Puttakkana makkalu: ರಾಧಾ ಕಳ್ಳಾಟಕ್ಕೆ ಬ್ರೇಕ್; ರಾಜೇಶ್ವರಿ ಪಿತೂರಿಗೆ ಅಜ್ಜಿ ತಿರುಮಂತ್ರ?

By Poorva

ರಾಧಾ ತೆರೆ ಮರೆಯಲ್ಲಿ ನಡೆಸುತ್ತಿರುವ ಎಲ್ಲಾ ಕಳ್ಳಾಟಕ್ಕೆ ಬ್ರೇಕ್ ಬೀಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ರಾಜೇಶ್ವರಿ, ಸ್ನೇಹಾ ಜೀವನದಲ್ಲಿ ಬಿರುಗಾಳಿ ಎಬ್ಬಿಸಬೇಕು ಎಂದು ಆಲೋಚನೆ ಮಾಡುತ್ತಿದ್ದಾಳೆ. ಅದಕ್ಕಾಗಿ ರಾಧಾಳನ್ನು ದಾಳವಾಗಿ ರೂಪಿಸುತ್ತಿದ್ದಾಳೆ. ಪುಟ್ಟಕ್ಕನ ಸಂಸಾರವನ್ನು ಸರ್ವನಾಶ ಮಾಡಬೇಕು ಎಂದು ರಾಜೀ ಹೊಂಚು ಹಾಕುತ್ತಿದ್ದಾಳೆ.

ಈಗಾಗಲೇ ಸಹನಾ ಜೀವನವನ್ನು ರಾಜೀ ಹಾಳು ಮಾಡಿ ಬಿಟ್ಟಿದ್ದಾಳೆ. ಕೌಸಲ್ಯ ತಲೆಯಲ್ಲಿ ಇಲ್ಲದ್ದನ್ನು ತುಂಬಿ ಆಕೆಯ ತಲೆಯನ್ನು ಕೆಡಿಸಿ ಬಿಟ್ಟಳು. ಕೌಸಲ್ಯ, ಸಹನಾಗೆ ಕೊಡಬಾರದ ಹಿಂಸೆಯನ್ನು ಕೊಡುತ್ತಾಳೆ. ಕೊನೆಗೆ ಸಹನಳನ್ನೇ ಇಲ್ಲವಾಗಿಸಿ ಬಿಟ್ಟಿದ್ದಾಳೆ. ಆದರೆ ಇದೀಗ ರಾಧಾ ಜೊತೆ ಕೂಡಿಕೊಂಡು ಅವರಿಬ್ಬರೂ ಸ್ನೇಹಾ ಜೀವನವನ್ನು ಹಾಳು ಮಾಡಬೇಕು ಎಂದು ಯತ್ನಿಸುತ್ತಿದ್ದಾರೆ.

Puttakkana makkalu kannada serial written update on 15th May episode

ಸ್ನೇಹಾಗೆ ತನ್ನ ಹಿಂದೆ ನಡೆಯುತ್ತಿರವು ಪಿತೂರಿ ಬಗ್ಗೆ ಅರಿವು ಇರುವುದಿಲ್ಲ. ಬಂಗಾರಮ್ಮ, ಸ್ನೇಹಾ ನಡುವೆ ಬಹಳ ದೊಡ್ಡ ಕಂದಕವೇ ಏರ್ಪಟ್ಟಿದೆ. ಸ್ನೇಹಾ, ನಂಜಮ್ಮ ಮಾತಿನ ಪ್ರಕಾರವಾಗಿ ನಡೆದುಕೊಳ್ಳುತ್ತಾಳೆ. ಆಕೆ ಸರಿ ಇಲ್ಲ ಎಂದು ಬಂಗಾರಮ್ಮ ಬಹಳ ತಪ್ಪಾಗಿ ಸ್ನೇಹಾಳನ್ನು ತಿಳಿದುಕೊಂಡಿರುತ್ತಾರೆ. ಸ್ನೇಹಾಗೆ ತನ್ನ ಅತ್ತೆಯ ಮೇಲೆ ಇದೀಗ ಗೌರವ ಪ್ರೀತಿ ಶುರು ಆಗಿದೆ. ತನ್ನ ಅವ್ವನಿಗಾಗಿ ಆದರೂ ನನ್ನ ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದರಿಂದ ಆದರೂ ಅಮ್ಮನಿಗೆ ಖುಷಿ ಆಗುತ್ತದೆ ಎಂದು ಸ್ನೇಹಾ ಹೇಳುತ್ತಿರುತ್ತಾರೆ.

ಸ್ನೇಹಾಗೆ ಕಂಠಿ ಮೇಲೆ ಇದೀಗ ಪ್ರೀತಿ ಹೆಚ್ಚಾಗಿದೆ. ಕಂಠಿ ಏನೇ ಹೇಳಿದರೂ ಸ್ನೇಹಾ ಮುನಿಸಿಕೊಳ್ಳುವುದಿಲ್ಲ. ಸ್ನೇಹಾನ ಪ್ರತಿಯೊಂದು ಏಳು ಬೀಳುಗಳಲ್ಲಿ ಜೊತೆಯಾಗಿ ನಿಂತವರು ಕಂಠಿ. ಇದನ್ನೆಲ್ಲ ನೋಡಿದ ರಾಧಾ ಗೆ ಮನದಲ್ಲಿ ಅಸೂಯೆ ಮೂಡುತ್ತದೆ. ಪುಟ್ಟಕ್ಕ ಸರಿ ಹೋಗಬೇಕು ಎಂದಾದರೆ ಇನ್ನೊಮ್ಮೆ ತಾಯಿ ಮಾಡುತ್ತಿದ್ದ ಮೆಸ್ ಓಪನ್ ಮಾಡಲೇ ಬೇಕು. ಇಲ್ಲವಾದರೆ ಅಮ್ಮನನ್ನು ಕಂಟ್ರೋಲ್ ಮಾಡುವುದು ಬಹಳ ಕಷ್ಟ ಎಂದು ಕಂಠಿ ಹಾಗೂ ಸುಮಾನ ಬಳಿ ಹೇಳಿಕೊಳ್ಳುತ್ತಿರುತ್ತಾನೆ.

