Puttakkana makkalu: ಬಯಲಾಯಿತು ರಾಧಾ ಸಂಚು; ನಂಜಮ್ಮನಿಗೆ ಪಾಠ ಕಲಿಸುತ್ತಾಳಾ ಸ್ನೇಹಾ?

By Poorva

ಪುಟ್ಟಕ್ಕ ಸದಾ ತನ್ನ ಮಕ್ಕಳ ಒಳಿತಿಗಾಗಿ ತನ್ನ ಜೀವ ಹಾಗೂ ಜೀವನವನ್ನು ಮುಡಿಪಾಗಿ ಇಟ್ಟಿದ್ದಾಳೆ. ಇದೀಗ ಸುಮಾಗೆ ಪೇರೆಂಟ್ಸ್ ಮೀಟಿಂಗ್ ಕಾಲೇಜಿನಲ್ಲಿ ಇರುತ್ತದೆ. ತಂದೆ ತಾಯಿಯನ್ನು ಕಾಲೇಜಿಗೆ ಕರೆದು ಮಕ್ಕಳ ಓದಿನ ಬಗ್ಗೆ ತಂದೆ ತಾಯಿಗೆ ತಿಳಿಸುತ್ತಾರೆ. ಇದಕ್ಕೆ ತಂದೆ ಹಾಗೂ ತಾಯಿ ಇಬ್ಬರನ್ನೂ ಸುಮಾ ಕಾಲೇಜಿಗೆ ಕರೆದುಕೊಂಡು ಹೋಗುತ್ತಾಳೆ.

ಕಾಲೇಜು ನೋಡಿದ ಪುಟ್ಟಕ್ಕ ಬಹಳ ಖುಷಿ ಪಡುತ್ತಾಳೆ. ಅಬ್ಬಾ ಎಂಥ ಒಳ್ಳೆಯ ಕಾಲೇಜಿನಲ್ಲಿ ಮಗಳು ವಿದ್ಯಾಭ್ಯಾಸ ಮಾಡುತ್ತಾ ಇದ್ದಾಳೆ ಎಂದು ಬಹಳ ಖುಷಿ ಆಗುತ್ತದೆ. ಗೋಪಾಲ ಮಾತ್ರ ಸಹನಾ ಮನೆ ಇಲ್ಲಿಯೇ ಇರುವುದು ಅಲ್ವಾ ಎಲ್ಲಿ ಬರುತ್ತದೆ ಎಂದಾಗ ಸುಮಾ ಮಾತ್ರ ತಂದೆಗೆ ತಿರುಗೇಟು ಕೊಡುತ್ತಾಳೆ.

Puttakkana makkalu kannada serial written 26th February episode

ಸಹನಾ ಅಕ್ಕನ ಮನೆ ಯಾಕೆ ಈಗ ಎಂದು ಹೇಳುತ್ತಿರುವಾಗ ಪುರುಷೋತ್ತಮ ಕೂಡ ತಂದೆಯ ಬಳಿ ಮಾತನಾಡಲು ಓಡೋಡಿ ಬರುತ್ತಾನೆ. ಇನ್ನೂ ಪುಟ್ಟಕ್ಕಗೆ ಬಹಳ ಆಯಾಸ ಆಗುತ್ತದೆ. ದೂರದ ಊರಿಗೆ ಪ್ರಯಾಣ ಮಾಡಿದ ಪುಟ್ಟಕ್ಕಗೆ ಕೊಂಚ ದಣಿವು ಆಗುತ್ತದೆ. ಇದನ್ನು ಅರಿತ ಗೋಪಾಲ, ಆಕೆಗೆ ಸಮಾಧಾನ ಮಾಡುತ್ತಾನೆ. ಹಾಗೆ ಕುಡಿಯಲು ನೀರು ಕೊಡುತ್ತಾನೆ. ಬಳಿಕ ಬಾ ಪುಟ್ಟಮ್ಮಿ ನಿನ್ನ ಕೈ ಹಿಡಿದುಕೊಂಡು ನಾನು ನಡೆಸುತ್ತೇನೆ ಎಂದು ಹೇಳಿ ಸುಮಾ ಕಾಲೇಜಿಗೆ ಕರೆದುಕೊಂಡು ಹೋಗುತ್ತಾನೆ. ಇದನ್ನೆಲ್ಲ ವಿಡಿಯೋ ಮಾಡುತ್ತಾ ಇರುತ್ತಾಳೆ ಶಿವಾನಿ.

