Puttakkana makkalu: ಬಂಗಾರಮ್ಮನ ಬಳಿ ಸ್ನೇಹಾ ಕ್ಷಮೆ; ರಾಧಾ ಮಾತಿಗೆ ಕಂಠಿ ಗರಂ

By ಪೂರ್ವ

ಕಂಠಿ ತನ್ನಿಂದ ದೂರ ಆಗುತ್ತಾನೆ ಎನ್ನುವ ಭಯದಲ್ಲಿ ಇರುತ್ತಾಳೆ ಸ್ನೇಹಾ. ಆಕೆಗೆ ಕಂಠಿ ಅಂದರೆ ಬಹಳ ಪ್ರೀತಿ. ಅಂತಹದರಲ್ಲಿ ಸ್ನೇಹಾಗೆ ಕಂಠಿ ಡೈವರ್ಸ್ ನೋಟಿಸ್ ಕಂಠಿ ಕಳುಹಿಸಿದ್ದಾನೆ ಎಂದರೆ ನಂಬಲು ಅಸಾಧ್ಯ.

ರಾಧಾ ಹೇಗಾದರೂ ಮಾಡಿ ಕಂಠಿ ಹಾಗೂ ಸ್ನೇಹಾನನ್ನು ದೂರ ಮಾಡಬೇಕು ಎಂದು ನೋಡುತ್ತಿರುತ್ತಾಳೆ. ಹಾಗೆಯೇ ಕಂಠಿ ಡೈವರ್ಸ್ ನೋಟಿಸ್ ಕಳುಹಿಸಿದ್ದಾನೆ ಇದಕ್ಕೆ ನಿನ್ನ ಸಹಿ ಬೇಕು ಎಂದು ರಾಧಾ ಹೇಳುವಾಗ ಸ್ನೇಹಾ ಕಣ್ಣಲ್ಲಿ ನೀರು ಬರುತ್ತದೆ.

Puttakkana makkalu kannada serial written update on 20th April episode

ಸ್ನೇಹಾಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಯಾರ ಬಳಿಯೂ ಹೇಳದೇ ತನ್ನ ಮನದಲ್ಲಿ ನೋವು ನುಂಗಿಕೊಂಡಿರುತ್ತಾಳೆ. ಆದರೆ ಆಕೆಗೆ ಏನು ಮಾಡಬೇಕು ತಿಳಿಯದಾಗುತ್ತದೆ. ಬಂಗಾರಮ್ಮನವರ ಬಳಿಗೆ ಬಂದ ಸ್ನೇಹಾ ಅತ್ತೆಯ ಕಾಲಿಗೆ ಬೀಳುತ್ತಾಳೆ.

ಅತ್ತೆ ನಿಮ್ಮ ಮೇಲೆ ನಾನು ವಿನಾ ಕಾರಣ ತಪ್ಪು ತಿಳಿದುಕೊಂಡೆ. ಹಾಗೆಯೇ ತಪ್ಪು ಆರೋಪ ಮಾಡಿ ಬಿಟ್ಟೆ ನನ್ನನ್ನು ಕ್ಷಮಿಸಿ ಅತ್ತೆ. ಒಬ್ಬರು ನಿಮ್ಮ ಬಗ್ಗೆ ಮಾತನಾಡಿದಾಗ ಅದನ್ನು ಪರಾಮರ್ಶಿಸದೇ ನಾನು ನಿಜ ಎಂದು ತಿಳಿದುಕೊಂಡೆ. ನಾನು ದುಡುಕಿ ತೆಗೆದುಕೊಂಡ ನಿರ್ಧಾರದಿಂದ ನಿಮಗೆ ನೋವು ಆಗಿದೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕಾಲಿಗೆ ಬೀಳುತ್ತಾಳೆ.

ಬಂಗಾರಮ್ಮ ಆಕೆಯ ಕಾಲಿಗೆ ಬಿದ್ದ ಸ್ನೇಹಾಳನ್ನು ಸರಿ ಎದ್ದೇಳು ಎನ್ನುತ್ತಾಳೆ. ಇದನ್ನು ಕೇಳಿದ ಸ್ನೇಹಾ ಮೆತ್ತಗೆ ಎದ್ದು ನಿಲ್ಲುತ್ತಾಳೆ. ಆಗ ಸ್ನೇಹಾ ವಿರುದ್ದವಾಗಿ ರಾಧಾ ವಾಗ್ದಾಳಿ ನಡೆಸುತ್ತಾಳೆ. ನೀನು ಮಾಡುವುದೆಲ್ಲ ಮಾಡಿ ಇದೀಗ ಅತ್ತೆಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿಯಾ? ನೀನು ಅತ್ತೆಯನ್ನು ಜೈಲಿಗೆ ಹಾಕಿರುವುದನ್ನು ನಾನು ಯಾವತ್ತೂ ಮರೆಯುವುದಿಲ್ಲ. ನೀನು ಮಾಡಿರುವುದು ಸರಿ ಇಲ್ಲ ಎನ್ನುತ್ತಾಳೆ.

