Puttakkana makkalu: ಸುಮಾಗೆ ಕಾಲೇಜಿನಲ್ಲಿ ಅವಮಾನ; ಪುಟ್ಟಕ್ಕ ಶಾಕ್

By Poorva

ಸುಮಾ ಕಾಲೇಜಿನಲ್ಲಿ ಯಾವತ್ತೂ ಕ್ಲಾಸ್‌ಗೆ ಫಸ್ಟ್ ಬರುವವಳು. ಹಾರ್ಡ್ ವರ್ಕರ್ ಕೂಡ. ಅಂತಹ ಹುಡುಗಿಯ ಜೀವನದಲ್ಲಿ ಚೆಲ್ಲಾಟ ಆಡಲು ಶಿವಾನಿ ಹಾಗೂ ರಾಜೀ ಹೊರಟಿದ್ದಾರೆ. ಯಾವುದೋ ಒಂದು ಸಣ್ಣ ಕೋಪ ಇದೀಗ ದ್ವೇಷಕ್ಕೆ ತಿರುಗಿದೆ.

ಪುರುಷೋತ್ತಮ ಶಿವಾಜಿಯ ಹಿಂದೆ ಮುಂದೆ ಅಲೆಯುತ್ತಾ ಆಕೆಗೆ ಗಿಫ್ಟ್ ಕೊಡಿಸುತ್ತ ಇರುತ್ತಾನೆ. ಆತನಿಗೆ ನನ್ನ ಜೀವದ ಗೆಳತಿ ಶಿವಾನಿ ಇನ್ನೊಂದು ಮುಖ ತಿಳಿದಿರುವುದು ಇಲ್ಲ. ಯಾಕೆಂದರೆ ಆತ ಅಷ್ಟೊಂದು ಮುಗ್ಧ ಆಗಿರುತ್ತಾನೆ. ಸುಮಾಗೆ ಎಲ್ಲರ ಬಗ್ಗೆಯೂ ಕೂಡ ತಿಳಿದಿದೆ.

Puttakkana makkalu Kannada serial written 28th February episode

ಪುರುಷೋತ್ತಮನ ಬಳಿ ಶಿವಾನಿಯಿಂದ ದೂರ ಇರು ಎಂದು ವಾರ್ನಿಂಗ್ ಕೂಡ ಮಾಡಿ ಇರುತ್ತಾಳೆ. ಆದರೆ ಪುರುಷೋತ್ತಮ ಮಾತ್ರ ನನ್ನ ಶಿವಾನಿ ಆ ರೀತಿಯವಳು ಅಲ್ಲ, ಆಕೆ ಬಹಳ ಒಳ್ಳೆಯವಳು ಎಂದುಕೊಂಡು ಇರುತ್ತಾನೆ. ಇನ್ನೂ ಶಿವಾನಿ ಸುಮಾ ವಿಚಾರದಲ್ಲಿ ಮಾಡಿದ ಕೆಲಸಕ್ಕೆ ಬಹುಶಃ ಆಕೆಗೆ ಕ್ಷಮೆ ಅನ್ನುವುದೇ ಇಲ್ಲ ಅನ್ನಿಸುತ್ತದೆ. ಸುಮಾ ಪರೀಕ್ಷೆಗೆ ಬಹಳ ಚೆನ್ನಾಗಿ ಓದುವವಳು ಹಾಗೆಯೇ ಟಾಪರ್ ಬೇರೆ.

ಸುಮಾಗೆ ಗುರುಗಳು ಪರೀಕ್ಷೆ ಪೇಪರ್ ಕೊಡಬೇಕಾದರೆ ಸುಮಾ ಇದನ್ನು ನಾನು ನಿನ್ನ ಬಳಿ ನಿರೀಕ್ಷೆ ಮಾಡಿ ಇರಲಿಲ್ಲ ಎಂದು ಹೇಳುತ್ತಾರೆ. ಗುರುಗಳ ಮಾತು ಕೇಳಿದ ಸುಮಾ ಕಕ್ಕಾಬಿಕ್ಕಿ ಆಗುತ್ತಾಳೆ. ಯಾಕೆ ಹೀಗೆ ಹೇಳುತ್ತ ಇರಬಹುದು? ಹೀಗೆ ಹೇಳಲು ಕಾರಣ ಆದರೂ ಏನು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಗೋಪಾಲ ಮಾತ್ರ ಖುಷಿಯಿಂದ ಹೇಳುತ್ತಾನೆ. ನನ್ನ ಸುಮಾ ಯಾವತ್ತೂ ಕ್ಲಾಸ್‌ನಲ್ಲಿ ಟಾಪರ್ ಬರುತ್ತಾಳೆ. ಆದ ಕಾರಣ ನೀವು ಹಾಗೆ ಹೇಳುತ್ತ ಇದ್ದೀರಾ ಎಂದು ಖುಷಿಯಲ್ಲಿ ಹೇಳುತ್ತಾನೆ. ಆದರೆ ಗುರುಗಳು ಹೇಳಿದ ಮಾತು ಕೇಳಿ ಮನೆ ಮಂದಿ ಎಲ್ಲಾ ಶಾಕ್ ಆಗುತ್ತಾರೆ.

