ಡಿವೋರ್ಸ್ ನೋಟಿಸ್ ಅನ್ನು ಕಳುಹಿಸುತ್ತಾನೆ.

Puttakkana makkalu kannada serial written 23rd April episode

ಡೈವರ್ಸ್ ನೋಟಿಸ್‌ಗೆ ಸುಮಾ ಶಾಕ್

ಪುಟ್ಟಕ್ಕನ ಮನೆಗೆ ಬಂದ ಪೋಸ್ಟ್ ಮ್ಯಾನ್ ಪೋಸ್ಟ್ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸುಮಾ ಓಡೋಡಿ ಬಂದು ಅವರ ಕೈಯಲ್ಲಿ ಇದ್ದ ಪೋಸ್ಟ್ ಅನ್ನು ತೆಗೆದುಕೊಂಡು ಓದಲು ಶುರು ಮಾಡಿದಾಗ ಆಕೆಗೆ ಶಾಕ್ ಆಗುತ್ತದೆ . ಅಮ್ಮನ ಬಳಿ ಬಂದ ಸುಮಾ ಹೇಳುತ್ತಾಳೆ. ಅಮ್ಮ ಮುರಳಿ ಭಾವ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಹನಾಗೆ ಯಾವುದೇ ಆಘಾತ ಆಗುವುದಿಲ್ಲ.

ಸಹನಾ ಮನದಲ್ಲಿ ದೃಢ ನಿರ್ಧಾರ

ಸಹನಾಗೆ ತಾನು ಮಾಡಿದ್ದೆ ಸರಿ ಎನ್ನುವುದು ಇರುತ್ತದೆ. ಆದರೆ ಮುರಳಿ ತೆಗೆದುಕೊಂಡಿರುವ ನಿರ್ಧಾರವನ್ನು ಸ್ನೇಹಾ ಹಾಗೆಯೇ ಕಂಠಿ ಪ್ರಶ್ನೆ ಮಾಡುತ್ತಿದ್ದಾರೆ. ಸ್ನೇಹಾಗೆ ತನ್ನ ಅಕ್ಕ ಹಾಗೂ ಬಾವನ ಜೀವನ ಚೆನ್ನಾಗಿ ಇರಬೇಕು ಎನ್ನುವ ಹಂಬಲ . ಅದಕ್ಕಾಗಿ ತನ್ನ ಗಂಡನನ್ನು ಕರೆದುಕೊಂಡು ಮುರಳಿ ಇರುವಲ್ಲಿಗೆ ಹೋಗುತ್ತಾಳೆ. ಆ ಬಳಿಕ ಮುರಳಿ ಮಾಡುತ್ತಿರುವ ತಪ್ಪಿನ ಬಗ್ಗೆ ವಿಸ್ತೃತವಾಗಿ ಹೇಳುತ್ತಾರೆ. ಆದರೆ ಮುರಳಿ ತನ್ನದು ತಪ್ಪಿದ್ದರೂ ತನ್ನದೇನು ತಪ್ಪಿಲ್ಲ ಎನ್ನುವಂತೆ ಇರುತ್ತಾನೆ. ಕೊನೆಗೆ ನಾನು ವಿನುತ ಅವರನ್ನು ಮದುವೆ ಆಗಿ ಚೆನ್ನಾಗಿ ಇರುತ್ತೇನೆ ಎನ್ನುತ್ತಾನೆ.

ಮುರಳಿ ಮಾತಿಗೆ ಕೋಪಗೊಂಡ ಕಂಠಿ

ಯಾರು ಏನು ಬೇಕಾದರೂ ಹೇಳಲಿ ನಾನು ಯಾವುದಕ್ಕೂ ಕ್ಯಾರೆ ಮಾಡುವುದು ಇಲ್ಲ ಎಂದು ಮುರಳಿ ಹೇಳಿದಾಗ ಕಂಠಿಗೆ ಮತ್ತಷ್ಟು ಕೋಪ ಬರುತ್ತದೆ. ಮುರಳಿ ಕಾಲರ್ ಪಟ್ಟಿ ಹಿಡಿಯಲು ಮುಂದೆ ಬರುತ್ತಾನೆ. ಆದರೆ ವಿನುತಗೆ ಮುರಳಿ ಮಾತು ಕೇಳಿ ಮತ್ತಷ್ಟು ಖುಷಿ ಆಗುತ್ತದೆ.

More from Filmibeat

English summary
Puttakkana makkalu kannada serial today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X