ಸಹನಾ ನೆನಪಲ್ಲೇ ಇರುವ ಪುಟ್ಟಕ್ಕ

ಸಹನಾ ನೆನಪಿನಿಂದ ಇನ್ನೂ ಪುಟ್ಟಕ್ಕ ಹೊರಬಾರದಿದ್ದರೆ ಎಲ್ಲರಿಗೂ ಕಷ್ಟ ಎಂದು ಗೋಪಾಲ ಆಗಾಗ ಹೇಳುತ್ತಿರುತ್ತಾನೆ. ಇನ್ನೂ ರಾಧಾ ಮನೆಯಲ್ಲಿ ಕುಳಿತು ರಾಜೇಶ್ವರಿಗೆ ಕರೆ ಮಾಡುತ್ತಾಳೆ. ಆಕೆ ಕೊಂಚ ಜೋರಾಗಿಯೇ ಮಾತನಾಡುತ್ತಾಳೆ. ರಾಜೇಶ್ವರಿ ಅವರೇ ನೀವು ಕೊಟ್ಟ ಪ್ಲಾನ್ ಯಾವುದು ವರ್ಕ್ ಆಗುತ್ತಿಲ್ಲ. ಇದೀಗ ನಮ್ಮ ಅತ್ತೆ ಹಾಗೂ ಸ್ನೇಹಾ ಒಂದಾಗುವ ಲಕ್ಷಣ ಕಾಣುತ್ತಿದೆ. ಅವರಿಬ್ಬರೂ ಕೂಡ ಸ್ವಲ್ಪ ಮಟ್ಟಿಗೆ ಹತ್ತಿರ ಆಗುತ್ತಿದ್ದಾರೆ. ಬಂಗಾರ ಅತ್ತೆಗೆ ಆಕೆಯ ಮೇಲೆ ಕನಿಕರ ಮೂಡುತ್ತಿದೆ ಎಂದಾಗ ರಾಜೇಶ್ವರಿ ಹೇಳುತ್ತಾಳೆ.

Puttakkana makkalu kannada serial written update on 15th May episode

ಪಿತೂರಿ ನಡೆಸುತ್ತಿರುವ ರಾಧಾ

ರಾಧ ಮಾತಿಗೆ ಇಷ್ಟೇನಾ? ಇದೀಗ ಎನು ಅವರಿಬ್ಬರನ್ನು ಬೇರೆ ಮಾಡಬೇಕು ಅಲ್ವಾ? ಎಂದು ಕೇಳುತ್ತಾಳೆ. ಬೇರೆ ಮಾಡುವುದು ಮಾತ್ರ ಅಲ್ಲ ಈಗ ಮನೆಗೆ ಹೋಗಿರುವ ಸ್ನೇಹಾ ಮತ್ತೆ ಎಂದು ಈ ಮನೆಯತ್ತ ಸುಳಿಯದ ಹಾಗೆ ಮಾಡಬೇಕು ಎನ್ನುತ್ತಾಳೆ. ಇವರಿಬ್ಬರು ಮಾತನಾಡುವುದನ್ನು ಬಂಗಾರಮ್ಮ ಅವರ ತಾಯಿ ಕೇಳಿಸಿಕೊಳ್ಳುತ್ತಾಳೆ. ಈ ವಿಚಾರ ರಾಧಾಗೆ ತಿಳಿದಿಲ್ಲ. ಆದರೆ ರಾಧಾ ಮಾಡುತ್ತಿರುವ ಪಿತೂರಿ ಅಜ್ಜಿಗೆ ತಿಳಿದು ಹೋಗಿದೆ.

ಸಹನಾ ನೆನಪಿನಲ್ಲಿರುವ ಮುರಳಿ

ಇನ್ನೂ ಸಹನಾ ಮಾತ್ರ ತನ್ನ ಕೆಲಸದಲ್ಲಿ ನಿರತರಾಗಿದ್ದಾಳೆ. 150 ಜನರಿಗೆ ಪ್ರಸಾದ ಮಾಡಿ ಸೈ ಎನಿಸಿಕೊಂಡಿದ್ದಾಳೆ. ಸಹನಾ ಇಲ್ಲದೇ ಮುರಳಿ ಕೂಡ ಕುಡಿತಕ್ಕೆ ದಾಸನಾಗಿದ್ದಾನೆ. ನನ್ನಿಂದಾಗಿಯೇ ಸಹನಾ ಸತ್ತಿರುವುದು. ಆಕೆಗೆ ಇಲ್ಲದೇ ನಾನು ಹೇಗಿರಲಿ ಎಂದು ಆಲೋಚನೆ ಮಾಡುತ್ತಿರುತ್ತಾನೆ.

More from Filmibeat

English summary
Puttakkana makkalu kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X