Puttakkana makkalu: ಜೈಲು ಪಾಲಾದ ಬಂಗಾರಮ್ಮ; ಸ್ನೇಹಾ ನಡೆಯ ಬಗ್ಗೆ ಕಂಠಿ ಗರಂ

By Poorva

ಸ್ನೇಹಾ ಮಾಡಿದ ಕೆಲಸದಿಂದಾಗಿ ಬಂಗಾರಮ್ಮಗೆ ಸಂಕಷ್ಟ ಎದುರಾದಂತೆ ಕಾಣುತ್ತದೆ. ಬಂಗಾರಮ್ಮ ಊರನವರಿಗೆ ಸಹಾಯ ಆಗಲಿ ಎಂದು ಕಮ್ಮಿ ಬಡ್ಡಿಗೆ ಹಣ ಕೊಟ್ಟಿರುತ್ತಾಳೆ. ಆದರೆ ಕೆಲವರು ಬಡ್ಡಿ ಹಣ ತೆಗೆದುಕೊಂಡು ಉದ್ಧಾರ ಆಗಿದ್ದರೆ ಇನ್ನೂ ಕೆಲವರು ಸಾಲ ಪಡೆದು ಬಡ್ಡಿ ಕಟ್ಟಲು ಆಗದೆ ಪರದಾಡುತ್ತಿದ್ದರು. ಈ ವಿಚಾರವೆಲ್ಲ ಬಂಗಾರಮ್ಮ ಅವರ ಗಮನಕ್ಕೆ ಬಂದಿರುವುದಿಲ್ಲ. ಆದರೆ ಇದೀಗ ಬಂಗಾರಮ್ಮ ಸ್ಟೇಷನ್ ಮೆಟ್ಟಿಲೇರಿದ್ದಾಳೆ.

ಸೊಸೆಯ ನಡೆಯನ್ನು ನೋಡಿ ಬಂಗಾರಮ್ಮ ಶಾಕ್ ಆದರೆ ಕಂಠಿ ಮಾತ್ರ ಸ್ನೇಹಾ ಮೇಲೆ ಗರಂ ಆಗಿರುತ್ತಾನೆ. ಸ್ನೇಹಾ, ಕಂಠಿಯ ಮಾತಿಗೆ ಮರ್ಯಾದೆ ಕೊಟ್ಟು ಕೇಸ್ ವಾಪಸ್ ತೆಗೆದುಕೊಳ್ಳುತ್ತಾಳೆ ಎಂದು ಕೊಂಡರೆ ಅದು ಆಗಿದ್ದೆ ಬೇರೆ. ಅಮ್ಮನನ್ನು ಹೇಗಾದರೂ ಮಾಡಿ ಜೈಲಿನಿಂದ ರಿಲೀಸ್ ಮಾಡಬೇಕು ಎಂದು ಅಂದುಕೊಂಡಾಗ ಮೊದಲು ನೆನಪು ಆಗಿದ್ದೆ ಚಂದ್ರು. ಕರೆ ಮಾಡಿದ ಕಂಠಿ ಗಡಿಬಿಡಿಯಿಂದ ಹೇಳುತ್ತಾನೆ. ನನ್ನ ಅಮ್ಮನನ್ನು ಜೈಲಿಗೆ ಹಾಕಿದ್ದಾರೆ. ದಯವಿಟ್ಟು ಅವರನ್ನು ಬಿಡಿಸಿ ಎಂದು ಹೇಳಿದಾಗ ಚಂದ್ರು ಯಾಕೆ ಏನು ಎತ್ತ ಎಂದು ತಿಳಿದುಕೊಳ್ಳದೆ ನೇರವಾಗಿ ಪೊಲೀಸ್ ಸ್ಟೇಷನ್‌ಗೆ ಬರುತ್ತಾನೆ.

Puttakkana makkalu kannada serial written update on 11th April

ಕಂಠಿಗೆ ಬಾವನನ್ನು ನೋಡಿ ಕೊಂಚ ರಿಲೀಫ್ ಆದರೆ ಬಂಗಾರಮ್ಮ ಅವರನ್ನು ಪೊಲೀಸ್ ಸ್ಟೇಷನ್‌ನಲ್ಲಿ ನೋಡಲು ಹಿಂಸೆ ಆಗುತ್ತದೆ. ಇದೆಲ್ಲ ಯಾರೋ ಬೇಕಂತಲೇ ಮಾಡುತ್ತಿದ್ದಾರೆ ಎಂದು ಚಂದ್ರು ಬಳಿ ಕಂಠಿ ಹೇಳುತ್ತಾನೆ. ದೊಡ್ಡ ಮೋಸದ ಜಾಲ ಅಡಗಿದೆ. ನನ್ನ ಅಮ್ಮನನ್ನು ಹೇಗಾದರೂ ಮಾಡಿ ಜೈಲಿಗೆ ಹಾಕಬೇಕು ಎಂದುಕೊಂಡದ್ದರೋ ಅದೇ ರೀತಿ ಮಾಡಿದ್ದಾರೆ. ಆದರೆ ಇದೆಲ್ಲ ಸ್ನೇಹಾಗೆ ಅರ್ಥ ಆಗದೇ ಆಕೆ ದೂರು ಕೊಟ್ಟಿದ್ದಾಳೆ ಎಂದು ಚಂದ್ರು ಬಳಿ ಹೇಳುತ್ತಾರೆ.

