Puttakkana makkalu: ಕೌಸಲ್ಯಗೆ ಪುಟ್ಟಕ್ಕ ಕಪಾಳಮೋಕ್ಷ; ಇನ್ನಾದರೂ ಬುದ್ದಿ ಕಲಿಯುತ್ತಾಳಾ?

By Poorva

ಸಹನಾ ತಿನ್ನೋ ಅನ್ನಕ್ಕೆ ವಿಷ ಬೆರೆಸಿದ ಕಿರಾತಕಿ ಕೌಸಲ್ಯ. ತನ್ನ ಅಳಿಯನ ಜೊತೆ ಸೇರಿಕೊಂಡು ತಾನು ಏನು ಕೆಲಸ ಮಾಡುತ್ತಿದ್ದೇನೆ ಎನ್ನುವ ಪರಿಜ್ಞಾನವೇ ಇಲ್ಲದೆ ತನ್ನ ಸೊಸೆಯ ಜೀವವನ್ನು ತೆಗೆದು ಬಿಡಲು ಹುನ್ನಾರ ಮಾಡುತ್ತಿದ್ದಾಳೆ. ಆದರೆ ಸಹನಾ ಅದೃಷ್ಟ ಚೆನ್ನಾಗಿತ್ತು.

ಮಗಳು ಹೇಗಿದ್ದಾಳೆ ಎಂದು ವಿಚಾರಿಸಲು ಗೋಪಾಲ ಬಂದರೆ ಆಕೆ ವಿಷ ಕಕ್ಕುತ್ತ ಮಲಗುತ್ತಾಳೆ. ಹೇಗಾದರೂ ಮಾಡಿ ಗೋಪಾಲ ಮಗಳನ್ನು ಆಸ್ಪತ್ರೆಗೆ ದಾಖಲು ಮಾಡುತ್ತಾನೆ. ಹಾಗೆಯೇ ಕೊಂಚ ಧೈರ್ಯದ ಮಾತುಗಳನ್ನು ಹೇಳುತ್ತಾನೆ. ಪುಟ್ಟಕ್ಕಗೆ ವಿಷಯ ಮುಟ್ಟುತ್ತದೆ. ಪುಟ್ಟಕ್ಕ ತನ್ನ ಮಗಳಿಗೆ ಹೀಗೆ ಆಗಿಬಿಟ್ಟಿತಲ್ಲ ಎಂದು ಶಾಕ್ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಮಾಡುತ್ತಿರುವ ಕೆಲಸ ಬಿಟ್ಟು ಮಗಳನ್ನು ನೋಡಲು ಆಸ್ಪತ್ರೆಗೆ ಓಡುತ್ತಾಳೆ.

Puttakkana makkalu kannada serial written on 15th March

ಕಂಠಿಗೆ ವಸು ಕರೆ ಮಾಡಿ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ಆಗ ಅಲ್ಲಿಯೇ ಇದ್ದ ಸ್ನೇಹಾ ಕಂಠಿ ಮಾತುಗಳನ್ನು ಕೇಳಿಸಿಕೊಂಡು ಶಾಕ್‌ಗೆ ಒಳಗಾಗುತ್ತಾಳೆ . ಏನು ಮಾಡಬೇಕು ಎಂದು ತಿಳಿಯದೇ ಅಕ್ಕನನ್ನು ನೋಡಲು ಆಕೆ ಕೂಡ ಆಸ್ಪತ್ರೆಗೆ ಧಾವಿಸಿ ಬರುತ್ತಾಳೆ.

ಅದೆಗೋ ಸಹನಾ ಬದುಕಿ ಉಳಿಯುತ್ತಾಳೆ. ತನ್ನ ತಾಯಿಯನ್ನು ನೋಡಿದ ಸಹನಾಗೆ ದುಃಖ ಉಮ್ಮಳಿಸಿ ಬರುತ್ತದೆ. ಏನೇ ಕಷ್ಟ ಬಂದರು ಅಮ್ಮನ ಬಳಿ ಸಹನಾ ಹೇಳಿಕೊಳ್ಳುತ್ತಾ ಇರಲಿಲ್ಲ. ಆದರೆ ಇದೀಗ ತನ್ನ ತಾಯಿಯ ಬಳಿ ಎಲ್ಲಾ ವಿಚಾರ ಹೇಳುತ್ತಾಳೆ. ಊಟಕ್ಕೆ ವಿಷ ಅತ್ತೆ ಹಾಕಿದ್ದರು, ಅಮ್ಮ ಎಂದಾಗ ಪುಟ್ಟಕ್ಕಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಬಂಗಾರಮ್ಮ ಕೂಡ ಅದೇ ಸಮಯಕ್ಕೆ ಪುಟ್ಟಕ್ಕನ ಬಳಿ ಎಲ್ಲಾ ವಿಚಾರಣೆ ಮಾಡುತ್ತಾಳೆ.

ನೋವಿನಲ್ಲಿರುವ ಪುಟ್ಟಕ್ಕ

ಕೌಸಲ್ಯಳ ಹಣೆ ಬರಹ ಬಂಗಾರಮ್ಮಗೆ ಕೂಡ ತಿಳಿದು ಹೋಗುತ್ತದೆ. ಸಹನಾಳನ್ನು ಡಿಸ್ಚಾರ್ಜ್ ಮಾಡಿಕೊಂಡು ಆಕೆಯ ಮನೆಗೆ ಕರೆದುಕೊಂಡು ಹೋಗುತ್ತಾರೆ ಪುಟ್ಟಕ್ಕ. ಕೌಸಲ್ಯ ಅಳಿಯನಿಗೆ ಸಹನಾ ಮನೆಯವರೆಲ್ಲ ಬರುವುದನ್ನು ನೋಡಿ ಬಹಳ ಆತಂಕ ಆಗುತ್ತದೆ.

