Puttakkana makkalu: ಮಾಡದ ತಪ್ಪಿಗೆ ಬಂಗಾರಮ್ಮಗೆ ಶಿಕ್ಷೆ: ಸ್ನೇಹಾಗೆ ಸತ್ಯ ತಿಳಿಯುತ್ತಾ?
ಪುಟ್ಟಕ್ಕ, ಬಂಗಾರಮ್ಮನ ಬಳಿ ಬಂದು ತನ್ನ ಮಗಳದ್ದು ತಪ್ಪಾಯ್ತು, ಆಕೆ ತಪ್ಪು ಮಾಡಿಬಿಟ್ಟಿದ್ದಾಳೆ. ಆಕೆಯನ್ನು ಕ್ಷಮಿಸಿ ಎಂದು ಬೇಡಿಕೊಳ್ಳುತ್ತಾಳೆ. ಆಗ ಬಂಗಾರಮ್ಮ ಕೊಂಚ ಕೋಪದಲ್ಲಿಯೇ ಇರುತ್ತಾಳೆ. ಪುಟ್ಟಕ್ಕ ಇನ್ನೆಷ್ಟು ಬಾರಿ ನಿನ್ನ ಮಗಳ ತಪ್ಪಿಗೆ ಕ್ಷಮೆ ಕೇಳುತ್ತೀಯಾ? ಎಂದು ಕೇಳುತ್ತಾಳೆ.
ನಿನ್ನ ಮಗಳು ತಪ್ಪು ಮಾಡುತ್ತಿದ್ದಾಳೆ ಎಂದು ನಿನಗೆ ಗೊತ್ತಿದೆ. ಆದರೂ ನೀನು ನನ್ನ ಬಳಿ ಕ್ಷಮೆ ಯಾಚಿಸುತಿದ್ದೀಯಾ ಇದು ಎಷ್ಟರಮಟ್ಟಿಗೆ ಸರಿ, ನಿನ್ನ ಮಗಳ ತಪ್ಪಿಗೆ ಈ ಬಾರಿ ನನ್ನ ಬಳಿ ಕ್ಷಮೆ ಇಲ್ಲ. ಹಾಗೆ ನಾನು ಜೈಲಿನಿಂದ ರಿಲೀಸ್ ಆದ ಬಳಿಕ ನನ್ನ ಮನೆಯಲ್ಲಿ ಆಕೆ ಇರುತ್ತಾಳೆ ಎಂದು ನಾನು ಹೇಳುವುದಿಲ್ಲ, ಎಂದು ಪುಟ್ಟಕ್ಕನ ಬಳಿ ಬಂಗಾರಮ್ಮ ಕಡ್ಡಿ ಮುರಿದ ಹಾಗೆ ಹೇಳುತ್ತಾಳೆ.

ಬಂಗಾರಮ್ಮ ಮಾತಿನಿಂದ ಪುಟ್ಟಕ್ಕಗೆ ಬಹಳ ಬೇಸರಾಗುತ್ತದೆ. ನಾನು ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗುತ್ತಾಳೆ. ಸಹನಾ ಹಾಗೆ ಸ್ನೇಹ ಜೀವನ ಕೂಡ ಹಾಳಾಗಿ ಬಿಡುತ್ತದೆ ಎನ್ನುವುದು ಪುಟ್ಟಕ್ಕನ ಯೋಚನೆ. ಆದರೆ ಈ ಬಾರಿ ಕೂಡ ಆಕೆಗೆ ಕಂಟಕವಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಪುಟ್ಟಕ್ಕ, ಕಂಠಿ ಬಳಿ ಕೂಡ ಬಹಳ ಬೇಡಿಕೊಳ್ಳುತ್ತಾಳೆ. ನನ್ನ ಮಗಳು ತಪ್ಪು ಮಾಡಿದ್ದಾಳೆ ದೂರು ಕೊಡಬಾರದಾಗಿತ್ತು ಎನ್ನುತ್ತಾಳೆ.
ಅತ್ತೆ ಈ ವಿಚಾರದಲ್ಲಿ ಸ್ನೇಹಾಗೆ ಕ್ಷಮೆಯಿಲ್ಲ. ನನ್ನ ತಾಯಿ ಏನು ತಪ್ಪು ಮಾಡದೆ ಜೈಲುವಾಸವನ್ನ ಅನುಭವಿಸುತ್ತಿದ್ದಾರೆ. ಆದರೆ ಸ್ನೇಹ ಮಾತ್ರ ಹಿಂದೂ ಮುಂದು ಯೋಚನೆ ಮಾಡದೆ ಅಮ್ಮನ ಬಗ್ಗೆ ಕಂಪ್ಲೇಂಟ್ ಕೊಟ್ಟಿರುವುದು ಮಾತ್ರ ಸರಿಯಲ್ಲ ಎನ್ನುತ್ತಾನೆ. ಪುಟ್ಟಕ್ಕಗೆ ಏನು ಮಾಡಬೇಕೆಂದು ಗೊತ್ತಾಗದೆ ಬಹಳ ಆತಂಕದಿಂದ ಮನೆಗೆ ಬರುತ್ತಾಳೆ.
