Puttakkana Makkali: ಕ್ರೀಮ್ ಕಲರ್ ಸೀರೆ ಹುಡುಕುತ್ತಿರುವ ಸುಮಾ; ಶುರು ಹೊಸ ಅನುಮಾನ
ಕಂಠಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು ಎಂದು ಸ್ನೇಹಾ ಅದೆಷ್ಟೋ ಬಾರಿ ಅಂದುಕೊಂಡಿರುತ್ತಾಳೆ. ಮನೆಯಲ್ಲಿ ಸಾಕಷ್ಟು ಸೌಕರ್ಯ ಇದ್ದು ಓದಲು ಆಗಿಲ್ಲ ಎಂದಾದರೆ ಏನು ಕಾರಣ ಎನ್ನುವುದನ್ನು ಸ್ನೇಹಾ ಆಗಾಗ ಹೇಳುತ್ತಿರುತ್ತಾರೆ. ಸ್ನೇಹಾ ಮೊದಲಿನಿಂದಲೂ ನನ್ನ ಗಂಡ ಹೀಗಿರಬೇಕು ಹಾಗಿರಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಕೊನೆಗೆ ಕಂಠಿ ಉತ್ತಮವಾಗಿ ಇದ್ದಾನೆ.
ಬಂಗಾರಮ್ಮನ ಮಗ ಕಂಠಿ ವಿದ್ಯಾಭ್ಯಾಸವನ್ನು ಕಲಿತಿದ್ದಾನೆ ಎಂದು ಸ್ನೇಹಾ ಕಂಠಿಯನ್ನೂ ಮದುವೆ ಆಗುತ್ತಾಳೆ. ಕೊನೆಗೆ ಕಂಠಿಗೆ ಅಕ್ಷರಗಳ ಗಂಧ ಗಾಳಿ ಗೊತ್ತಿಲ್ಲ. ಸ್ನೇಹಾ ಎದುರಿಗೆ ಎಲ್ಲಾ ತನಗೆ ಗೊತ್ತಿದೆ ಎನ್ನುವ ರೀತಿಯಲ್ಲಿ ಇರುತ್ತಾನೆ. ಆದರೆ ಸ್ನೇಹಾಗೆ ಮಾತ್ರ ಈ ವಿಚಾರ ತಿಳಿದಾಗ ಬಹಳ ನೋವಾಗುತ್ತದೆ.

ನನ್ನ ಬಳಿ ಕಂಠಿ ಸುಳ್ಳು ಹೇಳಿದ್ದಾರಲ್ಲಾ ಎಂದು ಬಹಳ ನೋವಿನಿಂದ ಹೇಳುತ್ತಾರೆ ಸ್ನೇಹಾ. ಆದರೆ ಕಂಠಿ ರಾತ್ರಿ ಶಾಲೆಗೆ ಹೋಗಿ ಅಕ್ಷರಗಳನ್ನು ಕಲಿಯುವ ಪೇಚಾಟದಲ್ಲಿ ಇರುತ್ತಾನೆ. ಇದನ್ನೆಲ್ಲ ನೋಡಿದ ಸ್ನೇಹಾ ಖುಷಿ ಪಟ್ಟುಕೊಂಡು ಇರುತ್ತಾಳೆ.
ಆಕೆಗೆ ತಾನು ಸುಳ್ಳು ಹೇಳಿದ್ದರು ಅದನ್ನು ಸರಿಪಡಿಸಲು ಕಂಠಿ ಪರದಾಡುತ್ತಿರುತ್ತಾನೆ. ಹಾಗೆಯೇ ರಾತ್ರಿ ಶಾಲೆಗೆ ಹೋಗಿ ಅಕ್ಷರಗಳ ಜ್ಞಾನವನ್ನು ಸಂಪಾದನೆ ಮಾಡುತ್ತಾನೆ. ಆದರೆ ಕಂಠಿ ಅಭ್ಯಾಸ ಮಾಡುತ್ತಿರುವುದನ್ನು ನೋಡಿದ ಸ್ನೇಹಾಗೆ ಬಹಳ ಖುಷಿ ಆಗುತ್ತದೆ. ಆತನ ಜೊತೆ ಮಾತನಾಡಿದಾಗ ಸ್ನೇಹಾ ನನಗೆ ಒತ್ತಕ್ಷರಗಳು ಸ್ವಲ್ಪ ಕಷ್ಟ ಆಗುತ್ತಿದೆ, ಉಳಿದಿದ್ದೆಲ್ಲ ನಾನು ಕಲಿಯುತ್ತಿದ್ದೇನೆ ಎಂದಾಗ ಸ್ನೇಹಾಗೆ ಮತ್ತಷ್ಟು ಸಂತಸವಾಗುತ್ತದೆ.
ಇತ್ತ ಸಹನಾ ಹೋಟೆಲ್ ಕೆಲಸದಲ್ಲಿ ಬ್ಯುಸಿ ಆಗಿ ಇರುತ್ತಾಳೆ. ಆಕೆಗೆ ತಾನು ಸ್ವತಂತ್ರವಾಗಿ ಬದುಕಿ ತೋರಿಸಬೇಕು ಎನ್ನುವ ಆಸೆ. ಸ್ವತಂತ್ರ್ಯವಾಗಿ ಬದುಕಿ ತನ್ನ ತಾಯಿಯ ಹಾಗೆ ಬದುಕಿ ಬಾಳಬೇಕು ಎನ್ನುವ ಹಂಬಲ. ಹಾಗೆಯೇ ಅದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿ ಇರುತ್ತಾಳೆ. ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡ ಸಹನಾಗೆ ನೆಲೆ ನಿಲ್ಲಲು ಒಂದು ಸ್ಥಳ ಆಕೆಗೆ ಸಿಗುತ್ತದೆ. ಇನ್ನೂ ಸುಮಾ ಮನೆಯೆಲ್ಲಾ ಕ್ರೀಮ್ ಕಲರ್ ಸೀರೆಗಾಗಿ ಹುಡುಕುತ್ತಾ ಇರುತ್ತಾಳೆ.

