Puttakkana Makkalu: ಮಗಳ ಸ್ಥಿತಿ ಕಂಡು ಗೋಪಾಲ ಶಾಕ್; ಪತ್ನಿಯನ್ನು ಅರ್ಥ ಮಾಡಿಕೊಳ್ತಾನಾ ಮುರಳಿ?
ಸಹನಾ ಬಹಳ ತಾಳ್ಮೆ ಉಳ್ಳವಳು. ಯಾರೇ ಆಕೆಗೆ ಎದುರಾಗಿ ಸಂಚು ಮಾಡಿದರೆ ಅವರ ವಿರುದ್ಧ ಹೋರಾಟ ಮಾಡಿ ಗೆದ್ದು ಬೀಗುತ್ತಾಳೆ. ಅಂತಥದ್ದರಲ್ಲಿ ಆಕೆಗೆ ತನ್ನ ಗಂಡನಿಂದ ಅವಮಾನ ಆದರೆ ಹೇಗೆ ಸಹಿಸಿಕೊಳ್ಳುತ್ತಾಳೆ. ಮುರಳಿ ಎಂದರೆ ಸಹನಾಗೆ ಬಹಳ ಪ್ರೀತಿ. ಆದರೆ ಮುರಳಿ ಮನೆಯವರಿಂದಾಗಿ ಇದೀಗ ಬಹಳ ನೋವು ಅನುಭವಿಸುತ್ತಿದ್ದಾಳೆ.
ಸಹನಾನನ್ನು ಕಂಡರೆ ಕೌಸಲ್ಯಗೆ ಆಗುವುದು ಇಲ್ಲ. ಸಹನಾಳನ್ನು ಹೇಗಾದರೂ ಮಾಡಿ ಮುರಳಿಯಿಂದ ದೂರ ಮಾಡಬೇಕು ಎನ್ನುವುದು ಕೌಸಲ್ಯ ಮನದಲ್ಲಿ ಇರುತ್ತದೆ.

ಮುರಳಿಗೆ ಸಹನಾ ಮತ್ತಷ್ಟು ಹತ್ತಿರ ಆದರೆ ನಮಗೆ ಉಳಿಗಾಲ ಖಂಡಿತ ಇಲ್ಲ. ಇದರಿಂದ ಆಗಿ ಸಹನಾಳನ್ನು ಸಾಯಿಸಿ ಬಿಡಬೇಕು ಎಂದು ಆಲೋಚನೆ ಮಾಡಿ ಊಟದಲ್ಲಿ ವಿಷ ಬೆರಸಿ ಇಟ್ಟಿರುತ್ತಾರೆ. ಮುರಳಿ ಬಳಿ ಸಹನಾ ಅದೆಷ್ಟೇ ಬಾರಿ ಹೇಳಿದರೂ ಮುರಳಿ ಮಾತ್ರ ಸಹನಾ ಮೇಲೆಯೇ ರೇಗಿ ಬಿಡುತ್ತಾನೆ.
ಯಾಕೆ ಹೀಗೆಲ್ಲ ಮಾಡುತ್ತಾ ಇದ್ದೀರಿ? ಸಹನಾ ನನ್ನ ಅಮ್ಮ ನಿಮಗೆ ಇಷ್ಟ ಇಲ್ಲ ಎನ್ನುವುದು ನನಗೆ ತಿಳಿದಿದೆ. ನಿಮಗೆ ನಮ್ಮ ಅಮ್ಮ ಇಷ್ಟ ಇಲ್ಲದಿದ್ದರೂ ತೊಂದರೆ ಇಲ್ಲ. ಈ ರೀತಿ ಆಪಾದನೆ ಮಾಡುವುದು ಸರಿಯಲ್ಲ. ದಯವಿಟ್ಟು ತಾಳ್ಮೆಯಿಂದ ಇರಿ ಎಂದಾಗ ಕೊಂಚ ಏರು ಧ್ವನಿಯಲ್ಲಿ ಸಹನಾ ಮಾತನಾಡುತ್ತಾಳೆ. ನೀವು ಇಲ್ಲದ ವೇಳೆ ಅತ್ತೆ ನನ್ನ ಜೊತೆ ಬಹಳ ನಿಕೃಷ್ಠವಾಗಿ ಮಾತನಾಡುತ್ತಾರೆ ಎನ್ನುತ್ತಾಳೆ.
ಸಹನಾ ಮಾತು ಸಹಿಸದ ಮುರಳಿ
ನಿಮ್ಮಮ್ಮ ನಿಮ್ಮ ಎದುರು ಏನು ಆಗಿಲ್ಲ ಎನ್ನುವ ಹಾಗೆ ಇರುತ್ತಾರೆ. ಅವರ ಪ್ಲಾನ್ ನನಗೆ ತಿಳಿದಿದೆ. ನಿಮ್ಮ ಮತ್ತು ನಿಮ್ಮ ಗೆಳತಿಯ ಮೇಲೆ ಅನುಮಾನ ಬರುವಂತೆ ಮಾಡಿದ್ದೆ ನಿಮ್ಮ ತಾಯಿ. ನಿಮ್ಮ ಭಾವ ನನ್ನ ಹಾಗೂ ಸುಮಾ ಮೇಲೆ ಕಣ್ಣು ಹಾಕಿದ್ದರು. ಎಂತಹ ನೀಚ ಕೃತ್ಯ ಮಾಡಲು ಹೇಸುವವರು ಅಲ್ಲ ನಿಮ್ಮ ಭಾವ. ನಿಮ್ಮ ಅಕ್ಕ ಚಿತ್ರ ನನ್ನ ಬಂಗಾರವನ್ನು ಎನ್ನುವಾಗ ಮುರಳಿಗೆ ಬಹಳಷ್ಟು ಕೋಪ ಬರುತ್ತದೆ. ಆತ ಆಕೆಯ ಮಾತನ್ನು ಅರ್ಧದಲ್ಲೇ ತಡೆಯುತ್ತಾನೆ.