ಸ್ನೇಹಾ ಮನೆಯಲ್ಲೇ ಇರುತ್ತಾಳೆ. ಸಹನಾ ಬಳಿ ಡೈವರ್ಸ್ ವಿಷಯದ ಬಗ್ಗೆ ಮಾತನಾಡುತ್ತಿರುತ್ತಾಳೆ. ಅಕ್ಕ ನಿನಗೆ ಏನಾದರೂ ತಲೆ ಕೆಟ್ಟಿದೆಯಾ? ಯಾಕೆ ನೀನು ಹೀಗೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ ನನಗೆ ಅವರ ಜೊತೆ ಬದುಕು ನಡೆಸಲು ನನಗೆ ಇಷ್ಟವಿಲ್ಲ ಎಂದು ಸಹನಾ ಖಡಕ್ ಆಗಿ ಹೇಳುತ್ತಾಳೆ.

ಸಹನಾ ಮಾತು ಕೇಳಿ ದಂಗಾದ ಸ್ನೇಹಾ
ನನ್ನನ್ನೇ ತಾತ್ಸಾರದಿಂದ ನೋಡಿದವರು ಇದೀಗ ನನ್ನ ಜೊತೆ ಬಂದು ಸಂಸಾರ ನಡೆಸುತ್ತಾರೆ ಎನ್ನುವ ಯಾವುದೇ ಭರವಸೆ ನನಗೆ ಉಳಿದಿಲ್ಲ. ಹಾಗಾಗಿ ನಾನು ಅವರಿಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಸಹನಾ ಹೇಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಪುಟ್ಟಕ್ಕ ಬರುತ್ತಾಳೆ. ಸ್ನೇಹಳನ್ನು ನೋಡಿ ಬಹಳ ಕೋಪಗೊಂಡ ಪುಟ್ಟಕ್ಕ ಅಲ್ಲಿ ಅತ್ತೆಯನ್ನು ಪೊಲೀಸ್ ಸ್ಟೇಷನ್‌ಗೆ ಗೆ ಹಾಕಿ ಇಲ್ಲಿಗೆ ಬಂದು ಏನು ಮಾಡುತ್ತಿದ್ದೀಯಾ ನೀನು? ಎಂದು ಕೇಳಿತ್ತಾಳೆ. ಸ್ನೇಹಾಗೆ ಏನು ಉತ್ತರಿಸಬೇಕೆಂದು ಕೊಂಚ ಗೊತ್ತಾಗದೇ ನಿಲ್ಲುತ್ತಾಳೆ. ಇಬ್ಬರ ನಡುವೆ ವಾಗ್ವಾದ ನಡೆದು ಪುಟ್ಟಕ್ಕ ಕಪಾಳಕ್ಕೆ ಹೊಡೆಯುವ ತನಕ ಹೋಗುತ್ತದೆ.
ಅಮ್ಮನನ್ನು ತಡೆದ ಸಹನಾ
ಸಹನಾ ಅಮ್ಮನನ್ನು ತಡೆಯುತ್ತಾಳೆ. ಬಂಗಾರಮ್ಮ ಅವರು ಏನು ತಪ್ಪು ಮಾಡಿಲ್ಲ ಎಂದಾದರೆ ಅವರು ಅದನ್ನು ಸಮರ್ಥಿಸಿಕೊಳ್ಳಲಿ ಅದಕ್ಕೆ ನೀವು ಯಾಕೆ ಇಷ್ಟು ಕಿತ್ತಾಡುತ್ತಿದ್ದೀರಾ? ಎಂದಾಗ ಪುಟ್ಟಕ್ಕಗೆ ಇನ್ನಷ್ಟು ಕೋಪ ಬರುತ್ತದೆ. ನನಗೆ ಯಾರು ಬುದ್ದಿ ಹೇಳುವುದು ಬೇಕಾಗಿಲ್ಲ. ಎಲ್ಲರೂ ನಮಗೆ ಬುದ್ದಿ ಹೇಳುವವರೇ ಎಂದು ಕೋಪಗೊಳ್ಳುತ್ತಾಳೆ. ನಮಗೆಲ್ಲ ಸ್ಫೂರ್ತಿ ನೀವೇ ಅಮ್ಮ ನೀವು ಈ ರೀತಿ ಮಾಡಿದರೆ ನಾವು ಎಲ್ಲಿಗೆ ಹೋಗಲಿ ಎಂದು ಬೇಸರಪಟ್ಟುಕೊಂಡು ಇರುತ್ತಾರೆ.
ರಾಣಿ ತಾಯಿ ಮುಚ್ಚಿಟ್ಟ ಸತ್ಯ ಎನು?
ಕಂಠಿ ಜೊತೆ ಮಾತನಾಡುತ್ತಾ ರಾಣಿ ಮನೆಗೆ ಪುಟ್ಟಕ್ಕ ಹೋಗುತ್ತಾಳೆ . ಪುಟ್ಟಕ್ಕನನ್ನು ನೋಡಿ ರಾಣಿ ತಾಯಿ ಆತಂಕ ಪಟ್ಟುಕೊಂಡು ಹಣವನ್ನು ಬೇಗ ಬೇಗ ಬೀರುವಿನಲ್ಲಿ ಇಡುತ್ತಾ ಇರುವುದನ್ನು ಪುಟ್ಟಕ್ಕ ನೋಡುತ್ತಾಳೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