ಶಿವಾನಿಗೆ ಸುಮಾ ಅಂದರೆ ಬಹಳ ಕೋಪ. ಅದಕ್ಕಾಗಿ ಏನಾದರು ಸೇಡು ತೀರಿಸಿಕೊಳ್ಳುತ್ತಾಳೆ ಏನೋ ಎನ್ನುವುದು ಆಕೆಗೆ ಇರುವ ಗೊಂದಲ. ಇನ್ನು ಸ್ನೇಹಾ ದೇವಾಲಯಕ್ಕೆ ಹೋಗಿ ಬಹಳ ಖುಷಿಯಿಂದ ಮನೆಗೆ ಬರುತ್ತಾಳೆ. ರಾಧ ಜೀವನ ಇದೀಗ ನನ್ನಿಂದ ಆಗಿ ಚೂರು ಚೂರು ಆಗಿ ಹೋಗಿದೆ ಎಂದು ಆಕೆಗೆ ನೋವು ಇರುತ್ತದೆ. ಇದಕ್ಕಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿರುತ್ತಾಳೆ. ಪ್ರಸಾದ ಕೊಡಲು ರಾಧಾ ಎಲ್ಲಿದ್ದಾಳೆ ಎಂದು ಶಶಿಕಲಾ ಬಳಿ ಕೇಳುತ್ತಾ ಇರುತ್ತಾಳೆ.

Puttakkana makkalu kannada serial written 26th February episode

ರಾಧ ಹೆಸರಿನಲ್ಲಿ ಪೂಜೆ ಮಾಡಿಸಿದ ಸ್ನೇಹಾ

ರಾಧಾ ರೂಮ್‌ನಲ್ಲಿ ಇದ್ದಾಳೆ ಯಾಕೆ ಎಂಬ ಪ್ರಶ್ನೆ ಕೂಡ ಶಶಿಕಲಾ ಕೇಳಿದಾಗ ಸ್ನೇಹಾ ಹೇಳುತ್ತಾಳೆ ರಾಧನ ಹೆಸರಿನಲ್ಲಿ ಪೂಜೆ ಮಾಡಿಸಿ ಬಿಟ್ಟಿದ್ದೇನೆ. ಅವಳಿಗೆ ಪ್ರಸಾದ ಕೊಡಬೇಕು ಎಂದು ಹೇಳಿದಾಗ, ರಾಧಾ ರೂಮ್‌ನಲ್ಲಿ ಇದ್ದಾಳೆ ಎಂದು ಹೇಳುತ್ತಾರೆ. ಇನ್ನು ರಾಧಾ ಮುಖಕ್ಕೆ ಫೇಸ್ ಮಾಸ್ಕ್ ಹಾಕಿ ಇರುತ್ತಾಳೆ. ಆ ವೇಳೆ ಸ್ನೇಹಾ, ರಾಧಾ ರೂಮ್‌ಗೆ ಹೋದ ತಕ್ಷಣ ನಂಜಮ್ಮ ರಾಧಾಗೆ ಕರೆ ಮಾಡುತ್ತಾಳೆ.