ಬಂಗಾರಮ್ಮ ಸ್ಥಿತಿ ಕಂಡು ಚಂದ್ರು ಬೇಸರ

ಬಡ್ಡಿ ವಸೂಲಿ ವಿಚಾರದಿಂದ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಇದೀಗ ಅವರ ಸ್ಟೇಟ್ಮೆಂಟ್ ತೆಗೆದುಕೊಳ್ಳಲು ಆಗುತ್ತಿಲ್ಲ, ಅವರು ಬರೆದ ಚೀಟಿ ನಮ್ಮ ಕೈ ಸೇರಿದೆ. ಆದ ಕಾರಣ ಬಂಗಾರಮ್ಮ ಅವರನ್ನು ಅರೆಸ್ಟ್ ಮಾಡಬೇಕಾಗಿ ಬಂದಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದಾಗ ಬಂಗಾರಮ್ಮಗೆ ಶಾಕ್ ಆಗುತ್ತದೆ . ಚಂದ್ರುಗೂ ಇದು ಅಚ್ಚರಿ ತರುತ್ತದೆ. ಆತನಿಗೆ ಜಾಮೀನು ಕೊಡಲು ಆಗುವುದಿಲ್ಲ, ಕಾರಣ ಕೇಸ್ ಅಷ್ಟು ದೊಡ್ಡದಾಗಿದೆ. ಕಂಠಿಗೆ ಅಮ್ಮನನ್ನು ನೋಡಿ ಅಳು ಬರುತ್ತದೆ.

ಮುರಳಿಗೆ ಡಿವೋರ್ಸ್‌ ಕೊಡಲು ಮುಂದಾದ ಸಹನಾ

ಇತ್ತ ಸಹನಾ, ಮುರಳಿಗೆ ಡಿವೋರ್ಸ್‌ ನೋಟಿಸ್ ಕೊಡಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಆಕೆಗೆ ಮುರಳಿ ಜೊತೆ ಬಾಳಲು ಸ್ವಲ್ಪ ಕೂಡ ಇಷ್ಟ ಇರುವುದಿಲ್ಲ. ಮನದಲ್ಲಿ ಮುರಳಿ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಮುರಳಿ ಮಾತ್ರ ಅದ್ಯಾವುದನ್ನೂ ಕ್ಯಾರೆ ಮಾಡುತ್ತಿಲ್ಲ. ಆತನಿಗೆ ತನ್ನ ತಾಯಿಯ ಬಗ್ಗೆಯೇ ಚಿಂತೆ. ಹೆಂಡತಿ ಗೆ ವಿಷ ಬೆರೆಸಿ ತಾಯಿ ಸಾಯಿಸಲು ಪ್ರಯತ್ನ ಪಟ್ಟಿದ್ದರು, ಕೌಸಲ್ಯ ಪರವಾಗಿಯೇ ಮುರಳಿ ಮಾತನಾಡುತ್ತಾನೆ. ಸಹನಾ, ಮುರಳಿ ಬಗ್ಗೆ ಇಟ್ಟುಕೊಂಡಿರುವ ನಂಬಿಕೆ ಹುಸಿ ಆಗುತ್ತದೆ.

Puttakkana makkalu kannada serial written update on 11th April

ಸಹನಾ ನಿರ್ಧಾರಕ್ಕೆ ಚಂದ್ರು ಶಾಕ್

ಮುರಳಿ ಮಾತಿನಿಂದ ಸಹನಾಗೆ ಬಹಳ ಬೇಸರ ಆಗುತ್ತದೆ. ಆದರೆ ಇದನ್ನೆಲ್ಲ ಇಲ್ಲಿಗೆ ಅಂತ್ಯ ಹಾಡಬೇಕು ಎಂದು ಡಿವೋರ್ಸ್ ಕೊಡುವುದಾಗಿ ನಿಶ್ಚಯ ಮಾಡುತ್ತಾಳೆ. ಚಂದ್ರು ಬಳಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಚಂದ್ರುಗೆ ಶಾಕ್ ಆಗುತ್ತದೆ. ಆಕೆಯ ಜೊತೆ ಕಂಠಿ ಕೂಡ ಇರುತ್ತಾನೆ. ಮಾಡದ ತಪ್ಪಿಗೆ ಸಹನಾ ಶಿಕ್ಷೆ ಅನುಭವಿಸುತ್ತಿದ್ದಾಳೆ.

More from Filmibeat

English summary
Puttakkana makkalu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X