Puttakkana makkalu: ಸ್ನೇಹಾ ವಿರುದ್ದ ಗುಡುಗಿದ ಬಂಗಾರಮ್ಮ; ಮಾಡದ ತಪ್ಪಿಗೆ ಶಿಕ್ಷೆ?
ಪುಟ್ಟಕ್ಕಗೆ ತನ್ನ ಮಕ್ಕಳು ಚೆನ್ನಾಗಿ ಇರಬೇಕು ಎನ್ನುವ ಬಯಕೆ. ಆದರೆ ಸಹನಾ ಬೇರೆ ಊರಿಗೆ ಹೋಗಿ ಯಾರ ಸಹವಾಸವೂ ಬೇಡ ನನಗೆ ಎಂದು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾಳೆ. ನನಗೆ ಸಂಬಳವೂ ಬೇಡ ಏನು ಬೇಡ . ನನಗೆ ನೆಲೆ ನಿಲ್ಲಲು, ಹಾಗೆಯೇ ಹೊತ್ತು ಹೊತ್ತಿಗೆ ಊಟ ಕೊಟ್ಟರೆ ಸಾಕು ಎಂದಿದ್ದಾಳೆ.
ಸಹನಾ ನನಗೆ ಸಂಬಳ ನನಗೆ ಬೇಡ ಎಂದು ಹೇಳಿದ್ದು ಹೋಟೆಲ್ ಮಾಲೀಕರಿಗೆ ಬಹಳ ಖುಷಿ ತಂದಿದೆ. ಹಾಗೆಯೇ ಆಕೆ ಮಾಡಿದ ಅಡುಗೆಗಳನ್ನು ಟೇಸ್ಟ್ ಮಾಡಿ ಬಹಳ ಖುಷಿ ಪಡುತ್ತಿರುತ್ತಾರೆ. ಇನ್ನೂ ಪುಟ್ಟಕ್ಕ ಇದೀಗ ಸಹನಾ ನೆನಪಿನಿಂದ ಕೊಂಚ ಹೊರ ಬರುತ್ತಿದ್ದಾಳೆ. ಆಕೆಗೆ ಸ್ನೇಹಾ ಹಾಗೂ ಸುಮಾಳದ್ದೇ ಚಿಂತೆ.

ಯಾರಿಗೂ ಸಹನಾಗೆ ಬಂದ ಸ್ಥಿತಿ ಬರಬಾರದು ಎನ್ನುವುದು ಇದೀಗ ಪುಟ್ಟಕ್ಕ ಮನದಲ್ಲಿ ಮೂಡಿದೆ. ಇನ್ನೂ ಸಹನಾ ಸತ್ತಿದ್ದಾಳೋ ಅಥವಾ ಬದುಕಿದ್ದಾಳೋ ಎನ್ನುವುದು ಮಾತ್ರ ಯಾರಿಗೆ ಕೂಡ ತಿಳಿದಿಲ್ಲ. ಸುಮಾಳಿಗೆ ಸಾಕಷ್ಟು ಅನುಮಾನ ಕೂಡ ಮೂಡಿದೆ. ಇನ್ನೂ ಸ್ನೇಹಾ ಜೀವನ ಈಗಷ್ಟೇ ಸುಧಾರಿಸುತ್ತಿದೆ ಎನ್ನುವ ವೇಳೆ ರಾಧಾ, ಬಂಗಾರಮ್ಮನವರ ಬಳಿ ಇಲ್ಲಸಲ್ಲದನ್ನು ಹೇಳಿ ಆಕೆಯ ತಲೆ ಕೆಡಿಸಿ ಬಿಟ್ಟಿದ್ದಾಳೆ.
ಬಂಗಾರಮ್ಮನವರ ಬಳಿ ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ರಾಧಾ, ಸ್ನೇಹಾ ಬಗ್ಗೆ ಚಾಡಿ ಹೇಳುತ್ತಾಳೆ. ಸ್ನೇಹಾಗೆ ಇದು ತಿಳಿದಿಲ್ಲ. ರಾಧಾ ಹೇಗಾದರೂ ಮಾಡಿ ಸ್ನೇಹಾಳನ್ನು ಮನೆಯಿಂದ ಹೊರಗೆ ಹಾಕಬೇಕು ಎನ್ನುವ ದೃಷ್ಟಿಯಿಂದ ಬಂಗಾರಮ್ಮ ಸುಳ್ಳು ಹೇಳಿ ಇದಕ್ಕೆಲ್ಲ ಕಾರಣ ಸ್ನೇಹಾ ಎನ್ನುವಂತೆ ಬಿಂಬಿಸುತ್ತಾಳೆ.