Puttakkana makkalu kannada serial written on 15th March

ರಾಜೀ ಮಾತು ಕೇಳಿ ಹಾರಾಡುತ್ತಿರುವ ಕೌಸಲ್ಯ

ಈ ವಿಚಾರ ಅತ್ತೆಯ ಬಳಿ ಹೇಳಿಕೊಂಡಾಗ ಏನು ಆಗಲ್ಲ ನಮ್ಮ ಸಪೋರ್ಟ್‌ಗೆ ರಾಜೀ ಇರುತ್ತಾರೆ. ಆ ಪುಟ್ಟಕ್ಕಳನ್ನು ರಾಜೀ ವಿಚಾರಿಸಿಕೊಳ್ಳುತ್ತಾರೆ. ಇನ್ನೂ ನನ್ನಿಂದ ಸಾಧ್ಯ ಇಲ್ಲವೇ ಎಂದು ಮನದಲ್ಲಿ ಅಂದುಕೊಂಡು ಬಹಳ ಗತ್ತಿನಲ್ಲಿ ಕುಳಿತುಕೊಂಡು ಇರುತ್ತಾಳೆ. ಸಹನಾ ಮನೆಯವರೆಲ್ಲ ಕೌಸಲ್ಯ ಮನೆಗೆ ಬರುತ್ತಾರೆ. ಕೌಸಲ್ಯ ಅವರನ್ನೆಲ್ಲ ನೋಡಿ ಏನು ಇಲ್ಲಿಗೆ ಕೂಡ ನಾಟಕ ಮಾಡಲು ಬಂದ್ರಾ ? ನಾನು ಮಾತ್ರ ಇದಕ್ಕೆಲ್ಲ ಸೊಪ್ಪು ಹಾಕುವುದು ಇಲ್ಲ ಎಂದಾಗ ಸಹನಾ ತಾಯಿ ಬಳಿ ಮಾತನಾಡುತ್ತಾಳೆ.

ಚಿತ್ರಾ ಗಂಡನಿಗೆ ಕಂಠಿ ಕಪಾಳಮೋಕ್ಷ

ಅತ್ತೆ ನನಗೆ ಬಹಳ ಟಾರ್ಚರ್ ಕೊಡುತ್ತಾರೆ. ಅನ್ನಬಾರದ ಮಾತುಗಳಿಂದ ನನ್ನನ್ನು ನಿಂದನೆ ಮಾಡಿದ್ದಾರೆ. ಹಾಗೆಯೇ ನನ್ನ ಚಿನ್ನವನ್ನು ತೆಗೆದುಕೊಂಡು ನನಗೆ ನಕಲಿ ಚಿನ್ನವನ್ನು ಕೊಟ್ಟಿದ್ದರು. ಅವರ ಗಂಡ ಮನೆಯಲ್ಲಿ ಯಾರೂ ಇಲ್ಲದ ವೇಳೆ ನನ್ನ ಜೊತೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಹೇಳಿದಾಗ ಕಂಠಿಗೆ ಸಿಟ್ಟು ಬಂದು ಚಿತ್ರಳ ಗಂಡನ ಕೆನ್ನೆಗೆ ಎರಡು ಬಾರಿಸುತ್ತಾನೆ.

ಸಹನಾಗೆ ನಡತೆಗೆಟ್ಟವಳು ಎಂದ ಅತ್ತೆ

ಕೌಸಲ್ಯ ಮಾತ್ರ ಸಹನಾಳದ್ದೆ ತಪ್ಪು. ಆಕೆ ನಡತೆ ಕೆಟ್ಟವಲು, ಕಾಳಿ ಯಾವತ್ತೂ ಇವಳಿಗೆ ಕರೆ ಮಾಡುತ್ತಾ ಇರುತ್ತಾನೆ. ನಿಮಗೆ ಗೊತ್ತಾ ಆಗಾಗ ಸಹನಾ ಆ ಕಾಳೀನ ಕರೆದುಕೊಂಡು ಬಂದು ಚೆಲ್ಲಾಟ ಆಡುತ್ತ ಇರುತ್ತಾಳೆ ಎಂದಾಗ ಎಲ್ಲರೂ ಗರಂ ಆಗುತ್ತಾರೆ. ಪುಟ್ಟಕ್ಕ ಅವರೆಲ್ಲರನ್ನೂ ತಡೆಯುತ್ತಾಳೆ. ಆದರೂ ಕೌಸಲ್ಯ ಸುಮ್ಮನಾಗಲ್ಲ. ಕೊನೆಗೆ ಆಕೆಯ ಕಪಾಳಕ್ಕೆ ಹೊಡೆಯುತ್ತಾಳೆ ಪುಟ್ಟಕ್ಕ. ಕೌಸಲ್ಯ ಶಾಕ್ ಆಗುತ್ತಾಳೆ. ಆದರೆ ಪುಟ್ಟಕ್ಕಗೆ ತನ್ನ ಮಗಳ ಜೀವನ ಹೀಗೆ ಆಯಿತಲ್ಲ ಎಂದು ಬಹಳ ನೋವಿದೆ. ಇನ್ನಾದರೂ ಕೌಸಲ್ಯ ತೆಪ್ಪಗೆ ಇರುತ್ತಾಳ ಕಾದು ನೋಡಬೇಕಿದೆ.

More from Filmibeat

English summary
Puttakkana makkalu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X