Puttakkana makkalu: ಕೌಸಲ್ಯ ಆಟಕ್ಕೆ ಬ್ರೇಕ್; ಸಾವು ಗೆದ್ದ ಸಹನಾ ತವರು ಮನೆಗೆ ಎಂಟ್ರಿ

By Poorva

ಇಲ್ಲಿಯವರೆಗೆ ಕೌಸಲ್ಯ ಆಡಿದ್ದೆ ಆಟ ಎಂದುಕೊಂಡಿದ್ದಳು. ಆದರೆ ಕೌಸಲ್ಯ ಆಟಕ್ಕೆ ಇದೀಗ ಪುಟ್ಟಕ್ಕ ಫುಲ್ ಸ್ಟಾಪ್ ಇಟ್ಟಿದ್ದಾಳೆ. ಸಹನಾ ಬಹಳ ಕಷ್ಟದಲ್ಲಿಯೇ ಇರುತ್ತಾಳೆ, ಆದರೆ ತನ್ನ ತಾಯಿಗೆ ತನ್ನ ಕಷ್ಟ ಗೊತ್ತಾಗಬಾರದು ಎಂದು ಎಲ್ಲವನ್ನು ನೋವನ್ನು ಮನದಲ್ಲಿ ಇಟ್ಟುಕೊಂಡಿರುತ್ತಾಳೆ. ಸಹನಾ ತಿನ್ನುವ ಊಟದಲ್ಲಿ ಕೌಸಲ್ಯ ವಿಷ ಬೆರೆಸಿದ ಮೇಳೆ ಸಹನಾಗೆ ಸತ್ಯ ಅರಿವಾಗುತ್ತದೆ.

ಇನ್ನು ಮೇಲೆ ನಾನು ಈ ಮನೆಯಲ್ಲಿಯೇ ಇದ್ದರೆ ನನಗೆ ಉಳಿಗಾಲ ಇಲ್ಲ ಎಂದು ತನ್ನ ತಾಯಿಯ ಜೊತೆಗೂ ಸಹನಾ ಹೇಳಿಕೊಡುತ್ತಾಳೆ. ಸಹನಾ ತನ್ನ ಮನೆಯವರನ್ನೆಲ್ಲಾ ಕರೆದುಕೊಂಡು ಕೌಸಲ್ಯ ಮನೆಗೆ ಹೋಗುತ್ತಾಳೆ. ಆದರೆ ಕೌಸಲ್ಯ ಮಾತ್ರ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.

Puttakkana makkalu kannada serial written on 18th March episode

ಪುಟ್ಟಕ್ಕನನ್ನು ರಾಜೇಶ್ವರಿಯೇ ಮಣಿಸುತ್ತಾಳೆ, ಇನ್ನು ನಾನು ಆಕೆಯನ್ನ ಮಣಿಸದೇ ಇರಲಾರೆ, ಯಾರೇ ಬರಲಿ ಯಾರೇ ಇರಲಿ, ನಾನು ಮಾತ್ರ ಹೆದರುವುದಿಲ್ಲ ಎಂದು ಸುಕುಮಾರನ ಜೊತೆ ಕೌಸಲ್ಯ ಹೇಳುತ್ತಿರುತ್ತಾಳೆ. ಸಹನಾ ಹೇಳುತ್ತಿರುವುದೆಲ್ಲಾ ಸುಳ್ಳು ಎದ್ದುಕೊಂಡಿದ್ದ ಪುಟ್ಟಕ್ಕಗೆ ಕೌಸಲ್ಯ ಆಡಿದ ಮಾತು ಕೇಳಿ ಬಹಳ ಸಿಟ್ಟು ಬರುತ್ತದೆ.

ಸಹನಾಗೆ ಕಾಳಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಕೌಸಲ್ಯ ಹೇಳಿದಾಗ ಪುಟ್ಟಕ್ಕಗೆ ಕೆಂಡಾಮಂಡವಾಗುತ್ತಾಳೆ. ಕಂಠಿ, ಕೌಸಲ್ಯ ಮೇಲೆ ಹೊಡೆಯಲು ಮುಂದಾದ ವೇಳೆಯೂ ಪುಟ್ಟಕ್ಕ ತಡೆಯುತ್ತಾಳೆ. ಕೌಸಲ್ಯ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಾಳೆ ಸಹನಾ ಬಗ್ಗೆ, ಇದೆಲ್ಲವನ್ನೂ ಕೇಳಿಸಿಕೊಂಡ ಪುಟ್ಟಕ್ಕಗೆ ಕೋಪ ತಡೆಯಲು ಆಗದೇ ಕೌಸಲ್ಯ ಕೆನ್ನೆಗೆ ಹೊಡೆದು ಬಿಡುತ್ತಾಳೆ.

