Puttakkana Makkalu: ಶಶಿಕಲಾ ಮಾಡಿದ ಎಡವಟ್ಟು; ಬಂಗಾರಮ್ಮ ಮುಂದೆ ವಸು ಅಲ್ಲ ಸ್ನೇಹಾ ಪ್ರೆಗ್ನೆಂಟ್!
ಮೇಷ್ಟ್ರ ಜಮೀನು ವಿಚಾರದಲ್ಲಿ ಪುಟ್ಟಕ್ಕ ಹಾಗೂ ಕಂಠಿ ಮುಂದೆ ಸೋತ ಬಂಗಾರಮ್ಮ ಕೆಲವು ಷರತ್ತುಗಳನ್ನು ಹಾಕಿದ್ದಾಳೆ. ಅದೇನೆಂದರೆ ಈ ಜಮೀನು ಪಾಳು ಬಿದ್ದಿದ್ದ ಜಾಗ ಅಲ್ಲ.. ಇಲ್ಲಿ ಕೂಡ ವ್ಯವಸಾಯ ಮಾಡಬಹುದು ಎಂದು ಕಂಠಿ ಹೇಳಿದಾಗ ಬಂಗಾರಮ್ಮ ಮಗ ಎಂದು ನೋಡದೆ, ಸರಿ ಹಾಗಾದರೆ ಈ ಜಾಗದಲ್ಲಿ ಬೆಳೆ ಬೆಳೆದು ನೋಡು . ಅದಾದ ಬಳಿಕ ನಾನು ಈ ಜಾಗವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾಳೆ . ಇದನ್ನು ಕೇಳಿದ ಕಂಠಿ ಷರತ್ತಿಗೆ ಒಪ್ಪಿಗೆ ಸೂಚಿಸಿಯೆ ಬಿಡುತ್ತಾನೆ.
ಪುರುಷೋತ್ತಮ ಏನೇ ಆದರೂ ಅಮ್ಮನ ಮನೆ ಒಳಗೆ ಹೊಗುವುದು ಇಲ್ಲ ಎಂದು ಹೇಳುತ್ತಿದ್ದ. ಆದರೆ ರಾಜೀ ಪ್ಲಾನ್ ಮಾಡಿ ಪುರುಷೋತ್ತಮನ ಕ್ಲಾಸ್ ಮೇಟ್‌ಗಳನ್ನ ಕರೆದುಕೊಂಡು ಬಂದು ಪುರುಷೋತ್ತಮನನ್ನು ಹೀಯಾಳಿಸುವ ಹಾಗೆ ಮಾತನಾಡಬೇಕು ಎಂದು ಹೇಳಿ ಕೊಟ್ಟಿರುತ್ತಾಳೆ. ರಾಜಿ ಹೇಳಿದ ಪ್ರಕಾರ ಪುರುಷೋತ್ತಮನನ್ನಿ ಹೀಯಾಳಿಸಿ ಮಾತನಾಡುತ್ತಾರೆ.

ಇದನ್ನು ನೋಡಿದ ಪುರುಷೋತ್ತಮ ಸರಿ ನಾನು ಮನೆ ಒಳಗೆ ಬರುವುದಿಲ್ಲ ಎಂದು ಹೇಳುತ್ತಾನೆ. ಪುರುಷೋತ್ತಮನ ಗೆಳತಿ ಹೇಳುತ್ತಾಳೆ ಪುರ್ಷಿ ನನ್ನನ್ನು ಇಲ್ಲಿಂದ ಕಾಲೇಜ್ ತನಕ ಕರೆದುಕೊಂಡು ಹೋಗುತ್ತೀಯಾ ಎಂದು ಹೇಳಿದಾಗ ಸರಿ ಆಯ್ತು ನಾನು ಒಳ್ಳೆಯ ಬಟ್ಟೆ ಹಾಕಿಕೊಂಡು ಬರುತ್ತೇನೆ ಎಂದು ಸೀದಾ ಮನೆ ಒಳಗೆ ಹೋಗುತ್ತಾನೆ. ಇದನ್ನು ನೋಡಿದ ರಾಜೇಶ್ವರಿ ಜೋರಾಗಿ ನಗುತ್ತಾಳೆ ಆಕೆಗೆ ತನ್ನ ಮಗ ಮನೆಯೊಳಗೆ ಬರುವುದು ಮಾತ್ರ ಬೇಕಾಗಿತ್ತು ಅದು ಹೇಗಾದರೂ ಸರಿ ಎಂದು ಆತನ ಗೆಳತಿಯನ್ನು ಒಪ್ಪಿಸಿ ಮನೆಗೆ ಕರೆದುಕೊಂಡು ಬಂದು ಪ್ಲಾನ್ ಮಾಡಿರುತ್ತಾಳೆ.
