Puttakkana makkalu: ಅಮ್ಮನ ಬಳಿ ದುಃಖ ತೋಡಿಕೊಂಡ ಸಹನಾ; ಮುಂದೇನು?

By Poorva

ಬಂಗಾರಮ್ಮಗೆ ಪುಟ್ಟಕ್ಕ ನ ಮೇಲೆ ಬೇಸರ ಹೋಗಿಲ್ಲ. ನನ್ನ ಮಗಳು ಪುಟ್ಟಕ್ಕನ ಮನೆಯಲ್ಲಿ ಖುಷಿಯಾಗಿ ಇರುತ್ತಾಳೆ ಎಂದು ಕೊಂಡಿದ್ದೆ. ಆದರೆ ಅಲ್ಲಿದ್ದರೆ ವಸು ಜೀವಕ್ಕೆ ಅಪಾಯ ಖಂಡಿತ ಎಂದು ಹೇಳುತ್ತಿರುತ್ತಾಳೆ. ಕಂಠಿ ಹಾಗೂ ಸ್ನೇಹಾ ಅದೆಷ್ಟೇ ಬಾರಿ ಬಿಡಿಸಿ ಹೇಳಿದರು ಅದೆಲ್ಲವನ್ನೂ ಕೇಳುವ ಸ್ಥಿತಿಯಲ್ಲಿ ಬಂಗಾರಮ್ಮ ಇರುವುದಿಲ್ಲ.

ಸ್ನೇಹಾ ಹಾಗೂ ಅಮ್ಮನನ್ನು ಒಂದಾಗುವ ಹಾಗೆ ಮಾಡಬೇಕು ಎಂದು ಕಂಠಿ ಆಲೋಚನೆ ಮಾಡುತ್ತಾ ಇರುತ್ತಾನೆ. ಈ ವಿಚಾರವನ್ನು ಸ್ನೇಹಾ ಬಳಿ ಹಾಗೆಯೇ ಮಾದೇಗೌಡರ ಬಳಿ ಕಂಠಿ ಪ್ರಸ್ತಾಪಿಸಿದಾಗ ಮಾದೇ ಗೌಡರು ಮೊದಲು ಸಾಧ್ಯ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಕಂಠಿ ಅಪ್ಪನನ್ನು ಹೇಗಾದರೂ ಒಪ್ಪಿಸುತ್ತಾನೆ. ಇನ್ನೂ ಕಂಠಿ ತೋಟಕ್ಕೆ ಹೋಗಬೇಕು ಎಂದು ತರಾತುರಿಯಲ್ಲಿ ಹೋಗುತ್ತಾನೆ .

Puttakkana makkalu kannada serial written on 7th March episode

ಸ್ನೇಹಾ ದೇವಾಲಯಕ್ಕೆ ಹೊರಟು ನಿಂತಿರುತ್ತಾಳೆ. ಬಂಗಾರಮ್ಮ ಕೂಡ ಅದೇ ಹೊತ್ತಿಗೆ ದೇವಾಲಯಕ್ಕೆ ಹೊರಡುತ್ತಾಳೆ. ಬಂಗಾರಮ್ಮನನ್ನು ನೋಡಿ ಮಾದೆ ಗೌಡರು, ಬಂಗಾರ ಸೊಸೆ ಕೂಡ ಗುಡಿಗೆ ಹೋಗಬೇಕು ಎಂದುಕೊಂಡಿದ್ದಾಳೆ. ನೀನು ಹೇಗೋ ಗುಡಿಗೆ ಹೋಗುವವಳು ಇದ್ದೀಯಾ. ಆಕೆಯನ್ನು ಕರೆದುಕೊಂಡು ಹೋಗು ಎಂದು ಹೇಳುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ ಆಯಿತು ಎಂದು ಒಪ್ಪಿಕೊಂಡು ಬಿಡುತ್ತಾಳೆ.

ಕಂಠಿ ಪ್ಲಾನ್ ಫಲಿಸಿತು. ಇತ್ತ ಪುಟ್ಟಕ್ಕಗೆ ಸಹನಾ ನೆನಪಾಗಿ ಬಿಡುತ್ತಾಳೆ. ಅಂದು ಏನೋ ಬಹಳ ಬೇಸರದಿಂದ ಫೋನ್ ಮಾಡಿ ಮಾತನಾಡಬೇಕು ಎಂದು ಅಂದುಕೊಂಡು ಇದ್ದಳು. ಆದರೆ ಮನೆಯಲ್ಲಿ ಎಲ್ಲರೂ ಇದ್ದಿದ್ದರಿಂದ ಅದು ಸಾಧ್ಯ ಆಗಲಿಲ್ಲ. ಈಗ ಆಕೆಯ ಬಳಿ ಕೇಳಬೇಕು ಏನು ವಿಚಾರ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಮನದಲ್ಲಿ ಎಂದುಕೊಂಡು ಸಹನಾಗೆ ಕರೆ ಮಾಡುತ್ತಾಳೆ.

