Puttakkana makkalu: ಮಗಳ ಜೀವನ ಸರಿಪಡಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಪುಟ್ಟಕ್ಕ
ಬಂಗಾರಮ್ಮನ ಹೇಗಾದರೂ ಮಾಡಿ ಜೈಲಿನಿಂದ ರಿಲೀಸ್ ಮಾಡಿಸಬೇಕು ಎಂದು ಪುಟ್ಟಕ್ಕ ಆಲೋಚನೆ ಮಾಡುತ್ತಿದ್ದಾಳೆ. ಪದ್ಮ ಮನೆಗೆ ಹೋಗಿ ಆಕೆಯ ಕುತಂತ್ರ ಬಾಯಿ ಬಿಡಿಸಿ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಾಳೆ. ಪುಟ್ಟಕ್ಕಗೆ ತನ್ನ ಮಗಳು ಸ್ನೇಹಾ ಚೆನ್ನಾಗಿ ಇರಬೇಕು ಆಕೆ ಯಾವ ಕುತಂತ್ರಕ್ಕೆ ಬಲಿ ಆಗಬಾರದು ಎನ್ನುವ ಮಹದಾಸೆ.
ಪದ್ಮಳನ್ನ ಪುಟ್ಟಕ್ಕ ಬಂಗಾರಮ್ಮನ ಮನೆಗೆ ಕರೆದುಕೊಂಡು ಬರುತ್ತಾಳೆ. ನಾನು ನಿಮಗೆ ನಿಜ ವಿಚಾರ ಹೇಳಿಸಲು ನಿಮ್ಮ ಮನೆಗೆ ಪದ್ಮನ ಕರೆದುಕೊಂಡು ಬಂದಿದ್ದೇನೆ ಅಮ್ಮಾವರೇ ಎಂದು ಪುಟ್ಟಕ್ಕ ಹೇಳುತ್ತಾಳೆ. ಪದ್ಮ ಬಳಿ ಕೊಂಚ ಜೋರಾಗಿ ಮಾತನಾಡಿದ ಪುಟ್ಟಕ್ಕ, ಪದ್ಮ ನನ್ನ ಬಳಿ ನೀನು ಏನು ಹೇಳಿದ್ದಿಯೋ ಅದನ್ನು ಅವರ ಬಳಿ ಹೇಳಿ ಬಿಡು. ಇಲ್ಲ ಎಂದಾದರೆ ಪರಿಣಾಮ ಸರಿ ಇರುವುದಿಲ್ಲ. ನೀನು ಯಾಕೆ ಹೀಗೆ ಮಾಡುತ್ತಿದ್ದಿಯಾ ಎನ್ನುವ ಅರಿವು ನಿನಗೆ ಇದೆಯಾ? ಹಣದ ಆಸೆಗಾಗಿ ಅಮ್ಮವರ ವಿರುದ್ದ ಸಂಚು ಮಾಡಿದ್ದು ಸರಿಯಾ? ಎಂದು ಜೋರಾಗಿ ಪದ್ಮಳನ್ನ ಪುಟ್ಟಕ್ಕ ಪ್ರಶ್ನೆ ಮಾಡುತ್ತಾಳೆ.

ಬಂಗಾರಮ್ಮ ಮಾತ್ರ ಏನು ಮಾತನಾಡದೇ ಸುಮ್ಮನೆ ಇರುತ್ತಾರೆ. ಊರವರಿಗೆ ಬಂಗಾರಮ್ಮ ನ್ಯಾಯ ಹೇಳುತ್ತಿದ್ದರು, ಆದರೆ ಇದೀಗ ತನ್ನ ಸೊಸೆಯಿಂದಾಗಿ ತಲೆ ತಗ್ಗಿಸುವ ಮಟ್ಟಿಗೆ ಬಂದು ನಿಂತಿದೆ. ಪುಟ್ಟಕ್ಕ ತನ್ನ ಮಗಳು ಮಾಡಿದ ತಪ್ಪನ್ನು ತಿದ್ದಿ ಹೇಗಾದರೂ ಮಾಡಿ ಸರಿ ಮಾಡಲೇಬೇಕು. ಇಲ್ಲವಾದರೆ ಸಹನಾ ಜೀವನದ ಹಾಗೆ ಈಕೆಯ ಜೀವನ ದಿಕ್ಕು ತಪ್ಪುವುದು ಖಚಿತ ಎಂದು ಆಕೆಗೆ ತಿಳಿದಿತ್ತು.
