Puttakkana makkalu: ಪುಟ್ಟಕ್ಕನ ಮನೆಯಲ್ಲಿ ಆಸ್ತಿ ಪತ್ರ ಹುಡುಕಿದ ಬಂಗಾರಮ್ಮ; ಮುಂದೇನು?

By Poorva

ಪುಟ್ಟಕ್ಕನ ಮನೆಗೆ ಬಂಗಾರಮ್ಮ ಆಗಮಿಸಿದ್ದಾಳೆ. ಪುಟ್ಟಕ್ಕ ತನ್ನ ಮನೆಗೆ ಬಂಗಾರಮ್ಮ ಅತಿಥಿಯಾಗಿ ಬಂದಿದ್ದಾರೆ ಎಂದು ಅಂದುಕೊಂಡು ಇರುತ್ತಾಳೆ. ಆದರೆ ಸ್ನೇಹಾ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಎಂಬ ವಿಚಾರ ಆಕೆಯ ಗಮನಕ್ಕೆ ಬಂದಿರುವುದು ಇಲ್ಲ. ಬಂಗಾರಮ್ಮನವರ ಆಸ್ತಿ ಪತ್ರವನ್ನು ಸ್ನೇಹಾ, ಪುಟ್ಟಕ್ಕನ ಮನೆಯಲ್ಲಿ ಇಟ್ಟಿದ್ದಾಳೆ ಎನ್ನುವ ಆಪಾದನೆ ಬಂದಿದೆ.

ಪುಟ್ಟಕ್ಕಗೆ ಯಾವುದೇ ವಿಚಾರ ಪುಟ್ಟಕ್ಕ ಗೆ ತಿಳಿದಿರುವುದು ಇಲ್ಲ. ಆಕೆಗೆ ಒಂದು ಕ್ಷಣ ಈ ವಿಚಾರ ಕೇಳಿ ಭಯವಾಗುತ್ತದೆ. ನನ್ನ ಮಗಳು ಯಾವತ್ತೂ ಅಂತಹ ತಪ್ಪನ್ನು ಮಾಡಲು ಸಾಧ್ಯವೇ ಇಲ್ಲ ಎಂದು ಪುಟ್ಟಕ್ಕ ಹೇಳಿದರೂ ಆ ಮಾತನ್ನು ಕೇಳಲು ಬಂಗಾರಮ್ಮ ತಯಾರಿರುವುದು ಇಲ್ಲ.

Puttakkana makkalu kannada serial written update on 21th May episode

ಸ್ನೇಹಾಗೆ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ರಾಧಾ ಮಾಡಿದ ಕಿತಾಪತಿ ಕೆಲಸಕ್ಕೆ ಸ್ನೇಹಾಗೆ ಸಂಕಷ್ಟ ಎದುರಾಗಿದೆ. ಆಕೆಗೆ ಇದೀಗ ಏನು ಮಾಡಲಾಗದ ಸ್ಥಿತಿ. ಅದಕ್ಕೆ ಸರಿಯಾಗಿ ರಾಜೀ ಕೂಡ ಪುಟ್ಟಕ್ಕನ ಮನೆಗೆ ಆಗಮಿಸುತ್ತಾಳೆ. ಬಂಗಾರಮ್ಮಗೆ ರಾಜೀಯನ್ನೂ ನೋಡಿ ಕೋಪ ಬಂದಿರುತ್ತದೆ.

ರಾಜೀ ಮಾತ್ರ ಪುಟ್ಟಕ್ಕ, ನಿನ್ನ ಮಕ್ಕಳಿಗೆ ನಿಮ್ಮ ಗುಣವೇ ಬಂದಿಲ್ಲ. ನೀನು ಇಂತಹ ಕೆಲಸಕ್ಕೆ ಕೈ ಹಾಕುವವಳೇ ಅಲ್ಲ. ಆದರೆ ನಿನ್ನ ಮಕ್ಕಳು ನೀನು ಸಂಪಾದನೆ ಮಾಡಿದ ಘನತೆ ಗೌರವವನ್ನು ಹಾಳು ಮಾಡಿ ಬಿಟ್ಟಿದ್ದಾರೆ ಎನ್ನುತ್ತಾಳೆ. ನಿನ್ನನ್ನು ಇಲ್ಲಿಗೆ ಯಾರು ಕರೆದವರು, ಏನು ಎಲ್ಲರೂ ಸುಮ್ಮನೆ ಇದ್ದಾರೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಿಯಾ, ಸುಮ್ಮನೆ ಏನೇನೋ ಮಾತನಾಡಿ ಯಾರ ಮನಸ್ಸನ್ನು ನೋಯಿಸಬೇಡ ಎಂದು ಗೋಪಾಲ ಹೇಳುತ್ತಾನೆ. ಗೋಪಾಲನ ಮಾತು ಕೇಳಿದ ರಾಜೀ ಮಾತ್ರ ಬಹಳ ಕೋಪಗೊಂಡು ಇರುತ್ತಾಳೆ. ರಾಜೀ, ಗೋಪಾಲನಿಗೆ ಆಗಾಗ್ಗೆ ಮಾತಿ ಪೆಟ್ಟು ಕೊಡುತ್ತಿರುತ್ತಾಳೆ.

