Puttakkana Makkalu: ಮಗಳ ಜೀವನ ಹಾಳಾಗುವ ಆತಂಕದಲ್ಲಿ ಪುಟ್ಟಕ್ಕ; ಬಂಗಾರಮ್ಮ ಬೇಸರ
ನೋಡು ಸಹನಾ ನೀನು ಹೀಗೆಲ್ಲ ಮಾಡಿದರೆ ನಿನ್ನ ಜೀವನ ಹಾಳಾಗಿ ಹೋಗುತ್ತದೆ. ದಯವಿಟ್ಟು ನೀನು ಹಾಗೂ ಮುರಳಿ ಒಮ್ಮೆ ಕುಳಿತು ಮಾತನಾಡಿ ಎಂದು ಪುಟ್ಟಕ್ಕ ಹೇಳುತ್ತಾಳೆ. ಕೋಪಗೊಂಡ ಸಹನಾ ನನ್ನದು ನಿರ್ಧಾರ ಯಾವತ್ತಿದ್ದರೂ ಒಂದೇ. ನಾನು ಮುರಳಿ ಎನ್ನುವ ವ್ಯಕ್ತಿಯ ಜೊತೆ ಬದುಕಲು ಇಷ್ಟ ಪಡುವುದು ಇಲ್ಲ ಎಂದು ಖಡಾ ಖಂಡಿತವಾಗಿ ಹೇಳುತ್ತಾಳೆ.
ಮಗಳ ಮಾತುಗೆ ಪುಟ್ಟಕ್ಕ ಪುನಃ ಸ್ನೇಹಾ ಜೊತೆ ಕೇಳುತ್ತಾಳೆ. ಯಾಕೆ? ನೀನು ಹಾಗೂ ಮುರಳಿ ಇಬ್ಬರು ಪ್ರೀತಿ ಮಾಡಿ ಮದುವೆ ಆಗಿದ್ದೀರಿ ಅಲ್ಲವೇ ಅಂದ ಮೇಲೆ ನೀವು ಇಬ್ಬರು ಕೂಡ ಯಾಕೆ ಹೀಗೆ ಆಡುತ್ತಿದ್ದಿರಾ? ನೀವಿಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದೀರಾ ಎನ್ನುವ ಕಾರಣದಿಂದಾಗಿ ಮುರಳಿ ಜೊತೆ ನಿನ್ನ ಮದುವೆ ಮಾಡಿಸಿದೆ. ಆದರೆ ಈಗ ಆಗಿದ್ದಾದರು ಏನು? ಎನ್ನುತ್ತಾಳೆ. ಸಹನಾ ಮಾತ್ರ ಮುರಳಿ ಮುಖ ನೋಡಲು ಇಷ್ಟ ಪಡುವುದು ಇಲ್ಲ. ವಿನುತಾ ಜೊತೆ ಮುರಳಿ ಮದುವೆ ಆಗಲು ಹೊರಟಿದ್ದಾನೆ. ಆತ ಹೇಗಾದರೂ ಇವಳಿಗೆ ಪಾಠ ಕಲಿಸಲೇಬೇಕು ಎನ್ನುವ ಆಲೋಚನೆ ಮಾಡುತ್ತಿರುತ್ತಾನೆ.

