Puttakkana makkalu: ಪಂಚಾಯಿತಿ ಕರೆದ ಮುರಳಿ; ಸಹನಾ ಕೋಪಕ್ಕೆ ತುತ್ತಾಗಿ ಮುಂದೇನು ಮಾಡುತ್ತಾನೆ?
ಮುರಳಿ ಹಾಗೂ ಕಂಠಿ ನಡುವೆ ಬಹಳ ದೊಡ್ಡ ಕಂದಕ ಏರ್ಪಟ್ಟಿದೆ. ಚಂದ್ರು ವಸುವನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಅಮ್ಮ ಮೊದಲಿನ ಹಾಗೆ ಇಲ್ಲ. ಅಮ್ಮ ಬಹಳ ಬದಲಾಗಿ ಹೋಗಿದ್ದಾರೆ. ಆದರೂ ಯಾರು ನಂಬುತ್ತಾ ಇಲ್ಲ ಎನ್ನುವುದೇ ಚಂದ್ರುಗೆ ಬಹಳ ಬೇಸರ. ಚಂದ್ರು ಮನದಲ್ಲಿ ನೂರಾರು ಆಸೆ. ತನ್ನ ಹೆಂಡತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು, ಆದರೆ ಇದಕ್ಕೆ ಸ್ವತಃ ಚಂದ್ರು ಅತ್ತೆ ಅಡ್ಡ ಬರುತ್ತಿದ್ದಾರೆ.
ಚಂದ್ರುಗೆ ಅತ್ತೆ ಮೇಲೆ ಇದೀಗ ಬಹಳ ಕೋಪ ಬಂದಿದೆ. ಆದರೆ ಅದನ್ನು ತೋರಿಸಿಕೊಳ್ಳಲು ಆಗದೇ ಸುಮ್ಮನೆ ಇದ್ದಾನೆ ಚಂದ್ರು. ಆತನ ಮಾತಿನಿಂದ ಕಂಠಿಗೆ ಬಹಳ ಬೇಸರ ಆಗುತ್ತದೆ. ಏನು ಮಾಡಬೇಕು ಎನ್ನುವುದು ದಿಕ್ಕೇ ತೋಚದಂತಾಗಿದೆ. ಇತ್ತ ಸಹನಾ ಮಾತ್ರ ತನ್ನ ಗಂಡನ ಜೊತೆ ಇನ್ನೂ ಬಾಳ್ವೆ ನಡೆಸುವುದು ಇಲ್ಲ ಎಂದು ಬಹಳ ಗಟ್ಟಿಯಾಗಿ ನಿಂತಿದ್ದಾಳೆ. ತನ್ನ ಗಂಡ ನನ್ನ ಮಾತು ಬಿಟ್ಟು ಬೇರೆಯವರ ಮಾತನ್ನು ಕೇಳುತ್ತಾನೆ. ಆದರೆ ನನ್ನ ಮಾತಿಗೆ ಕಿಂಚಿತ್ತೂ ಬೆಲೆ ಕೊಡುತ್ತಾ ಇಲ್ಲವಲ್ಲ ಎಂದು ಬಹಳ ಬೇಸರಪಟ್ಟುಕೊಂಡು ಇರುತ್ತಾಳೆ.

