Puttakkana Makkalu: ಪುಟ್ಟಕ್ಕನಿಗೆ ಅಳಿಯ ಪ್ರಶ್ನೆ; ಗಂಡನನ್ನು ಮನೆಯಿಂದ ಹೊರಗೆ ಕಳುಹಿಸಿದ ಸಹನಾ

By Poorva

ಪುಟ್ಟಕ್ಕನ ಮನೆಗೆ ನೇರವಾಗಿ ಬಂದ ಮುರಳಿ ಬಹಳ ತಾಳ್ಮೆಯಿಂದ ಸಹನಾ ಬಗ್ಗೆ ವಿಚಾರಣೆ ಮಾಡುತ್ತಾನೆ. ಹಾಗೆಯೇ ಸಹನಾಳನ್ನು ನನಗೆ ಹೇಳದೆ ನೀವು ಯಾಕೆ ಕರೆದುಕೊಂಡು ಬಂದಿದ್ದು, ಅಂತಹ ದೊಡ್ಡ ಕಾರಣ ಏನಿದೆ ಎಂದು ಕೇಳುತ್ತಾನೆ. ಮುರಳಿ ಬಳಿ ಗೋಪಾಲ, ನಿಮ್ಮ ಮನೆಯಲ್ಲಿ ಸಹನಾ ಎಷ್ಟು ಖುಷಿಯಾಗಿ ಇದ್ದಳು ಎನ್ನುವುದು ತಿಳಿಯಿತು ಅದಕ್ಕೆ ಆಕೆಯನ್ನು ಕರೆದುಕೊಂಡು ಬಂದೆವು ಎನ್ನುತ್ತಾನೆ.

ಪುಟ್ಟಕ್ಕ ಕೂಡ ಸಹನಾಗೆ ಅತ್ತೆಯ ಕಿರುಕುಳ ಹೆಚ್ಚಾಗಿದೆ. ಮಗಳು ಸುಖವಾಗಿ ಇಲ್ಲ ಎಂದು ತಿಳಿದ ಮೇಲೂ ನಾನು ಹೇಗೆ ಆಕೆಯನ್ನು ಆಕೆಯ ಅತ್ತೆ ಮನೆಯಲ್ಲಿ ಬಿಡಲು ಸಾಧ್ಯ? ಎನ್ನುತ್ತಾಳೆ. ಅದಕ್ಕೆ ಮುರಳಿ ನನ್ನ ಅಮ್ಮ ಅಷ್ಟು ಚೆನ್ನಾಗಿ ನಿಮ್ಮ ಮಗಳನ್ನು ನೋಡಿಕೊಳ್ಳುತ್ತಾ ಇದ್ದಾರೆ. ಸಹನಾಗೆ ಮಾನಸಿಕ ಚಿಕಿತ್ಸೆ ಬಹಳ ಅಗತ್ಯ ಆಗಿದೆ. ಯಾವತ್ತೂ ನನ್ನ ಅಮ್ಮನನ್ನು ನೋಡಿದರೂ ಅವರನ್ನು ಬಯ್ಯುತ್ತಲೆ ಇರುತ್ತಾಳೆ. ತನ್ನ ತಾಯಿ ಬಹಳ ಒಳ್ಳೆಯವರು ಅನ್ನುವ ಹಾಗೆ ಮಾತನಾಡುತ್ತಾನೆ.

Puttakkana makkalu kannada serial written update on 19th March

ಮುರಳಿ ಮಾತಿಗೆ ಗೋಪಾಲ, ಇನ್ನೂ ಮೇಲೆ ಸಹನಾ ನಿಮ್ಮ ಮನೆಗೆ ಬರುವುದಿಲ್ಲ, ಆಕೆ ಇಲ್ಲಿಯೇ ಇರುತ್ತಾಳೆ. ನೀವು ಇನ್ನೂ ಹೊರಡಬಹುದು ಎಂದು ಹೆಗಲ ಮೇಲೆ ಕೈ ಹಾಕಿ ಹೇಳುತ್ತಾನೆ. ಆಗ ಮುರಳಿಗೆ ಬಹಳಷ್ಟು ಕೋಪ ಬರುತ್ತದೆ ನೀವು ಮಾತನಾಡಬೇಡಿ. ನನ್ನ ಬಗ್ಗೆ ಎಂದು ಜೋರಾಗಿ ಹೇಳುತ್ತಾನೆ. ಸಹನಾ ನನ್ನ ಹೆಂಡತಿ. ಅವರನ್ನು ನಾನು ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ.

ನಾನಗಿದ್ದಕ್ಕೆ ನಿಮ್ಮ ಜೊತೆ ಇಷ್ಟು ಮೆತ್ತಗೆ ಮಾತನಾಡುತ್ತಾ ಇದ್ದೇನೆ. ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದಿದ್ದರೆ ಅದರ ಕಥೆನೇ ಬೇರೆ ಆಗುತ್ತಾ ಇತ್ತು. ನನ್ನ ತಾಯಿಯ ಮೇಲೆ ಕೈ ಮಾಡುವಷ್ಟು ಧೈರ್ಯ ನಿಮಗೆ ಹೇಗೆ ಬಂತು? ಎಂದು ಮುರಳಿ ಕೇಳುತ್ತಾನೆ . ಇಷ್ಟೆಲ್ಲ ಮಾತುಕತೆ ಆಗಬೇಕಾದರೆ ಅಲ್ಲಿಗೆ ಸಹನಾ ಬರುತ್ತಾಳೆ.