ರಾಧಾ ಉದ್ದೇಶವೇ ಬೇರೆ ಆಗಿರುತ್ತದೆ. ಬಂಗಾರಮ್ಮಳನ್ನು ಹೇಗಾದರೂ ಮಾಡಿ ನನ್ನತ್ತ ಒಲಿಸಿಕೊಳ್ಳಬೇಕು, ಹಾಗೆಯೇ ಅವರನ್ನು ಹೇಗಾದರೂ ಮಾಡಿ ಒಪ್ಪಿಸಿ ಕಂಠಿಯನ್ನೂ ತನ್ನವನ್ನಾಗಿ ಮಾಡಿಕೊಳ್ಳಬೇಕು. ಇದೆಲ್ಲ ಸಾಧ್ಯ ಇರುವುದು ಬಂಗಾರಮ್ಮಳಿಂದ ಮಾತ್ರ ಎಂದು ತಿಳಿಸುಕೊಂಡಿದ್ದಾಳೆ.
ಸ್ನೇಹಾ ಮೇಲೆ ಆರೋಪ
ಸ್ನೇಹಾಳ ಮೇಲೆ ದೊಡ್ಡ ಆರೋಪ ಹೊರಿಸಿ ಆಕೆಯನ್ನು ತಾಯಿ ಮನೆಯಲ್ಲಿಯೇ ಉಳಿಯುವ ಹಾಗೆ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಖಂಡಿತವಾಗಿಯೂ ನನಗೆ ಕಂಠಿ ಬಾವ ಸಿಗುವುದು ಇಲ್ಲ ಎಂದು ಯೋಚನೆ ಮಾಡುತ್ತಾಳೆ. ಬಂಗಾರಮ್ಮ ಅವರ ಮನೆಯ ಆಸ್ತಿಯ ಪತ್ರವನ್ನು ಸ್ನೇಹಾ ಫೈಲ್‌ನಲ್ಲಿ ಸೇರುವ ಹಾಗೆ ಮಾಡುತ್ತಾಳೆ. ಆದರೆ ಈ ವಿಚಾರ ಸ್ನೇಹಾಗೆ ಗೊತ್ತಿರಲ್ಲ. ಆಕೆ ಅದನ್ನು ತನ್ನ ತಾಯಿ ಮನೆಯಲ್ಲಿರುವ ಕಬೋರ್ಡ್‌ನಲ್ಲಿ ಇಟ್ಟಿರುತ್ತಾಳೆ. ಆ ಫೈಲ್ ಇಡುವ ವೇಳೆ ಅದನ್ನು ಹೇಗೋ ವಿಡಿಯೋ ಮಾಡಿಕೊಂಡಿದ್ದ ಸ್ನೇಹಾ, ಅದನ್ನೇ ಸ್ನೇಹಾ ವಿರುದ್ದ ಬಹಳ ದೊಡ್ಡ ಅಸ್ತ್ರವಾಗಿ ಮಾಡಿಕೊಂಡಿದ್ದಾಳೆ.
ಇಲ್ಲಸಲ್ಲದ ಕಥೆ ಕಟ್ಟಿದ ರಾಧಾ
ಇನ್ನೂ ಸರಿಯಾದ ಟೈಮ್ ನೋಡಿಕೊಂಡ ರಾಧಾ ಬಂಗಾರಮ್ಮನವರ ಕಿವಿ ಚುಚ್ಚಿದ್ದಾಳೆ. ಸ್ನೇಹಾ ಹೇಳಿರುವುದು ಏನು ಆಕೆ ಮಾಡುತ್ತಿರುವುದು ಏನು ಅತ್ತೆ, ಆಕೆಯ ಬಗ್ಗೆ ನಿಮಗೆ ಏನು ತಿಳಿದಿಲ್ಲ. ಅದಕ್ಕೆ ನೀವು ಆಕೆಯ ಬಗ್ಗೆ ಅಷ್ಟು ಪ್ರೀತಿಯಿಂದ ನಡೆದುಕೊಳ್ಳುತ್ತಿರುವುದು ಎಂದು ಎಂದಾಗ ಬಂಗಾರಮ್ಮಗೆ ಏನು ಹೇಳಬೇಕು ತಿಳಿಯದಂತಾಗುತ್ತದೆ. ರಾಧಾ ಯಾಕೆ ಹೀಗೆಲ್ಲ ಮಾತನಾಡುತ್ತಾಳೆ ಎಂದು ಅಸಿಸುತ್ತದೆ.
