Puttakkana makkalu: ಕಂಠಿ- ಸ್ನೇಹಾ ದಾಂಪತ್ಯದಲ್ಲಿ ಬಿರುಕು; ಆ ದೂರಿನಿಂದ ಕಂಠಿ ಮನಸ್ಸು ಛಿದ್ರ
ಒಂದು ಕಡೆಯಲ್ಲಿ ಮುರಳಿ ಹಾಗೂ ಕಂಠಿ ಕಿತ್ತಾಡಿಕೊಂಡಿದ್ದರೆ ಇನ್ನೊಂದು ಕಡೆ ಬಂಗಾರಮ್ಮನವರ ಬಡ್ಡಿ ವ್ಯವಹಾರದಿಂದ ಒಂದು ಜೀವಕ್ಕೆ ಕಂಟಕ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ. ಯಾಕೆಂದರೆ ಬಂಗಾರಮ್ಮ ಬಡವರಿಗೆ ಸಹಾಯ ಆಗಲಿ ಎಂದು ಬಡ್ಡಿ ವ್ಯವಹಾರವನ್ನು ಮಾಡುತ್ತಿರುತ್ತಾಳೆ.
ಆ ಬಡ್ಡಿ ಹಣವನ್ನು ಕಟ್ಟಲು ಕೆಲವರಿಂದ ಆಗುವುದು ಇಲ್ಲ. ಇದರಿಂದ ಕಂಗೆಟ್ಟ ಅನೇಕ ಜನ ತಮ್ಮ ಜೀವವನ್ನು ಕಳೆದುಕೊಂಡು ಇರುವುದಂತೂ ಸತ್ಯ. ಆದರೆ ಈ ವಿಚಾರ ಸ್ನೇಹಾಗೆ ಗೊತ್ತಾಗಿದೆ. ಸ್ನೇಹಾ, ಅಕ್ಕ ಗೌರಿ ಎನ್ನುವಾಕೆಯ ತಂದೆ ಮಹಡಿಯ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುತ್ತಾನೆ. ಇದನ್ನು ನೋಡಿದ ಗೌರಿಗೆ ಬಹಳ ಶಾಕ್ ಆಗುತ್ತದೆ.