ಸಹನಾ ಮಾತಿಗೆ ಮಂಕಾದ ಮುರಳಿ

ಸಹನಾ ಬಾ ಮನೆಗೆ ಹೋಗೋಣ ನೀನು ಯಾಕೆ ಮನೆ ಬಿಟ್ಟು ಬಂದೆ ಎಂದು ಮುರಳಿ ಕೇಳುತ್ತಾನೆ. ಸಹನಾ ಮಾತ್ರ ನಾನು ಇನ್ನೂ ಆ ಮನೆಗೆ ಬರುವುದು ಇಲ್ಲ. ಯಾವತ್ತೂ ನಾನು ಹೇಳಿದ ಮಾತು ನೀವು ಕೇಳಲಿಲ್ಲವೋ ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು ಎನ್ನುತ್ತಾಳೆ. ಸಹನಾ ಅವರೇ ಯಾಕೆ ನೀವು ನನ್ನ ತಾಯಿಯ ವಿರುದ್ದ ಮಾತನಾಡುತ್ತಾ ಇರುತ್ತೀರಾ? ಇದು ಸರಿಯಲ್ಲ ಎನ್ನುತ್ತಾನೆ. ನಿಮಗೆ ನಾನು ನನ್ನ ಮಾತು ಅಗತ್ಯ ಇಲ್ಲ. ನನ್ನನ್ನು ಹುಚ್ಚಿ ಎಂದು ಹೇಳುತ್ತಿದ್ದೀರಿ, ನಿಮ್ಮ ತಾಯಿಯನ್ನು ಮೊದಲು ಹುಚ್ಚು ಆಸ್ಪತ್ರೆಗೆ ಸೇರಿಸಿ, ನನಗೆ ಹುಚ್ಚು ಹಿಡಿದಿಲ್ಲ ಎಂದು ಸಹನಾ ಹೇಳುತ್ತಾಳೆ.

Puttakkana makkalu kannada serial written update on 19th March

ಮುರಳಿಗೆ ತಕ್ಕ ಪಾಠ ಕಲಿಸಿದ ಸಹನಾ

ಆ ಕೂಡಲೇ ಮುರಳಿ ಅವರನ್ನು ಮನೆಯಿಂದ ಹೊರಗೆ ಹೋಗಲು ಹೇಳುತ್ತಾಳೆ. ಸಹನಾ ಮಾತು ಕೇಳಿ ಬಹಳ ಬೇಸರದಿಂದ ಮುರಳಿ ಸಹನಾ ಮನೆಯಿಂದ ಹೊರ ನಡೆಯುತ್ತಾನೆ. ಇತ್ತ ಕಂಠಿ ಹಾಗೂ ಚಂದ್ರು ನಡುವೆ ವಾಕ್ಸಮರ ನಡೆಯುತ್ತಿದೆ. ಚಂದ್ರು ನನ್ನ ತಾಯಿ ಬದಲಾಗಿದ್ದಾರೆ. ನನ್ನ ವಸುವನ್ನು ನನ್ನ ಮನೆಗೆ ಕರೆದುಕೊಂಡು ಹೋಗಲು ಬಿಡಿ ಎಂದು ಗೋಪಾಲನ ಬಳಿ ಕೇಳಿಕೊಳ್ಳುತ್ತಾನೆ. ಆಗ ಮರಿ ಮುದ್ದಾಗಿದೆ ಎಂದು ನರಿಯನ್ನು ಮನೆಯಲ್ಲಿ ಸಾಕಲು ಸಾಧ್ಯ ಇಲ್ಲ ಅಲ್ವಾ? ಎಂದು ಎನ್ನುತ್ತಾನೆ.

ಕಂಠಿ- ಚಂದ್ರು ನಡುವೆ ವಾಗ್ಯುದ್ಧ

ಕಂಠಿ ಮಾತಿಗೆ ಚಂದ್ರು ವಿರುದ್ದ ಹರಿ ಹಾಯುತ್ತಾನೆ. ವಸು ಹಾಗೂ ಚಂದ್ರುವನ್ನು ಹೇಗಾದರೂ ಮನೆಗೆ ಕರೆದುಕೊಂಡು ಹೋಗಬೇಕು ಆ ಬಳಿಕ ಏನೇ ಮಾಡಿದರೂ ಬಂಗಾರಮ್ಮಗೆ ಎನು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಂಜಮ್ಮ ನಾಟಕ ಮಾಡುತ್ತಾಳೆ.

More from Filmibeat

English summary
Puttakkana makkalu kannada serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X