Puttakkana Makkalu: ಸಹನಾ ದುಃಖಕ್ಕೆ ಮುರಳಿ ಪ್ರೀತಿಯೇ ಔಷಧಿ; ಕೌಸಲ್ಯ ಹೊಸ ಪ್ಲ್ಯಾನ್?
ಸಹನಾ ಅಳುತ್ತಾ ಇರುವುದನ್ನು ನೋಡಿ ಮುರಳಿ ಬಹಳ ಸಂಕಟ ಪಡುತ್ತಾನೆ. ನನ್ನಿಂದಾಗಿ ಸಹನಾಗೆ ಎಷ್ಟು ನೋವು ಆಗುತ್ತಿದೆ. ನಾನು ಮಾಡಿದ್ದು ಹಾಗೂ ನಾನು ವರ್ತಿಸಿದ ರೀತಿ ಸರಿ ಇರಲಿಲ್ಲ ಎನ್ನುವ ವಿಚಾರ ಮುರಳಿಗೆ ಮನದಟ್ಟಾಗಿದೆ. ಆದರೆ ಸಹನಾ ಮನದ ತುಂಬಾ ನೋವನ್ನು ತುಂಬಿಕೊಂಡಿದ್ದಾಳೆ. ಆಕೆಗೆ ತನ್ನ ಗಂಡನ ಅವಮಾನದಿಂದ ಬಹಳ ನೋವು ಅನುಭವಿಸುತ್ತಿದ್ದಾಳೆ. ಸಹನಾಳನ್ನು ಮಾನಸಿಕ ರೋಗಿ ಎಂದು ಮುರಳಿಯೇ ಸ್ವತಃ ಹೇಳಿದ್ದು ಆಕೆಗೆ ಸಂಕಟ ತಂದಿದೆ.
ಆಕೆ ತನ್ನ ಗಂಡನ ಮೇಲೆ ವಿಪರೀತವಾದ ಪ್ರೀತಿ ಇಟ್ಟುಕೊಂಡಿದ್ದಳು. ರೂಮ್‌ನಲ್ಲಿ ಕುಳಿತು ನಡೆದ ಘಟನೆಗಳನ್ನು ನೆನಪಿಸಿಕೊಂಡು ಅಳುತ್ತಾ ಇರುತ್ತಾಳೆ. ಬಹಳ ಬೇಸರ ಆಗಿರುತ್ತದೆ. ಆಕೆ ಬಳಿ ಬಂದ ಮುರಳಿ ಅಳುತ್ತಾ ಇದ್ದೀಯಾ ಯಾಕೆ ಅಳುತ್ತಿದ್ದಿಯಾ , ನನಗೆ ಗೊತ್ತು ನಿನಗೆ ನನ್ನಿಂದ ಬಹಳ ನೋವಾಗಿದೆ ಎಂದು ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳುತ್ತಾನೆ. ಆದರೆ ಸಹನಾ ಏನು ಮಾತನಾಡುವುದಿಲ್ಲ.

