Puttakkana makkalu: ಊರವರ ಮುಂದೆ ಹೆಂಡತಿಗೆ ಮಾನಸಿಕ ಕಾಯಿಲೆ ಇದೆ ಎಂದ ಮುರಳಿ
ಮುರಳಿಗೆ ಸಹನಾಳನ್ನು ಪಡೆದುಕೊಳ್ಳುವ ತವಕ. ಆತ ಎಡವಿದ್ದು ತನ್ನ ತಾಯಿಯನ್ನು ಅತಿಯಾಗಿ ನಂಬಿ. ತನ್ನ ತಾಯಿ ಏನೇ ಮಾಡಿದರೂ ನನ್ನ ಖುಷಿಗಾಗಿ ಏಳಿಗೆಗಾಗಿ ಮಾಡುತ್ತಾಳೆ, ಎಂಬ ತಪ್ಪು ಕಲ್ಪನೆಯಲ್ಲಿ ಮುರಳಿ ಇರುತ್ತಾನೆ. ಮೇಲಾಗಿ ಪುಟ್ಟಕ್ಕ, ಕೌಸಲ್ಯ ಕೆನ್ನೆಗೆ ಹೊಡೆದಿರುವ ವಿಚಾರ ಮುರಳಿಗೆ ಬಹಳ ನೋವು ನೀಡಿರುತ್ತದೆ.
ತನ್ನ ತಾಯಿ ಬಳಿ ಯಾಕೆ ನಿಮಗೆ ಅತ್ತೆ ಹೊಡೆದರು, ಅಂಥದ್ದು ನೀವೇನು ಮಾಡಿದಿರಿ? ಎಂದು ಕೇಳದೇ ನೇರವಾಗಿ ಮುರಳಿ ಪಂಚಾಯಿತಿ ಕರೆದಿದ್ದಾನೆ. ಸಹನಾ ಇದರಿಂದ ಬಹಳಷ್ಟು ಕೋಪ ಬರುತ್ತದೆ. ತನ್ನ ಮಾತಿಗೆ ಎಲ್ಲಿ ಬೆಲೆ ಇರುವುದು ಇಲ್ಲವೋ ಅಲ್ಲಿ ನಾವು ಕಾಲು ಸಹ ಇಡಬಾರದು ಎನ್ನುವುದು ಸಹನಾ ವಾದ.

ಹೆಣ್ಣನ್ನು ತವರು ಮನೆಯಿಂದ ಗಂಡನ ಮನೆಗೆ ಕಳುಹಿಸಿದ ಬಳಿಕ ಆಕೆಗೆ ಗಂಡನೇ ಎಲ್ಲಾ ಆಗಿರುತ್ತಾನೆ. ಆದರೆ ಆ ಗಂಡನೇ ತನ್ನ ಹೆಂಡತಿಯ ನೋವನ್ನು ಅರಿಯದೆ ನೀನು ಪ್ರತಿ ದಿನ ನನ್ನ ತಂದೆ ತಾಯಿ ಮೇಲೆ ಕಂಪ್ಲೇಂಟ್ ಮಾಡುತ್ತಾ ಇರುತ್ತಿಯಾ ನಿನಗೆ ಮಾನಸಿಕ ಕಾಯಿಲೆ ಇದೆ ಎಂದು ಬಿಟ್ಟರೆ ಪಾಪ ಆಕೆಯಾದರು ಏನು ಮಾಡುತ್ತಾಳೆ.