ಪುಟ್ಟಕ್ಕನ ಜೊತೆ ಇರಲು ನಿರ್ಧಾರ ಮಾಡಿದ ಗೋಪಾಲ
ಗೋಪಾಲ ತಲೆ ಸರಿ ಇದ್ದರು ಸರಿ ಇಲ್ಲದವರ ಹಾಗೆ ನಟನೆ ಮಾಡುತ್ತಾ ಪುಟ್ಟಕ್ಕನ ಮನೆಯಲ್ಲಿ ದಿನ ದುಡಿಯುತ್ತಿದ್ದಾರೆ. ರಾಜೇಶ್ವರಿ ಅತ್ಯಂತ ಕೀಳು ಮಟ್ಟಕ್ಕೆ ಹೋದ ಕಾರಣ ಗೋಪಾಲರ ಮನಸ್ಸು ಹಾಳಾಗಿ ಹೋಗಿರುತ್ತದೆ. ಇದರಿಂದಾಗಿ ನಾನು ಇದ್ದಷ್ಟು ದಿನ ಪುಟ್ಟಕ್ಕನ ಮನೆಯಲ್ಲಿ ಇರಬೇಕು ಎಂದು ಯೋಚನೆ ಮಾಡಿ ಜ್ಞಾಪಕ ಶಕ್ತಿ ಇಲ್ಲದವರ ಹಾಗೆ ನಟನೆ ಮಾಡುತ್ತಾ ಇರುತ್ತಾರೆ.
ಅಯ್ಯಪ್ಪ ದೇವರ ದರ್ಶನ ಮಾಡಲು ಹೊರಟ ಕಂಠಿ
ಹಾಗೆಯೇ ಕಂಠಿ ಈಗ ಸ್ವಾಮಿ ಅಯ್ಯಪ್ಪ ದೇವರ ದರ್ಶನ ಮಾಡಲು ತೆರಳಿದ್ದಾರೆ. ತನ್ನ ತಾಯಿ ಹಾಗೂ ಸ್ನೇಹ ಚೆನ್ನಾಗಿರಬೇಕು ಹಾಗೆ ಅವರಿಬ್ಬರ ನಡುವೆ ಇರುವ ಭಿನ್ನಾಭಿಪ್ರಾಯ ದೂರಾಗಿ ಸುಖವಾಗಿ ಬಾಳಬೇಕು ಎಂದು ಕಂಠಿ ಯೋಚನೆ ಮಾಡುತ್ತಿರುತ್ತಾನೆ. ಇದನ್ನು ದೇವರ ಬಳಿ ಕೂಡ ಪ್ರಾರ್ಥನೆ ಮಾಡುತ್ತಾ ಇರುತ್ತಾರೆ.

ಇನ್ನು, ಬಂಗಾರಮ್ಮನ ಮಗಳು ವಸು ಗರ್ಭವತಿಯಾಗಿದ್ದಾಳೆ. ಈ ವಿಚಾರವನ್ನು ಮನೆಮಂದಿಯ ಬಳಿ ಹೇಳಬೇಕು ಎಂದು ವಸು ಅಂದುಕೊಂಡರು ಆದರೆ ಅಮ್ಮನ ಬಳಿ ಹೇಳಿದರೆ ಎಲ್ಲಿ ತನ್ನನ್ನು ತಪ್ಪು ತಿಳಿದುಕೊಂಡು ಬಿಡುತ್ತಾರೋ ಎಂದು ಮನದಲ್ಲಿ ಮುಚ್ಚಿಟ್ಟುಕೊಂಡು ಬಹಳ ಬೇಸರದಲ್ಲಿರುತ್ತಾಳೆ.
