Puttakkana makkalu: ಬದ್ಧ ವೈರಿಗಳಾದ ಪುಟ್ಟಕ್ಕನ ಅಳಿಯಂದಿರು; ಕಂಠಿ ಕಾಲರ್ ಪಟ್ಟಿ ಹಿಡಿದ ಮುರಳಿ
ಬಂಗಾರಮ್ಮನ ಮನೆಗೆ ಹೋಗಿ ಮುರಳಿ ಗಲಾಟೆ ಮಾಡಿದ ವಿಚಾರ ಕಂಠಿಗೆ ತಿಳಿಯುತ್ತದೆ. ಮನೆಯಲ್ಲಿ ಅಷ್ಟೆಲ್ಲ ಗದ್ದಲ ಗಲಾಟೆ ಆಗುತ್ತಿದ್ದರೂ ಸ್ನೇಹಾ ಜೊತೆ ಕಂಠಿ ಮಾತ್ರ ಗದ್ದೆಯಲ್ಲಿ ರೊಮ್ಯಾನ್ಸ್ ಮಾಡುತ್ತಿರುತ್ತಾನೆ. ಕೊನೆಗೆ ಅವರಿಬ್ಬರೂ ಮನೆಗೆ ಬಂದಾಗ ಎಲ್ಲರೂ ಸಪ್ಪಗಾಗಿ ಬಿಡುತ್ತಾರೆ.
ಬಂಗಾರಮ್ಮನವರ ಬಗ್ಗೆ ಅವಹೇಳನಕಾರಿಯಾಗಿ ಎಲ್ಲರ ಮುಂದೆ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಮುರಳಿ ಬೈದು ಹೋಗಿರುತ್ತಾನೆ. ಇದೆಲ್ಲ ಕೇಳಿಸಿಕೊಂಡ ಬಂಗಾರಮ್ಮ ಬಹಳ ನೋವಿನಲ್ಲಿರುತ್ತಾಳೆ. ನಾನು ಮಾಡದ ತಪ್ಪಿಗೆ ಈ ರೀತಿ ಮಾತನಾಡುತ್ತಿದ್ದಾರಲ್ಲ ಎಂದು ಬಹಳ ಬೇಸರಪಟ್ಟಿಕೊಂಡಿರುತ್ತಾಳೆ.

ಇತ್ತ ಮುರಳಿಗೆ ಕುಡಿದ ಮತ್ತಿನಲ್ಲಿ ತಾನು ಏನು ಮಾತನಾಡಿದೆ ಎನ್ನುವ ಪರಿವೇ ಇಲ್ಲದೆ ಬಂಗಾರಮ್ಮನಬಗ್ಗೆ ಇಲ್ಲಸರದ ಆರೋಪಗಳನ್ನ ಮಾಡಿ ಅಲ್ಲಿಂದ ಹೊರಟು ಹೋಗುತ್ತಾನೆ. ಮನೆಗೆ ಬಂದ ಕಂಠಿ ಅಮ್ಮನ ನೋವನ್ನ ಕೇಳಿ ದುಃಖ ತಡೆಯಲು ಆಗದೇ ಮರುದಿನ ಬೆಳಗ್ಗೆ ನೇರವಾಗಿ ಮುರುಳಿಯವರ ಮನೆಗೆ ಹೋಗುತ್ತಾನೆ. ಮುರಳಿ ಮನೆಯಿಂದ ಹೊರಗೆ ಬರುತ್ತಾನೆ. ಹ್ಞೂಂ ನಿನ್ನ ಹೆಂಡತಿ ಸ್ನೇಹ ನಿನಗೆ ಈಗಲೂ ಕೂಡ ಕಿವಿ ಚುಚ್ಚಿಬಿಟ್ಟಳಾ ಎಂದು ಮುರಳಿ ವ್ಯಂಗ್ಯವಾಗಿ ಮಾತನಾಡುತ್ತಾನೆ.
ಮುರಳಿ ಮಾತು ಕೇಳಿ ಕಂಠಿ, ನಾನು ಯಾರ ಮಾತನ್ನು ಕೇಳಿ ಇಲ್ಲಿಗೆ ಬಂದಿಲ್ಲ. ನೀವು ನಿನ್ನೆ ರಾತ್ರಿ ಮನೆಯ ಬಳಿ ಬಂದಿದ್ದರಂತೆ. ಅಲ್ಲಿ ನನ್ನ ಅವ್ವನಿಗೆ ಬಾಯಿಗೆ ಬಂದ ಹಾಗೆ ಮಾತನಾಡಿ ಇಲ್ಲಿ ಬಂದು ನಿದ್ದೆ ಮಾಡಿದ್ದೀರಿ ಅಲ್ವಾ? ಎಂದು ಬಹಳ ಕೋಪದಿಂದ ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಮುರಳಿ ನಿಮ್ಮ ತಾಯಿಯವರು ಬಹಳ ದೊಡ್ಡ ನಟಿಯಲ್ಲವೇ? ನನ್ನ ಹಾಗೂ ಸಹನಾಳನ್ನ ಇಬ್ಬರನ್ನ ಒಂದು ಮಾಡುತ್ತೇನೆ ಎಂದು ಹೇಳಿ ನಮ್ಮಿಬ್ಬರನ್ನು ಅವರು ದೂರ ಮಾಡಿಬಿಟ್ಟರು. ಇನ್ಮೇಲೆ ನನಗೆ ಸಹಾಯ ಸಿಗುವುದಿಲ್ಲ. ಇದೇ ಗತಿ ನಿಮಗೆ ಬಂದಿದ್ದರೆ ನೀವೇನು ಮಾಡುತ್ತಿದ್ದೀರಿ? ಎನ್ನುತ್ತಾನೆ. ಕಂಠಿ ಮೇಷ್ಟ್ರೇ ನಿಮ್ಮ ತಾಯಿ ಹಾಗೂ ನಿಮ್ಮ ಭಾವ ಆ ರೀತಿ ಮಾಡಿದ ಕಾರಣ ಅವರು ಇದೀಗ ಜೈಲು ಪಾಲಾಗಿದ್ದಾರೆ ಎನ್ನುತ್ತಾನೆ.
ಕಂಠಿ ಮಾತಿಗೆ ಸೊಪ್ಪು ಹಾಕದ ಮೇಷ್ಟ್ರು
ಸಹನಾ ಅವರೇ ಕಂಪ್ಲೇಂಟ್ ಕೊಟ್ಟು ನಿಮ್ಮ ತಾಯಿಯವರನ್ನ ಜೈಲು ಪಾಲಾಗುವ ಹಾಗೆ ಮಾಡಿದ್ದಾರೆ. ಅವರು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆಯನ್ನ ಸಹನಾ ನೀಡಿದ್ದಾರೆ. ಇದಕ್ಕೆ ನೀವು ನನ್ನ ತಾಯಿಯನ್ನು ಬೈಯ್ಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಂಠಿ ಪ್ರಶ್ನೆ ಮಾಡುತ್ತಾನೆ. ಆದರೆ ಮುರಳಿ ಮಾತ್ರ ತನ್ನದೇ ಆದ ಉತ್ತರವನ್ನು ಹೇಳಿ ಅಲ್ಲಿಗೆ ಸುಮ್ಮನಾಗುತ್ತಾನೆ. ಆದರೆ ಮುರಳಿಗೆ ಬಂಗಾರಮ್ಮನವರ ಮೇಲೆ ಬಹಳ ಕೋಪವಿರುತ್ತದೆ.