ಸಹನಾಗೆ ತನ್ನ ಗಂಡ ಮಾಡುತ್ತಿರುವುದು ತಪ್ಪು ಎನ್ನುವುದು ವಿಚಾರ ತಿಳಿದಿದೆ. ಪಂಚಾಯಿತಿ ಮುರಳಿ ಕರೆದಿದ್ದಾನೆ ಎಂದು ಕೇಳಿದ ಪುಟ್ಟಕ್ಕಗೆ ಕೈ ಕಾಲು ನಡುಗಿ ಬಿಡುತ್ತದೆ. ಏನು ಮಾತನಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಪಂಚಾಯಿತಿಗೆ ಹೋಗಲಿಲ್ಲ ಎಂದಾದರೆ ನಮ್ಮನ್ನು ಬಹಿಷ್ಕಾರ ಮಾಡಬಹುದು ಎನ್ನುವುದು ಕೂಡ ಪುಟ್ಟಕ್ಕಗೆ ತಿಳಿದಿದೆ. ಸಹನಾನನ್ನು ಅದೆಷ್ಟು ಬಾರಿ ಪಂಚಾಯಿತಿಗೆ ಹೋಗೋಣ ಅಲ್ಲಿ ಏನು ಎಂಬುವುದು ಇತ್ಯರ್ಥ ಆಗುತ್ತದೆ ನೋಡೋಣ ಎಂದು ಅದೆಷ್ಟೇ ಬಾರಿ ಹೇಳಿದರು ಸಹನಾ ಮಾತ್ರ ಅದನ್ನು ಕೇಳುತ್ತಲೇ ಇರುವುದು ಇಲ್ಲ.
ಪಂಚಾಯಿತಿ ಕಟ್ಟೆಗೆ ಬಂಗಾರಮ್ಮ
ಕೊನೆಗೆ ಸ್ನೇಹಾ ಕರೆ ಮಾಡಿ ಕೊಂಚ ಜೋರಾಗಿಯೇ ಅಕ್ಕನ ಬಳಿ ಹೇಳುತ್ತಾಳೆ. ಅಕ್ಕ ನೀನು ಏನು ತಪ್ಪು ಮಾಡಿಲ್ಲ ಆದರೂ ಪಂಚಾಯಿತಿ ಕರೆದಿದ್ದಾರೆ ಭಾವ. ನೀನು ಈ ಪಂಚಾಯಿತಿಗೆ ಹೋಗಬೇಡ ಎಂದು ಹೇಳಿ ಫೋನ್ ಇಡುತ್ತಾಳೆ. ಇತ್ತ ಬಂಗಾರಮ್ಮ ಊರವರ ಎದುರು ಪಂಚಾಯಿತಿ ಕಟ್ಟೆ ಬಳಿ ಕುಳಿತುಕೊಂಡು ಇರುತ್ತಾಳೆ.

ರಾಜೇಶ್ವರಿ ಮಾತಿಗೆ ಸೊಪ್ಪು ಹಾಕದ ಬಂಗಾರಮ್ಮ
ಅದೆಷ್ಟೇ ಹೊತ್ತಾದರೂ ಪುಟ್ಟಕ್ಕ ಬಾರದೇ ಇರುವುದನ್ನು ಕಂಡ ರಾಜೇಶ್ವರಿ ಹೇಳುತ್ತಾಳೆ. ಪುಟ್ಟಕ್ಕ ಹಾಗೂ ಆಕೆಯ ಮಕ್ಕಳು ಬರುವ ಹಾಗೆ ಕಾಣುತ್ತಿಲ್ಲ ಏನು ತೀರ್ಪು ನೀಡುತ್ತೀರಿ ಅದನ್ನು ನೀಡಿ ಎಂದು ಹೇಳಿದಾಗ ಪುಟ್ಟಕ್ಕ ಹಾಗೂ ಆಕೆಯ ಕುಟುಂಬದವರು ಪಂಚಾಯಿತಿ ಕಟ್ಟೆಯ ಬಳಿ ಬರುತ್ತಾರೆ. ಪಂಚಾಯಿತಿಗೆ ದೂರು ಕೊಟ್ಟ ಮುರಳಿ ಜೊತೆಯೇ ಮಾತನಾಡಲು ಹೇಳುತ್ತಾರೆ ಬಂಗಾರಮ್ಮ.