ತಂದೆ ಯಾಕಾದರೂ ಇಂತಹ ಕೆಲಸವನ್ನು ಮಾಡಿದರು ಎಂದು ಗೌರಿ, ಸ್ನೇಹಗೆ ಕರೆ ಮಾಡುತ್ತಾಳೆ, ಸ್ನೇಹ ನನ್ನ ತಂದೆ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ನನಗೆ ಬಹಳ ಭಯವಾಗುತ್ತಿದೆ. ಹೇಗಾದರೂ ಮಾಡಿ ನನ್ನ ತಂದೆಯನ್ನು ಉಳಿಸಿಕೊಡಿ ಎಂದು ಅಂಗಲಾಚುತ್ತಾಳೆ. ನನ್ನ ತಂದೆ ಬಂಗಾರಮ್ಮ ಅವರ ಕೈಯಿಂದ ಸಾಲವನ್ನು ತೆಗೆದುಕೊಂಡಿದ್ದರು. ಆದರೆ ಸಾಲದ ಬಡ್ಡಿಯನ್ನು ಕಟ್ಟಬೇಕು ಎಂದು ಬಂಗಾರಮ್ಮ ಅವರು ತಾಕೀತು ಮಾಡಿದ್ದರು. ಆದರೆ ತಂದೆಗೆ ಸಾಲದ ಬಡ್ಡಿಯನ್ನು ಕಟ್ಟಲು ಆಗದೆ ಆತ್ಮಹತ್ಯೆಗೆ ಯತ್ನಿಸಿದರು. ಇದೀಗ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎನ್ನುತ್ತಾಳೆ.
ಬಂಗಾರಮ್ಮ ಮನೆಯಲ್ಲಿ ಪೊಲೀಸ್
ನನಗೆ ಭಯ ಆಗುತ್ತಿದೆ ಎಂದು ಗೌರಿ ಫೋನ್ ಮಾಡಿ ಸ್ನೇಹಗೆ ಏನು ಮಾಡಬೇಕೆಂದು ತಿಳಿಯದಾಗುತ್ತದೆ. ಕೊನೆಗೆ ಸ್ನೇಹಾ ಆಸ್ಪತ್ರೆ ಬಳಿ ಇರುತ್ತಾಳೆ. ಆಕೆ ಪೊಲೀಸರಿಗೆ ಕರೆ ಮಾಡಿ ಬಂಗಾರಮ್ಮ ಅವರ ಮೇಲೆ ಕಂಪ್ಲೇಂಟ್ ಮಾಡುತ್ತಾಳೆ. ಪೊಲೀಸರು ಬಂಗಾರಮ್ಮ ಅವರ ಮನೆಗೆ ಬಂದಾಗ ರಾಧಾಗೆ ಶಾಕ್ ಆಗುತ್ತದೆ. ಯಾಕೆ ಪೊಲೀಸರು ಬಂದಿದ್ದಾರೆ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ಸ್ನೇಹಾ ಕೊಂಚ ಜೋರಾಗಿಯೇ ಹೇಳುತ್ತಾಳೆ. ಅತ್ತೆಯ ಜೊತೆ ಮಾತನಾಡಬೇಕಾಗಿತ್ತು. ಅವರ ಮೇಲೆ ಕೇಸ್ ಫೈಲ್ ಆಗಿದೆ ಎಂದು ಹೇಳಿದಾಗ ಬಂಗಾರಮ್ಮ ಮನೆಗೆ ಬರುತ್ತಾಳೆ.
ಕಂಠಿ ಮಾತಿಗೆ ಮನ್ನಣೆ ಕೊಡದ ಪೊಲೀಸರು
ನನ್ನ ಮನೆಯತ್ತ ಖಾಕಿವರು ಸುಳಿಯಬಾರದು ಎಂದು ಬಂಗಾರಮ್ಮ ಹೇಳಿದಾಗ ಪೊಲೀಸರು, ನಿಮ್ಮ ಮೇಲೆ ಕೇಸ್ ದಾಖಲು ಆಗಿದೆ. ನೀವು ಪೊಲೀಸ್ ಸ್ಟೇಷನ್‌ಗೆ ಬರಬೇಕು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ, ನಿಮ್ಮ ಸೊಸೆ ಸ್ನೇಹಾ ನಿಮ್ಮ ಮೇಲೆ ಕೇಸ್ ಕೊಟ್ಟಿದ್ದಾರೆ ಎಂದಾಗ ಬಂಗಾರಮ್ಮಗೆ ಶಾಕ್ ಆಗುತ್ತದೆ. ಕೊನೆಗೆ ಪೊಲೀಸರು ಸ್ಟೇಷನ್‌ಗೆ ಕರೆದುಕೊಂಡು ಹೋಗಲು ಅನುವಾದಾಗ ಕಂಠಿ ಬರುತ್ತಾನೆ. ಆತ ಏನು ಎತ್ತ ಎಂದು ಪ್ರಶ್ನೆ ಮಾಡಿದಾಗ ಸ್ನೇಹಾ ಕಂಪ್ಲೇಂಟ್ ಕೊಟ್ಟಿರುವುದರ ಬಗ್ಗೆ ಹೇಳುತ್ತಾರೆ .

ಸ್ನೇಹಾ ಮಾಡಿದ ಎಡವಟ್ಟಿನಿಂದ ಜೈಲು ಪಾಲಾದ ಬಂಗಾರಮ್ಮ
ಕಂಠಿ ಮಾತಿಗೆ ಕ್ಯಾರೆ ಅನ್ನದೇ ಪೊಲೀಸರು ಬಂಗಾರಮ್ಮನನ್ನು ಪೊಲೀಸರು ಕರೆದುಕೊಂಡು ಹೋಗುತ್ತಾರೆ. ಆದ್ರೆ ಸೊಸೆಯ ನಿರ್ಧಾರದಿಂದ ಬಂಗಾರಮ್ಮ ನಮನೆಯವರಿಗೆ ಬಹಳ ಬೇಸರ ಉಂಟಾಗುತ್ತದೆ. ಸ್ನೇಹಾ ನಡೆಗೆ ಕಂಠಿ ಬಹಳ ಬೇಸರ ವ್ಯಕ್ತ ಪಡಿಸುತ್ತಾನೆ. ಇದೆಲ್ಲ ನರಿಬುದ್ದಿಯ ರಾಧಾಗೆ ಪ್ಲಸ್ ಪಾಯಿಂಟ್ ಆದಂತಾಗಿದೆ.


Click it and Unblock the Notifications