ಅಮ್ಮನ ಮಾತು ಕೇಳಿ ಅತ್ತ ಸಹನಾ

ಸಹನಾಗೆ ತನ್ನ ತಾಯಿ ಕರೆ ಮಾಡಿರುವುದನ್ನೂ ನೋಡಿ ಬಹಳ ಖುಷಿ ಪಡುತ್ತಾಳೆ. ಕರೆ ಸ್ವೀಕಾರ ಮಾಡಿ ಮಾತನಾಡಿದ ಸಹನಾಗೆ ತನ್ನ ತಾಯಿಯ ಧ್ವನಿ ಕೇಳಿ ಮತ್ತಷ್ಟು ಖುಷಿ ಆಗುತ್ತದೆ. ಅಮ್ಮ ಎನ್ನುತ್ತಾಳೆ. ಪುಟ್ಟಕ್ಕ ಗೆ ಆಕೆಯ ಧ್ವನಿ ಕೇಳಿ ತನ್ನ ಮಗಳಿಗೆ ಏನೋ ಕಷ್ಟ ಆಗಿದೆ. ಇಲ್ಲವಾದರೆ ಆಕೆ ಖಂಡಿತವಾಗಿಯೂ ನನಗೆ ಕರೆ ಮಾಡುವುದು ಇಲ್ಲ ಎಂದು ಅನ್ನಿಸಿ ಬಿಡುತ್ತದೆ. ಮಗಳ ಕ್ಷೇಮ ಸಮಾಚಾರ ವಿಚಾರಣೆ ಮಾಡಿದಾಗ ಸಹನಾ ಸಹಜವಾಗಿಯೇ ಮಾತನಾಡುತ್ತಾಳೆ.

Puttakkana makkalu kannada serial written on 7th March episode

ಮುರಳಿ ವಿಚಾರ ಹೇಳಿದ ಸಹನಾ

ನನ್ನ ಬಳಿ ನಿಜ ವಿಚಾರ ಹೇಳು ನಾನೇನು ಅಂದುಕೊಳ್ಳುವುದು ಇಲ್ಲ ಎಂದು ಪುಟ್ಟಕ್ಕ ಹೇಳುತ್ತಾಳೆ. ಇದನ್ನು ಕೇಳಿದ ಸಹನಾ ಜೋರಾಗಿ ಅತ್ತು ಬಿಡುತ್ತಾಳೆ. ಅಮ್ಮ ಎಂದು ಹೇಳಿ ನಡೆದ ವಿಚಾರವನ್ನು ಹೇಳುತ್ತಾಳೆ. ನಾನು ನಿಜ ವಿಚಾರ ಇವರ ಬಳಿ ಹೇಳಿಕೊಂಡರೆ ನನಗೆ ಮಾನಸಿಕ ಕಾಯಿಲೆ ಇದೆ ಎಂದು ಬಿಂಬಿಸಿ ನನ್ನ ಬಳಿ ಒಂದು ಮಾತು ಕೇಳದೆ ಡಾಕ್ಟರ್ ಅನ್ನು ಕರೆದುಕೊಂಡು ಬಂದಿದ್ದರು ಎಂದು ಅಳುತ್ತಾಳೆ.

ಮಗಳನ್ನು ಸಂತೈಸಿದ ಪುಟ್ಟಕ್ಕ

ಇವರು ಈ ರೀತಿ ಮಾಡಿದರೆ ನಾನು ಹೇಗೆ ಅದನ್ನು ತಡೆದುಕೊಳ್ಳಲಿ ಎಂದು ಹೇಳುತ್ತಾಳೆ . ಇದನ್ನೆಲ್ಲ ಕೇಳಿ ಪುಟ್ಟಕ್ಕಗೆ ಬಹಳ ನೋವಾಗುತ್ತದೆ. ಸಹನಾ ನಾನು ಈ ಮನೆಯಲ್ಲಿ ಇರುವುದಿಲ್ಲ, ನನಗೆ ಆಗುತ್ತಿಲ್ಲ ಎಂದು ಅಮ್ಮನ ಬಳಿ ದುಃಖ ತೋಡಿಕೊಂಡು ಅಳುತ್ತಾಳೆ.

More from Filmibeat

English summary
Puttakkana makkalu kannada serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X