ಇತ್ತ ಬಂಗಾರಮ್ಮ ಕೂಡ ತನ್ನ ಸೊಸೆಯನ್ನು ಮನೆಯಿಂದ ಆಚೆ ಹಾಕಿದರೆ ಮಾತ್ರ ಇದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟ ಹಾಗೆ ಎಂದು ಅಂದುಕೊಂಡು ಇರುತ್ತಾಳೆ. ಪುಟ್ಟಕ್ಕ, ಪದ್ಮ ಬಳಿ ಕೊಂಚ ಜೋರಾಗಿ ಹೇಳುತ್ತಾಳೆ. ಯಾರು ನಿನಗೆ ಹಣ ಕೊಟ್ಟು ಈ ರೀತಿ ಮಾಡು ಎಂದಿದ್ದು? ಎಂದಾಗ ಪದ್ಮ, ಸ್ನೇಹಾಳತ್ತ ಬೆರಳು ಮಾಡಿ ಸ್ನೇಹಾ ಎಂದು ಹೇಳುತ್ತಾಳೆ .

ನಿಜ ಹೇಳುವಂತೆ ಬೇಡಿಕೊಂಡ ಪುಟ್ಟಕ್ಕ
ಪುಟ್ಟಕ್ಕ ಗೆ ಇನ್ನಷ್ಟು ಆತಂಕ ಆಗುತ್ತದೆ. ನನ್ನ ಮಗಳು ಯಾವತ್ತೂ ಹೀಗೆಲ್ಲ ಮಾಡುವವಳು ಅಲ್ಲ, ಆಕೆ ಬಹಳ ಒಳ್ಳೆಯವಳು. ಆಕೆಗೆ ಹಣ ಕೊಟ್ಟು ನಿಮ್ಮ ಬಳಿ ಹೀಗೆಲ್ಲ ನಡೆದುಕೊಳ್ಳುತ್ತಾಳೆ ಎಂದು ನಿಮಗೆ ಅನ್ನಿಸುತ್ತದ್ಯಾ? ಎಂದು ಕೇಳಿದಾಗ ಬಂಗಾರಮ್ಮ ಕೊಂಚ ಜೋರಾಗಿಯೇ ಹೇಳುತ್ತಾರೆ. ಎದುರಲ್ಲಿಯೇ ಸಾಕ್ಷಿ ಇರಬೇಕಾದರೆ ನೀನು ಹೇಗೆ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿಯಾ ? ಸಾಕು ಪುಟ್ಟಕ್ಕ ನಿನ್ನ ಮಗಳ ಕಡೆಗೆ ನೀನು ಮಾತನಾಡಿದ್ದು ಸಾಕು. ಇನ್ನಾದರೂ ಕೊಂಚ ಯೋಚನೆ ಮಾಡಿ ಮಾತಾಡು ಎಂದು ಹೇಳುತ್ತಾಳೆ.