ತಾರಕಕ್ಕೇರಿದ ಕಂಠಿ ಮುರಳಿ ಜಗಳ
ಇದೀಗ ಇವರಿಬ್ಬರ ಜಗಳ ತಾರಕಕ್ಕೇರುತ್ತದೆ. ಪುಟ್ಟಕ್ಕನ ಅಳಿಯಂದಿರು ಇಬ್ಬರು ಕೂಡ ಕಿತ್ತಾಡಿಕೊಳ್ಳುತ್ತಾರೆ. ಮುರಳಿಯ ಕಣ್ಣಿಗೆ ಪೊರೆ ಬಿದಿರುವುದಂತೂ ಅಕ್ಷರಶಃ ಸತ್ಯ. ಮುರಳಿ ತಾಯಿ ಕೌಸಲ್ಯ ಹಾಗೂ ಆತನ ಭಾವ ಸುಕುಮಾರ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಹನಾಗೆ ಊಟದಲ್ಲಿ ವಿಷ ಬೆರೆಸಿ ಕೊಡುವಷ್ಟು ಕೆಟ್ಟವರು ಎಂದರೆ ತಪ್ಪಾಗಲಾರದು. ವರದಕ್ಷಿಣೆ ಕಿರುಕುಳ, ವಿಷ ಹಾಕಿರುವ ವಿಚಾರ ಆಗಿರಬಹುದು ಇದಕ್ಕೆಲ್ಲ ಕೋರ್ಟ್‌ನಲ್ಲಿ ಸಾಕ್ಷಿ ಕೇಳುತ್ತಾರೆ.
ಕೌಸಲ್ಯಗೆ ಶಿಕ್ಷೆ ಆಗಬೇಕೆಂದ ವೀಕ್ಷಕರು
ಸರಿಯಾದ ಸಾಕ್ಷಿಯನ್ನ ಒದಗಿಸಲಿಲ್ಲ ಎಂದರೆ ಸುಕುಮಾರ ಹಾಗೂ ಕೌಸಲ್ಯ ಇಬ್ಬರೂ ಕೂಡ ಜೈಲಿನಿಂದ ರಿಲೀಸ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ವೀಕ್ಷಕರು ಮಾತ್ರ ಕೌಸಲ್ಯಳಂತ ಅತ್ತೆ ಯಾರಿಗೂ ಬೇಡ. ಸಿಕ್ಕರೆ ಅವರಿಗೆ ಕೂಡ ಇದೇ ಗತಿ ಆಗಬೇಕು ಎಂದು ಹಿಡಿಶಾಪ ಹಾಕುತ್ತಿದ್ದಾರೆ.


Click it and Unblock the Notifications