ತನ್ನ ತಾಯಿ ವಿರುದ್ದ ತಪ್ಪು ನಿರ್ಧಾರ ತೆಗೆದುಕೊಂಡ ಸಹನಾ ವಿರುದ್ಧವೇ ಡಿವೋರ್ಸ್ ನೋಟಿಸ್ ಕಳುಹಿಸುತ್ತಾನೆ. ಆದರೆ ಅದ್ಯಾವುದಕ್ಕೂ ಸಹನಾ ಜಗ್ಗುವುದು ಇಲ್ಲ. ಇಂತವನ ಜೊತೆ ಅದು ಹೇಗಪ್ಪಾ ನಾನು ಜೀವನ ನಡೆಸಲಿ ಎನ್ನುವುದು ಸಹನಾ ವಾದ. ಮುರಳಿ ನಾನು ವಿನುತ ಅವರನ್ನು ಮದುವೆ ಆಗಿ ಚೆನ್ನಾಗಿ ಬಾಳಿ ಬದುಕಿ ತೋರಿಸುತ್ತೇನೆ ಎಂದು ಹೇಳುತ್ತಾನೆ. ಇತ್ತ ಸಹನಾಗೆ ಪುಟ್ಟಕ್ಕ ಬುದ್ಧಿವಾದ ಹೇಳಿದಾಗ ಸಹನಾ ನಾನು ಮುರಳಿ ಜೊತೆ ಬದುಕಲು ಸಾಧ್ಯ ಇಲ್ಲ. ನಾನು ನಿನಗೆ ಭಾರ ಆದರೆ ನಾನು ಈ ಮನೆಯಲ್ಲಿ ಕೂಡ ಇರಲು ಇಷ್ಟ ಪಡುವುದು ಇಲ್ಲ ಎನ್ನುತ್ತಾಳೆ.
ಪುಟ್ಟಕ್ಕನ ಪರಿಸ್ಥಿತಿಗೆ ಬಂಗಾರ ಮ್ಮ ಬೇಸರ
ಮಗಳ ಮಾತು ಕೇಳಿದ ಪುಟ್ಟಕ್ಕ ಏನು ಮಾತನಾಡಲು ಆಗದೇ ದುಃಖವನ್ನು ಮನದಲ್ಲಿ ಹಿಡಿದಿಟ್ಟುಕೊಂಡು ಇರುತ್ತಾಳೆ. ಮರುದಿನ ದೇವಾಲಯಕ್ಕೆ ಬಂದ ಪುಟ್ಟಕ್ಕ ದೇವರ ಬಳಿ ತನ್ನ ನೋವನ್ನು ಹೇಳಿ ಅಳುತ್ತಿರುವಾಗ ಬಂಗಾರಮ್ಮ ಬರುತ್ತಾಳೆ. ಪುಟ್ಟಕ್ಕನ ಮುಖ ನೋಡಿದಾಗಲೇ ಆಕೆ ಯಾವುದೋ ಧರ್ಮ ಸಂಕಟದಲ್ಲಿ ಸಿಳುಕಿದ್ದಾಳೆ ಎನ್ನುವುದು ಬಂಗಾರಮ್ಮಗೆ ತಿಳಿಯುತ್ತದೆ. ಬಂಗಾರಮ್ಮನ ಬಳಿ ತನ್ನ ನೋವನ್ನು ಹೇಳಿಕೊಳ್ಳುತ್ತಾಳೆ ಪುಟ್ಟಕ್ಕ.

ಬಹಳ ನೊಂದ ಪುಟ್ಟಕ್ಕ
ಅಮ್ಮಾವರೇ ನನ್ನ ಮಗಳು ಸಹನಾ ಸಣ್ಣ ವಯಸ್ಸಿನಲ್ಲಿ ನನಗೆ ಆಧಾರ ಆಗಿದ್ದಳು, ಆಕೆ ನನಗೆ ಕಷ್ಟ ಆಗುತ್ತದೆ ಎಂದು ತಿಳಿದು ಶಾಲೆಗೂ ಹೋಗದೆ ನನಗೆ ಬೆನ್ನೆಲುಬಾಗಿ ನಿಂತಳು. ಆದರೆ ಆಕೆಯ ಜೀವನ ಹೀಗೆ ಆಗುತ್ತದೆ ಎಂದು ನಾನು ಅಂದುಕೊಂಡು ಇರಲಿಲ್ಲ ಎಂದು ಜೋರಾಗಿ ಅಳುತ್ತಾಳೆ. ಆಕೆಯ ಮಾತು ಕೇಳಿದ ಬಂಗಾರಮ್ಮ ಗೆ ಯಾವ ರೀತಿ ಪುಟ್ಟಕ್ಕನನ್ನು ಸಮಾಧಾನ ಮಾಡಬೇಕು ಎನ್ನುವುದೇ ತಿಳಿಯದಾಗುತ್ತದೆ.
ಅಮ್ಮನಿಗೆ ಹೇಗಲಾಗಿ ನಿಂತ ಸಹನಾ
ಪುಟ್ಟಕ್ಕಗೆ ತನ್ನ ಮಕ್ಕಳು ಚೆನ್ನಾಗಿ ಇರಬೇಕು ಎನ್ನುವ ಆಸೆ. ಅದಕ್ಕಾಗಿ ಆಕೆ ಎನು ಮಾಡಲು ಕೂಡ ರೆಡಿ ಇರುತ್ತಾಳೆ. ಸಣ್ಣ ವಯಸ್ಸಿನಿಂದಲೂ ಅಮ್ಮನಿಗೆ ಹೆಗಲಾಗಿ ನಿಂತ ಪುಟ್ಟಕ್ಕನ ಮಗಳು ಸಹನಾ. ಆಕೆಯ ಖಡಕ್ ನಿರ್ಧಾರವನ್ನು ವೀಕ್ಷಕರು ಗೌರವಿಸುತ್ತಾರೆ . ಹಾಗೆಯೇ ಆಕೆ ಅಮ್ಮನ ಮೇಲೆ ಇಟ್ಟಿರುವ ಪ್ರೀತಿ ಕೂಡ ವಿಶೇಷ ಎನ್ನುತ್ತಿದ್ದಾರೆ.


Click it and Unblock the Notifications











