Puttakkana makkalu: ಸಹನಾ ಹುಡುಕಿ ಹೊರಟ ಪುಟ್ಟಕ್ಕ; ಪುಟ್ಟಕ್ಕನ ಮಾತಿಗೆ ಸುಮಾ ಶಾಕ್

By Poorva

ಸ್ನೇಹಾ, ಪುಟ್ಟಕ್ಕನ ನೆನಪಲ್ಲೇ ಇದ್ದಾಳೆ. ಆಕೆಗೆ ಅವ್ವನೇ ಎಲ್ಲಾ. ಅವ್ವನನ್ನು ಬಿಟ್ಟು ಒಂದು ನಿಮಿಷ ಕೂಡ ಇರಲಾರಳು. ಬಂಗಾರಮ್ಮನಿಗೆ ಊಟ ಬಡಿಸುವಾಗಲೂ ಕೂಡ ಬಿಸಿ ಸಾರು ಅವರ ಕೈಗೆ ಬೀಳುತ್ತದೆ. ಆದರೆ ಅವರು ಅದನ್ನು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಯಾಕೆಂದರೆ ಆಕೆಗೆ ತನ್ನ ಅವ್ವ ಏನು ಮಾಡುತ್ತಿದ್ದಾರೆ ಎನ್ನುವ ನೋವು ಇತ್ತು. ಯೋಚನೆ ಇತ್ತು.

ಇನ್ನೂ ಎಲ್ಲರೂ ಸ್ನೇಹಾ ಬಳಿ ಬಂಗಾರಮ್ಮ ಮಾತನಾಡುತ್ತಾಳೆ. ನೀನು ಊಟಕ್ಕೆ ಕುಳಿತುಕೋ ಸ್ನೇಹಾ ಎಂದು ಹೇಳಿ ಊಟ ಬಡಿಸಿ ಕುಳಿತುಕೊಂಡು ಇರುತ್ತಾಳೆ. ಆದರೆ ಸ್ನೇಹಾ ಊಟ ಮಾಡದೇ ಇರುವುದನ್ನು ಗಮನಿಸಿದ ಬಂಗಾರಮ್ಮ, ಸ್ನೇಹಾ ನೀನು ನಿನ್ನ ತಾಯಿ ಮನೆಗೆ ಹೋಗಬಹುದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾಗೆ ಎನು ಮಾಡಬೇಕು ತಿಳಿಯದೇ ಕಂಗಾಲು ಆಗುತ್ತಾಳೆ. ಇತ್ತ ರಾಧಾಗೆ ಮಾತ್ರ ಬಹಳ ಖುಷಿ ಆಗುತ್ತದೆ. ಇನ್ನೂ ಬಂಗಾರಮ್ಮ ಸ್ನೇಹಾಳನ್ನು ಆಕೆಯ ಮನೆಗೆ ಕಳುಹಿಸಿದ ಉದ್ದೇಶ ಒಳ್ಳೆಯದೇ ಇದೆ.

Puttakkana makkalu kannada serial written update on 13th May episode

ಸ್ನೇಹಾ ನೀನು ಅಮ್ಮನ ಒಟ್ಟಿಗೆ ಇರು. ನೀನು ಹಿರಿಮಗಳ ಸ್ಥಾನ ತೆಗೆದುಕೊಳ್ಳಬೇಕು ಎನ್ನುತ್ತಾಳೆ. ನಾನು ಅಲ್ಲಿಗೆ ಹೋದರೆ ಅಮ್ಮನಿಗೆ ಮತ್ತಷ್ಟು ನೀವು ಆಗುತ್ತದೆ. ಅದಕ್ಕೆ ನಾನು ಹೋಗುವುದಿಲ್ಲ ಎಂದು ಸ್ನೇಹಾ ಹೇಳಿ ಅಳುತ್ತಾಳೆ. ಆಗ ಬಂಗಾರಮ್ಮ, ಸ್ನೇಹಾಗೆ ಸಮಾಧಾನ ಮಾಡುತ್ತಾಳೆ. ಅವ್ವನನ್ನು ನೋಡಿಕೊಳ್ಳಬೇಕು, ಆಕೆಯನ್ನ ಇಂತಹ ಸಮಯದಲ್ಲಿ ಒಬ್ಬೊಂಟಿಯಾಗಿ ಬಿಡಬಾರದು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುತ್ತಾಳೆ. ಇದನ್ನು ಕೇಳಿದ ಸ್ನೇಹಾ ಆಯಿತು ಎಂದು ಒಪ್ಪಿಕೊಂಡು ಬಿಡುತ್ತಾಳೆ.