ಮುರಳಿ ಮಾತು ಕೇಳಿ ದಂಗಾದ ಪುಟ್ಟಕ್ಕ
ಮುರಳಿ, ಸಹನಾ ಇತ್ತೀಚಿಗೆ ನಡೆದುಕೊಳ್ಳುವ ರೀತಿ ಹಾಗೂ ಆಕೆ ಮನೆ ಬಿಟ್ಟು ಹೋಗಿರುವುದಕ್ಕೆ ಬಹಳ ಬೇಸರ ವ್ಯಕ್ತ ಪಡಿಸುತ್ತಾನೆ. ಹಾಗೆಯೇ ಆಕೆಗೆ ಮಾನಸಿಕ ಚಿಕಿತ್ಸೆ ಅಗತ್ಯ ಇದೆ ಎಂದು ಹೇಳುತ್ತ ಇರುತ್ತಾನೆ. ಇದನ್ನು ಕೇಳಿದ ಸಹನಾ ಮಾತ್ರ ಸುಮ್ಮನಿದ್ದರೆ ಮಧ್ಯೆ ಗೋಪಾಲ ಮಾತನಾಡುತ್ತಾನೆ. ಮುರಳಿ ನೀನು ನಿನ್ನ ಹೆಂಡತಿ ಬಗ್ಗೆ ಹೀಗೆಲ್ಲ ಮಾತನಾಡುತ್ತಾ ಇರುವುದು ಸರಿ ಅಲ್ಲ ಎನ್ನುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ ಯಾರು ಮಾತನಾಡಬಾರದು ಎಂದು ತಾಕೀತು ಮಾಡುತ್ತಾಳೆ.
ಭಾವನ ಮಾತು ಕೇಳಿ ಕೆರಳಿದ ಸುಮಾ
ಇಷ್ಟು ದಿನ ನೀವು ಅಕ್ಕನನ್ನು ಅರ್ಥ ಮಾಡಿಕೊಂಡೆ ಇಲ್ವಾ. ಅಕ್ಕನ ಬಗ್ಗೆ ನೀವು ಈ ರೀತಿ ಮಾತನಾಡುವುದು ಸರಿ ಅಲ್ಲ ಎಂದು ಸುಮಾ, ಮುರಳಿಗೆ ಹೇಳುತ್ತಾಳೆ. ಮುರಳಿ ಮಾತು ಮುಂದುವರೆಸುತ್ತಾನೆ. ಇಷ್ಟು ಮಾತ್ರ ಅಲ್ಲದೇ ನನ್ನ ತಾಯಿಯ ಕೆನ್ನೆಗೆ ನನ್ನ ಅತ್ತೆ ಹೊಡೆದಿದ್ದಾರೆ, ಇದು ನನಗೆ ಬೇಸರ ತಂದಿದೆ ನನಗೆ ನ್ಯಾಯ ಬೇಕು ಎಂದು ಕೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕಗೆ ಕೈ ಕಾಲು ನಡುಗಿ ಬಿಡುತ್ತದೆ. ಕೌಸಲ್ಯ ಮಾತ್ರ ತನ್ನ ಮಗ ನನ್ನ ಜೊತೆ ಯಾವತ್ತೂ ಇರುತ್ತಾನೆ ಎಂದು ಬೀಗುತ್ತಾ ಇರುತ್ತಾಳೆ.
ನಂಜಮ್ಮ ಮೇಲೆ ಬಂಗಾರಮ್ಮ ಗರಂ
ನಂಜಮ್ಮ ಕೂಡ ಪಂಚಾಯಿತಿಗೆ ಬಂದಿರುತ್ತಾಳೆ. ನಾನು ಈ ಸಮಯವನ್ನು ಸಾಧಿಸಿಕೊಂಡು ನನ್ನ ಬೇಳೆ ಬೇಯಿಸಿಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ. ಆಕೆ ಕೂಡ ಪಂಚಾಯಿತಿ ಬಳಿ ಬಂದು ನಾನು ಏನಾದರು ಮಾತನಾಡಬಹುದಾ? ಬಂಗಾರಮ್ಮಗೆ ಸಿಟ್ಟು ಬರುತ್ತದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