ಸ್ನೇಹಾಗೆ ಎಲ್ಲಾವೂ ಗೊತ್ತು
ಇತ್ತ ರಾಧಾ ಮಾತ್ರ ಬಂಗಾರಮ್ಮ ಅವರ ಜೊತೆ ಗುಪ್ತವಾಗಿ ಮಾತನಾಡುವುದನ್ನು ಸ್ನೇಹಾ ಕೂಡ ಅಷ್ಟಾಗಿ ಗಮನಿಸುವುದು ಇಲ್ಲ. ರಾಧಾ ನನ್ನ ಗಂಡನ ಹಿಂದೆ ಬಿದ್ದಿದ್ದಾಳೆ. ಹಾಗೆಯೇ ನನ್ನನ್ನು ಹೇಗಾದರೂ ಮಾಡಿ ಈ ಮನೆಯಿಂದ ದೂರ ಮಾಡಬೇಕು ಎಂದು ಅಂದುಕೊಂಡು ಇದ್ದಾಳೆ ಎಂದು ಸ್ನೇಹಾಗೆ ಗೊತ್ತು. ಆದರೆ ಸ್ನೇಹಾ ತನಗೆ ಏನು ಗೊತ್ತಿಲ್ಲದ ಹಾಗೆ ಇರುತ್ತಾಳೆ. ರಾಧಾ ಜೊತೆ ಎಲ್ಲರ ಹಾಗೆಯೇ ಖುಷಿಯಿಂದ ಮಾತನಾಡುತ್ತಲೇ ಇರುತ್ತಾಳೆ.
ಸ್ನೇಹಾ ಮೇಲೆ ಕಿಡಿಕಾರಿದ ಬಂಗಾರಮ್ಮ
ಇನ್ನೂ ಬಂಗಾರಮ್ಮ ಅವರ ಬಳಿ ಸ್ನೇಹಾ ಫೈಲ್ ಎತ್ತಿಡುತ್ತಿರುವ ವಿಡಿಯೋ ನೋಡಿದ ಬಂಗಾರಮ್ಮ ಶಾಕ್ ಆಗುತ್ತಾಳೆ. ಹಾಗೆಯೇ ಬಹಳ ಕೋಪದಲ್ಲಿ ಇರುತ್ತಾಳೆ. ಸ್ನೇಹಾಳನ್ನು ಬಹಳ ಜೋರಾಗಿ ಕರೆಯುತ್ತಾಳೆ. ಸ್ನೇಹಾ ಮನದಲ್ಲಿಯೇ ಅತ್ತೆ ಯಾಕೆ ಇಷ್ಟು ಜೋರಾಗಿ ನನ್ನನ್ನು ಕರೆಯುತ್ತಿದ್ದಾರೆ. ನಾನೇನು ಅಂತಹ ತಪ್ಪು ಮಾಡಿಲ್ಲ ಅಲ್ವಾ? ಎಂದುಕೊಂಡು ಅತ್ತೆಯ ಮುಂದೆ ಬಂದು ನಿಲ್ಲುತ್ತಾಳೆ.
ಏನಾಯಿತು ಅತ್ತೆ ಎಂದು ಕೇಳಿದಾಗ ಈ ಮನೆಯ ಆಸ್ತಿ ಪತ್ರ ಎಲ್ಲಿಟ್ಟಿದ್ದಿಯಾ? ಎಂದು ಬಂಗಾರಮ್ಮ ಕೊಂಚ ಜೋರಾಗಿಯೇ ಕೇಳುತ್ತಾರೆ. ಅದು ಸ್ನೇಹಾಗೆ ಅರ್ಥ ಆಗದೇ ಬಂಗಾರಮ್ಮ ಅವರ ಮುಖ ನೋಡುತ್ತಾಳೆ. ನನಗೆ ಏನು ಅರ್ಥ ಆಗುತ್ತಿಲ್ಲ ಅತ್ತೆ ನಾನು ಯಾಕೆ ಅದೆಲ್ಲ ಮುಟ್ಟಲಿ, ನಾನು ಅದನ್ನುನ್ನೂ ನೋಡಿಲ್ಲ ಎಂದು ಹೇಳುತ್ತಾಳೆ. ಆದರೆ ಅದ್ಯಾವುದನ್ನೂ ಕೇಳಲು ಬಂಗಾರಮ್ಮ ಸಿದ್ಧಳಿಲ್ಲ. ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದುಕೊಂಡ ಬಂಗಾರಮ್ಮ ಬಹಳ ಜೋರಾಗಿಯೇ ಆಕೆಯ ಜೊತೆ ಮಾತನಾಡುತ್ತಾಳೆ. ಮುಂದೇನು ಕಾದು ಮಾಡಬೇಕಿದೆ.


Click it and Unblock the Notifications