ಸ್ನೇಹಾಳನ್ನು ಮನೆಗೆ ಬಿಡಲು ತಾಕೀತು

ಹಾಗೆಯೇ ಬಂಗಾರಮ್ಮ, ಸ್ನೇಹಳನ್ನು ಆಕೆಯ ಮನೆಗೆ ಬಿಡಲು ಮಗನಿಗೆ ತಾಕೀತು ಮಾಡುತ್ತಾಳೆ. ಅತ್ತೆ ಇದೀಗ ಸ್ನೇಹಾ ಕಡೆ ವಾಲುತ್ತಿದ್ದಾಳೆ ಎಂದು ಅಂದು ರಾಧಾ ಅಂದುಕೊಳ್ಳುತ್ತಾಳೆ. ಇತ್ತ ಸಹನಾ ಮಾತ್ರ ದೇವಾಲಯದಲ್ಲಿ ಕಾಲ ಕಲಿಯುತ್ತಿದ್ದಾಳೆ. ಆಕೆಗೆ ಇದೀಗ ದೇವರೇ ಒಂದು ದಾರಿ ತೋರಿಸಿದ್ದಾರೆ. 150 ಜನರಿಗೆ ಪ್ರಸಾದ ನೀಡುವ ಅವಕಾಶ ಆಕೆಗೆ ಸಿಕ್ಕಿದೆ. ಆಕೆ ಬಹಳ ಕಾನ್ಫಿಡೆನ್ಸ್‌ನಿಂದ ಆಯಿತು ಎಂದು ಒಪ್ಪಿಗೆ ಕೂಡ ನೀಡಿದ್ದಾಳೆ. ಹಾಗೆಯೇ ಅಡುಗೆ ಕೂಡ ಮಾಡುತ್ತಿದ್ದಾಳೆ.

Puttakkana makkalu kannada serial written update on 13th May episode

ಗೋಪಾಲನನ್ನು ದೂರಿದ ಪುಟ್ಟಕ್ಕ

ಪುಟ್ಟಕ್ಕಗೆ ಗೋಪಾಲ ಅದೆಷ್ಟೇ ಸಮಾಧಾನ ಮಾಡಿದರೂ ಇದಕ್ಕೆಲ್ಲ ನೀನೇ ಕಾರಣ ನೀನು ಈ ಮನೆಗೆ ಬಂದ ಘಳಿಗೆ ಸರಿ ಇಲ್ಲ. ಯಾಕೆಂದರೆ ನೀನು ಬಂದ ಬಳಿಕ ನನ್ನ ಮನೆಯಲ್ಲಿ ಇಷ್ಟೆಲ್ಲ ರಾದ್ಧಾಂತ ಆಗುತ್ತಿದೆ ಎಂದು ಗೋಪಾಲನನ್ನು ಶಪಿಸುತ್ತಾಳೆ. ಇದನ್ನು ಕೇಳಿದ ಗೋಪಾಲನಿಗೆ ಬಹಳ ನೋವಾಗುತ್ತದೆ.

ಅಮ್ಮನ ಸ್ಥಿತಿ ಕಂಡು ಮರುಗಿದ ಸುಮಾ

ಸಹನಾ ನೆನಪಾಗಿ ಪುಟ್ಟಕ್ಕ ಆಕೆಯನ್ನು ಹುಡುಕಲು ಹೊರಡುತ್ತಾಳೆ. ಆಕೆಯನ್ನು ತಡೆಯಲು ಬಂದ ಗೋಪಾಲ ಹಾಗೂ ಸುಮಾಳನ್ನು ನೋಡಿ ಪುಟ್ಟಕ್ಕ ಖಡಕ್ ಆಗಿ ಹೇಳುತ್ತಾಳೆ. ನೀವು ನನ್ನ ಜೊತೆ ಬಂದರೆ ಮತ್ತೆ ಯಾವತ್ತೂ ನಾನು ಈ ಮನೆಗೆ ಬರುವುದು ಇಲ್ಲ ಎಂದು ಹೇಳುತ್ತಾಳೆ.

More from Filmibeat

English summary
Puttakkana makkalu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X