Puttakkana Makkalu: ಸಹನಾ ಮುರಳಿ ದಾಂಪತ್ಯದಲ್ಲಿ ಬಿರುಕು; ಕೌಸಲ್ಯಗೆ ಖುಷಿ

By Poorva

ಕೌಸಲ್ಯ ಮಗನ ಎದುರು ಒಂದು ರೀತಿ ಸೊಸೆಯನ್ನು ನಡೆಸಿಕೊಳ್ಳುತ್ತಾಳೆ. ಹಾಗೆಯೇ ಮಗ ಮನೆಯಲ್ಲಿ ಇಲ್ಲದೇ ಇರುವ ವೇಳೆ ಒಂದು ರೀತಿ ನಡೆದುಕೊಳ್ಳುತ್ತಾಳೆ. ಇದರಿಂದ ಸಹನಾಗೆ ಅತ್ತೆಯ ಮೇಲಿರುವ ಕೋಪವನ್ನು ತೋರಿಸಲು ಅವಕಾಶವೇ ಸಿಗುತ್ತಾ ಇರಲಿಲ್ಲ. ಹಾಗೆಯೇ ಮುರಳಿಗೆ ಈ ಬಗ್ಗೆ ಹೇಗೆ ಹೇಳುವುದು ಎನ್ನುವುದೇ ಸಹನಾಗೆ ಬೇಸರ. ಆದರೆ ಪ್ರೇಮಿಗಳ ದಿನದಂದು ನಾನು ಅತ್ತೆಯ ಬಗ್ಗೆ ಗಂಡನ ಬಳಿ ಸತ್ಯ ಹೇಳಿ ಬಿಡೋಣ ಎಂದುಕೊಳ್ಳುತ್ತಾಳೆ.

ಅತ್ತೆಯ ಬಗ್ಗೆ ಪ್ರೇಮಿಗಳ ದಿನವೇ ಹೇಳಿದ ಕಾರಣ ಆ ದಿನವನ್ನು ಕೂಡ ಸರಿಯಾಗಿ ಆಚರಣೆ ಮಾಡಲು ಸಾಧ್ಯ ಆಗುವುದು ಇಲ್ಲ. ಇದನ್ನೆಲ್ಲ ನೋಡಿದ ಸಹನಾಗೆ ಬೇಸರ ಆಗುತ್ತದೆ. ನನ್ನ ಮಾತಿಗೆ ಯಾವುದೇ ಬೆಲೆ ಇಲ್ಲವಲ್ಲ. ನಾನು ಅಷ್ಟೊಂದು ಕೆಟ್ಟವಳಾ? ಪ್ರೀತಿ ಮಾಡುತ್ತಾ ಇದ್ದಾಗ ನನ್ನ ಗಂಡ ನನ್ನ ಮಾತು ಕೇಳುತ್ತಿದ್ದರು. ಆದರೆ ಇದೀಗ ನಿಜ ಹೇಳಿದರು ನಂಬುತ್ತಿಲ್ಲ ಎಂದು ಬೇಸರಗೊಂಡಿದ್ದಾಳೆ.

Puttakkana makkalu Kannada serial written update 23th February

ಸಹನಾ ಮನೆಯ ಹೊರಗೆ ಕುಳಿತುಕೊಂಡು ತನಗಾದ ಅವಮಾನಕ್ಕೆ ಅಳುತ್ತಾ ಇರುತ್ತಾಳೆ. ಇದನ್ನು ನೋಡಿದ ಕೌಸಲ್ಯ ಸದ್ಯ ಸಹನಾ ಮಾತನ್ನು ಮುರಳಿ ನಂಬಿಲ್ಲ. ಮುರಳಿ ನಮ್ಮ ಕಡೆಗೆ ಇದ್ದಾನೆ ಎಂದು ಖುಷಿ ಪಡುತ್ತಾಳೆ. ಮುರಳಿ ಬೆಡ್ ರೂಂನಲ್ಲಿ ಅತ್ತಿಂದ ಇತ್ತ ಹೊರಳಾಡುತ್ತ ಇರುವಾಗ ಪಕ್ಕದಲ್ಲಿ ಸಹನಾ ಇಲ್ಲದೇ ಇರುವುದನ್ನು ನೋಡಿ ರೂಮ್ ಇಂದ ಹೊರಗೆ ಬರುತ್ತಾನೆ.

ಆಗ ಕೌಸಲ್ಯ ಎದುರಲ್ಲಿ ನಿಂತುಕೊಂಡು ಇರುತ್ತಾಳೆ. ಸಹನಾ ಮನೆಯ ಹೊರಗೆ ಇದ್ದಾಳೆ. ಮನೆಯ ಒಳಗೆ ಬಾ ಎಂದರೆ ನನ್ನ ಮೇಲೆಯೇ ರೇಗಾಡುತ್ತಾ ಇರುತ್ತಾರೆ. ಅದಕ್ಕೆ ನೀನು ಒಂದು ಸಲ ಆಕೆಯನ್ನು ಮನೆಯ ಒಳಗೆ ಕರೆದುಕೊಂಡು ಬಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮುರಳಿ ಆಯಿತು ಎಂದು ಸಹನಾ ಬಳಿಗೆ ಹೋಗಿ ಸಮಾಧಾನ ಮಾಡಲು ಆದಷ್ಟು ಪ್ರಯತ್ನ ಪಡುತ್ತಾನೆ.