ನಂಜಮ್ಮನ ಧ್ವನಿ ಕೇಳಿ ಸ್ನೇಹಾ ಶಾಕ್

ರಾಧಾ ತನ್ನ ಹತ್ತಿರ ಬಂದಿದ್ದು ಶಶಿಕಲಾ ಎಂದು ತಿಳಿದು ಅಮ್ಮ ಗಟ್ಟಿ ಧ್ವನಿಯಲ್ಲಿ ಇರು ನಂಜಮ್ಮ ಕರೆ ಮಾಡಿ ಇರಬೇಕು ಎಂದು ಹೇಳಿದಾಗ ಸ್ನೇಹಾಗೆ ಕೋಪ ಬರುತ್ತದೆ. ಹಾಗೆಯೇ ಆಕೆ ಏನು ಹೇಳಿದಳೋ ಅದನ್ನೇ ಮಾಡುತ್ತಾರೆ. ನಂಜಮ್ಮ ಅತ್ತ ಕಡೆಯಿಂದ ಏನಮ್ಮಾ ರಾಧಾ ಹೇಗಿದ್ದೀಯಾ? ನೀನು ನನಗೆ ವಸು ವಿಚಾರ ಹೇಳಿದ್ದು ಯಾರಿಗೂ ಗೊತ್ತಿಲ್ಲ ತಾನೇ ಎಂದು ಕೇಳುತ್ತಾಳೆ. ಇದನ್ನೆಲ್ಲ ಕೇಳಿದ ರಾಧಾ ಹೇಳುತ್ತಾಳೆ ನನ್ನ ಮೇಲೆ ಸ್ನೇಹಾಗೆ ಡೌಟ್ ಬಂದಿತ್ತು. ಆದರೆ ನಾನು ಅತ್ತು ಕರೆದು ರಂಪ ಮಾಡಿ ಬಿಟ್ಟೆ. ಆದ ಕಾರಣ ಸ್ನೇಹಾಗೆ ನನ್ನ ಮೇಲೆ ಡೌಟ್ ಬಂದಿಲ್ಲ ಎನ್ನುತ್ತಾಳೆ.

ರಾಧಾ ಮಾತಿಗೆ ಸೊಪ್ಪು ಹಾಕಿದ ನಂಜಮ್ಮ

ಅದಕ್ಕೆ ನಂಜಮ್ಮ, ಸ್ನೇಹಾ ಬಹಳ ಡೇಂಜರ್. ಆಕೆಗೆ ಖಂಡಿತ ಈ ವಿಚಾರ ಎಲ್ಲಾ ತಿಳಿಯಬಹುದು. ನೀವು ಬಹಳ ಜಾಗೃತರಾಗಿ ಎಂದಾಗ ಹೊರಗಡೆಯಿಂದ ಶಶಿಕಲಾ ಅಮ್ಮ ರಾಧಾ ಎಂದು ಜೋರಾಗಿ ಕರೆಯುತ್ತಾಳೆ. ರಾಧಾಗೆ ಶಾಕ್ ಆಗುತ್ತದೆ. ಅಮ್ಮ ಹೊರಗಡೆಯಿಂದ ಈಗ ಬಂದರೆ ನನ್ನ ರೂಮ್ ಒಳಗೆ ಇರುವವರು ಯಾರು ಎಂದು ಮುಖಕ್ಕೆ ಹಾಕಿದ್ದ ಮಾಸ್ಕ್ ತೆಗೆದು ನೋಡುತ್ತಾಳೆ. ಆಗ ಅಲ್ಲಿ ನಿಂತಿದ್ದ ಸ್ನೇಹಾ ನೋಡಿ ಕಕ್ಕಾಬಿಕ್ಕಿ ಆಗುತ್ತಾಳೆ. ನಂಜಮ್ಮಗೆ ಮಾತ್ರ ಸ್ನೇಹಾ ತರಾಟೆಗೆ ತೆಗೆದುಕೊಂಡು ಬಹಳ ಜೋರಾಗಿ ವಾರ್ನಿಂಗ್ ಮಾಡುತ್ತಾಳೆ.

More from Filmibeat

English summary
Puttakkana makkalu kannada serial written 26th February episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X