ಅಮ್ಮಾವ್ರೇ ನೀವು ನಮ್ಮ ಮನೆಯಲ್ಲಿ ಆಸ್ತಿ ಪತ್ರ ಹುಡುಕಲು ಡಿಸೈಡ್ ಮಾಡಿಕೊಂಡು ಬಂದ ಹಾಗೆ ಕಾಣುತ್ತಿದೆ. ನಾನು ಇದಕ್ಕೆ ಯಾವುದೇ ಅಡ್ಡಿ ಮಾಡುವುದು ಇಲ್ಲ ಎನ್ನುತ್ತಾಳೆ. ಆಗ ರಾಜೀ ನಾನು ಆ ಆಸ್ತಿ ಪತ್ರಗಳನ್ನು ಹುಡುಕುತ್ತೇನೆ ನನಗೆ ಆ ರಾಧಾ ಸಹಾಯ ಬೇಕಿದೆ ಎಂದಾಗ ಬಂಗಾರಮ್ಮಾ ಅವಳು ಯಾಕೆ ನೀನೇ ತೆಗೆದುಕೊಂಡು ಬಾ ಎಂದು ಹೇಳುತ್ತಾಳೆ.

Puttakkana makkalu kannada serial written update on 21th May episode

ರಾಜೇಶ್ವರಿ ಮಾತಿಗೆ ಗೋಪಾಲ ಗರಂ

ಇಲ್ಲದ ನೆಪ ಹೇಳಿ ರಾಜೇಶ್ವರಿ, ರಾಧಳನ್ನು ಕರೆದುಕೊಂಡು ಹೋಗುತ್ತಾಳೆ. ಇತ್ತ ಸ್ನೇಹಾಗೆ ರಾಧಾ ಹಾಗೂ ರಾಜೇಶ್ವರಿ ಸೇರಿ ತನ್ನ ಬದುಕನ್ನೇ ನಾಶ ಮಾಡುವ ಹಾಗೆ ಕಾಣುತ್ತಿದೆ. ಆದರೆ ಸ್ನೇಹಾ ಇದೀಗ ಎಚ್ಚೆತ್ತುಕೊಳ್ಳದೆ ಹೋದರೆ ಮಾತ್ರ ಆಕೆಗೆ ಕೂಡ ಕಂಟಕ ಗ್ಯಾರಂಟಿ. ಸಹನಾ ಶ್ರೀರಾಮ ದೇಸಾಯಿಯವರನ್ನೂ ಹುಡುಕಿಕೊಂಡು ಅವರ ಮನೆಗೆ ಹೋದಾಗ ಮೊದಲು ವಾಚ್ ಮ್ಯಾನ್ ಯಾರು ಬೇಕಾಗಿತ್ತು ಎಂದೆಲ್ಲ ಹಿಂದಿಯಲ್ಲಿ ಮಾತನಾಡುತ್ತಾನೆ. ಸಹನಾಗೆ ಆತನ ಭಾಷೆ ಅರ್ಥ ಆಗುವುದು ಇಲ್ಲ. ಆತನಿಗೆ ಹೇಗಾದರೂ ಮಾಡಿ ಅರ್ಥ ಮಾಡಿಸುತ್ತಾಳೆ.

ಶ್ರೀ ರಾಮ್ ಮನೆಗೆ ಬಂದ ಸಹನಾ

ವಾಚ್ ಮ್ಯಾನ್ ಸಹನಾಳನ್ನು ಗೇಟ್‌ನಿಂದ ಒಳಗೆ ಕರೆದುಕೊಂಡು ಹೋಗುತ್ತಾನೆ. ಇನ್ನೂ ಮನೆಯ ಕೆಲಸದಾತನೋರ್ವ ಸಹನಾ ಬಳಿ ಕನ್ನಡದಲ್ಲಿ ಮಾತನಾಡುತ್ತಾನೆ. ಅದನ್ನು ಕೇಳಿದ ಸಹನಾಗೆ ಬಹಳ ಖುಷಿ ಆಗುತ್ತದೆ. ಓ ನಮ್ಮ ಕನ್ನಡದವರು ಇಲ್ಲಿ ಇದ್ದೀರಾ ಎಂದಾಗ ಆತಏನು ಮಾಡುವುದು ಮೇಡಂ, ಕನ್ನಡ ಕಲಿಯಲೇಬೇಕಾದ ಪ್ರಮೇಯ ಬಂದು ಬಿಟ್ಟಿತು ಎಂದು ಹೇಳುತ್ತಾನೆ. ಶ್ರೀ ರಾಮ ದೇಸಾಯಿ ಬಗ್ಗೆ ಕೇಳಿದಾಗ ಆತ ಮೊದಲು ಅಪಾಯಿಂಟ್‌ಮೆಂಟ್ ಇದ್ಯಾ? ಎಂದು ಕೇಳುತ್ತಾನೆ.

More from Filmibeat

English summary
Puttakkana makkalu kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X