Puttakkana makkalu Kannada serial written 28th February episode

ಗುರುಗಳ ಮಾತಿಗೆ ಸುಮಾ ಶಾಕ್

ಸುಮಾ ಒಂದು ಸಬ್ಜೆಕ್ಟ್‌ನಲ್ಲಿ ಫೈಲ್ ಆಗಿರುತ್ತಾಳೆ. ಇದನ್ನು ಕೇಳಿದ ಸುಮಾಗೆ ಶಾಕ್ ಆಗುತ್ತದೆ. ಆನ್ಸರ್ ಎಲ್ಲ ಸರಿಯಾಗಿ ಬರೆದಿದ್ದೇನೆ, ಆದರೂ ಅದು ಹೇಗೆ ಫೇಲ್ ಎಂದು ಹೇಳಿದರು? ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಶಿವಾನಿ ಮಾಡಿದ ತಪ್ಪು ಕೆಲಸದಿಂದ ಸುಮಾ ತಲೆ ತಗ್ಗಿಸುವ ಹಾಗೆ ಆಯಿತು. ಶಿವಾನಿ ಉತ್ತರ ಪತ್ರಿಕೆಯನ್ನು ಬದಲಾಯಿಸಿ ಇರುವುದೇ ಇಂತಹ ದೊಡ್ಡ ಯಡವಟ್ಟಿಗೆ ಕಾರಣ ಆಯಿತು. ಯಾರಿಗೂ ತಿಳಿಯದ ಹಾಗೆ ರಾತ್ರಿ ವೇಳೆ ಕಾಲೇಜಿಗೆ ನುಗ್ಗಿ ಉತ್ತರ ಪತ್ರಿಕೆ ಬದಲಾಯಿಸಿ ಬಿಡುತ್ತಾಳೆ ಶಿವಾನಿ.

ಸುಮಾ ಜೀವನದಲ್ಲಿ ಚೆಲ್ಲಾಟ ಶಿವಾನಿ ಚೆಲ್ಲಾಟ

ಸುಮಾಗೆ ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾಳೆ. ಆ ವೇಳೆ ರಾಜೇಶ್ವರಿ, ಸುಮಾಳನ್ನು ನೋಡಿ ಅಣಕವಾಡುತ್ತಾಳೆ. ನಿನ್ನ ದೊಡ್ಡ ಅಕ್ಕ ನನ್ನ ತಮ್ಮನ ತಲೆ ಕೆಡಿಸಿ ಬಿಟ್ಟಳು. ನಿನ್ನ ಚಿಕ್ಕ ಅಕ್ಕ ಗರ್ಭಿಣಿ ಎಂದು ಸುಳ್ಳು ಹೇಳಿಕೊಂಡು ತಿರುಗಾಡಿದಳು. ಇನ್ನೂ ನೀನು ಯಾರನ್ನಾದರೂ ಕಟ್ಟಿಕೊಂಡು ಓಡಿ ಹೋಗುವ ಮುನ್ನ ನಿನ್ನ ತಾಯಿ ನಿನಗೆ ಒಂದು ಮದುವೆ ಮಾಡಲಿ ಎಂದಾಗ ಗೋಪಾಲಗೆ ಬಹಳ ಕೋಪ ಬರುತ್ತದೆ. ಆತ ರಾಜೀ ಮೇಲೆ ಕೈ ಎತ್ತಲು ಹೋಗುತ್ತಾನೆ. ಇದನ್ನು ನೋಡಿ ಪುಟ್ಟಕ್ಕ ತಡೆಯುತ್ತಾಳೆ.

ಶಿವಾನಿ ಬಳಿ ಪುಟ್ಟಕ್ಕ ಮನವಿ

ಬಳಿಕ ಶಿವಾನಿ ಬಳಿ ಬಂದು ಪುಟ್ಟಕ್ಕ ಹೇಳುತ್ತಾಳೆ. ಸುಮಾ ಯಾವತ್ತೂ ಕಾಲೇಜಿನಲ್ಲಿ ಪ್ರಥಮ ಸ್ಥಾನ ಬರುತ್ತಾ ಇದ್ದಳು. ಆದರೆ ಇಷ್ಟು ಕಡಿಮೆ ಅಂಕ ತೆಗೆದಿದ್ದು ನಾನು ನೋಡಿಯೇ ಇಲ್ಲ ಆದ ಕಾರಣ ನೀನು ಏನಾದರು ಮಾಡಿದ್ದರೆ ಅದನ್ನು ಹೇಳಿ ಬಿಡು ನಾನು ತೃಪ್ತಿಯಿಂದ ಇಲ್ಲಿಂದ ಹೊರಟು ಹೋಗುತ್ತೇನೆ ಎಂದು ಹೇಳುತ್ತಾಳೆ. ಈ ಮಾತು ಕೇಳಿದ ಶಿವಾನಿ ಮಾತ್ರ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ಇಲ್ಲ. ಕೊನೆಗೆ ಪುಟ್ಟಕ್ಕ ಕಾಲೇಜಿನಿಂದ ಮನೆಗೆ ತೆರಳುತ್ತಾಳೆ.

More from Filmibeat

English summary
Puttakkana makkalu Kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X