ಮುರಳಿ ಈಗ ಮತ್ತೊಂದು ದೊಡ್ಡ ತಪ್ಪು ಮಾಡಿ ಸಹನಾ ಕೆಂಗಣ್ಣಿಗೆ ಗುರಿ ಆಗಿದ್ದಾನೆ. ಸಹನಾ ತನ್ನ ತಾಯಿಯ ಬಳಿ ಮುರಳಿ ಬಗ್ಗೆ ಮಾತನಾಡುತ್ತಿರಬೇಕಾದರೆ ಪಂಚಾಯಿತಿ ನಡೆಸಲು ಡಂಗುರು ಸಾರಿ ಕೊಂಡು ಒಬ್ಬರು ಬರುತ್ತಾರೆ. ಇದನ್ನು ನೋಡಿದ ಪುಟ್ಟಕ್ಕ ಪಂಚಾಯಿತಿ ಇದ್ದರೆ ಮಾತ್ರ ಡಂಗೂರ ಸಾರುತ್ತಾರೆ. ಇದನ್ನು ಕೇಳಿ ಗೋಪಲನಿಗೆ ಟೆನ್ಶನ್ ಶುರುವಾಗುತ್ತದೆ. ರಾಜೀ ಏನಾದರು ನನ್ನ ವಿರುದ್ದ ತಿರುಗಿ ಬಿದ್ದಿರಬಹುದಾ ಎಂದು ಆಲೋಚನೆ ಮಾಡುತ್ತಿರುತ್ತಾನೆ.
ಪಂಚಾಯಿತಿ ಮಾತು ಕೇಳಿ ಪುಟ್ಟಕ್ಕ ಶಾಕ್
ಡಂಗೂರ ಸಾರುವವನ ಬಳಿಗೆ ಬಂದ ಪುಟ್ಟಕ್ಕ ಆತನ ಬಳಿಯೇ ಕೇಳುತ್ತಾರೆ, ಯಾಕೆ ಏನಾಯಿತು? ಯಾರು ಪಂಚಾಯಿತಿಗೆ ದೂರು ಕೊಟ್ಟಿರುವುದು ಎಂದಾಗ ಆತ ಹೇಳಿದ ಮಾತು ಕೇಳಿ ಪುಟ್ಟಕ್ಕಗೆ ಬಹಳ ಶಾಕ್ ಆಗುತ್ತದೆ. ಯಾರು ಏನು ಎಂದು ವಿಚಾರಣೆ ಮಾಡಿದಾಗ ಮುರಳಿ ಅವರ ಫ್ಯಾಮಿಲಿ ದೂರು ನೀಡಿರುವುದು ಎಂದು ಗೊತ್ತಾಗಿ ಪುಟ್ಟಕ್ಕಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಭಯ ಆಗುತ್ತದೆ.
ಮುರಳಿ ಮೇಲೆ ಸಿಟ್ಟಾದ ಸಹನಾ
ಸಹನಾ ಮಾತ್ರ ಯಾರು ಏನೇ ಹೇಳಲಿ ನಾನು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮುರಳಿ ತಾಯಿ ಹೇಳಿದ ಹಾಗೆ ಕೇಳುತ್ತಿದ್ದಾರೆ. ಯಾವತ್ತಾದರೂ ಒಂದು ದಿನ ಅವರ ನಾಟಕ ಬಯಲಾಗುತ್ತದೆ. ಆಗ ಅವರ ಅರಿವಿಗೆ ಬರುತ್ತದೆ, ನಾನು ಮಾಡುತ್ತಾ ಇರುವುದು ತಪ್ಪು ಎನ್ನುವುದು. ಅಲ್ಲಿಯವರೆಗೆ ಅವರು ಹೀಗೆಯೇ ಆಡುತ್ತಾ ಇರುತ್ತಾರೆ ಎಂದು ಹೇಳಿ ಅಲ್ಲಿಂದ ನೇರವಾಗಿ ಮನೆಯೊಳಗೆ ಹೊರಟು ಹೋಗುತ್ತಾಳೆ.

ಬಂಗಾರಮ್ಮನ ತಲೆ ಕೆಡಿಸಿದ ರಾಧ
ಇನ್ನೂ ಬಂಗಾರಮ್ಮನ ತಲೆಯನ್ನು ಎಷ್ಟು ಕೆಡಿಸಲು ಆಗುತ್ತದೋ ಅಷ್ಟು ಕೆಡಿಸುವ ಪ್ರಯತ್ನ ಮಾಡುತ್ತಾಳೆ ರಾಧ. ಸ್ನೇಹಾ ಹಾಗೂ ಕಂಠಿ ಮಾತನಾಡುತ್ತಾ ಇರುವುದನ್ನು ವಿಡಿಯೋ ಮಾಡಿ ಬಂಗಾರಮ್ಮಗೆ ತೋರಿಸಿದಾಗ ಆಕೆಗೆ ಇನ್ನಷ್ಟು ಕೋಪ ಬರುತ್ತದೆ. ಸ್ನೇಹಾಗೆ ನಾನು ಒಂದಲ್ಲ ಒಂದು ದಿನ ಪಾಠ ಕಲಿಸಿಯೆ ಕಳಿಸುತ್ತೇನೆ ಎಂದು ಹೇಳಿದಾಗ ರಾಧಾಗೆ ನಗು ಬರುತ್ತದೆ. ಇನ್ನೂ ಮುಂದೆ ನನ್ನ ಆಟ ಶುರು ಎನ್ನುತ್ತಿರುವ ರಾಧಾಗೆ ಬುದ್ದಿ ಕಲಿಸುತ್ತಾಳ ಸ್ನೇಹಾ?


Click it and Unblock the Notifications