ನೀವು ನನ್ನ ಜೊತೆ ಮಾತನಾಡುವುದು ಇಲ್ವಾ ? ದಯವಿಟ್ಟು ನನ್ನ ಜೊತೆ ಮಾತನಾಡಿ ಎಂದು ಕೇಳಿಕೊಳ್ಳುತ್ತಾನೆ. ಕೊನೆಗೂ ಸಹನಾ ಮುನಿಸು ಮರೆತು ಗಂಡನ ಜೊತೆ ಸಹಜವಾಗಿಯೇ ಮಾತನಾಡಲು ಶುರು ಮಾಡುತ್ತಾಳೆ. ಇದನ್ನೆಲ್ಲ ಕೌಸಲ್ಯ ಕದ್ದು ಕೇಳಿಸಿಕೊಳ್ಳುತ್ತಿರುತ್ತಾಳೆ. ಆಕೆಗೆ ನನ್ನ ಮಗ ನನ್ನಿಂದ ದೂರಾದರೆ ಎನ್ನುವ ಭಯ. ಅದರಿಂದಾಗಿ ಸಹನಾಳನ್ನು ಹೇಗಾದರೂ ಮಾಡಿ ಸಾಯಿಸಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಆಕೆಗೆ ಸಹನಾಳನನ್ನು ಕಂಡರೆ ಸ್ವಲ್ಪ ಕೂಡ ಇಷ್ಟವಿಲ್ಲ. ಹೇಗಾದರೂ ಮಾಡಿ ಸಹನಾಳನ್ನು ಮನೆಯಿಂದ ಓಡಿಸಿ ಬಿಡಬೇಕು ಇಲ್ಲವಾದರೆ ಆಕೆಯನ್ನು ಸಾಯಿಸಿ ಬಿಡಬೇಕು ಎನ್ನುವ ಆಲೋಚನೆ ಮಾಡುತ್ತಿರುತ್ತಾಳೆ. ಈ ವಿಚಾರ ಆಕೆಯ ಅಳಿಯನ ಜೊತೆ ಪ್ರಸ್ತಾಪ ಮಾಡುತ್ತಿರುತ್ತಾಳೆ.
ಕಾಲೇಜಿಗೆ ಬಂದ ಸ್ನೇಹಾ ಕಂಠಿ
ತಂಗಿ ಸುಮಾ ಪರೀಕ್ಷೆಯಲ್ಲಿ ಫೈಲ್ ಆಗಿದ್ದಾಳೆ ಎಂದು ತಿಳಿದು ಸ್ನೇಹಾ ಬಹಳ ಶಾಕ್ ಆಗಿದ್ದಾಳೆ. ಸುಮಾ ಕಾಲೇಜಿಗೆ ತೆರಳಿದ ಸ್ನೇಹಾ ಹಾಗೂ ಕಂಠಿ ಪ್ರಿನ್ಸಿಪಾಲ್ ಬಳಿ ಮಾತನಾಡುತ್ತಾರೆ. ನನ್ನ ತಂಗಿ ಓದುವುದರಲ್ಲಿ ಚಿಕ್ಕಂದಿನಿಂದಲೂ ಸದಾ ಮುಂದು. ಆದರೆ ಆಕೆ ಫೈಲ್ ಆಗಿದ್ದಾಳೆ ಎಂದರೆ ನಂಬಲು ಅಸಾಧ್ಯ. ದಯವಿಟ್ಟು ನಿಮ್ಮ ಕಾಲೇಜಿನ ಸಿಸಿಟಿವಿ ಚೆಕ್ ಮಾಡಿ ಎಂದು ಸ್ನೇಹಾ ಪ್ರಿನ್ಸಿಪಾಲ್ ಬಳಿ ಕೇಳಿಕೊಂಡಾಗ ಸರಿ ಎಂದು ಒಪ್ಪಿಗೆ ಕೊಟ್ಟು ಫುಟೇಜ್ ತರಿಸಿಕೊಂಡು ನೋಡಿದಾಗ ಎಲ್ಲರಿಗೂ ಶಾಕ್ ಆಗುತ್ತದೆ.

ಸಿಸಿಟಿವಿ ಫುಟೇಜ್ ನೋಡಿ ಶಾಕ್
ಸುಮಾ ಆನ್ಸರ್‌ಶೀಟ್ ಅನ್ನು ಯಾರೋ ಖದೀಮರು ತೆಗೆಯುತ್ತಿರುವುದನ್ನು ನೋಡಿ ಮತ್ತಷ್ಟು ಶಾಕ್ ಆಗುತ್ತದೆ. ಶಿವಾನಿ ಮಾತ್ರ ಭಯದಲ್ಲಿ ತತ್ತರಿಸಿ ಹೋಗಿದ್ದಾಳೆ. ಇನ್ನೂ ಶಿವಾನಿ ಮಾಡಿದ ಕುತಂತ್ರ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ ಹತ್ತಿರ ಇದೆ. ಸುಮಾಳನ್ನು ಕಂಡರೆ ಶಿವಾನಿಗೆ ಆಗಲ್ಲ. ಸುಮಾಗೆ ಪುರುಷೋತ್ತಮ ಅಂದರೆ ಬಹಳ ಅಚ್ಚುಮೆಚ್ಚು. ಆದರೆ ಆತ ಶಿವಾನಿಯ ಜೀವನಕ್ಕೆ ಬಂದ ಬಳಿಕ ಸುಮಾ ಇನ್ನಷ್ಟು ದೂರ ಆಗುತ್ತಾಳೆ.
ಸ್ನೇಹಾ ಖಡಕ್ ಮಾತಿಗೆ ಸೈಲೆಂಟ್
ಇದೀಗ ಶಿವಾನಿಯೇ ಆನ್ಸರ್ ಶೀಟ್ ಬದಲಾಯಿಸಿ ಇರುವುದು ಎಂದು ಎಲ್ಲರಿಗೂ ಗೊತ್ತಾಗುವ ಸಮಯ ಹತ್ತಿರಕ್ಕೆ ಬಂದಿದೆ. ಯಾರು ಈ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೂ ಸ್ನೇಹ ಮಾತ್ರ ಸುಮ್ಮನಿರುವವಳಲ್ಲ. ಮುಂದೆ ಶಿವಾನಿ ಗ್ರಹಚಾರ ಕಾದಿದ್ಯಾ? ಸ್ನೇಹಾಳ ಮುಂದಿನ ನಡೆಯೇನು? ಕಾದು ನೋಡಬೇಕಿದೆ.


Click it and Unblock the Notifications