ವಸು ಜಾಗದಲ್ಲಿ ನಿಂತ ಸ್ನೇಹಾ!
ಈ ವಿಚಾರ ಸ್ನೇಹಾಗೂ ಕೂಡ ತಿಳಿದಿರುತ್ತದೆ ಚಂದ್ರು ಬಳಿ ಹೇಳಬೇಕು ಎಂದು ಸ್ನೇಹಾ ಎಷ್ಟು ಒದ್ದಾಡಿದರು ಚಂದ್ರುಗೆ ವಿಷಯ ಮುಟ್ಟಿಸಲು ಸಾಧ್ಯವಾಗುವುದಿಲ್ಲ. ಇತ್ತ, ವಸುವಿನ ಸ್ಕ್ಯಾನಿಂಗ್ ರಿಪೋರ್ಟ್ ಕಂಠಿಯ ಅತ್ತೆಯ ಕೈಗೆ ಸಿಕ್ಕಿದೆ. ಇದನ್ನು ನೋಡಿದ ಸ್ನೇಹಾ ಹಾಗೂ ವಸು ಅವರ ಬಳಿ ಪರಿಪರಿಯಾಗಿ ಕೇಳಿಕೊಳ್ಳುತ್ತಾರೆ. ಈ ವಿಚಾರವನ್ನು ಯಾರ ಬಳಿ ಕೂಡ ಹೇಳಬೇಡಿ ಹೇಳಿದರೆ ಆಪತ್ತು ಖಂಡಿತ ಎಂದು ಕೇಳಿಕೊಂಡರು ಆಕೆ ಮಾತ್ರ ಬಂಗಾರಮ್ಮ ಅವರ ಬಳಿ ಹೇಳುತ್ತೇನೆ ಎಂದು ರೂಮಿನಿಂದ ಹೊರಗೆ ಹೋಗುತ್ತಾಳೆ.
ವಸು ಹಾಗೂ ಸ್ನೇಹಾ ಆಕೆಯನ್ನೇ ಫಾಲೋ ಮಾಡುತ್ತಾರೆ. ಬಂಗಾರಮ್ಮನನ್ನು ನೋಡಿದ ಮಾದೇಗೌಡರ ತಂಗಿ, ಅತ್ತಿಗೆ ಈ ಮನೆಗೆ ಇನ್ನೊಂದು ಸಣ್ಣ ಪುಟಾಣಿ ಬರಲಿದೆ ಎಂದಾಗ ಬಂಗಾರಮ್ಮಗೆ ಶಾಕ್ ಆಗುತ್ತದೆ. ಸಣ್ಣ ಪುಟಾಣಿ ಅಂದರೆ ಎಂದು ಅರ್ಥ ಆಗದೆ ಕೇಳಿದಾಗ ಆಕೆ ಹೇಳುತ್ತಾಳೆ. ಅಯ್ಯೋ ಅತ್ತಿಗೆ ಸ್ನೇಹಾ ಗರ್ಭಿಣಿ ಆಗಿದ್ದಾಳೆ ಎಂದು. ಇದನ್ನು ಕೇಳಿ ಸ್ನೇಹಾ ಹಾಗೂ ವಸು ಶಾಕ್ ಆಗುತ್ತಾರೆ. ಬಂಗಾರಮ್ಮ ಕೂಡ ಶಾಕ್. ಆದರೆ ಮಾದೇಗೌಡ್ರು ಮಾತ್ರ ಬಹಳ ಖುಷಿಯಲ್ಲಿ ಇರುತ್ತಾಳೆ. ಈ ವಿಚಾರವನ್ನು ಬಂಗಾರಮ್ಮನ ಬಳಿ ಹೇಳಿ ಶಶಿಕಲಾ ಎಡವಟ್ಟು ಮಾಡಿಕೊಂಡು ಇದ್ದಾಳೆ. ವಸು ಜಾಗದಲ್ಲಿ ಸ್ನೇಹಾ ನಿಂತಿದ್ದಾಳೆ. ಸ್ನೇಹಾಗೆ ಇದೀಗ ದಿಕ್ಕೇ ತೋಚದಂತಾಗಿದೆ.


Click it and Unblock the Notifications