Puttakkana makkalu kannada serial written on 18th March episode

ಪುಟ್ಟಕ್ಕ ಮೇಲೆ ಕೌಸಲ್ಯ ಗರಂ

ಕೌಸಲ್ಯಾಗೆ ಪುಟ್ಟಕ್ಕ ಹೊಡೆದ ಏಟು ಮನಸ್ಸಿಗೆ ನಾಟುತ್ತದೆ. ನನ್ನ ಮಗಳು ಬೆಂಕಿ. ಅವಳು ಚಿಕ್ಕವಯಸ್ಸಿನಿಂದಲೂ ಬೆಂಕಿಯಲ್ಲಿ ಅಡುಗೆ ಮಾಡಿಕೊಂಡು ಇದ್ದವಳು, ಆಕೆಗೆ ಅಡುಗೆ ಮಾಡಲು ಗೊತ್ತು. ಹಾಗೆಯೇ ನಿನ್ನಂತಹ ನರ ರಾಕ್ಷಸರಿಗೆ ಜ್ವಾಲಮುಖಿ ಆಗಿ ಎದುರೇಟು ಕೊಡಲು ಗೊತ್ತು. ನನ್ನ ಮಗಳ ಬಗ್ಗೆ ಮಾತನಾಡುವಾಗ ಬಹಳ ಜಾಗರೂಕತೆಯಿಂದ ಇರಿ ಎಂದು ಪುಟ್ಟಕ್ಕ, ಕೌಸಲ್ಯಗೆ ಕಿವಿಮಾತು ಹೇಳುತ್ತಾಳೆ. ಪುಟ್ಟಕ್ಕ ಮಾತಿಗೆ ಕೌಸಲ್ಯ ಏನು ಮಾತನಾಡದೆ ಸುಮ್ಮನೆ ನಿಂತಿರುತ್ತಾಳೆ.

ಪುಟ್ಟಕ್ಕ ಹೊಸ ನಿರ್ಧಾರ

ಕೊನೆಗೆ ಪುಟ್ಟಕ್ಕ ಒಂದು ನಿರ್ಧಾರಕ್ಕೆ ಬರುತ್ತಾಳೆ. ಸಾಕಮ್ಮ ನೀನು ಇಲ್ಲಿ ಇದ್ದದ್ದು, ನಿನನ್ನು ಇಲ್ಲಿಯೇ ಇದ್ದರೆ ಸಾಯಿಸಿ ಬಿಡಬಹುದು, ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಸಹನಾಗೆ ಪುಟ್ಟಕ್ಕ ಹೇಳುತ್ತಾಳೆ. ನಿಮ್ಮ ಜೊತೆ ಸಹನಾಳನ್ನು ಕರೆದುಕೊಂಡು ಹೋದರೆ ಗಂಡ ಬಿಟ್ಟವಳು ಎಂದು ಹೇಳುತ್ತಾರೆ. ಆಕೆ ಇಲ್ಲಿಯೇ ಇರಲಿ ಎಂದು ಕೌಸಲ್ಲು ಹೇಳುತ್ತಾಳೆ. ನನ್ನ ಮಗಳು ಇಲ್ಲಿಯೇ ಇದ್ದರೆ ಕೊಂದು ಬಿಡುತ್ತಾರೆ, ಆಕೆ ನಮ್ಮ ಮನೆಯ ಲಕ್ಷ್ಮೀ, ಆಕೆಯನ್ನು ಮೆರವಣಿಗೆ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.

ತಾಯಿಯ ಜೊತೆ ಮನೆಗೆ ಸಹನಾ

ಪುಟ್ಟಕ್ಕ, ಗೋಪಾಲನ ಮಾತಿನ ಪ್ರಕಾರವಾಗಿ ಸಹನಾಳನ್ನು ತವರು ಮನೆಗೆ ಅದ್ದೂರಿಯಾಗಿ ಸ್ವಾಗತ ಮಾಡುತ್ತಾರೆ. ಸಹನಾ ಸಾವನ್ನೇ ಗೆದ್ದುಕೊಂಡು ಬಂದವಳು. ಆಕೆಯನ್ನು ಸಾಕುವುದು ಪುಟ್ಟಕ್ಕಗೆ ಏನು ಬಹಳ ದೊಡ್ಡ ಕಷ್ಟ ಅಲ್ಲ ಎನ್ನುವುದು ತಿಳಿದೇಯಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.

More from Filmibeat

English summary
Puttakkana makkalu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X