ಸಹನಾಗೆ ಮನವೊಲಿಸಲು ಮುರಳಿ ಯತ್ನ

ಮುರಳಿ ಮಾತು ಸಹನಾ ಕೇಳಲ್ಲ. ಮುರಳಿ ಮೇಲೆಯೇ ಉರಿದು ಬೀಳುತ್ತಾಳೆ. ನನ್ನ ಮಾತಿನ ಮೇಲೆ ನಂಬಿಕೆ ಇಲ್ಲ ನಿಮಗೆ . ಮದುವೆಗೆ ಮುಂಚೆ ನನ್ನ ಮಾತನ್ನು ಸ್ವಲ್ಪವಾದರೂ ನಂಬುತ್ತಿದ್ದಿರಿ. ಆದರೆ ಇದೀಗ ನನ್ನ ಮೇಲೆ ನಂಬಿಕೆ ಸ್ವಲ್ಪವೂ ನಿಮಗೆ ಇಲ್ಲವಾಗಿದೆ ಎಂದಾಗ ಮುರಳಿ ಸಮಾಧಾನ ಪಡಿಸಲು ಹೋಗುತ್ತಾನೆ. ಆದರೆ ಅದು ಕೊನೆಗೆ ಸಾಧ್ಯ ಆಗದೇ ರೂಮ್‌ಗೆ ಹೋಗುತ್ತಾನೆ. ಸಹನಾ ಮಾಡುತ್ತಿರುವ ಆರೋಪದಿಂದ ಮುರಳಿ ಹಾಗೂ ಸಹನಾ ಮಧ್ಯೆ ಕೊಂಚ ಮಟ್ಟಿಗೆ ಬಿರುಕು ಕಾಣಿಸಿಕೊಂಡಿದೆ.

Puttakkana makkalu Kannada serial written update 23th February

ಕಂಠಿಗೆ ರೈತನಾಗುವ ಕನಸು

ಕಂಠಿ ಮಾತ್ರ ಬೆಳೆ ಬೆಳೆಯುವತ್ತ ಹೆಚ್ಚು ಗಮನ ಕೊಡುತ್ತಾ ಇದ್ದಾನೆ. ಕಂಠಿಗೆ ತಾನು ಒಬ್ಬ ರೈತ ಆಗಬೇಕು ಎಂದು ಬಹಳ ಕಷ್ಟ ಪಟ್ಟು ದುಡಿಯುತ್ತಾ ಜೀವನ ಸಾಗಿಸುತ್ತಾ ಇದ್ದಾನೆ ಕಂಠಿ. ತನ್ನ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ತಾಯಿಗೆ ತಕ್ಕ ಮಗ ಆಗಬೇಕು ಎಂದು ಯೋಚನೆ ಮಾಡಿ ಕೆಲಸ ಮಾಡುತ್ತಾನೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇದೀಗ ರೈತರ ಕಷ್ಟದ ದಿನಗಳ ಬಗ್ಗೆ ಎಳೆ ಏಳೆಯಾಗಿ ತೋರಿಸುತ್ತಿದ್ದಾರೆ.

ಕಥೆಯಲ್ಲಿ ರೈತರ ಏಳು ಬೀಳು

ರೈತರ ಏಳು ಬೀಳು ಹಾಗೆಯೇ ಸಾಲ ತೆಗೆದುಕೊಂಡರೆ ಅದನ್ನು ಹಿಂದಿರುಗಿಸಲು ಕಷ್ಟ ಪಡುವ ವಿಚಾರ ಆತ್ಮಹತ್ಯೆಗೆ ಶರಣಾಗುವ ರೈತರ ಬಗ್ಗೆಯೂ ಧಾರಾವಾಹಿಯಲ್ಲಿ ತೋರಿಸಲಾಗ್ತಿದೆ. ಇದೀಗ ರೈತನೋರ್ವ ಬೆಳೆ ಸರಿಯಾಗಿ ಬಾರದೇ ಸಾಲ ತೀರಿಸಲು ಆಗದೇ ಆತ್ಮಹತ್ಯೆ ಮಾಡಲು ಮುಂದಾಗುತ್ತಾನೆ. ರೈತನ ಮಗಳು ಕಂಠಿಯ ಬಳಿ ಬಂದು ನಡೆದ ವಿಚಾರಗಳನ್ನು ಹೇಳುತ್ತಾ ಇರುತ್ತಾಳೆ. ಇದನ್ನು ಕೇಳಿ ಕಂಠಿ ರೈತನನ್ನು ರಕ್ಷಣೆ ಮಾಡಲು ಮುಂದಾಗುತ್ತಾನೆ.

More from Filmibeat

English summary
Puttakkana makkalu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X