ಸುಳ್ಳು ಆರೋಪ ಕೇಳಿ ನೊಂದ ಪುಟ್ಟಕ್ಕ
ಪುಟ್ಟಕ್ಕ ಮಾತ್ರ ಯಾರು ಏನೇ ಹೇಳಲಿ ಸ್ನೇಹಾ ಈ ತರ ಕೆಲಸ ಮಾಡುತ್ತಾಳೆ ಎಂದರೆ ನಾನು ನಂಬುವುದಿಲ್ಲ ಎಂದು ಹೇಳಿ ಪದ್ಮಳನ್ನು ಗದರಿಸಿ ಕೇಳುತ್ತಾಳೆ. ಪದ್ಮ ನಿಜ ಹೇಳು ಯಾರು ಹೀಗೆ ಮಾಡಿದ್ದು ಎಂದಾಗ ಪದ್ಮ, ನಿಮ್ಮ ಮಗಳು ಸ್ನೇಹಾನೇ ಹಣ ಕೊಟ್ಟು ಹೀಗೆ ಮಾಡಿ ಎಂದಳು ಎನ್ನುತ್ತಾಳೆ. ಪುಟ್ಟಕ್ಕಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಪುಟ್ಟಕ್ಕ ಶ್ರೀ ಬಳಿ ನೀನು ಇದನ್ನೆಲ್ಲ ನಂಬುತ್ತಿಯಾ? ಇದನ್ನೆಲ್ಲ ಸ್ನೇಹಾ ಮಾಡಿದಳು ಎಂದು ನಿನಗೆ ಅನ್ನಿಸುತ್ತಾ? ಎಂದಾಗ ಕಂಠಿ ಮುಖ ಕೆಳಗೆ ಮಾಡುತ್ತಾನೆ.
ರಾಧಾ ಹೊಸ ವರಸೆ
ಕಂಠಿ ತಂದೆ ಬಳಿ ಕೂಡ ಪುಟ್ಟಕ್ಕ ಇದೆ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಅವರು ಮಾತನಾಡದೇ ಮೌನವಾಗಿ ಉಳಿಯುತ್ತಾರೆ. ಇದೇ ಸರಿಯಾದ ಚಾನ್ಸ್ ಎಂದು ರಾಧಾ ಮಾತನಾಡುತ್ತಾಳೆ. ಪುಟ್ಟಕ್ಕ ನಿಮಗೆ ಈಗ ತಿಳಿಯಲಿಲ್ವಾ? ಸ್ನೇಹಾ ಮಾಡಿದ ಕಿತಾಪತಿ ಕೆಲಸ ಎಷ್ಟೆಲ್ಲ ಸಂಕಷ್ಟ ಕಾರಣ ಆಯಿತು ಎಂದು. ಇನ್ನಾದರೂ ನೀವು ನಿಮ್ಮ ಮಗಳ ಪರ ವಹಿಸುವುದು ಬಿಡಿ. ನಿಮ್ಮ ಮಗಳು ಈ ರೀತಿ ನಡೆದುಕೊಳ್ಳುತ್ತಾಳೆ ಎನ್ನುವ ಸಣ್ಣ ಅರಿವು ನಮಗೆ ಇರಲಿಲ್ಲ. ಇನ್ನಾದರೂ ಈಕೆ ಮಾಡಿದ ತಪ್ಪನ್ನು ಮುಚ್ಚಿಡಲು ಯತ್ನಿಸಬೇಡಿ ಎನ್ನುತ್ತಾಳೆ.
ರಾಧಾ ಮಾತಿಗೆ ಮನೆಮಂದಿ ಶಾಕ್
ನನ್ನ ಅತ್ತೆಯ ಮೇಲೆ ಸ್ನೇಹಾ ಇಷ್ಟು ಕೋಪ ಇದ್ದರೆ ಆಕೆ ಯಾಕೆ ಇನ್ನೂ ಈ ಮನೆಯಲ್ಲಿ ಇದ್ದಳು ಎನ್ನುವುದೇ ಅರ್ಥ ಆಗುತ್ತಿಲ್ಲ. ಅಷ್ಟಿದ್ದವಳು ಈ ಮನೆ ಬಿಟ್ಟು ಹೋಗಲಿ ಎಂದು ಹೇಳುತ್ತಾಳೆ. ಇದನ್ನ ಕೇಳಿದ ಮನೆ ಮಂದಿಗೆ ಶಾಕ್ ಆಗುತ್ತದೆ. ಪುಟ್ಟಕ್ಕ ಬಳಿ ರಾಧಾ ಹೇಳುತ್ತಾಳೆ. ನೀವು ನಿಮ್ಮ ಮಗಳನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ. ಈಕೆ ಇಲ್ಲಿ ಇದ್ದರೆ ನನ್ನ ಅತ್ತೆಗೆ ಸಂಕಷ್ಟ ಎಂದು ಹೇಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