ಸುಮಾಗೆ ಹಲವು ಅನುಮಾನ
ಸಹನಾ ಅಕ್ಕ ಕ್ರೀಮ್ ಕಲ್ಲರ್ ಸೀರೆಯುಟ್ಟಿರುವ ನೆನಪು ಸುಮಾಗೆ ಇರುತ್ತದೆ. ಆಕೆ ಸೀರೆ ಹುಡುಕುತ್ತಾ ಇರುವುದನ್ನು ನೋಡಿದ ಪುಟ್ಟಕ್ಕ ಸಹನಾನೇ ಇಲ್ಲ. ಆದರೆ ನೀನು ಸೀರೆ ಹುಡುಕುತ್ತಾ ಇದ್ದೀಯಾ ಯಾಕೆ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಸುಮಾ ಮಾತ್ರ ಆ ಸೀರೆ ನನಗೆ ಬೇಕಿತ್ತು ಎಂದು ಹುಡುಕುತ್ತಿರುವಾಗ ಪುರುಷೋತ್ತಮ ಬರುತ್ತಾನೆ. ಆತ ಕೂಡ ಸುಮಾ ಬಳಿ ಯಾವ ಕಾರಣಕ್ಕೆ ಸೀರೆ ಹುಡುಕುತ್ತಿರುವೆ ಎಂದು ಕೇಳಿದಾಗ ಸುಮಾ ಹೇಳುತ್ತಾಳೆ ಅಕ್ಕನ ಸೀರೆ ಕಾಣಿಸುತ್ತಿಲ್ಲ. ಆಕೆ ಮನೆಯಲ್ಲಿ ಇರಬೇಕಾದರೆ ಕ್ರೀಮ್ ಕಲರ್ ಸಾರಿ ಹಾಕಿದ್ದಳು ಎಂದಾಗ ಅಲ್ಲಿಯೇ ಇದ್ದ ಕಾಳಿಗೆ ಸಹನಾ ಕ್ರೀಮ್ ಕಲರ್ ಸೀರೆಯುಟ್ಟು ರಸ್ತೆ ಬದಿ ನಿಂತಿದ್ದಿದ್ದು ನೆನಪಾಗುತ್ತದೆ.
ಮಗಳ ಮಾತಿಗೆ ಪುಟ್ಟಕ್ಕ ಸಾಥ್
ಸುಮಾ ಆ ಸೀರೆ ಹುಡುಕುತ್ತಿರುವ ಕಾರಣವನ್ನು ಪುಟ್ಟಕ್ಕನ ಬಳಿ ಹೇಳುತ್ತಿದ್ದಾಳೆ. ಕುತೂಹಲದಿಂದ ಪುಟ್ಟಕ್ಕ ಮಗಳ ಮಾತನ್ನು ಕೇಳುತ್ತಿರುತ್ತಾರೆ. ಸುಮಾಗೆ ಮೂಡಿರುವ ಅನುಮಾನವನ್ನು ನೋಡಿದ ಪುಟ್ಟಕ್ಕಗೆ ಕೂಡ ಸಹನಾ ಹಾಕಿಕೊಂಡು ಹೋಗಿರುವ ಸೀರೆಯ ಕಲರ್ ಬೇರೆ. ಹಾಗೆಯೇ ಪೊಲೀಸರು ತೋರಿಸಿದ ಡೆಡ್ ಬಾಡಿಯ ಮೈ ಮೇಲೆ ಇದ್ದ ಸೀರೆಯ ಕಲರ್ ಬೇರೆ, ಇದು ಹೇಗೆ ಸಾಧ್ಯ ಎಂದು ಆಲೋಚನೆ ಮಾಡುತ್ತಿರುತ್ತಾರೆ.
ರಾಧಾ ಪಿತೂರಿಗೆ ಸ್ನೇಹಾ ಬಲಿ?
ಸ್ನೇಹವನ್ನು ಹೇಗಾದರೂ ಮಾಡಿ ಈ ಮನೆಯಿಂದ ಓಡಿಸಿಬೀಡಬೇಕು ಎಂದು ರಾಧಾ ಆಲೋಚನೆ ಮಾಡಿ ರಾಜೇಶ್ವರಿ ಜೊತೆ ಕೈ ಜೋಡಿಸಿದ್ದಾಳೆ. ಪುಟ್ಟಕ್ಕ ರಾಜೇಶ್ವರಿಗೆ ಕೆಲವರ ಮುಂದೆ ಹೊಡೆದಿದ್ದಳು, ಆದರೆ ನೀನು ಪುಟ್ಟಕ್ಕಗೆ ಎಲ್ಲರ ಮುಂದೆಯೂ ಹೊಡೆಯಬೇಕು ಎಂದು ಹೇಳುತ್ತಾಳೆ. ರಾಧಾ ಮಾಡುತ್ತಿರುವ ಮಸಲತ್ತು ಬಂಗಾರಮ್ಮನವರ ತನಕ ತಲುಪಿದೆ ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