ನೋವು ನುಂಗಿಕೊಂಡ ಸ್ನೇಹಾ

ರಾಧಾ ಮಾತಿಗೆ ಸ್ನೇಹಾಗೆ ಏನು ಹೇಳಬೇಕು ಎಂದು ತಿಳಿಯದೇ ಕುಗ್ಗಿ ಹೋಗುತ್ತಾಳೆ. ಬಳಿಕ ರಾಧಾ, ಸ್ನೇಹಾ ಮನೆಯಿಂದ ಹೋಗುವ ಹಾಗೆ ಮಾತನಾಡುತ್ತಾಳೆ. ರಾಧಾ ಮಾತು ಕೇಳಿದ ಬಂಗಾರಮ್ಮ ಮಾತ್ರ ಏನು ಪ್ರತಿಕ್ರಿಯೆ ನೀಡುವುದು ಇಲ್ಲ. ಆದರೆ ಅಲ್ಲಿಯೇ ಇದ್ದ ಕಂಠಿ ಕೊಂಚ ಜೋರಾಗಿಯೇ ರಾಧಾ ಎಂದು ಕೋಪದಿಂದ ಕರೆಯುತ್ತಾನೆ. ರಾಧಾಗೇ ಆತ ಮಾತನಾಡಿದ ಧ್ವನಿಯಲ್ಲಿ ಅರ್ಥ ಆಗುತ್ತದೆ. ಕಂಠಿ ಮಾವನಿಗೆ ಸಿಟ್ಟು ಬಂದಿದೆ ಎಂದು.

ನೋವಿನಲ್ಲಿರುವ ಪುಟ್ಟಕ್ಕ

ಇನ್ನೂ ಪುಟ್ಟಕ್ಕ ಮಾತ್ರ ನನ್ನ ಮಗಳು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿ ಬಂತಲ್ವ ಎಂದು ಬಹಳ ನೊಂದುಕೊಂಡು ಇರುತ್ತಾಳೆ. ಸ್ನೇಹಾಗೆ ಸಹನಾ ಕೂಡ ಸಮಾಧಾನ ಹೇಳುತ್ತಾಳೆ. ನೀನು ಸರಿ ದಾರಿಯಲ್ಲಿ ನಡೆಯುತ್ತಿದ್ದಿಯಾ ಎಂದರೆ ಅದರ ಬಗ್ಗೆ ನೀನು ಚಿಂತೆ ಮಾಡಬೇಡ ನೀನು ಸರಿ ದಾರಿಯಲ್ಲಿಯೇ ಇರುತ್ತಿಯಾ? ಎಂದು ಖಡಕ್ ವಾರ್ನಿಂಗ್ ಮಾಡುತ್ತಾಳೆ .

Puttakkana makkalu kannada serial written update on 20th April episode

ಸ್ನೇಹಾ ಕೈ ಸೇರಿದೆ ವಿಚ್ಚೇದನ ಪತ್ರ

ಸ್ನೇಹಾಗೆ ಕಂಠಿ ವಿಚ್ಛೇದನ ನೀಡಿದ್ದಾನೆ ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ಹಾಗೆಯೇ ಈ ವಿಚಾರವನ್ನು ಯಾರ ಬಳಿಯೂ ಹೇಳದೇ ಗೌಪ್ಯವಾಗಿ ಇಡುತ್ತಾಳೆ. ಪುಟ್ಟಕ್ಕಗೆ ತನ್ನ ಮಗಳು ಚೆನ್ನಾಗಿ ಇರಬೇಕು ಎನ್ನುವ ಆಸೆ. ಹೇಗಾದರೂ ಸರಿ ಆಕೆ ಖುಷಿಯಾಗಿರುವಂತೆ ಆಗಬೇಕು ಆಕೆಯ ಆಲೋಚನೆಯಾಗಿರುತ್ತದೆ.

More from Filmibeat

English summary
Puttakkana makkalu kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X