ಸಹನಾಗೆ ಹೊಡೆಯಲು ಹೋದ ಮುರಳಿ
ಸಹನಾ ಅವರೇ ನಿಮಗೆ ನನ್ನ ಮನೆಯವರ ಮೇಲೆ ಇಂತಹ ತಪ್ಪು ಕಲ್ಪನೆ ಇದೆ, ಎಂದು ಹೇಳಿ ಮಾತಿಗೆ ಮಾತು ಬೆಳೆಯುತ್ತದೆ. ಆ ಬಳಿಕ ಸಹನಾ ಕೆನ್ನೆಗೆ ಹೊಡೆಯಲು ಮುಂದಾಗುತ್ತಾನೆ ಮುರಳಿ. ಇದನ್ನು ನೋಡಿ ಸಹನಾಗೆ ಬಹಳ ಬೇಸರ ಆಗುತ್ತದೆ. ಆಕೆ ಮುರಳಿಯಿಂದ ಹಿಂದೆ ಸರಿಯುತ್ತಾಳೆ. ತಾನು ಎಲ್ಲವನ್ನೂ ಫೇಸ್ ಮಾಡಲು ರೆಡಿ, ನನ್ನ ವಿರುದ್ದ ನಿಂತವರ ವಿರುದ್ಧವಾಗಿ ನಾನು ನಿಲ್ಲುತ್ತೇನೆ. ಆದರೆ ನಿಮ್ಮನ್ನು ನಾನು ಬಹಳ ನಂಬಿದ್ದೇನೆ ನಿಮ್ಮ ವಿರುದ್ದ ನಿಲ್ಲಲು ನನ್ನಿಂದ ಆಗುತ್ತಿಲ್ಲ ಎಂದಾಗ ಸಹನಾಳನ್ನು ಮುರಳಿ ಸಮಾಧಾನ ಮಾಡುತ್ತಾನೆ.
ಸಹನಾಳನ್ನು ಸಮಾಧಾನ ಮಾಡಿದ ಮುರಳಿ
ಸಹನಾ ಅವರೇ ದಯವಿಟ್ಟು ನನ್ನ ಕ್ಷಮಿಸಿ ಬಿಡಿ. ನಿಮ್ಮನ್ನು ನಾನು ಸೈಕಿಯಾಟ್ರಿಸ್ಟ್ ಬಳಿ ತೋರಿಸುತ್ತೇನೆ ಎಂದಾಗ ಸಹನಾ ತೀಕ್ಷ್ಣವಾಗಿ ಮುರಳಿಯನ್ನು ನೋಡುತ್ತಾಳೆ. ನನ್ನ ಮಾತನ್ನು ಯಾವತ್ತೂ ಕೇಳುವುದೇ ಇಲ್ಲ ಅಲ್ಲ. ನಾನು ಈ ಊಟವನ್ನು ತಿನ್ನುತ್ತೇನೆ ಎಂದು ತಿನ್ನುತ್ತಾಳೆ. ಇದನ್ನು ನೋಡಿ ಅಲ್ಲಿಂದ ಮುರಳಿ ಕಾಲೇಜಿಗೆ ಹೋಗುತ್ತಾನೆ. ಸಹನಾ ತಿಂದ ಊಟದಲ್ಲಿ ವಿಷ ಬೆರೆಸಲಾಗಿತ್ತು. ಆಕೆ ವಾಂತಿ ಮಾಡಿಕೊಂಡು ಅಲ್ಲೇ ಕೆಳಗೆ ಬಿದ್ದು ಹೋಗುತ್ತಾಳೆ. ಇದನ್ನು ಕೌಸಲ್ಯ ನೋಡಿ ನಗುತ್ತಾಳೆ. ಅಲ್ಲಿಗೆ ಬಂದ ಗೋಪಾಲಗೆ ಮಗಳ ಸ್ಥಿತಿ ಕಂಡು ಶಾಕ್ ಆಗುತ್ತದೆ.


Click it and Unblock the Notifications











